ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದ್ದು,ಬೆಂಗಳೂರಿನಲ್ಲಿ ರಸ್ತೆಗಳು ಜಲಾವೃತಗೊಂಡಿದ್ದೇವೆ.ಮುಂದಿನ ವಾರದವರೆಗೂ ಮಳೆ ಹೀಗೆ ಮುಂದುವರೆಯಬಹುದು ಎಂದು ಹವಾಮಾನ ಇಲಾಖೆ ಸೂಚನೆಯನ್ನು ನೀಡಿದೆ.
ಹೌದು, ಮಂದಿನ ವಾರದಲ್ಲಿ ಮಳೆಯ ಜೊತೆಗೆ ಜತೆಗೆ ತಾಪಮಾನ ಕೂಡ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಳೆಯಿಂದ ಟ್ರಾಫಿಕ್ ಜಾಮ್
ರಾಜಧಾನಿಯಲ್ಲಿ ಮಳೆಯಾಗುತ್ತಿರುವದರಿಂದ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಹೈರಾಣರಾಗಿದ್ದಾರೆ.
ಹೀಗೆ ಮುಂದುವರಿಯುತ್ತಾ ವರುಣಾರ್ಭಟ..?
ಇಂದು ಹಾಗೂ ಶುಕ್ರವಾರ ಹವಾಮಾನ ಇಲಾಖೆಯ ವರದಿ ಪ್ರಕಾರ ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಸೂಚನೆಯನ್ನು ಸಹ ನೀಡಿದೆ.
ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್?
ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ, ತುಮಕೂರು ಮತ್ತು ಕೋಲಾರದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಂದು ಮಳೆಯಾಗುವ ಸಾಧ್ಯತೆಯಿದೆ.
ಮುಂದಿನ ವಾರ ಎಲ್ಲಿಲ್ಲೆ ಮಳೆ?
ಮುಂದಿನ ವಾರ ಕರಾವಳಿ ಮತ್ತು ಉತ್ತರ ಒಳನಾಡಿನ ಕರ್ನಾಟಕದ ಹೆಚ್ಚಿನ ಜಿಲ್ಲೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಕಲಬುರಗಿ, ಯಾದಗಿರಿ ಮತ್ತು ಬೀದರ್‌ನಲ್ಲಿ ಒಣ ಹವಾಮಾನದ ನಿರೀಕ್ಷೆಯಿದೆ ಎಂದು ಐಎಂಡಿ ತಿಳಿಸಿದೆ.
ನಿನ್ನೆ ಸುರಿದ ಮಳೆಗೆ ಬೆಂಗಳೂರು ಜಲಾವೃತ
ಡೈರಿ ಸರ್ಕಲ್‌ನಿಂದ ಹೊಸೂರು ರಸ್ತೆ, ಕದಿರಣಪಾಳ್ಯ ಸರೋವರ ಮತ್ತು ಹಳೆ ಮದ್ರಾಸ್ ರಸ್ತೆಯಲ್ಲಿರುವ ಕೆ.ಆರ್. ಪುರಂ ಮೆಟ್ರೋ ನಿಲ್ದಾಣ, ಹೆಬ್ಬಾಳ ಜಂಕ್ಷನ್ ಮತ್ತು ರಾಮಮೂರ್ತಿ ನಗರ ಅಂಡರ್‌ಪಾಸ್, ಎಂಎಂಟಿ ಜಂಕ್ಷನ್, ಕಸ್ತೂರಿ ನಗರ ಡೌನ್ ರ‍್ಯಾಂಪ್, ಗೋರಗುಂಟೆಪಾಳ್ಯ ಜಂಕ್ಷನ್ ಮತ್ತು ಹೊಸೂರು ರಸ್ತೆಯಲ್ಲಿರುವ ಮಡಿವಾಳದಿಂದ ಬೊಮ್ಮನಹಳ್ಳಿ ಬಸ್ ನಿಲ್ದಾಣದವರೆಗಿನ ಹೊರ ವರ್ತುಲ ರಸ್ತೆಯ ಹಲವಾರು ಭಾಗಗಳು ಹೆಚ್ಚು ಹಾನಿಗೊಳಗಾದ ರಸ್ತೆಗಳಲ್ಲಿ ಸೇರಿವೆ.
ಗುಂಜೂರು-ವರ್ತೂರು ಮಾರ್ಗ, ಸಿದ್ದಾಪುರ, ತುಬರಹಳ್ಳಿ, ಪಾಣತ್ತೂರು ಮತ್ತು ಬಳಗೆರೆ ರಸ್ತೆ ಸೇರಿದಂತೆ ವೈಟ್‌ಫೀಲ್ಡ್‌ನ ಹಲವಾರು ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಜನರಿಗೆ ಕ್ಯಾಬ್‌ಗಳು ಮತ್ತು ಆಟೋಗಳು ಸಿಗುವುದು ಕಷ್ಟಕರವಾಗಿತ್ತು.
ಮಳೆಯಿಂದ ಪಾರಾಗಲು ಕೆಲವು ಸರಳ ಸಲಹೆಗಳನ್ನು ಅನುಸರಿಸಿ
1. ಹೆಚ್ಚು ಸುರಕ್ಷಿತ ಸ್ಥಳವನ್ನು ಹುಡುಕಿ: ಮಳೆಯ ಸಮಯದಲ್ಲಿ ತಕ್ಷಣವೇ ಶೆಡ್, ಅಂಗಡಿ ಅಥವಾ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆಯಿರಿ.ಬೀದಿ ಬದಿಯಲ್ಲಿ ನಿಲ್ಲಬೇಡಿ.
2. ರೇನ್‌ಕೋಟ್ ಅಥವಾ ಛತ್ರಿ ಬಳಸಿ: ಯಾವಾಗಲೂ ನಿಮ್ಮ ಜೊತೆ ಒಂದು ರೇನ್‌ಕೋಟ್ ಅಥವಾ ಛತ್ರಿ ಇರಿಸಿಕೊಳ್ಳಿ
3. ವಾಟರ್‌ಪ್ರೂಫ್ ಬ್ಯಾಗ್ ಅಥವಾ ಕವರ್: ಮಳೆ ಬರುವ ಸಾಧ್ಯತೆ ಇರುವ ಸಮಯದಲ್ಲಿ ನಿಮ್ಮ ಎಲೆಕ್ಟ್ರಾನಿಕ್ ಸಾಧನಗಳು, ಪುಸ್ತಕಗಳು ಇತ್ಯಾದಿಗಳನ್ನು ಪ್ಲಾಸ್ಟಿಕ್ ಕವರ್ ಅಥವಾ ವಾಟರ್‌ಪ್ರೂಫ್ ಬ್ಯಾಗ್‌ನಲ್ಲಿ ಯಾವಾಗಲು ಇಟ್ಟಿಕೊಳ್ಳಿ.
4. ರಸ್ತೆ ಸ್ಥಿತಿ ಬಗ್ಗೆ ಎಚ್ಚರ ವಹಿಸಿ: ಮಳೆಯ ಸಮಯದಲ್ಲಿ ರಸ್ತೆಗಳು ಇಳಿಜಾರಾಗಿರಬಹುದು ಅಥವಾ ಜಾರಬಹುದಾದವು.ಎಚ್ಚರಿಕೆಯಿಂದ ಹೋಗಿ.ವಾಹನ ಚಲಾಯಿಸುವಾಗ ನಿಧಾನವಾಗಿ ಚಲಾಯಿಸಿ.ರಸ್ತೆಗಳ ಕಡೆಗೆ ನಿಮ್ಮ ಗಮನ ಹೆಚ್ಚಿಗಿ ಇರಬೇಕು.
5. ಹವಾಮಾನ ಮುನ್ಸೂಚನೆ ನೋಡಿ: ಹೊರಗೆ ಹೋಗುವ ಮೊದಲು ಹವಾಮಾನ ಮುನ್ಸೂಚನೆ ನೋಡಿರಿ. ಮಳೆ ಬರುವ ಸಾಧ್ಯತೆ ಇದ್ದರೆ ಅಗತ್ಯ ಬದಲಾವಣೆಯನ್ನು ಮಾಡಿಕೊಳ್ಳಿ
6. ಮಳೆಗಾಲದ ಲಭ್ಯವಿರುವ ಆಹಾರ, ಔಷಧಿ ಸಿದ್ಧಮಾಡಿಕೊಳ್ಳಿ: ಭಾರಿ ಮಳೆ ಸಮಯದಲ್ಲಿ ಮನೆಯಲ್ಲೇ ಉಳಿಯುವ ಸಾಧ್ಯತೆ ಇರುತ್ತದೆ, ಆದ್ದರಿಂದ ಅಗತ್ಯವಿರುವ ವಸ್ತುಗಳನ್ನು ಮುಂಚಿತವಾಗಿ ಖರೀದಿಸಿ.
ನೀವು ಮಳೆಯಿಂದ ಸುರಕ್ಷಿತವಾಗಿ ಇರಲು ಈ ಮೇಲಿನ ಎಲ್ಲಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.


Click it and Unblock the Notifications