ಬೆಂಗಳೂರಿನಲ್ಲಿ ಪಬ್, ಬಾರ್ ಗಳ ಅವಧಿ ಮದ್ಯರಾತ್ರಿವರೆಗೂ ವಿಸ್ತರಣೆ..? ಈ ಬಗ್ಗೆ ಡಿಸಿಎಂ ಡಿಕೆಶಿ ಹೇಳಿದ್ದೇನು..?

ಕರ್ನಾಟಕ ರಾಜಧಾನಿ ಬೆಂಗಳೂರು ದಿನೇ ದಿನೆ ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳೆಯುತ್ತಲೇ ಇದೆ. ಹಾಗೆಯೇ ತಂತ್ರಜ್ಞಾನ ಮತ್ತು ವಾಣಿಜ್ಯ ಕೇಂದ್ರವಾಗಿ ಗುರುತಿಸಿಕೊಳ್ಳುತ್ತಿದೆ. ಅಲ್ಲದೇ ಬೆಂಗಳೂರು ಪಬ್‌ಗಳ ಹಬ್ ಅಂತಲೂ ಪ್ರಸಿದ್ಧಿ ಹೊಂದಿದೆ. ಅಲ್ಲದೇ ಬೆಂಗಳೂರು ನಗರದಲ್ಲಿ ಅನೇಕ ವೃತ್ತಿಪರರು ತಡರಾತ್ರಿ ಕೆಲಸ ಮಾಡುತ್ತಿದ್ದು, ಅಂತಾರಾಷ್ಟ್ರೀಯ ವ್ಯವಹಾರಗಳ ಪ್ರಭಾವವೂ ಹೆಚ್ಚುತ್ತಿದೆ. ಹೀಗಾಗಿ ಪಬ್‌ಗಳು, ಮೈಕ್ರೋ ಬ್ರೂವರಿಗಳು ಮತ್ತು ಇತರ ವ್ಯಾಪಾರ ಸಂಸ್ಥೆಗಳ ಕಾರ್ಯಾಚರಣಾ ಸಮಯ ವಿಸ್ತರಿಸುವ ಕುರಿತು ಕರ್ನಾಟಕ ಸರ್ಕಾರ ಚಿಂತನೆ ನಡೆಸುತ್ತಿದೆ.

ಪಬ್, ಬಾರ್‍‌ಗಳ ಅವಧಿ ಮದ್ಯರಾತ್ರಿವರೆಗೂ ವಿಸ್ತರಣೆ..?

ಹೌದು, ಪಬ್‌ಗಳು, ಮೈಕ್ರೋ ಬ್ರೂವರಿಗಳು ಮತ್ತು ಇತರ ವ್ಯಾಪಾರ ಸಂಸ್ಥೆಗಳ ಕಾರ್ಯಾಚರಣಾ ಸಮಯ ವಿಸ್ತರಿಸುವ ಬಗ್ಗೆ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ. ಅಧಿಕ ಸಮಯದವರೆಗೆ ವ್ಯಾಪಾರಗಳು ತೆರೆದಿರಲು ಅವಕಾಶ ನೀಡುವ ವಿಚಾರದಲ್ಲಿ ಸರ್ಕಾರ ಮುಕ್ತ ಮನಸ್ಥಿತಿಯಲ್ಲಿದೆ ಎಂದು ತಿಳಿಸಿದ್ದಾರೆ.

ಪಬ್‌ಗಳ ಸಮಯ ವಿಸ್ತರಣೆಗೆ ಕಾರಣಗಳು:

ಬೆಂಗಳೂರು ಒಂದು ಜಾಗತಿ ನಗರವಾಗಿದೆ. ಇಲ್ಲಿ ಜನಸಂಚಾರ ಮತ್ತು ಜೀವನಶೈಲಿಯೂ ಅಷ್ಟೇ ಪ್ರಭಾವಿತವಾಗಿದೆ. ಸಾಕಷ್ಟು ಜನ ಉದ್ಯೋಗಿಗಳು ಇಲ್ಲಿ ತಡರಾತ್ರಿವರೆಗೂ ಕೆಲಸ ಮಾಡುತ್ತಾರೆ. ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ಗ್ರಾಹಕರಿಗೆ ಸೇವೆ ಒದಗಿಸಲು ಅನಿವಾರ್ಯವಾಗುತ್ತದೆ. ಹೀಗಿರುವಾಗ ಊಟ ಮತ್ತು ಮನರಂಜನೆಯ ಸಂಸ್ಥೆಗಳ ಕಾರ್ಯಗತ ಸಮಯವನ್ನು ವಿಸ್ತರಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ, ಪಬ್‌ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳ ಕಾರ್ಯಾಚರಣಾ ಸಮಯ ವಿಸ್ತರಿಸುವ ಪರಿಗಣನೆ ಸರ್ಕಾರ ನಡೆಸುತ್ತಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಬಗ್ಗೆ ಗೃಹ ಸಚಿವರು ಮತ್ತು ಅಬಕಾರಿ ಸಚಿವರೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದರು.

ಪ್ರಸ್ತುತ ನಿಯಮಗಳು:

ಇನ್ನು ಪಬ್‌ಗಳನ್ನು ತೆರೆಯಲು ಪ್ರಸ್ತುತ ಇರುವ ನಿಯಮಗಳೇನೆಂದರೆ, ಬೆಂಗಳೂರು ಪಬ್‌ಗಳು ಬೆಳಿಗ್ಗೆ 10:00 ರಿಂದ ರಾತ್ರಿ 11:30 ರವರೆಗೆ ಮಾತ್ರ ಕಾರ್ಯನಿರ್ವಹಿಸಬಹುದು. ಈ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ. ಅಂದರೆ ಕಳೆದ ಮೂರು ವರ್ಷಗಳಲ್ಲಿ, ಈ ನಿಯಮ ಉಲ್ಲಂಘಿಸಿದ 11 ಪ್ರಕರಣಗಳನ್ನು ಸರಕಾರ ದಾಖಲಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಸ್ತುತ 57 ಸ್ವತಂತ್ರ ಪಬ್‌ಗಳು ಮತ್ತು 699 ಮದ್ಯಪಾನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ಪಬ್‌ಗಳ ನಿರ್ವಹಣಾ ಸಮಯ ವಿಸ್ತರಣೆ ಕುರಿತು ಸರಕಾರದ ಪರಿಗಣನೆಯು ವ್ಯಾಪಾರ ವಲಯ ಮತ್ತು ಗ್ರಾಹಕರ ಅನುಕೂಲಕ್ಕಾಗಿ ನಡೆಯುತ್ತಿದೆ.

ಅಂದಹಾಗೆ 2023ರ ನವೆಂಬರ್‌ನಲ್ಲಿ ಬೆಂಗಳೂರಿನ ರೆಸ್ಟೋರೆಂಟ್ ಮಾಲೀಕರು 24/7 ಕಾರ್ಯಾಚರಣೆಗೆ ಅನುಮತಿ ಕೋರಿದ್ದರು. ಈ ಕುರಿತು ನಗರದ ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿ ಅನುಮತಿ ಕೇಳಿದ್ದರು. ಆಗ ಸರ್ಕಾರ ಅವರ ಅನುಮತಿಯಂತೆಯೇ ರೆಸ್ಟೋರೆಂಟ್‌ಗಳಿಗೆ 24/7 ಕಾರ್ಯಾಚರಣೆಯ ಅನುಮತಿ ನೀಡಿತ್ತು. ಆದರೆ ಪೊಲೀಸರು ಇನ್ನೂ ರಾತ್ರಿ ಸಮಯದ ನಿರ್ಬಂಧಗಳನ್ನು ಜಾರಿಗೊಳಿಸಿದ್ದಾರೆಂಬ ಆರೋಪಗಳನ್ನು ಹಲವು ರೆಸ್ಟೋರೆಂಟ್‌ಗಳ ಮಾಲೀಕರು ಮಾಡುತ್ತಿದ್ದಾರೆ. ಅಲ್ಲದೇ ಇದರಿಂದ ರಾತ್ರಿ ಆರ್ಥಿಕ ಚಟುವಟಿಕೆಗಳಿಗೆ ತೊಂದರೆ ಉಂಟಾಗಿದೆ. ಆದರೆ, ಈ ನಿಯಮವು ಕೇವಲ ಆಹಾರ ಸೇವೆ ನೀಡುವ ರೆಸ್ಟೋರೆಂಟ್‌ಗಳಿಗೆ ಅನ್ವಯಿಸುತ್ತದೆ, ಬಾರ್‌ಗಳಿಗೆ ಮಾತ್ರ ಅನ್ವಯಿಸುವುದಿಲ್ಲ ಎಂಬ ಅಸ್ಪಷ್ಟತೆ ಇದ್ದು, ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ ಎಂದು ಹೇಳುತ್ತಿದ್ದಾರೆ.

ವ್ಯಾಪಾರ ಪರವಾನಗಿ ಸುಗಮಗೊಳಿಸುವ ಪ್ರಸ್ತಾಪ:

ಇನ್ನು ಹೋಟೆಲ್ ಮಾಲೀಕರು ವ್ಯಾಪಾರ ಪರವಾನಗಿಗಳನ್ನು ಸುಗಮಗೊಳಿಸಲು, ಸರ್ಕಾರಕ್ಕೆ ಪ್ರಸ್ತಾವನೆ ನೀಡಿದ್ದಾರೆ. ಅದರ ಪ್ರಕಾರ ಪ್ರಸ್ತುತ, ವ್ಯಾಪಾರಗಳಿಗೆ ಬೇರೆ ಬೇರೆ ಪ್ರಕಾರದ ಪರವಾನಗಿಗಳು ಬೇಕಾಗುತ್ತವೆ ಎನ್ನಲಾಗಿದೆ. ಅಂದರೆ ವ್ಯಾಪಾರ ಪರವಾನಗಿ, FSSAI ಪರವಾನಗಿ ಮತ್ತು ಅಂಗಡಿ ಮತ್ತು ಸ್ಥಾಪನೆ ಪರವಾನಗಿಗಳಾಗಿವೆ. ಆದರೆ ಸರ್ಕಾರ ಈ ಎಲ್ಲಾ ಪರವಾನಗಿಗಳನ್ನು ಒಂದೇ ಶಾಶ್ವತ ಪರವಾನಗಿಯಾಗಿ ಪರಿವರ್ತಿಸುವ ಅವಕಾಶವನ್ನು ಪರಿಗಣಿಸುತ್ತಿದೆ.

ಇನ್ನು ಸರ್ಕಾರ ಈಗಾಗಲೇ, ಹತ್ತಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಹಾಗೂ ಹೋಟೆಲ್‌ಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಘೋಷಣೆ ಮಾಡಿದೆ. ಆದರೆ ಮದ್ಯ ಪೂರೈಸುವ ಪಬ್‌ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂಬುದನ್ನೂ ತಿಳಿಸಿದೆ. ಈ ಬಗ್ಗೆ ಸರ್ಕಾರವೇ ತೀರ್ಮಾನ ತೆಗೆದುಕೊಂಡು, ವ್ಯಾಪಾರ ವಲಯಕ್ಕೆ ಸ್ಪಷ್ಟ ನಿರ್ದೇಶನ ನೀಡಬೇಕಾಗಿದೆ. ಬೆಂಗಳೂರಿನ ಪಬ್‌ಗಳು ಮತ್ತು ವ್ಯಾಪಾರ ಸಂಸ್ಥೆಗಳ ಕಾರ್ಯಗತ ಸಮಯ ವಿಸ್ತರಿಸುವ ಕುರಿತಂತೆ ಸರಕಾರ ತೀರ್ಮಾನ ತೆಗೆದುಕೊಳ್ಳುವ ಹಂತದಲ್ಲಿದೆ. ಸರಿಯಾದ ನಿಯಮಾವಳಿಗಳನ್ನು ರೂಪಿಸಿದರೆ, ವ್ಯಾಪಾರ ವಲಯ ಬೆಳೆಯುವ ಸಾಧ್ಯತೆ ಇದೆ ಮತ್ತು ಗ್ರಾಹಕರಿಗೆ ಉತ್ತಮ ಅನುಕೂಲ ದೊರಕುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+