ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಸದಾ ಜನಜಂಗುಳಿಯಿಂದ ತುಂಬಿಕೊಂಡಿರುತ್ತದೆ. ಅತ್ತ ಜನರ ಓಡಾಟ, ರಸ್ತೆ ತುಂಬೆಲ್ಲಾ ವಾಹನಗಳು, ಹೀಗೆ ಸದಾ ಲೈಟು, ಸೌಂಡುಗಳಿಂದ ಬೆಂಗಳೂರು ಆಕ್ಟಿವ್ ಆಗಿರುತ್ತದೆ. ಇತ್ತೀಚೆಗಷ್ಟೇ ವರದಿಯೊಂದು ಬೆಂಗಳೂರನ್ನು ವಿಶ್ವದ ಅತೀ ಹೆಚ್ಚು ಟ್ರಾಫಿಕ್ ಹೊಂದಿರುವ ನಗರ ಎಂದು ಪಟ್ಟಿ ಮಾಡಿತ್ತು. ಆದರೆ ಇದೀಗ ಬೆಂಗಳೂರು ನಿವಾಸಿಗಳಿಗೆ ಗುಡ್ ನ್ಯೂಸ್ ಒಂದಿದೆ. ಬಹುಬೇಡಿಕೆಯ ನೈಸ್ ಲಿಂಕ್ ರೋಡ್ (Nice Link Road) ಇದೀಗ ಸಂಚಾರ ಮುಕ್ತವಾಗಲಿದೆ. ಹಾಗಿದ್ರೆ ಆ ರಸ್ತೆ ಯಾವುದು? ಎಲ್ಲಿಗೆ ಸಂಪರ್ಕಿಸುತ್ತದೆ? ಈ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೆಂಗಳೂರಿನ ವಾಹನ ಸವಾರರಿಗೆ ಸಿಹಿ ಸುದ್ದಿಯೊಂದಿದೆ. ಇದೀಗ ಬೆಂಗಳೂರಿನ ದೀಪಾಂಜಲಿನಗರ ಮತ್ತು ಪಿಇಎಸ್ ಕಾಲೇಜು ಸಂಪರ್ಕಿಸುವ ನೈಸ್ ರಸ್ತೆಯ ಮತ್ತೊಂದು ಸಂಪರ್ಕ ಮಾರ್ಗ ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ವರದಿಯಾಗಿದೆ. ಇದರ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಸುಗಮ ಸಂಚಾರಕ್ಕೆ ಶೀಘ್ರವೇ ದಾರಿಮಾಡಿಕೊಡಲಿದೆ ಎಂದು ಹೇಳಲಾಗಿದೆ.
ಬೆಂಗಳೂರು ಸವಾರರಿಗೆ ಗುಡ್ ನ್ಯೂಸ್
1.5 ಕಿ.ಮೀ ಹೊಂದಿರುವ ದೀಪಾಂಜಲಿ ನಗರ ಜಂಕ್ಷನ್‌ನಿಂದ ಹೊಸಕೆರೆಗಳ್ಳಿ ಪಿಇಎಸ್ ಕಾಲೇಜಿನ ಹತ್ತಿರವಿರುವ ಈ ಮಾರ್ಗದ ಬಹುತೇಕ ನಿರ್ಮಾಣ ಪೂರ್ಣಗೊಂಡಿದ್ದು, ಅಂತಿಮ ಕೆಲಸಗಳು ಭರದಿಂದ ಸಾಗುತ್ತಿದೆ. ಈ ಮಾರ್ಗ ನೈಸ್ ರೋಡ್‌ಗೆ ಸಂಪರ್ಕ ಮಾಡಲಿದೆ. ಇದು ಕಾರ್ಯಾರಂಭ ಮಾಡಿದರೆ, ನಗರದ ಹೊಸೂರು, ಎಲೆಕ್ಟ್ರಾನಿಕ್ ಸಿಟಿ, ಮೈಸೂರು ರಸ್ತೆ ಹಾಗೂ ತುಮಕೂರು ರಸ್ತೆಯಂತಹ ಪ್ರಮುಖ ಸ್ಥಳಗಳಿಗೆ ಸಂಪರ್ಕ ಮತ್ತಷ್ಟು ಸುಲಭವಾಗಲಿದೆ.
ನಗರದ ಕೇಂದ್ರ ಭಾಗಗಳಿಂದ ಈ ಪ್ರಮುಖ ಹೆದ್ದಾರಿಗಳಿಗೆ ತೆರಳುವವರು ಪ್ರಸ್ತುತ ಭಾರೀ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹೊಸ ಮಾರ್ಗವು ವೇಗದ ಮಾರ್ಗಕ್ಕೆ ದಾರಿಯಾಗಲಿದ್ದು, ದಟ್ಟಣೆಯ ರಸ್ತೆಗಳನ್ನು ಬೈಪಾಸ್ ಮಾಡಿ, ಸವಾರರು ಸುಲಭವಾಗಿ ತಮ್ಮ ಸ್ಥಳಗಳಿಗೆ ತಲುಪಲು ಸಹಾಯ ಮಾಡಲಿದೆ. ಇನ್ನು ಮೆಜೆಸ್ಟಿಕ್, ವಿಜಯನಗರ, ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಬರುವ ಪ್ರಯಾಣಿಕರು ದೀಪಾಂಜಲಿ ನಗರದ ಮೂಲಕ ನಾಯಂಡಹಳ್ಳಿ ಜಂಕ್ಷನ್ ತಲುಪಬೇಕು. ಅಲ್ಲಿಂದ ರಿಂಗ್ ರಸ್ತೆಯ ಮೂಲಕ ನೈಸ್ ರಸ್ತೆಗೆ ಹೋಗಬೇಕಿತ್ತು. ಆದರೆ ವಾಹನಗಳು ಹೆಚ್ಚಾದಾಗ ನಾಯಂಡಹಳ್ಳಿ ಮತ್ತು ವೀರಭದ್ರ ನಗರ ಸಿಗ್ನಲ್‌ಗಳಲ್ಲಿ ಟ್ರಾಫಿಕ್ ಜಾಮ್ ಆಗುತ್ತಿತ್ತು. ಆದ್ರೆ ಇನ್ಮೇಲೆ ಈ ಸಮಸ್ಯೆಗೆ ಈ ಮಾರ್ಗ ಪರಿಹಾರವಾಗಲಿದೆ.
ಸಂಚಾರಕ್ಕೆ ಮುಕ್ತ, ಸಮಯದ ಉಳಿತಾಯ!
ಸುಂಕ ಆಧಾರಿತ ನೈಸ್ ರಸ್ತೆ ಕಾರಿಡಾರ್ ಸಂಚಾರ-ಮುಕ್ತವಾಗಿದ್ದು, ಪ್ರಯಾಣಕ್ಕೆ ಸಮಯ ಉಳಿಸಿ, ದೈನಂದಿನ ದಟ್ಟಣೆ ಕಡಿಮೆ ಮಾಡಲಿದೆ. ಇದು ತುರ್ತು ಸಂದರ್ಭಗಳಲ್ಲಿ ಆಫೀಸ್ ಹೋಗುವವರು, ದೂರ ಪ್ರಯಾಣಿಕರು ಮತ್ತು ತಮ್ಮ ಪ್ರಯಾಣಕ್ಕಾಗಿ ಈ ಮಾರ್ಗಗಳನ್ನು ನಿಯಮಿತವಾಗಿ ಅವಲಂಬಿಸುವ ವಾಣಿಜ್ಯ ವಾಹನಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಲಿದೆ.
ನೈಸ್ ರಸ್ತೆಯ ಮುಖ್ಯಸ್ಥ ಅಶೋಕ್ ಖೇಣಿ ಅವರು ಈ ರಸ್ತೆ ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ದೃಢಪಡಿಸಿದ್ದಾರೆ. ಅಂತಿಮ ಹಂತದ ಕೆಲಸದ ಬಗ್ಗೆ ವಿವರಿಸುತ್ತಾ, "ಈ ಯೋಜನೆಯು ನಗರದ ಸಂಚಾರವನ್ನು ಸುಧಾರಿಸುವ ಮತ್ತು ಬೆಂಗಳೂರಿನ ರಸ್ತೆ ಜಾಲದ ಒಟ್ಟಾರೆ ಸಂಚಾರ ಭಾರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ," ಎಂದು ಹೇಳಿದರು.


Click it and Unblock the Notifications