ಬೆಂಗಳೂರು, ಆಗಸ್ಟ್ 14: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಣ್ಣ ಮಳೆಯನ್ನು ತಡೆದುಕೊಳ್ಳುವ ಶಕ್ತಿಯಿಲ್ಲ ಎಂದು ಮತ್ತೆ ಸಾಬೀತಾಗಿದೆ. ಇತ್ತೀಚೆಗೆ ಸುರಿದ ಮಳೆ ನಗರದ ಸುಮಾರು 180 ಪ್ರಮುಖ ರಸ್ತೆಗಳು ಜಲಾವೃತವಾಗಿ ಜನರು, ಸವಾರರು ಹೈರಾಣಾಗಿದ್ದಾರೆ. ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡದ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಲಾವೃತಗೊಂಡ ಕೆ.ಆರ್.ವೃತ್ತದ ಅಂಡರ್‌ಪಾಸ್‌ನಲ್ಲಿ ಕಳೆದ ವರ್ಷ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದು, ನಗರದ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ಗಂಟೆಯಾಗಬೇಕಿತ್ತು. ಆದರೂ ಪಾಠ ಕಲಿತಂತೆ ಕಾಣುತ್ತಿಲ್ಲ ಎಂದು ಡಿಎಚ್ ವರದಿ ಮಾಡಿದೆ. ಅಂಕಿಅಂಶಗಳ ಪ್ರಕಾರ ಈ ಮಾನ್ಸೂನ್‌ನಲ್ಲಿ ಬೆಂಗಳೂರಿನ ಕನಿಷ್ಠ 180 ಪ್ರಮುಖ ರಸ್ತೆಗಳು ಜಲಾವೃತಗೊಂಡಿದೆ ತಿಳಿದು ಬಂದಿದೆ. ಇವುಗಳಲ್ಲಿ ಇಪ್ಪತ್ತು ರಸ್ತೆಗಳು ಈಶಾನ್ಯ ಬೆಂಗಳೂರಿನ ಹೆಬ್ಬಾಳ ವೃತ್ತ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿವೆ.

ತೀವ್ರ ಜಲಾವೃತವಾಗುವ ಹತ್ತು ರಸ್ತೆಗಳಲ್ಲಿ ಐದು ರಸ್ತೆಗಳು ನಗರದ ಪೂರ್ವ ಮತ್ತು ಈಶಾನ್ಯದಲ್ಲಿ ಹೊರ ವರ್ತುಲ ರಸ್ತೆ (ORR) ಉದ್ದಕ್ಕೂ ಇವೆ. ಬೆಂಗಳೂರು ನಗರ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವಿನ ನಿರ್ಣಾಯಕ ಸಂಪರ್ಕವಾಗಿರುವ ಹೆಬ್ಬಾಳ ವೃತ್ತವು ಟ್ರಾಫಿಕ್ ಜಾಮ್ ಮತ್ತು ತೀವ್ರ ಜಲಾವೃತ ಸಮಸ್ಯೆಗಳಿಗೆ ಕುಖ್ಯಾತವಾಗಿದೆ.
ಫ್ಲೈಓವರ್‌ನ ಕೆಳಗಿರುವ ಹೆಬ್ಬಾಳ ವೃತ್ತವು ನಗರದಲ್ಲಿ ಹೆಚ್ಚು ಜಲಾವೃತವಾಗಿರುವ ರಸ್ತೆ ಎಂದು ಡೇಟಾ ಸೂಚಿಸುತ್ತದೆ. ಸುತ್ತಮುತ್ತ ಹೊಂಡಗಳಿಂದ ಕೂಡಿದ ರಸ್ತೆಗಳಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ, ಇದರಿಂದ ದ್ವಿಚಕ್ರ ವಾಹನಗಳು, ಬಸ್‌ಗಳು ಮತ್ತು ಇತರ ವಾಹನಗಳಿಗೆ ಭಾರೀ ತೊಂದರೆಗಳು ಉಂಟಾಗುತ್ತಿವೆ.
ಕಳೆದ ವಾರ ಹೆಬ್ಬಾಳ ಮತ್ತು ವೀರಣ್ಣಪಾಳ್ಯ ನಡುವಿನ ಒಆರ್‌ಆರ್‌ನಲ್ಲಿ ಸಂಚರಿಸುತ್ತಿದ್ದ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ಬ್ಯಾಟರಿಗೆ ನೀರು ನುಗ್ಗಿ ಕಿಡಿ ಹೊತ್ತಿಕೊಂಡಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ. ಇಂತಹ ಘಟನೆಗಳು ನಡೆಯುತ್ತಿದ್ದರೂ ನೀರಿನ ಸಮಸ್ಯೆ ಬಗೆಹರಿದಿಲ್ಲ. ಪ್ರಸ್ತುತ ನಡೆಯುತ್ತಿರುವ ಮೆಟ್ರೋ ಮತ್ತು ಮೇಲ್ಸೇತುವೆ ನಿರ್ಮಾಣ ಯೋಜನೆಗಳಿಂದ ಹಲವಾರು ಪ್ರದೇಶಗಳಲ್ಲಿ ಜಲಾವೃತವಾಗಿದೆ. ಅಗೆದ ರಸ್ತೆಗಳು ಕೂಡ ಮತ್ತೊಂದು ಕಾರಣ ಎಂದು ತಿಳಿದು ಬಂದಿದೆ.
ಈಶಾನ್ಯ ಬೆಂಗಳೂರಿನ ಪೊಲೀಸ್ ಅಧಿಕಾರಿಯೊಬ್ಬರು ಮಳೆನೀರಿನ ಚರಂಡಿಗಳಿಂದ ತೆಗೆದ ಹೂಳು ಹೊರಗೆ ರಾಶಿ ಹಾಕಲಾಗಿದೆ. ಮಳೆಯ ಜೊತೆಗೆ ಚರಂಡಿಗೆ ಮತ್ತೆ ಕೊಚ್ಚಿಕೊಂಡು ಹೋಗಿ, ಅಡಚಣೆಗಳು ಉಂಟಾಗಿವೆ. ಹೆಬ್ಬಾಳ ಮೇಲ್ಸೇತುವೆಗಾಗಿ ನಡೆಯುತ್ತಿರುವ ಅಪ್-ರಾಂಪ್ ನಿರ್ಮಾಣವು ಮೈದಾನದಲ್ಲಿ ನಿಯೋಜಿಸಲಾದ ಸಂಚಾರ ಪೊಲೀಸರಿಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ ಎಂದು ತಿಳಿಸಿದ್ದಾರೆ.
ಹೆಚ್ಚು ಜಲಾವೃತ ಪ್ರದೇಶಗಳು:
ಹೆಬ್ಬಾಳ ಸರ್ಕಲ್, ಫ್ಲೈಓವರ್ ಕೆಳಗೆ
ಹೊರ ವರ್ತುಲ ರಸ್ತೆ: ನಾಗವಾರ ಜಂಕ್ಷನ್ ಮತ್ತು ಹೆಬ್ಬಾಳ ವೃತ್ತದ ನಡುವಿನ ಸರ್ವಿಸ್ ರಸ್ತೆಯ ಎರಡೂ ಬದಿ
ಹೊರ ವರ್ತುಲ ರಸ್ತೆ: ಕಲ್ಯಾಣ್ ನಗರ ಜಂಕ್ಷನ್ ನಿಂದ ಹೆಣ್ಣೂರು ಜಂಕ್ಷನ್
ಹೊರ ವರ್ತುಲ ರಸ್ತೆ: ರಾಮಮೂರ್ತಿ ನಗರ ಮತ್ತು ಕಸ್ತೂರಿ ನಗರ ನಡುವಿನ ಸರ್ವಿಸ್ ರಸ್ತೆ
ಹೊರ ವರ್ತುಲ ರಸ್ತೆ: ಕಾರ್ತಿಕ್ ನಗರ/ದೊಡ್ಡನೆಕ್ಕುಂಡಿ
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಫೊರೆಕ್ಸ್ ಮಿತಿ: ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣವೇ?



Click it and Unblock the Notifications