ಬೆಂಗಳೂರು: ಸಾಮಾನ್ಯವಾಗಿ ಬೆಂಗಳೂರಿನಲಿ ಈ ವರ್ಷದ ಆರಂಭದಿಂದಲೂ ಭಾರೀ ಪವರ್ ಕಟ್ ಸುದ್ದಿಗಳು ಕೇಳಿಬರುತ್ತಿದೆ. ಇದೀಗ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಜನವರಿ 21, 2026 ರಂದು ಬೆಂಗಳೂರಿನ ಹಲವೆಡೆ ಪವರ್‌ಕಟ್ ಇರಲಿದೆ ಎಂದು ಸೂಚನೆ ಹೊರಡಿಸಿದೆ. 66/11 ಕೆವಿ ಬಾಣಸವಾಡಿ ವಿದ್ಯುತ್ ಉಪಕೇಂದ್ರದಲ್ಲಿ ನಡೆಯಲಿರುವ ನಿರ್ವಹಣಾ ಕಾರ್ಯದಿಂದಾಗಿ ಈ ವಿದ್ಯುತ್ ಸ್ಥಗಿತ (Power Cut) ಎದುರಾಗಲಿದೆ. ಪೂರ್ವ, ಉತ್ತರ, ಕೇಂದ್ರ ಮತ್ತು ಆಗ್ನೇಯ ಬೆಂಗಳೂರಿನ 100 ಕ್ಕಿಂತಲೂ ಹೆಚ್ಚು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಲಾಗಿದೆ. ಗುಣಮಟ್ಟದ ಸೇವೆ, ಸುರಕ್ಷತಾ ಪರಿಶೀಲನೆ ಮತ್ತು ಹಲವು ವೈಫಲ್ಯ ತಡೆಯುವ ಉದ್ದೇಶದಿಂದ ಈ ಕಾರ್ಯ ಕೈಗೊಳ್ಳಲಾಗಿದೆ.

ಜನವರಿ 21ರಂದು ಬೆಳಗ್ಗೆ 10 ಗಂಟೆಯಿಂದ ವಿದ್ಯುತ್ ಕಟ್ ಆದರೂ, ಸಂಜೆ ವೇಳೆಗೆ ಮರಳಿ ಬರುವ ಸಾಧ್ಯತೆ ಇದೆ. ಕಾಮಗಾರಿ ಎಷ್ಟು ಬೇಗ ಮುಗಿಯುತ್ತೋ ಅಷ್ಟು ಬೇಗ ವಿದ್ಯುತ್ ಮರಳಿ ಬರಬಹುದು. ಇನ್ನು ವಿದ್ಯುತ್ ಕಡಿತ ಉಂಟಾಗುವ ಸ್ಥಳಗಳಲ್ಲಿ, ಜನರು ಮೊದಲೇ ಮುನ್ನೆಚ್ಚರಿಕೆಗ ವಹಿಸುವ ಉದ್ದೇಶದಿಂದ ಈ ಸೂಚನೆ ಹೊರಡಿಸಲಾಗಿದೆ..
ಎಲ್ಲೆಲ್ಲಿ ಇಂದು ಇರಲ್ಲ ಕರೆಂಟ್?
ಪೂರ್ವ ಮತ್ತು ಉತ್ತರ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಅದರಲ್ಲೂ ಎಚ್‌ಆರ್‌ಬಿಆರ್ ಲೇಔಟ್ (1ನೇ, 2ನೇ, 3ನೇ ಬ್ಲಾಕುಗಳು), ಕಮ್ಮನಹಳ್ಳಿ ಮುಖ್ಯರಸ್ತೆ, ಸಿಎಂಆರ್ ರಸ್ತೆ, ಬಾಬೂಸಾಪಲ್ಯ, ಬಾಲಚಂದ್ರ ಲೇಔಟ್, ಫ್ಲವರ್ ಗಾರ್ಡನ್, ಎಂಎಂ ಗಾರ್ಡನ್, ಅರ್ಕಾವತಿ ಲೇಔಟ್, ಅಂಜನಾದ್ರಿ ಲೇಔಟ್ ಎನ್‌ಕ್ಲೇವ್, ದಿವ್ಯಾ ಉನ್ನತಿ ಲೇಔಟ್, ವಿಜಯೇಂದ್ರ ಗಾರ್ಡನ್, ಮಲ್ಲಪ್ಪ ಲೇಔಟ್, ಪ್ರಕೃತಿ ಟೌನ್‌ಶಿಪ್.
ಅದೇ ರೀತಿ ಬಾಲಾಜಿ ಲೇಔಟ್, ಜಿಎನ್‌ಆರ್ ಗಾರ್ಡನ್, ಚೇಲಕರೆ, ಚೇಲಕರೆ ಗ್ರಾಮ, ಸಮುದ್ರಿಕ ಎನ್‌ಕ್ಲೇವ್, ಸುಬ್ಬಯ್ಯನಪಾಳ್ಯ, ಹೊರಮಾವು, ಮುನಿರೆಡ್ಡಿ ಲೇಔಟ್, ವಿಜಯ್ ಬ್ಯಾಂಕ್ ಕಾಲೋನಿ, ನಿಸರ್ಗ ಕಾಲೋನಿ, ನಂದನಂ ಕಾಲೋನಿ, ಅಮರ್ ಏಜೆನ್ಸಿ ಲೇಔಟ್, ಪಿ ಮತ್ತು ಟಿ ಲೇಔಟ್, ಪಪಾಯ ಲೇಔಟ್, ಕೋಕನಟ್ ಗ್ರೋವ್ ಲೇಔಟ್, ಆಶೀರ್ವಾದ್ ಕಾಲೋನಿ, ಶಕ್ತಿ ನಗರ, ಹೆಣ್ಣೂರು ಗ್ರಾಮ, ಭೈರವೇಶ್ವರ ಲೇಔಟ್, ಚಿಕ್ಕಣ್ಣ ಲೇಔಟ್, ಸಿಎಂಆರ್ ಲೇಔಟ್, ಹೆಣ್ಣೂರು ಕ್ರಾಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಕಂಚಪ್ಪ ಗಾರ್ಡನ್, ಬೃಂದಾವನ ಲೇಔಟ್, ಹೊಸಳ ನಗರ, ಬೃಂದಾವನ ಅವೆನ್ಯೂ ಹೆರಿಟೇಜ್, ವಿನಾಯಕ ಲೇಔಟ್ ಮತ್ತು ಜಯಂತಿ ಗ್ರಾಮದಲ್ಲಿ ಪವರ್ ಕಟ್ ಇರಲಿದೆ..
ನರೇಂದ್ರ ಟೆಂಟ್, ಒಎಂಬಿಆರ್ ಲೇಔಟ್, ಕಸ್ತೂರಿ ನಗರ, ಪಿಳ್ಳಾರೆಡ್ಡಿ ನಗರ, ಕಾರವಳ್ಳಿ ರಸ್ತೆ, ರಾಮಯ್ಯ ಲೇಔಟ್, ಅಜ್ಮಲ್ಲಪ್ಪ ಲೇಔಟ್, ದೊಡ್ಡ ಬಾಣಸವಾಡಿ, ರಾಮಮೂರ್ತಿ ನಗರ ಮುಖ್ಯರಸ್ತೆ, ಬಿ ಚನ್ನಸಂದ್ರ, ನಂಜಪ್ಪ ಗಾರ್ಡನ್, ಆಗೇರೆ ಮುಖ್ಯರಸ್ತೆ, ದೊಡ್ಡಯ್ಯ ಲೇಔಟ್, ಬ್ಯಾಂಕ್ ಅವೆನ್ಯೂ ಮತ್ತು ಆರ್.ಎಸ್. ಪಾಳ್ಯದಂತಹ ಪ್ರಮುಖ ಸ್ಥಳಗಳಲ್ಲೂ ಪವರ್ ಕಟ್ ಆಗಲಿದೆ ಎಂದು ಹೇಳಲಾಗಿದೆ.
ಇನ್ನು ಈ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಹಿನ್ನೆಲೆ, ಜನರು ಕೂಡಾ ತಮ್ಮ ಅಗತ್ಯ ಕೆಲಸಗಳನ್ನು ಮೊದಲೇ ಮುಗಿಸಿಕೊಳ್ಳುವಂತೆ ಬೆಸ್ಕಾಂ ಇಲಾಖೆ ಮನವಿ ಮಾಡಿದೆ.


Click it and Unblock the Notifications