ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಕಸ ವಿಲೇವಾರಿ ಮಾಡೋದು ಒಂದು ಕೆಲಸವಾದ್ರೆ, ಇನ್ನು ಸಿಕ್ಕ ಸಿಕ್ಕಲ್ಲಿ ಕಸ ಹಾಕುವವರನ್ನು ತಡೆಯೋದೆ ಒಂದು ಸವಾಲು ಆಗಿಬಿಟ್ಟಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕಸ ಹಾಕಲು ಮನೆ ಮನೆಗೆ ಗಾಡಿ ಕಳುಹಿಸಿದರೂ, ಜನ ಮಾತ್ರ ಅದನ್ನು ಬಳಸದೆ ರಸ್ತೆ ಬದಿ ಸುರಿಯುತ್ತಿದ್ದಾರೆ. ಈಗಾಗಲೇ ಸರ್ಕಾರ ಕೂಡಾ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಕೆಲವರು ಮಾತ್ರ ತನ್ನ ಬುದ್ಧಿ ಬಿಡುವಂತೆ ಕಾಣುತ್ತಿಲ್ಲ. ಇದೀಗ ಅಂಥವರ ವಿರುದ್ಧ ಬಿಬಿಎಂಪಿ ಕಠಿಣ ಕ್ರಮ ಕೈಗೊಂಡಿದ್ದು, ಈ ವರೆಗೆ 3 ಕೋಟಿಗೂ ಅಧಿಕ ದಂಡ ವಸೂಲಿ ಮಾಡಿದೆ ಎನ್ನಲಾಗಿದೆ.

ಆಗಸ್ಟ್ 2025 ರಿಂದ ಜನವರಿ 2026 ರವರೆಗೆ, ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ನಡೆಸಿದ ಕಸ ವಿರೋಧಿ ಅಭಿಯಾನದ ಪರಿಣಾಮವಾಗಿ ನಿಯಮ ಉಲ್ಲಂಘಿಸಿದವರಿಂದ ಬರೋಬ್ಬರಿ 3.6 ಕೋಟಿಗೂ ಅಧಿಕ ದಂಡ ಸಂಗ್ರಹಿಸಲಾಗಿದೆ ಮತ್ತು 82,000 ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಕೋಟಿ ಕೋಟಿ ದಂಡ ಸಂಗ್ರಹ
ಬೆಂಗಳೂರು ನಗರದಲ್ಲಿ ಕಸ ಎಸೆಯುವುದು, ಅಕ್ರಮ ತ್ಯಾಜ್ಯ ವಿಲೇವಾರಿ ಮತ್ತು ಪ್ಲಾಸ್ಟಿಕ್ ನಿಷೇಧ ಉಲ್ಲಂಘನೆಗಳ ವಿರುದ್ಧ ಬಿಬಿಎಂಪಿ ಮತ್ತು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಖಡಕ್ ನಿರ್ಧಾರಕ್ಕೆ ಬಂದಿದೆ. ಕೇವಲ ಕಸ ಎಸೆಯುವುದು ಮಾತ್ರವಲ್ಲದೇ, ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ತ್ಯಾಜ್ಯ ಸುರಿಯುವುದು, ಕಸ ವಿಭಜನೆ ಮಾಡದೇ ಹಾಕೋದು, ಪ್ಲಾಸ್ಟಿಕ್ ಬಳಸಿದವರ ವಿರುದ್ಧ ದಂಡ ವಿಧಿಸಲಾಗಿದೆ. ಆ ಪ್ರಕಾರ ಒಟ್ಟು 3.6 ಕೋಟಿಗೂ ಅಧಿಕ ದಂಡ ಸಂಗ್ರಹವಾಗಿದ್ದು, 82,000 ಉಲ್ಲಂಘನಾ ಪ್ರಕರಣಗಳು ದಾಖಲಾಗಿದೆ ಎಂದು ಹೇಲಲಾಗಿದೆ.
ಜನರ ವರ್ತನೆಗೆ, ಬಿಬಿಎಂ ಕಠಿಣ ಕ್ರಮ!
ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಕಸ ವಿಲೇವಾರಿ, ಕಸ ಎಸೆಯುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸಿಸಿ ಟಿವಿ ಮತ್ತು ವಾರ್ಡ್ ಮಾರ್ಷಲ್‌ಗಳ ಮೂಲಕ ನಿಗಾ ವಹಿಸಲಾಯಿತು. ನಗರದಾದ್ಯಂತ ಸಿಸಿ ಕ್ಯಾಮೆರಾಗಳನ್ನು ಮತ್ತು ಮಾರ್ಷಲ್‌ಗಳಿಗೆ ತನಿಖೆ ಮಾಡುವಂತೆ ಸೂಚನೆ ನೀಡಲಾಗಿದೆ.
ವಿಡಿಯೋಗಾಗಿ ವಿಶೇಷ ತಂಡ: ಇನ್ನು ನಿಯಮ ಉಲ್ಲಂಘನೆ ಮಾಡಿದವರ ವಿಡಿಯೋ ಸೆರೆ ಹಿಡಿದು ದಂಡ ವಿಧಿಸುವ ಕಾರ್ಯವೂ ಬೆಂಗಳೂರಿನಲ್ಲಿ ನಡೆಯುತ್ತದೆ. ಅಲ್ಲದೇ ಬಿಬಿಎಂ "ಕಸ ಸುರಿಯುವ ಹಬ್ಬ" ಎಂಬ ವಿಶೇಷ ಅಭಿಯಾನ ಆರಂಭಿಸಿದ್ದು, ಆ ಮೂಲಕ ಕೆಲವೊಮ್ಮೆ ಎಸೆದ ಕಸವನ್ನೇ ಅವರ ಮನೆ ಬಾಗಿಲಿಗೆ ತಂದು ಸುರಿಯಲಾಗಿದೆ.
ಎಷ್ಟು ದಂಡ?
ಮೊದಲೇ ತಿಳಿಸಿರುವಂತೆ ಕಸ ಎಸೆಯುವ ವಿಷಯದಲ್ಲಿ ನಿಯಮ ಮೀರಿದರೆ ಸಾಮಾನ್ಯವಾಗಿ 2,000 ರೂ.ನಿಂದ 10,000 ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಆದರೆ ಕೆಲವೊಂದು ಗಂಭೀರ ಉಲ್ಲಂಘನೆಗಳಿಗಹೆ ಹೆಚ್ಚಿನ ದಂಡದ ಮೊತ್ತವೂ ವಿಧಿಸಲಾಗುತ್ತದೆ ಎನ್ನಲಾಗಿದೆ.
ಅಧಿಕಾರಿಗಳ ಪ್ರಕಾರ, ಪ್ರತೀ ನಗರದಲ್ಲಿ ನಿಗಮವು ಎರಡು ಉಪವಿಭಾಗಗಳನ್ನು ಹೊಂದಿದೆ. ಇಲ್ಲಿ ಕಸ ಹಾಕುವ ತಾಣಗಳನ್ನು ಮೇಲ್ವಿಚಾರಣೆ ಮಾಡಲು ಪ್ರತೀ ಉಪವಿಭಾಗದಲ್ಲಿ 5 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಲ್ಲದೇ ದೂರುಗಳು ಹೆಚ್ಚಾಗುತ್ತಿದ್ದಂತೆ, ಇದೀಗ ಹೆಚ್ಚಿನ ಕ್ಯಾಮೆರಾಗಳನ್ನು ಸೇರಿಸುವ ಸಾಧ್ಯತೆ ಇದೆ. ಇದೀಗ ಆಗಸ್ಟ್ ನಂತರ ಉಲ್ಲಂಘನೆಗಳು ಜಾಸ್ತಿಯಾಗಿದ್ದು, ಮೊದಲ ತಿಂಗಳಲ್ಲಿ 6,168 ಪ್ರಕರಣಗಳು ದಾಖಲಾಗಿದ್ದು, ಒಟ್ಟು 25.1 ಲಕ್ಷ ರೂ. ದಂಡ ವಿಧಿಸಲಾಗಿದೆ. ಇನ್ನು ಸೆಪ್ಟೆಂಬರ್‌ನಲ್ಲಿ 21,257 ಪ್ರಕರಣಗಳು ಮತು 98 ಲಕ್ಷ ರೂ. ದಂಡ ವಿಧಿಸಲಾಗಿದೆ. ಆ ನಂತರ ದಂಡದ ಬೆಲೆ ಸ್ಥಿರವಾಗಿದೆ.


Click it and Unblock the Notifications