ಬೆಂಗಳೂರಿನ ರಿಯಲ್ ಎಸ್ಟೇಟ್ ಹಬ್ ಆಗಲಿದ್ಯಾ ದೇವನಹಳ್ಳಿ..? ಐಟಿ ಕ್ಷೇತ್ರ ವಿಸ್ತರಣೆ..ಹೆಚ್ಚುತ್ತಿರುವ ನಿವೇಶನದ ಬೆಲೆ..!

ಬೆಂಗಳೂರು ಗ್ರಾಮಾಂತರವಾದ ದೇವನಹಳ್ಳಿ ಬೆಳವಣಿಗೆ ನೋಡಿ ಕಣ್ಣು ಬೀಳುವುದೊಂದು ಬಾಕಿ. ಅಷ್ಟರ ಮಟ್ಟಿಗೆ ಅದು ಅಭಿವೃದ್ಧಿಯತ್ತ ಸಾಗುತ್ತಿದೆ. ಹೇಳಿಕೊಳ್ಳುವುದಕ್ಕೆ ಗ್ರಾಮಾಂತರ ಪ್ರದೇಶದಲ್ಲಿದ್ದರೂ ದಿನೇ ದಿನೇ ದುಬಾರಿ ಪ್ರದೇಶವಾಗುತ್ತಿದೆ. ಏಕೆಂದರೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ ದೇವನಹಳ್ಳಿ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ದೇವನಹಳ್ಳಿ ಪ್ರಸ್ತಾವಿತ ಐಟಿ ಮತ್ತು ವ್ಯಾಪಾರ ಉದ್ಯಾನವನಗಳ ಯೋಜನೆಗಳೊಂದಿಗೆ ಪ್ರಮುಖ ಹೂಡಿಕೆ ತಾಣವಾಗಿ ಬೆಳೆಯುತ್ತಿದೆ.

ಬೆಂಗಳೂರಿನ ರಿಯಲ್ ಎಸ್ಟೇಟ್ ಹಬ್ ಆಗಲಿದ್ಯಾ ದೇವನಹಳ್ಳಿ..?

ಇನ್ನು ತಜ್ಞರ ಅಭಿಪ್ರಾಯದ ಪ್ರಕಾರ, ದೇವನಹಳ್ಳಿಯು ವ್ಯಾಪಾರ ಹಾಗೂ ವಸತಿ ಪ್ರದೇಶವಾಗಿ ಗುರುಗ್ರಾಮ್ ಮಾದರಿಯಲ್ಲಿ ಅಭಿವೃದ್ಧಿ ಹೊಂದುವ ಸಾಮರ್ಥ್ಯವನ್ನು ಹೊಂದಿರುವುದು ಸತ್ಯ. ಹೀಗಿದ್ದರೂ ಈ ಬೆಳವಣಿಗೆಯು ಮೂಲಸೌಕರ್ಯ ವೃದ್ಧಿ, ಉದ್ಯೋಗ ಸೃಷ್ಟಿ, ಮತ್ತು ಹೂಡಿಕೆದಾರರ ವಿಶ್ವಾಸದ ಮೇಲೆ ಅವಲಂಬಿತವಾಗಿದೆ ಎನ್ನಬಹುದಾಗಿದೆ.

ಕಳೆದ 15 ವರ್ಷಗಳ ಅವಧಿಯಲ್ಲಾದ ಅಭಿವೃದ್ಧಿಯನ್ನು ನೋಡುವುದಾದರೆ, ವಿಮಾನ ನಿಲ್ದಾಣ ಈ ಪ್ರದೇಶಕ್ಕೆ ಹೆಚ್ಚು ಪ್ರಭಾವ ಬೀರಿದೆ ಎನ್ನಬಹುದು. ಅಂದರೆ ವಿಮಾನ ನಿಲ್ದಾಣ ಸೇವೆಯಿಂದ ದೇವನಹಳ್ಳಿ ಅತ್ಯಂತ ವೇಗವಾಗಿ ವಿಕಾಸಗೊಂಡಿದೆ. ಅಲ್ಲದೆ ರಾಜ್ಯ ಸರ್ಕಾರ ಕೂಡ ಈ ಪ್ರದೇಶವನ್ನು, ಸಮರ್ಥವಂತ ನಾಗರಿಕ ಹಾಗೂ ವಾಣಿಜ್ಯ ಕೇಂದ್ರವಾಗಿ ಪರಿವರ್ತಿಸಲು ಹಲವು ಯೋಜನೆಗಳನ್ನು ಕೈಗೊಂಡಿದೆ. ತಜ್ಞರ ಪ್ರಕಾರ, ಈ ಪ್ರದೇಶದ ಸ್ಥಿರ ಆಸ್ತಿ ಮೌಲ್ಯವು ನಿರಂತರ ಏರಿಕೆಯನ್ನು ಕಾಣುತ್ತಿದೆ.

ಆಸ್ತಿ ಮೌಲ್ಯದಲ್ಲಿ ನಿರಂತರ ಬೆಳವಣಿಗೆ:

ದಿನೇ ದಿನೆ ಅಭಿವೃದ್ಧಿಯನ್ನೇ ಕಾಣುತ್ತಿರುವ ದೇವನಹಳ್ಳಿಯಲ್ಲಿ, ಕಳೆದ ಎರಡು ವರ್ಷಗಳಲ್ಲಿ ಆಸ್ತಿ ಬೆಲೆಗಳು ಶೇ. 15-20ರಷ್ಟು ಏರಿಕೆಯಾಗಿದೆ. ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಮೂಲಸೌಕರ್ಯ ಯೋಜನೆಗಳು ಮತ್ತು ಮುಂಬರುವ ಟೆಕ್‌ ಪಾರ್ಕ್‌ಗಳು ಇದಕ್ಕೆ ಹೆಚ್ಚು ಪರಿಣಾಮ ಬೀರಿದೆ ಎನ್ನಬಹುದಾಗಿದೆ. ಅವುಗಳ ಪ್ರಭಾವದಿಂದಲೇ ವರ್ಷಕ್ಕೆ ಶೇ. 8-12ರಷ್ಟು ಆಸ್ತಿ ಬೆಲೆ ಏರಿಕೆ ಕಂಡುಬರುತ್ತದೆ. ಕ್ರೆಡೈ ಬೆಂಗಳೂರು ಅಧ್ಯಕ್ಷ ಅಮರ್ ಮೈಸೂರಿನ ಪ್ರಕಾರ, ಹೂಡಿಕೆಗಳು ಹೆಚ್ಚಾದಂತೆ ಮತ್ತು ಸಂಪರ್ಕ ಸುಧಾರಿತಗೊಂಡಂತೆ, ದೇವನಹಳ್ಳಿ ಒಂದು ಪ್ರಮುಖ ಆರ್ಥಿಕ ಮತ್ತು ವಸತಿ ಕೇಂದ್ರವಾಗಿ ತಿರುಗುತ್ತಿದೆ.

ವಸತಿ ವಿಕಾಸದ ಬೆಳವಣಿಗೆ:

ಇನ್ನು ಈ ಪ್ರದೇಶವು ಪ್ರಾಥಮಿಕವಾಗಿ ಫ್ಲಾಟ್ ಡೆವೆಲಪ್‌ಮೆಂಟ್‌ಗೆ ಪ್ರಸಿದ್ಧವಾಗಿದೆ. ಇಲ್ಲಿ ಅಪಾರ್ಟ್‌ಮೆಂಟ್‌ಗಳು ಆವರಿಸಿಕೊಳ್ಳುತ್ತಲೇ ಇವೆ. ಅದರ ಸಂಸ್ಕೃತಿಯು ಹೀಗೆಯೇ ಬೆಳೆದರೆ ಮುಂದೆ ಹೆಚ್ಚಿನ ಬೇಡಿಕೆಯನ್ನು ಎದುರಿಸಬೇಕಾಗಬಹುದು. ಸದ್ಯ ಪ್ರತಿ ಚದರ ಅಡಿಗೆ ₹5000-7000 ಮಧ್ಯದಲ್ಲಿ ನಿವೇಶನಗಳ ಬೆಲೆಗಳು ಅಳವಡಿಸಿದ್ದರೆ, STRR ಭಾಗದಲ್ಲಿ ಈ ಬೆಲೆ ₹9000 ಕ್ಕೆ ತಲುಪಿದೆ. ಹೆಚ್ಚಿನ ಜನವಸತಿ ಹಾಗೂ ಆಧುನಿಕ ಸೌಕರ್ಯಗಳ ಯೋಜನೆಗಳು ಈ ಭಾಗದಲ್ಲಿ ಹೂಡಿಕೆ ಆಕರ್ಷಿಸುತ್ತಿವೆ.


ಮೂಲಸೌಕರ್ಯ ಅಭಿವೃದ್ಧಿ ಮತ್ತು ಪ್ರಭಾವ:

ಕರ್ನಾಟಕ ಸರ್ಕಾರವು ದೇವನಹಳ್ಳಿಯ ಸುತ್ತಮುತ್ತ ಹೊಸ ತಂತ್ರಜ್ಞಾನ ಉದ್ಯಾನವನಗಳನ್ನು ಪ್ರಾರಂಭಿಸುತ್ತಿದ್ದು, ಜಂಗಮಕೋಟೆಯಲ್ಲಿ ಬಾಹ್ಯಾಕಾಶ, ಅರೆವಾಹಕ, ಮತ್ತು ಎಲೆಕ್ಟ್ರಾನಿಕ್ಸ್ ತಂತ್ರಜ್ಞಾನಗಳಿಗಾಗಿ ಡೀಪ್-ಟೆಕ್ ಪಾರ್ಕ್ ಸ್ಥಾಪನೆ ಮಾಡುವ ಯೋಜನೆ ಘೋಷಿಸಿದೆ. ಈ ಭಾಗದಲ್ಲಿ ಹೂಡಿಕೆಗಳು ಹೆಚ್ಚಾದಂತೆ, ವಸತಿ ಯೋಜನೆಗಳಿಗೆ ಬೇಡಿಕೆ ಮತ್ತಷ್ಟು ಏರಲಿದೆ.

ಬಿಡುಗಡೆಯಾಗುತ್ತಿರುವ ಪ್ರಮುಖ ಯೋಜನೆಗಳು:

ಹೊಸ ಹೊಸ ಯೋಜನೆಗಳು ಘೋಷಣೆಯಾಗುತ್ತಿವೆ. ಒಂದೊಂದೇ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಇದರ ಪೈಕಿ ಬೆಂಗಳೂರು ಮೆಟ್ರೋ ವಿಸ್ತರಣೆ ದೇವನಹಳ್ಳಿ ಪ್ರದೇಶವನ್ನು ಒಳಗೊಂಡಿದ್ದು, ಇದು ಕೊನೆಯ ಮೈಲಿ ಸಂಪರ್ಕ ಸುಧಾರಿಸಲು ಸಹಾಯ ಮಾಡಲಿದೆ. ಹಾಗೆಯೇ ಸ್ಯಾಟಲೈಟ್ ಟೌನ್ ರಿಂಗ್ ರೋಡ್‌ ಯೋಜನೆಯು ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಉಪಗ್ರಹ ಪಟ್ಟಣಗಳಿಗೆ ಉತ್ತಮ ಸಂಪರ್ಕ ಕಲ್ಪಿಸಲಿದೆ. ಅಮೆಜಾನ್, ಫಾಕ್ಸ್‌ಕಾನ್ ಮೊದಲಾದ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಉಳಿತಾಯ ಮತ್ತು ಉದ್ಯೋಗ ಸೃಷ್ಟಿಗಾಗಿ ದೇವನಹಳ್ಳಿಯನ್ನು ಆಯ್ಕೆ ಮಾಡಿಕೊಂಡಿವೆ. ಹೀಗಾಗಿ ದೇವನಹಳ್ಳಿಯ ಬೆಳವಣಿಗೆ ದಿನೇ ದಿನೆ ಹೆಚ್ಚುತ್ತಲೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+