ಬೆಂಗಳೂರಿಗೆ ಇಲ್ಲಿ ಕೇಳಿ... ಬೆಂಗಳೂರಿನ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಜುಲೈ.19 ರಿಂದ 24ನೇ ದಿನಾಂಕದವರೆಗೆ ವಿದ್ಯುತ್ ಸರಬರಾಜಿನಲ್ಲಿ ಅಡಚರಣೆ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮಾಹಿತಿಯನ್ನು ತಿಳಿಸಿದೆ.ಹಾಗಿದ್ರೆ ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ..? ಎಷ್ಟು ಗಂಟೆಗಳ ಕಾಲ ವಿದ್ಯುತ್ ಸ್ಥಗಿತಗೊಳ್ಳುತ್ತದೆ ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ.

ಹೌದು,ಬೆಂಗಳೂರು ನಗರದಲ್ಲಿ ಬೆಸ್ಕಾಂ (BESCOM) ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತದೆ. ಇದರಿಂದಾಗಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಪ್ರತಿದಿನ ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ4:00 ರವರೆಗೆ ಗಂಟೆಯವರೆಗೆ, ಸುಮಾರು 5.5 ಗಂಟೆಗಳ ಕಾಲ ವಿದ್ಯುತ್ ಇರುವುದಿಲ್ಲ.
ವಿದ್ಯುತ್ ಸ್ಥಗಿತಕ್ಕೆ ಕಾರಣವೇನು..?
ಬೆಂಗಳೂರಿ 220 ಕೆವಿ ದೊಡ್ಡಬಳ್ಳಾಪುರ ನಿಲ್ದಾಣಕ್ಕೆ ಸಂಪರ್ಕ ಹೊಂದಿರುವ 66 ಕೆವಿ ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ಪ್ರಸರಣ ಮಾರ್ಗದಲ್ಲಿ ಕಂಡಕ್ಟರ್‌ಗಳನ್ನು ಬದಲಾಯಿಸುವುದು ಸೇರಿದಂತೆ ಪ್ರಮುಖ ನಿರ್ವಹಣಾ ಕಾರ್ಯಗಳಿಗೆ ಅವಕಾಶ ನೀಡಲು ವಿದ್ಯುತ್ ಅನ್ನು ಸ್ಥಗಿತಗೊಳಿಸಲಾಗಿದೆ.
ಬೆಸ್ಕಾಂ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ಸಮಸ್ಯೆಗಳಾಗದಂತೆ ನೋಡಿಕೊಳ್ಳಲು ಮತ್ತು ಸುರಕ್ಷಿತ ಹಾಗೂ ವಿಶ್ವಾಸಾರ್ಹ ಸೇವೆಯನ್ನು ಒದಗಿಸಲು ಈ ನಿರ್ವಹಣಾ ಕಾರ್ಯ ಅತ್ಯಗತ್ಯ ಎಂದು ಮಾಹಿತಿಯನ್ನು ತಿಳಿಸಿದೆ. ಪ್ರತಿನಿತ್ಯದ ಕೆಲಸಕ್ಕೆ ವಿದ್ಯುತ್ ವ್ಯತ್ಸಾಯ ತೋಂದರೆಯನ್ನು ಉಂಟುಮಾಡಬಹುದು.
ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ..?
ಬೆಂಗಳೂರಿನ ತೈಲಗೆರೆ, ಬಿದಲೂರು ಮತ್ತು ಯಲಿಯೂರು, ಕೋರಮಂಗಲ ಮತ್ತು ಗೊಬ್ಬರಗುಂಟೆ ಗ್ರಾ.ಪಂ, ಕುಂದಣ ಗ್ರಾಮ ಪಂಚಾಯತ್ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲಾಧಿಕಾರಿ ಕಚೇರಿ, ರವೀಂದ್ರ ನಗರ, ಸಣ್ಣಮಾನಿಕೆರೆ ಮತ್ತು ಹೀರಾನಂದನಿ, ದೇವನಹಳ್ಳಿ ಪಟ್ಟಣದ ವಸತಿ ಬಡಾವಣೆಗಳು, ಗೋಕರೆ, ಭುವನಹಳ್ಳಿ, ಚಿಮಾಚನಹಳ್ಳಿ, ಕನ್ನಮಂಗಲ ಮತ್ತು ಯರ್ತಿಗಾನಹಳ್ಳಿ ಗ್ರಾಮಗಳು, ಆಲೂರು-ದುದ್ದನಹಳ್ಳಿ ಪ್ರದೇಶ ಸೇರಿದಂತೆ ಕೊಯಿರಾ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಕೊಯಿರಾ ಗ್ರಾಮ ಪಂಚಾಯತ್ ಸೇರಿದಂತೆ ಕುಂದಣ ಸಬ್‌ಸ್ಟೇಷನ್ ಬಳಿಯ ಪ್ರದೇಶಗಳು, ಬೊಮ್ಮವಾರ, ಸಂತೋಷ್ ನಗರ ಮತ್ತು ಪ್ರಶಾಂತ್ ನಗರದಂತಹ ನೆರೆಹೊರೆಯ ಪ್ರದೇಶಗಳಲ್ಲಿ ಚಿಕ್ಕಸನ್ನೆ, ಆವಟಿ ಮತ್ತು ವಿಶ್ವನಾಥಪುರದಂತಹ ಪ್ರದೇಶಗಳಿಗೆ ವಿದ್ಯುತ್ ಕಡಿತದ ಬಿಸಿ ತಟ್ಟಲಿದೆ ಎಂದು ಬೆಸ್ಕಾಂ (BESCOM) ಮಾಹಿತಿಯನ್ನು ತಿಳಿಸಿದೆ. ಈ ವ್ಯತ್ಯಯವು ಪ್ರತಿದಿನ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 3:30 ರವರೆಗೆ 5.5 ಗಂಟೆಗಳ ಕಾಲ ಇರುತ್ತದೆ.
ನಿರಂತರ ವಿದ್ಯುತ್ ಸೇವೆಯನ್ನು ಪಡೆಯಲು ಬೆಸ್ಕಾಂಗೆ ಸಹಕರಿಸುವಂತೆ ಮುಂದಿನ ದಿನಮಾನಗಳಲ್ಲಿ ಯಾವುದೇ ತೊಂದರೆಯಾಗದಂತೆ ವಿದ್ಯುತ್ ಸರಬರಾಜನ್ನು ಕಾಪಾಡಿಕೊಳ್ಳಲು ನಿರ್ವಹಣಾ ಕಾರ್ಯ ಅತ್ಯಗತ್ಯ ಎಂದು ಬೆಸ್ಕಾಂ ಸಾರ್ವಜನಿಕರಿಗೆ ಮನವಿಯನ್ನು ಕೋರಿದೆ.
ಒಟ್ಟಾರೆಯಾಗಿ, ಬೆಸ್ಕಾಂನ ಈ ಕ್ರಮವು ಬೆಂಗಳೂರಿನ ವಿದ್ಯುತ್ ಮೂಲಸೌಕರ್ಯವನ್ನು ಸುಧಾರಿಸುವ ಮತ್ತು ಉತ್ತಮ ವಿದ್ಯುತ್ ಸರಬರಾಜನ್ನು ಒದಗಿಸುವ ಗುರಿಯನ್ನು ಹೊಂದಿದೆ. ತಾತ್ಕಾಲಿಕ ಅನಾನುಕೂಲತೆಗಳ ಹೊರತಾಗಿಯೂ, ಈ ನವೀಕರಣಗಳು ದೀರ್ಘಾವಧಿಯಲ್ಲಿ ನಗರದ ನಿವಾಸಿಗಳಿಗೆ ಪ್ರಯೋಜನವನ್ನು ನೀಡುವ ನಿರೀಕ್ಷೆ ಇದೆ.


Click it and Unblock the Notifications