ಇತ್ತೀಚೆಗೆ ಸೈಬರ್ ಅಪರಾಧಿಗಳು ಹಣವನ್ನು ದೋಚಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಂತೆ, ತಂತ್ರಜ್ಞಾನದ ಬಗ್ಗೆ ಅಷ್ಟೊಂದು ಅಪ್‌ಡೇಟ್ ಆಗದ ವೃದ್ಧರು ಈ ವಂಚನೆಗಳಿಗೆ ಹೆಚ್ಚು ಗುರಿಯಾಗುತ್ತಿದ್ದಾರೆ.ತಂತ್ರಜ್ಞಾನ ಪ್ರಗತಿಗಳು ವೇಗವಾಗಿ ಸಾಗುತ್ತಿರುವುದರಿಂದ ಹಿರಿಯ ನಾಗರಿಕರು ಈ ವಂಚನೆಗಳಿಗೆ ಬಲಿಯಾಗುತ್ತಿದ್ದಾರೆ, ಹೀಗಾಗಿ ಅವರು ಈ ಡಿಜಿಟಲ್ ಕಳ್ಳರಿಗೆ ಪ್ರಮುಖ ಗುರಿಯಾಗುತ್ತಾರೆ. ಈ ಪ್ರವೃತ್ತಿಯನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮವಾಗಿ, ಬೆಂಗಳೂರು ನಗರ ಪೊಲೀಸ್ ಮತ್ತು ನೈಟಿಂಗೇಲ್ಸ್ ವೈದ್ಯಕೀಯ ಟ್ರಸ್ಟ್‌ನ ಜಂಟಿ ಯೋಜನೆಯಾದ ಎಲ್ಲರ್ಸ್ ಹೆಲ್ಸ್ಲೈನ್ ಶನಿವಾರ ಡಿಜಿಸೇಫ್ 60+ ತರಬೇತಿ ಡ್ರೈವ್ ಅನ್ನು ಪ್ರಾರಂಭ ಮಾಡಿದೆ.
ಹೌದು, ಸೈಬರ್ ಅಪರಾಧಿಗಳು ಹಣವನ್ನು ದೋಚಲು ವಿವಿಧ ಮಾರ್ಗಗಳನ್ನ ಅಳವಡಿಸಿಕೊಳ್ಳತ್ತಲೇ ಇರುತ್ತಾರೆ.ಇದರ ಬಗ್ಗೆ ಯಾವುದೇ ಅರಿವು ಇಲ್ಲದ ಹಿರಿಯ ನಾಗರೀಕರು ಮೋಸದ ಸುಳಿಗೆ ಸಿಕ್ಕಿ ತಮ್ಮ ಹಣವನ್ನು ಕಳೆದುಕೊಳ್ಳತ್ತಾರೆ. ಇದಕೆಲ್ಲಾ ಬ್ರೇಕ್ ಹಾಕಲು ಪೊಲೀಸರು ವಿಶೇಷವಾಗಿ ವಿನ್ಯಾಸಗೊಳಿಸಲಾದ ಡಿಜಿಸೇಫ್ 60+ ತರಬೇತಿ ಡ್ರೈವ್ ಡಿಜಿಟಲ್ ಜಗತ್ತಿನಲ್ಲಿ ನ್ಯಾವಿಗೇಟ್ ಮಾಡಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ಅವರನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿದೆ. ಇದರಿಂದ ವಯಸ್ಸಾದ ಹಿರಿಯ ನಾಗರಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಈ ತರಬೇತಿಯಿಂದ ವಯಸ್ಸಾದವರು ಎದುರಿಸಬಹುದಾದ ಸಂಭಾವ್ಯ ಸೈಬರ್ ಬೆದರಿಕೆಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಅರಿವು ಮೂಡಸಲಾಗುತ್ತದೆ.
ಬೆಂಗಳೂರು ನಗರ ಪೊಲೀಸರ ಪ್ರಕಾರ, ಬೆಂಗಳೂರಿನಲ್ಲಿ 2023 ಕ್ಕೆ ಹೋಲಿಸಿದರೆ 2024 ರಲ್ಲಿ ಮಾತ್ರ ಹಿರಿಯರ ವಿರುದ್ಧದ ಸೈಬರ್ ಅಪರಾಧಗಳಿಂದ ನಷ್ಟದಲ್ಲಿ ಶೇ. 291 ರಷ್ಟು ಹೆಚ್ಚಳವಾಗಿದೆ.ತಂತ್ರಜ್ಞಾನದ ಬಗ್ಗೆ ಅಷ್ಟೊಂದು ಅಪ್‌ಡೇಟ್ ಆಗದ ವೃದ್ಧರು ಹೊಸ ಸಾಫ್ಟ್ ಟಾರ್ಗೆಟ್‌ಗಳಾಗಿ ಹೊರಹೊಮ್ಮುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಮಾತನಾಡಿ ಸ್ಮಾರ್ಟ್‌ಫೋನ್ ಬಳಕೆ ಅನಿವಾರ್ಯವಾಗಿದ್ದರೂ, ಅದು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಸೈಬರ್ ವಂಚನೆಗಳಿಗೆ ನಮ್ಮನ್ನು ಹೆಚ್ಚು ಗುರಿಯಾಗಿಸಿದೆ ಎಂದು ಹೇಳಿದರು. ಅದರಲ್ಲೂ ಹಿರಿಯ ನಾಗರಿಕರಿಗೆ ಇದರಿಮದ ಹೆಚ್ಚಿನ ಸಮಸ್ಯೆಯಾಗುತ್ತಿದೆ ಇದನ್ನು ನಾವು ಆದಷ್ಟು ಬೇಗನೆ ಪರಿಹಾರಹವನ್ನು ನೀಡುತ್ತಾವೆ ಎಂದು ಹೇಳಿದ್ದರು.
ಈ ದೂರುಗಳನ್ನು ಪರಿಹರಿಸುವಲ್ಲಿನ ವಿವಿಧ ಸವಾಲುಗಳಿಂದಾಗಿ, ವರದಿ ಮಾಡಿದ ನಂತರವೂ, ಕಳೆದುಹೋದ ಹಣವನ್ನು ಯಶಸ್ವಿಯಾಗಿ ಮರುಪಡೆಯುವುದು ಕಷ್ಟಕರವಾಗಿದೆ ಎಂದು ಅವರು ಹೇಳಿದ್ದರು.
60 ವರ್ಷಕ್ಕಿಂತ ಮೇಲ್ಪಟ್ಟ ಜನರ ವಿರುದ್ಧದ ಸೈಬರ್ ಅಪರಾಧದಿಂದಾಗಿ 46.7 ಕೋಟಿ ರೂ. ನಷ್ಟವನ್ನು ಅನುಭವಿಸಿದ್ದಾರೆ. ಈ ಸಂಖ್ಯೆ ಒಂದು ವರ್ಷದ ನಂತರ 182.8 ಕೋಟಿ ರೂ.ಗೆ ಏರಿತು. ನಗರ ಸೈಬರ್ ಅಪರಾಧ ಪೊಲೀಸರು ಕಳೆದ ಮೂರು ವರ್ಷಗಳಲ್ಲಿ 9,300 ಕ್ಕೂ ಹೆಚ್ಚು ಸೈಬರ್ ವಂಚನೆ ಪ್ರಕರಣಗಳನ್ನು ದಾಖಲಿಸಿದ್ದು, 257 ಕೋಟಿ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ ಎಂದು ದಾಖಲಾಗಿದೆ ಎಂದರು.
ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್‌ನ ಅಸೋಸಿಯೇಟ್ ಡೈರೆಕ್ಟರ್ ಸ್ವಾತಿ ಭಂಡಾರಿ, ತಜ್ಞರು ನಡೆಸಿದ ಅರ್ಧ ದಿನದ ಕಾರ್ಯಕ್ರಮವು ಹಿರಿಯರಿಗೆ ಸ್ಮಾರ್ಟ್ ಫೋನ್ ಬಳಕೆ ಮತ್ತು ಅಂತಹ ಸೈಬರ್ ವಂಚನೆಗಳ ವಿರುದ್ಧ ತಡೆಗಟ್ಟುವಿಕೆ ಎರಡರ ಮೂಲಭೂತ ಅಂಶಗಳನ್ನು ಕಲಿಸುತ್ತದೆ ಎಂದು ಮಾಹಿರಿಯನ್ನು ತಿಳಿಸಿದ್ದಾರೆ.

ಯುವ ಪೀಳಿಗೆ ಹೊಸ ತಂತ್ರಜ್ಞಾನಗಳನ್ನು ಬೇಗನೆ ಅಳವಡಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ವಯೋ ವಯೋವೃದ್ಧರು ಅದನ್ನು ಕಲಿಸಲು ಸ್ವಲ್ಪ ತಾಳ್ಮೆ ಅಗತ್ಯಎಂದು ಸ್ವಾತಿ ಹೇಳಿದರು, ಅಂತಹ ವಂಚನೆಗಳನ್ನು ವರದಿ ಮಾಡುವುದರಲ್ಲಿ ಕಳಂಕವಿದೆ, ಅಂತಹ ಅಭಿಯಾನಗಳ ಮೂಲಕ ಅದರ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮಾತ್ರ ಅದನ್ನು ತೆಗೆದುಹಾಕಬಹುದು ಎಂದು ಮಾಹಿತಿ ತಿಳಿಸಿದ್ದಾರೆ.
ತಂತ್ರಜ್ಞಾನದ ಬಗ್ಗೆ ಹಿರಿಯ ನಾಗರಿಕರು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡರೆ ಸೈಬರ್ ಅಪರಾಧಗಳಿಗೆ ಕಡಿವಾಣವಾಗಬಹುದು.
More From GoodReturns

Hotel Bandh: ಬೆಂಗಳೂರಿಗೂ ತಟ್ಟಿದ ಯುದ್ಧದ ಬಿಸಿ; ಇಂದಿನಿಂದ ಹಲವು ಹೋಟೆಲ್ ಬಂದ್

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ಎಲ್ಲೆಲ್ಲಿ ಗೊತ್ತಾ?

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru Special Trains: ಮಾರ್ಚ್ 11 ರಿಂದ ಬೆಂಗಳೂರಿಗೆ ಬರಲಿದೆ ಮತ್ತೊಂದು ಸ್ಪೆಷಲ್ ರೈಲು! ಎಲ್ಲಿಂದ ಎಲ್ಲಿಗೆ?

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!



Click it and Unblock the Notifications