ಬೆಂಗಳೂರಿಗರೇ ಇಲ್ಲಿ ಕೇಳಿ.. ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ನಾಳೆ( ಜೂನ್.29 ಭಾನುವಾರ)ದಂದು ವಿದ್ಯುತ್ ಸರಬರಾಜಿನಲ್ಲಿ ಅಡಚರಣೆ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮಾಹಿತಿಯನ್ನು ತಿಳಿಸಿದೆ. ಹಾಗಿದ್ರೆ ನಾಳೆ ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ..? ಎಷ್ಟು ಗಂಟೆಗಳ ಕಾಲ ವಿದ್ಯುತ್ ಸ್ಥಗಿತಗೊಳ್ಳುತ್ತದೆ ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ..
ಬೆಂಗಳೂರಿನಲ್ಲಿ ನಾಳೆ ವಿದ್ಯುತ್ ಸರಬರಾಜು ಸಂಸ್ಥೆಯು ಕೆಲವು ನಿಗದಿತ ತ್ರೈಮಾಸಿಕ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ನಾಳೆ ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ ಏಳು ಗಂಟೆಗಳ ಕಾಲ ಕರೆಂಟ್ ತೆಗೆಯುವಂತಹ ಸಾಧ್ಯತೆ ಇದೆ.

ವರದಿಯ ಪ್ರಕಾರ ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಸಂಸ್ಥೆಯು ಕೆಲವು ನಿಗದಿತ ತ್ರೈಮಾಸಿಕ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿದೆ.ಇದರಿಂದಾಗಿ 66/11 ಕಿಲೋವೋಲ್ಟ್ (ಕೆವಿ) ಎ ಸ್ಟೇಷನ್ ಅಡಿಯಲ್ಲಿ ಬರುವ ಪ್ರದೇಶಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ಬಹುತೇಕ ಕಚೇರಿಗಳು, ಕೈಗಾರಿಕೆಗಳು ಮತ್ತು ಶಾಲೆಗಳು ಮುಚ್ಚಿರುವುದರಿಂದ ವಿದ್ಯುತ್ ಬಳಕೆಯನ್ನು ಸಾರ್ವಜನಿಕರು ಕಡಿಮಡ ಬಳಕೆ ಮಾಡುತ್ತಾರೆ. ನಾವು ಈ ಸಮಯದಲ್ಲಿ ಬೆಸ್ಕಾಂ ನಿರ್ವಹಣಾ ಕಾಮಗಾರಿಗನ್ನು ಮಾಡುವುದು ಸೂಕ್ತ.ಯಾಕೆಂದರೆ ಗ್ರಾಹಕರ ಇದು ಕಡಿಮೆಯ ಪರಿಣಾಮವನ್ನು ಬೀರುತ್ತದೆ ಅದಕ್ಕಾಗಿ
ಬೆಸ್ಕಾಂ ವಾರಾಂತ್ಯದಲ್ಲಿ ಕೆಲಸ ಮಾಡಲಾಗುತ್ತದೆ ಎಂದು ಮಾಹಿತಿಯನ್ನು ತಿಳಿಸಿಸಲಾಗಿದೆ.
ಯಾವೆಲ್ಲಾ ಏರಿಯಾಗಳಲ್ಲಿ ವಿದ್ಯುತ್ ಇರುವುದಿಲ್ಲ
ಬೆಸ್ಕಾಮ್ ನೀಡಿರುವ ಮಾಹಿತಿಯ ಪ್ರಕಾರ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಬಹುದು ಎಂದು ಹೇಳಿದೆ ಅವುಗಳೆಂದರೆ, ಶೇಷಾದ್ರಿ ರಸ್ತೆ, ಕುರುಬರ ಸಂಘದ ವೃತ್ತ, 1ನೇ ಮುಖ್ಯರಸ್ತೆ, ಗಾಂಧಿ ನಗರ 1ನೇ ಕ್ರಾಸ್, 2ನೇ ಕ್ರಾಸ್ ಭಾಗಗಳು, ಕ್ರೆಸೆಂಟ್ ರಸ್ತೆ, ಶೇಷಾದ್ರಿಪುರಂ, ವಿನಾಯಕ ವೃತ್ತ, ಕೆಂಪೇಗೌಡ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಸುಬೇದಾರ್ ಛತ್ರಂ ರಸ್ತೆ, ಲಕ್ಷ್ಮಣಪುರಿ ಸ್ಲಂ ಏರಿಯಾ, ಕಬ್ಬನ್‌ಪೇಟೆ, ಚಲುಕೂರ್‌ಪೇಟೆ, ಚಲುಕೂರ್‌ಪೇಟೆ, ಸಿ.ಸಿ. ಹೈಗ್ರೌಂಡ್ಸ್, ಮಲ್ಲೇಶ್ವರಂ ಮತ್ತು ಶೇಷಾದ್ರಿಪುರಂನ ಭಾಗಗಳಲ್ಲಿ ವಿದ್ಯುತ್ ವ್ಯತ್ಯಾಯವಾಗಲಿದೆ.
ಜೂನ್ 24, 2025 ರಂದು ಬೆಂಗಳೂರು ನಗರದೆಲ್ಲೆಡೆ ನಿಗದಿತ ವಿದ್ಯುತ್ ಕಡಿತವನ್ನು ಮಾಡಲಾಗಿತ್ತು. ಇದರಿಂದ ಹಲವಾರು ನಿವಾಸಿ ಮತ್ತು ವಾಣಿಜ್ಯ ಪ್ರದೇಶಗಳು ತಾತ್ಕಾಲಿಕ ವಿದ್ಯುತ್ ವ್ಯತ್ಯಯದ ಪರಿಣಾಮಗಳನ್ನು ಎದುರಿಸಲಾಗುತ್ತು. ಬೆಸ್ಕಾಂ (BESCOM) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್ (KPTCL) ಒಟ್ಟಿಗೆ ಅನೇಕ ನಿರ್ವಹಣಾ ಮತ್ತು ಬದಲಾವಣೆ ಕಾಮಗಾರಿಗಳನ್ನು ನೆರವಿಗೆ ನಿಗದಿಪಡಿಸಿದೆ.
ಇವುಗಳಲ್ಲಿ ಮರಗಳನ್ನು ಕತ್ತರಿಸುವುದು, ಓವರ್ಹೆಡ್ ಕೇಬಲ್‌ಗಳ ಭೂಗತೀಕರಣ, ಜಲಸಿರಿ 24x7 ನೀರು ಸರಬರಾಜು ಯೋಜನೆ, ಹೈ-ಟೆನ್ಷನ್ (ಎಚ್‌ಟಿ) ಲೈನ್‌ಗಳ ಮರುಕಂಡಕ್ಟರ್, ರಿಂಗ್ ಮುಖ್ಯ ಘಟಕಗಳ (ಆರ್‌ಎಂಯು) ಸೇವೆ, ಎಚ್‌ಟಿ ಸಂಪರ್ಕಗಳನ್ನು ದುರಸ್ತಿ ಮಾಡುವುದು ಮತ್ತು ಬದಲಾಯಿಸುವುದು, ಸಿಸ್ಟಮ್ ನವೀಕರಣಗಳು ಮತ್ತು ಇತರ ಅಗತ್ಯ ದುರಸ್ತಿಗಳನ್ನು ಒಳಗೊಂಡಿತ್ತು.
ಜೂನ್ 30: ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆ
ಬೆಂಗಳೂರಿನಲ್ಲಿ ಜೂನ್ 30 ಸೋಮವಾರದಂದು ಕೂಡ ವಿದ್ಯುತ್ ಸ್ಥಗಿತವಾಗುವಂತಹ ಸಾಧ್ಯತೆ ಇದೆ. ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಪವರ್ ಕಟ್ ಆಗಬಹುದು. ಫೋರಂ ಮಾಲ್, ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್, ದೊಡ್ಡಕಲ್ಲಸಂದ್ರ, ಕನಕಪುರ ಮುಖ್ಯರಸ್ತೆ, ನಾರಾಯಣ ನಗರ 3ನೇ ಬ್ಲಾಕ್, ಮುನಿ ರೆಡ್ಡಿ ಲೇಔಟ್, ಕುಮಾರನ್ಸ್ ಸ್ಕೂಲ್, ಜ್ಯೋತಿ ಲೇಔಟ್, ಗಂಗಾಪತಿಪುರ, ಸುಪ್ರಜಾ ನಗರ, ಜೆಎಸ್‌ಎಸ್ ಶಾಲೆ, ಜರಗನಹಳ್ಳಿ ಪಾರ್ಕ್, ಗಂಗಾಧರೇಶ್ವರ ದೇವಸ್ಥಾನ, ಸರಕಳ್ಳಾ ರಸ್ತೆ, ಸರಕಟ್ಟಿ ಲಾಯೌಟ್, ಸರಕಳ್ಳಿ ರಸ್ತೆ, ಆಶಾನಕಟ್ಟೆ ರಸ್ತೆ. ಸಿಗ್ನಲ್, ನಾಗಾರ್ಜುನ ಪ್ರೀಮಿಯರ್ ಅಪಾರ್ಟ್‌ಮೆಂಟ್, ಚೊಂಚನಗಟ್ಟಾ ಗ್ರಾಮ, ಶ್ರೀನಿಧಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ ಎಂದು ಮಾಹಿತಿ ತಿಳಿದು ಬಂದಿದೆ.


Click it and Unblock the Notifications