ಬೆಂಗಳೂರಿಗರಿಗೆ ಶಾಕಿಂಗ್ ನ್ಯೂಸ್! PG ಬಾಡಿಗೆ ದರ ಮತ್ತೆ ದುಬಾರಿಯಾಗುತ್ತಿದೆ ಹೌದು,ಬೆಂಗಳೂರು ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಲೇ ಇರುವ ನಗರವಾಗಿದೆ. ಸಿಲಿಕಾನ್ ಸಿಟಿ ದಿನದಿಂದ ದಿನಕ್ಕೆ ದುಬಾರಿ ದುನಿಯಾಯಾಗುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಮನೆ ಬಾಡಿಗೆ, ಬಸ್ ಟಿಕೆಟ್ ದರ, ಮೆಟ್ರೋ ಟಿಕೆಟ್ ದರ, ಹಚ್ಚಳವಾಗಿದೆ.ಇದರ ಬೆನ್ನಲೇ ಪಿಜಿ ಬಾಡಿಗೆ ದರ ಏರಿಕೆ ಮಾಡಲು ತಯಾರಿ ನಡೆಸುತ್ತಿದೆ.
ಅನೇಕ ಜಿಲ್ಲೆಗಳಿಂದ ವಿದ್ಯಾರ್ಥಿಗಳು,ಉದ್ಯೋಗ ಮಾಡುವವರು,ಇನ್ನೂ ಇತರೆ ಕೆಲಸದ ಸಲುವಾಗಿ ಬೆಂಗಳೂರನ್ನು ಅರಸಿ ಬರುತ್ತಾರೆ. ಅವರು ವಾಸಿಸಲು ಹೆಚ್ಚು ಪಿಜಿಗಳ ಮೋರೆ ಹೋಗುತ್ತಾರೆ. ಆದರೆ ಇದೀಗ ಅವರಿಗೆ ಪಿಜಿ ಬಾಡಿಗೆ ಏರಿಕೆಯಿಂದಾಗಿ ಉದ್ಯೋಗಿಗಳು,ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದಾರೆ. ಹಾಗಿದ್ರೆ ಪಿಜಿ ಬಾಡಿಗೆ ಎಷ್ಟು ಏರಿಕೆ ಮಾಡಲಾಗಿದೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..

ಸಿಲಿಕಾನ್ ಸಿಟಿ ನಗರದಲ್ಲಿ ಮನೆ, ಪಿಜಿ ಬಾಡಿಗೆಗಳಂತೂ ಗಗನಕ್ಕೇರುತ್ತಲೇ ಇದೆ. ಈ ನಡುವೆ ಪಿಜಿ ಅಸೋಸಿಯೇಷನ್ ಬಾಡಿಗೆ ದರ ಏರಿಕೆ ಮಾಡಲು ನಿರ್ಧರ ಮಾಡಿದೆ.
ಈಗಾಗಲೇ ಹಲವು ಬಾರಿ ಪಿಜಿಗಳ ಬಾಡಿಗೆ ದರ ಏರಿಕೆಯಿಂದ ನಿವಾಸಿಗಳು ಬೇಸತ್ತು ಹೋಗಿದ್ದಾರೆ. ಮತ್ತೆ ಇದೀಗ ದರ ಏರಿಕೆಗೆ ಮುಂದಾಗಿರುವುದರಿಂದ ಉದ್ಯೋಗಿಗಳಿಗೆ ವಿದ್ಯಾರ್ಥಿಗಳಿಗೆ ಶಾಕ್ ಎದುರಾಗಿದೆ.ಪಿಜೆ ನಡೆಸುವವರಿಗೆ ದಿನನಿತ್ಯದ ವಸ್ತುಗಳ ದರ ಏರಿಕೆಯಾಗಿವೆ ಆದ್ದರಿಂದ ಬಾಡಿಕೆ ಹೆಚ್ಚಳ ಮಾಡಲು ಮುಂದಾಗಿದೆ ಎನ್ನುವ ಮಾಹಿತಿ ತಿಳಿದಿದೆ.
ಪ್ರದೇಶವಾರು ಬಾಡಿಗೆ ದರ ವ್ಯತ್ಯಾಸ
ನಗರದಲ್ಲಿ ಪ್ರದೇಶವಾರು ಬಾಡಿಗೆ ದರ ವ್ಯತ್ಯಾಸ ಇದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ದರ ಇದೆ. ಇದು ಮೂಲಸೌಕರ್ಯಗಳು, ಜನರಿಗೆ ಬೇಕಾದ ಸಾರಿಗೆ ಸಂಪರ್ಕದ ಮೇಲೆ ಅವಲಂಬನೆಯಾಗಿರುತ್ತಿದೆ.ಪಿಜಿ ಬಾಡಿಗೆ ವಿಚಾರಕ್ಕೆ ಬಂದರೆ ಒಂದೊಂದು ಪಿಜಿಯಲ್ಲಿ ಒಂದೊಂದು ದರ ಇದೆ. ಮತ್ತೆ ಏನಾದರೂ ಏರಿಕೆ ಮಾಡಿದರೆ, ವಿದ್ಯಾರ್ಥಿಗಳು, ಉದ್ಯೂಗಿಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ.
ಪಿಜಿ ಅಸೋಸಿಯೇಷನ್ ಮಹತ್ವದ ತಿರ್ಮಾನ
ಪಿಜಿ ಅಸೋಸಿಯೇಷನ್ ಇದೀಗ ಮಹತ್ವದ ತೀರ್ಮಾನ ಕೈಗೊಳ್ಳಲು ಸಿದ್ದವಾಗಿದೆ. ಬೆಂಗಳೂರಿನಲ್ಲಿ ಪಿಜಿಗಳ ಬಾಡಿಗೆ ದರ ಹೆಚ್ಚಿಸುವುದಕ್ಕೆ ಮುಂದಾಗಿರುವ ಪಿಜಿ ಅಸೋಸಿಯೇಷನ್ ಶೀಘ್ರದಲ್ಲೇ ಪಿಜಿ ಮಾಲೀಕರ ಜೊತೆ ಸಭೆ ನಡೆಸಲು ಚಿಂತನೆ ನಡೆಸಿದೆ.
ಪಿಜಿ ಬೆಲೆ ಏರಿಕೆಗೆ ಕಾರಣವೇನು?
ಪಿಜಿ ಬೆಲೆ ಏರಿಕೆ ಮುಖ್ಯ ಕಾರಣ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಇದರಿಂದ ಪ್ರತಿನಿತ್ಯ ಅಡುಗೆ ಮಾಡಲು ಎಲ್ಲಾ ವಸ್ತು ದುಬಾರಿಯಾಗಿದೆ.ಇದರ ನಿರ್ವಹಣೆಗೆ ಅವರು ನೀಡುವ ಹಣ ಕಷ್ಟ ಆಗುತ್ತಿದೆ ಎಂದು ಮಾಲೀಕರ ಹೇಳಿದ್ದಾರೆ.ಹಾಗೂ ಕೆಲಸ ಮಾಡಲು ಕೆಲಸದವರು ಹೆಚ್ಚಿನ ಹಣವನ್ನು ನಿರೀಕ್ಷೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಶೇಕಡ 5ರಷ್ಟು ದರ ಏರಿಕೆ ಮಾಡಲಿದೆ?
ಪಿಜಿ ಬಾಡಿಕೆ ದರವನ್ನು ಅಧಿಕೃತವಾಗಿ ಎಷ್ಟು ದರ ಏರಿಕೆ ಅಂತಾ ಪಿಜಿ ಮಾಲೀಕರ ಜೊತೆ ಸಭೆ ನಡೆಸಿದ ಬಳಿಕ ತಿಳಿಸಲಾಗುತ್ತದೆ. ಆದರೆ ಪಿಜಿ ಅಸೋಸಿಯೇಷನ್ ಈಗಾಗಲೇ ಶೇಕಡ 5ರಷ್ಟು ದರ ಏರಿಕೆ ಮಾಡಲು ಚಿಂತನೆ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಹಲವು ಖಾಸಗಿ ಕಟ್ಟಡಗಳ ಬಾಡಿಗೆ ಹೆಚ್ಚಳ, ನೀರಿನ ದರ ಸೇರಿದಂತೆ ದಿನನಿತ್ಯದ ವಸ್ತುಗಳ ದರ ವಸ್ತುಗಳ ದರಗಳನ್ನು ಏರಿಕೆ ಮಾಡಲಾಗಿದೆ. ಮಹಾಮಾರಿ ಕೊರೊನಾ ಸಂದಭರ್ದಲ್ಲೂ ಕೂಡ ದರ ಏರಿಕೆ ಮಾಡಿರಲಿಲ್ಲಈ ನಿರ್ಧಾರವನ್ನು ಅಸೋಸಿಯೇಷನ್ ತೆಗೆದುಕೊಂಡಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಸಿಲಿಕಾನ್ ಸಿಟಿಗೆ ಉದ್ಯೋಗ ಅರಸಿ ಪ್ರತಿನಿತ್ಯವೂ ಸಾವಿರಾರು ಮಂದಿ ಬರುತ್ತಾರೆ. ಕೆಲವೇ ಕೆಲವರು ಮಾತ್ರ ಬಾಡಿಗೆ ಮನೆ ಅಥವಾ ಸಂಬಂಧಿಕರ ಮನೆಗಳಲ್ಲಿ ಉಳಿದುಕೊಳ್ಳುತ್ತಾರೆ. ಈ ಪೈಕಿ ಬಹುತೇಕ ಮಂದಿ ಸಮಯ ಉಳಿತಾಯ ಮಾಡಲು ಪಿಜಿಗಳಲ್ಲೇ ವಾಸ ಮಾಡುತ್ತಾರೆ.ಇಂತಹವರಿಗೆ ದರ ಏರಿಕೆಯಿಂದ ತುಂಬಾ ಸಂಕಷ್ಟ ಎದುರಾಗುತ್ತಿದೆ.


Click it and Unblock the Notifications