ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಂಚಾರಿ ಜೀವನಾಡಿ ಆಗಿರುವ ನಮ್ಮ ಮೆಟ್ರೋ ತನ್ನ ತನ್ನ ಜಾಲ ವಿಸ್ತರಣೆ ಮಾಡುತ್ತಲೇ ಇದೆ. ಇದೀಗ ಬಹುನಿರೀಕ್ಷಿತ ಚಾಲಕ ರಹಿತ ರೈಲು ಸಂಚಾರ ಆರಂಭವನ್ನು ಮಾಡಲು
ಸಿದ್ಧತೆಗಳು ಭರದಿಂದ ಸಾಗಿವೆ. ಇತ್ತೀಚೆಗಷ್ಟೇ ಈ ಮಾರ್ಗದ ರೈಲು ಮತ್ತು ಸಿಗ್ನಲಿಂಗ್ ವ್ಯವಸ್ಥೆಗಳಿಗೆ ಅಗತ್ಯವಾದ ಸ್ವತಂತ್ರ ಸುರಕ್ಷತಾ ಮೌಲ್ಯಮಾಪನ ಪ್ರಮಾಣೀಕರಣ (ISA) ಹಳದಿ ಮಾರ್ಗ ಪಡೆದುಕೊಂಡಿದೆ. ಆಗಸ್ಟ್ ತಿಂಗಳ ಚಾಲಕ ರಹಿತ ರೈಲು ಸಂಚಾರ ಆರಂಭ ಮಾಡವ ಸಾಧ್ಯತೆ ಇದೆ.
ಹೌದು, ಹಳದಿ ಮಾರ್ಗದಲ್ಲಿ ರೈಲು ಸಂಚಾರ ಮೊದಲಿಗೆ ಮೂರು ರೈಲುನಿಂದ ಆರಂಭವನ್ನು ಮಾಡಲಾಗುತ್ತದೆ. ಪ್ರತಿದಿನ ಸರಿಸುಮಾರು 25,000 ಪ್ರಯಾಣಿಕರು ಪ್ರಯಾಣಿಸುವ ನಿರೀಕ್ಷೆಯಿದೆ. ಆದರೆ, ಮುಂದಿನ ವರ್ಷ ಪೂರ್ಣ ಪ್ರಮಾಣದ ಕಾರ್ಯಾಚರಣೆಗಳು ಆರಂಭವಾದ ಬಳಿಕ ಈ ಸಂಖ್ಯೆ ಎರಡು ಲಕ್ಷದವರೆಗೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಂದಾಜು ಕೂಡ ಮಾಡಲಾಗಿದೆ.
19.15 ಕಿ.ಮೀ ಉದ್ದದ ಆರ್.ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿನ ಎಲ್ಲಾ 16 ನಿಲ್ದಾಣಗಳು ಚಾಲಕ ರಹಿತ ಮೆಟ್ರೋ ತನ್ನ ಕಾರ್ಯನಿರ್ವಹಿಸಲು ಸಿದ್ಧವಾಗಿವೆ. ಆದರೆ ಸದ್ಯಕ್ಕೆ ಕೇವಲ ಏಳು ನಿಲ್ದಾಣಗಳನ್ನು ಮಾತ್ರ ತೆರೆಯುವ ಯೋಜನೆಯನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್(BMRCL) ಮಾಡಿಕೊಂಡಿದೆ.
ಎಲ್ಲಾ 16 ನಿಲ್ದಾಣಗಳಲ್ಲಿ ಮೆಟ್ರೋ ರೈಲುಗಳು ಓಡಾಟವನ್ನು ಮಾಡಿದ್ದರೆ ಪ್ರತಿದಿನ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಪ್ರತಿ 20 ನಿಮಿಷಗಳಿಗೊಮ್ಮೆ ಸಂಚರಿಸುತ್ತವೆ. ಪೀಕ್ ಸಮಯದಲ್ಲಿಯೂ ಸಹ ಈ ಸಮಯ ಬದಲಾಗುವುದಿಲ್ಲ. ಹೀಗಾಗಿ ಪ್ರತಿದಿನ ಸುಮಾರು 30-40 ರೌಂಡ್ ಟ್ರಿಪ್‌ಗಳನ್ನು ಮಾಡಬಹುದು.
ಪ್ರತಿ ರೌಂಡ್ ಟ್ರಿಪ್‌ಗೆ ಸುಮಾರು 80 ನಿಮಿಷಗಳು ಬೇಕಾಗುತ್ತವೆ. ಒಂದು ವೇಳೆ ಕೇವಲ ಏಳು ನಿಲ್ದಾಣಗಳು ಮಾತ್ರ ಕಾರ್ಯನಿರ್ವಹಿಸಿದರೆ, ರೈಲುಗಳ ಆವರ್ತನವು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಬಿಎಂಆರ್‌ಸಿಎಲ್‌ನ ಅಧಿಕಾರಿಯೊಬ್ಬರು ಮಾಹಿತಿಯನ್ನು ತಿಳಿಸಿದ್ದಾರೆ.
ಬಿಎಂಆರ್ ಸಿಎಲ್ ಲೆಕ್ಕಾಚಾರದ ಪ್ರಕಾರ ಪ್ರತಿ 20 ರಿಂದ 25 ನಿಮಿಷಗಳಿಗೊಮ್ಮೆ ಮೂರು ರೈಲುಗಳನ್ನು ಓಡಿಸಿ ಸಂಪೂರ್ಣ ಮಾರ್ಗವನ್ನು ಕ್ರಮಿಸಬಹುದು. ಸಿಎಂಆರ್‌ಎಸ್ ವರದಿಯ ಆಧಾರದ ಮೇಲೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಎಂಆರ್‌ಸಿಎಲ್ ಮೂರು ರೈಲುಗಳನ್ನು ಓಡಿಸುವುದರಿಂದ ದಿನಕ್ಕೆ ಹೆಚ್ಚುವರಿಯಾಗಿ 10 ರಿಂದ 15 ಲಕ್ಷ ರೂಪಾಯಿಗಳನ್ನು ಗಳಿಸಬಹುದು ಎಂದು ಹೇಳಿದ್ದಾರೆ.
ಹಳದಿ ಮಾರ್ಗವು 15 ರೈಲುಗಳೊಂದಿಗೆ ಸಂಪೂರ್ಣವಾಗಿ ಕಾರ್ಯಾರಂಭಿಸಿದ ನಂತರ ಪ್ರಯಾಣಿಕರ ಸಂಖ್ಯೆ ಕನಿಷ್ಠ 1.5 ಲಕ್ಷಕ್ಕೆ ತಲುಪುತ್ತದೆ ಮತ್ತು ಹೆಚ್ಚುವರಿ ದಿನ ಟಿಕೆಟ್ ಆದಾಯವು 60 ಲಕ್ಷ ರೂ.ಗಳಾಗಬಹುದು ಎಂದು ನಾವು ನಿರೀಕ್ಷಿ ಇದೆ. ಆದರೆ ಕೇವಲ ಮೂರು ರೈಲುಗಳೊಂದಿಗೆ, ಪ್ರಯಾಣಿಕರ ಸಂಖ್ಯೆ 20,000-25,000 ಆಗಿರಬಹುದು. ಇದರಿಂದ ದಿನಕ್ಕೆ ಕೇವಲ 10-15 ಲಕ್ಷ ರೂ. ಆದಾಯ ಬರುವ ಸಾಧ್ಯತೆ ಇದೆ.

ಗ್ರೀನ್ ಲೈನ್‌ನ ಇಂಟರ್‌ಚೇಂಜ್ ನಿಲ್ದಾಣವಾದ ಆರ್.ವಿ. ರಸ್ತೆಯಲ್ಲಿ "ತೊಂದರೆಗಳು" ಉಂಟಾಗಬಹುದು. "ಹಳದಿ ಮಾರ್ಗವನ್ನು ವಿಳಂಬ ಮಾಡಿದ್ದಕ್ಕಾಗಿ ನಾವು ಈಗಾಗಲೇ ಟೀಕೆಗಳನ್ನು ಎದುರಿಸುತ್ತಿದ್ದೇವೆ. ಕಾರ್ಯಾಚರಣೆ ಪ್ರಾರಂಭವಾದ ನಂತರ, ಎಲ್ಲವೂ ಸರಾಗವಾಗಿ ನಡೆಯದಿರಬಹುದು. ಗಂಟೆಗೆ ಕೇವಲ ಮೂರು ರೈಲುಗಳು ಇರುವುದರಿಂದ, ಜನಸಂದಣಿ ಹೆಚ್ಚಾಗಬಹುದು. ಪ್ರತಿಯೊಬ್ಬರೂ ರೈಲಿಗಾಗಿ 20 ನಿಮಿಷ ಕಾಯಲು ಸಿದ್ಧರಿರುವುದಿಲ್ಲ ಎಂದು ಇನೋಬ್ಬ ಅಧಿಕಾರಿ ಹೇಳಿದ್ದಾರೆ.
ಆಗಸ್ಟ್ 10 ರೊಳಗೆ ನಾಲ್ಕನೇ ರೈಲು ಬೆಂಗಳೂರಿಗೆ ಬರುವ ನಿರೀಕ್ಷೆಯಿದೆ. ಆದರೆ ಅದು ಡಿಪೋ ಮತ್ತು ಮುಖ್ಯ ಮಾರ್ಗದಲ್ಲಿ ಕನಿಷ್ಠ ಎರಡು ವಾರಗಳವರೆಗೆ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.


Click it and Unblock the Notifications