ಬಾಡಿಗೆದಾರರು ಬೆಂಗಳೂರಿನಲ್ಲಿ ಮನೆ ಖರೀದಿಸಲು ಯಾಕೆ ಯೋಚಿಸುತ್ತಿದ್ದಾರೆ? ಕಾರಣಗಳು ಇಲ್ಲಿವೆ

ಉದ್ಯಮ ನಗರಿ ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಇದರಿಂದಾಗಿ ಇಲ್ಲಿ ಜೀವನವನ್ನು ಮಾಡುವುದು ಕಷ್ಟ. ಮೆಟ್ರೋದಿಮದ ಇಡಿದು ಕುಡಿಯುವ ಹಾಲು ನೀರು ಕೂಡ ದುಬಾರಿ ಅಷ್ಟೇ ಅಲ್ಲದೇ ಬೆಂಗಳೂರಿಗೆ ಕೆಲಸ, ಶಿಕ್ಷಣ,ಹೊಸ ಕಂಪನಿ ಶುರುಮಾಡಲು ಅಥವಾ ಇನ್ನೂ ಯಾವುದೇ ಕೆಲಸಕ್ಕಾಗಿ ಬಂದು ಜನರು ಇಲ್ಲಿ ವಾಸ ಮಾಡಿತ್ತಾರೆ. ಅದರಲ್ಲೂ ಬಾಡಿಗೆ ಮಮೆಯಲ್ಲಿ ವಾಸ ಮಾಡುವವರ ಕಥೆಯಂತೂ ಕೇಳುವುದೇ ಬೇಡ ದಿನಗಳ ಬಹುಬೇಗನೆ ಕಳೆದಂತೆ ಬಾಡಿಗೆ ದಿನ ಬಂದೇ ಬಿಡುತ್ತೆ. ಇತ್ತೀಚಿಗೆ ಅಂತೂ ಮನೆ ಬಾಡಿಗೆಗಳು ಬೆಲೆಗಳು ಗಗನಕ್ಕೇರಿವೆ.

ಹೌದು,ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನೀವು ಮನೆ ಬಾಡಿಗೆಗೆ ಪಡೆಯಬೇಕಾದರೆ,ನೀವು ಬಹಳಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ.ಬೆಂಗಳೂರಿನಲ್ಲಿ ಉದ್ಯೋಗಿಗಳು ಮನೆ ಬಾಡಿಗೆಗೆ ಪಡೆದು ವಾಸ ಮಾಡಲು ಕೂಡ ಎದುರುವಂತಹವಿಪರ್ಯಾಸ ಬಂದಿದೆ. ಈ ಕಾರಣದಿಂದಾಗಿ, ಹೆಚ್ಚಿನ ಉದ್ಯೋಗಿಗಳು ಪಿಜಿಗಳಲ್ಲಿ ಉಳಿಯಲು ಬಯಸುತ್ತಾರೆ. ಅವರು ವಾರಾಂತ್ಯದಲ್ಲಿ ಮನೆಗೆ ಹೋಗಲು ಪ್ರಯತ್ನಿಸುತ್ತಾರೆ ಮತ್ತು ಅವರು ಏಕೆ ತುಂಬಾ ಎದುರುತ್ತಾರೆ? ಹಲವು ಕಾರಣಗಳನ್ನು ಅವುಗಳು ಯಾವುದು ಎಂದು ತಿಳಿಯಲು ಮುಂದೆ ಓದಿ..

ಬಾಡಿಗೆದಾರರು ಬೆಂಗಳೂರಿನಲ್ಲಿ ಮನೆ ಖರೀದಿಸಲು ಯಾಕೆ ಯೋಚಿಸುತ್ತಿದ್ದಾರೆ

ಬೆಂಗಳೂರಿನಲ್ಲಿ ಇತ್ತೀಚೆಗೆ ಮನೆ ಹುಡುಕುವುದು ತುಂಬಾನೇ ಕಷ್ಟಪಡುವಂತಹ ಪರಿಸ್ಥಿತಿಗಲು ಇವೆ. ಕಷ್ಟಪಟ್ಟಿ ಹುಡುಕಿ ಬಾಡಿಗೆಗೆ ಮನೆ ಸಿಕ್ಕರೂ ಮೊದಲು ಮಾಲೀಕರಿಗೆ ಆರು ತಿಂಗಳ ಮುಂಗಡ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಇದರ ಜೊತೆಗೆ, ಭದ್ರತೆಯಾಗಿ ಇನ್ನೂ ಸ್ವಲ್ಪಅಡ್ವಾನ್ಸ್ ಹಣವನ್ನು ಸಹ ನೀಡಬೇಕು. ವಿದ್ದುತ್‌ ಬಿಲ್, ನೀರಿನ ಬಿಲ್‌, ನಿರ್ವಹಣೆ ಮತ್ತು ಇತರ ಖರ್ಚುಗಳಿಗೆ ತಿಂಗಳ ಅರ್ಧದಷ್ಟು ಮನೆಯ ನಿರ್ವಹಣೆಗೆ ಹೋಗುತ್ತದೆ. ಉದ್ಯೋಗಿಯ ಜೇಬಿಗೆ ಕತ್ತರಿ ಬೀಳುವಂತಹ ಪರಿಸ್ಥಿತಿಯನ್ನು ಇದಾಗಿದೆ.

ಉದ್ಯೋಗಿಗಳಿ ಇದನೆಲ್ಲಾ ಗಮನದಲಿಟ್ಟುಕೊಂಡು ಮನೆ ಖರೀದಿಸುವು ಬದಲು ಪಿಜಿಗಳಲ್ಲಿ ವಾಸಿಸುವುದೇ ಮೈಲು ಎಂದುಕೊಂಡು ಜೀವನ ಸಾಗಿಸುತ್ತಿದ್ದರೆ ಆದರೆ ಈಗ ಪ್ರವೃತ್ತಿ ಬದಲಾಗಿ ಬೆಂಗಳೂರಿನ ಉದ್ಯೋಗಿಗಳು ಪ್ರವೃತ್ತಿಯನ್ನು ಬದಲಾಯಿಸಿದ್ದಾರೆ ಎಂಬ ಕಥೆಗಳು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮನೆ ಬಾಡಿಗೆಗೆ ಪಡೆಯುವ ಕಷ್ಟದ ಬದಲು, ಆ ಹಣದಿಂದ ಸ್ವಂತ ಮನೆ ಖರೀದಿಸುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಬೆಂಗಳೂರಿಗೆ ವಾಸವಿರಲು ಬರುವಂತಹ ಜನರು ಯೋಚಿಸುತ್ತಿರುವುದು ಈ ಪ್ರವೃತ್ತಿಯನ್ನು ಬದಲಾಯಿಸಿದೆ. ಒಂದು ಕಾಲದಲ್ಲಿ ಮನೆ ಬಾಡಿಗೆಗೆ ಪಡೆಯುವುದು ಉತ್ತಮ ಎಂದು ಭಾವಿಸಿದ್ದವರು ಈಗ ತಮ್ಮ ಬಾಡಿಗೆ ಮನೆಯನ್ನು ಬಿಟ್ಟು ಸ್ವಂತ ಮನೆ ಖರೀದಿಸಲು ಯೋಚಿಸಿದ್ಧಾರೆ. ಬೆಂಗಳೂರಿನ ಉದ್ಯೋಗಿಗಳು ಬಾಡಿಗೆ ವೆಚ್ಚ, ಆರು ತಿಂಗಳ ಮುಂಗಡ ಮತ್ತು ಭದ್ರತಾ ಠೇವಣಿಯಿಂದ ಬರುವ ಮೊತ್ತದೊಂದಿಗೆ ಮನೆ ಖರೀದಿಸಲು ಪ್ಲಾನ್‌ ಮಾಡಿಕೊಂಡಿದ್ದಾರೆ.

ಯಾವಾಗಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಹಲವು ಕಾರಣಗಳು ವೈರಲ್ ಆಗುತ್ತಿವೆ. ಒಂದು ಪೋಸ್ಟ್‌ನಲ್ಲಿ, ಬಾಡಿಗೆದಾರರು 500 ರೂ. ಬೆಲೆಬಾಳುವ ದೀಪಕ್ಕೆ ಮಾಲೀಕರು ಠೇವಣಿಯಿಂದ 2500 ರೂ. ಕಡಿತಗೊಳಿಸಿದ್ದಾರೆ ಎಂದು ದೂರಿರುವಂತಹ ಪೋಸ್ಟ್‌ಗಳು ಸಖತ್ ವೈರಾಲ್‌ ಆಗುತ್ತಿದೆ. ಈ ಘಟನೆ ರಾಮನಗರ ಹಳ್ಳಿಯಲ್ಲಿ ನಡೆದಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

ಈ ಪೋಸ್ಟ್‌ನಲ್ಲಿ, ಬಾಡಿಗೆದಾರರು ಮನೆ ಖಾಲಿ ಮಾಡಲು ಮಾಲೀಕರಿಗೆ ಹೇಳಿ ಠೇವಣಿಯನ್ನು ಹಿಂತಿರುಗಿಸಿದ್ದಾರೆ.. ಮಾಲೀಕರು ಇದನ್ನು ಹೇಳಿದಾಗ, ಅವರು ಆಘಾತಕ್ಕೊಳಗಾದರು. ಆ ವಸ್ತು ಹಾನಿಗೊಳಗಾಗಿದೆ.ಠೇವಣಿಯಿಂದ ಸುಮಾರು ಒಂದು ಲಕ್ಷ ರೂಪಾಯಿಗಳನ್ನು ಠೇವಣಿ ಇಟ್ಟಿರುವುದಾಗಿ ಅವರು ದೂರಿದ್ದಾರೆ.

ವಾಸ್ತವವಾಗಿ,ಎಲ್ಲಾ ವಸ್ತುಗಳು ಸರಿಯಾಗಿವೆ ಆದರೆ ಮಾಲೀಕರು ಅವು ಹಾನಿಗೊಳಗಾಗಿವೆ ಎಂದು ಹೇಳಿಕೊಂಡಿದ್ದಾರೆ ಮತ್ತು ಈ ಮೊತ್ತವನ್ನು ಠೇವಣಿಯಿಂದ ವಸೂಲಿಯನ್ನು ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಪೋಸ್ಟ್‌ನಲ್ಲಿ, ಬಾಡಿಗೆದಾರರೊಬ್ಬರು ಮನೆ ಮಾಲೀಕರು ಬಣ್ಣ ಬಳಿಯುವುದಕ್ಕೆ ಹೆಚ್ಚಿನ ಶುಲ್ಕ ವಿಧಿಸಿದ್ದಾರೆ ಎಂದು ದೂರಿದ್ದಾರೆ. ಮನೆಗೆ ಬಂದಾಗ ವಾಲ್‌ಪೇಪರ್‌ಗಳನ್ನು ಅಂಟಿಸಿದ್ದೆ, ಆದರೆ ನಂತರ ಮನೆಯಿಂದ ಹೊರಬಂದಾಗ ಅವುಗಳನ್ನು ಹರಿದು ಹಾಕಿದಾಗ, ಚಿತ್ರಕಲೆ ಹಾಳಾಗಿತ್ತು ಎಂದು ಅವರು ಹೇಳಿದರು.

ಮನೆ ಮಾಲೀಕರು ಅದನ್ನು ಬಣ್ಣ ಬಳಿದಿದ್ದಕ್ಕಾಗಿ ಬಾಡಿಗೆದಾರರಿಂದ ಸುಮಾರು 150,000 ರೂ. ಶುಲ್ಕ ವಿಧಿಸಿದ್ದಾರೆ ಎಂದು ಅವರು ದೂರಿದ್ದಾರೆ. ಈ ಸಂದರ್ಭದಲ್ಲಿ, ಬೆಂಗಳೂರಿನಲ್ಲಿರುವ ಪ್ರತಿಯೊಬ್ಬರೂ ಬಾಡಿಗೆಗಿಂತ ಮನೆ ಖರೀದಿಸುವುದೇ ಉತ್ತಮ ಎಂದು ನೆಟ್ಟಗರು ಕಾಮೆಂಟ್‌ ಮಾಡಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+