ಶರವೇಗದಲ್ಲಿ ಅಭಿವೃದ್ದಿಯಾಗುತ್ತಿದೆ ಬೆಂಗಳೂರಿನ ಈ ರಸ್ತೆ: ಹೂಡಿಕೆಗೂ ಬೆಸ್ಟ್ ತಾಣ

ಭಾರತದಲ್ಲಿ ಅತೀ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ನಗರಗಳಲ್ಲಿ ಬೆಂಗಳೂರು ಕೂಡ ಒಂದಾಗಿದೆ. ಬೆಂಗಳೂರಿನಲ್ಲಿ ಐಟಿ ಬೂಮ್‌ ನಂತರ ಬೆಂಗಳೂರು ಎಲ್ಲ ಕೋನಗಳಿಂದ ಅಭಿವೃದ್ದಿಯ ನಾಗಾಲೋಟಗಳಲ್ಲಿ ಬೆಳೆಯುತ್ತಿದೆ. ಸದ್ಯ ಐಟಿ ಬೂಮ್‌ ನಂತರ ರಿಯಲ್‌ ಎಸ್ಟೇಟ್‌ ಕಂಡುಕೇಳಯರಿದ ರೀತಿಯಲ್ಲಿ ವಿಸ್ತರಿಸಿಕೊಳ್ಳುತ್ತಿದೆ.

ಬೆಂಗಳೂರು ನಗರದಲ್ಲಿ ಸದ್ಯ ಜಾಗದ ಕೊರತೆ ಹೊರತಾಗಿಯೂ ಹೊರ ವಲಯಗಳಲ್ಲಿ ಅಭಿವೃದ್ದಿಯ ನಾಗಾಲೋಟ ತೀವ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಇನ್ನು ಅಭಿವೃದ್ದಿಯ ನಾಗಾಲೋಟ ಹೊಂದುತ್ತಿರುವ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಮೈಸೂರು ರಸ್ತೆ ಕೂಡ ಒಂದಾಗಿದೆ.

Investments:ಶರವೇಗದಲ್ಲಿ ಅಭಿವೃದ್ದಿಯಾಗುತ್ತಿದೆ ಬೆಂಗಳೂರಿನ ಈ ರಸ್ತೆ

ಮೈಸೂರು ರಸ್ತೆ ಸದ್ಯ ಈಗ ವಸತಿ, ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ಅಭಿವೃದ್ಧಿ ಹೊಂದುತ್ತಿರುವ ಕೇಂದ್ರವಾಗಿದೆ. ಇನ್ನು ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಬೆಂಗಳೂರಿಗರು ಹೂಡಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂಬ ವಿಚಾರಕ್ಕೆ ಇಲ್ಲಿದೆ ಉತ್ತರ.

ಮೈಸೂರು ರಸ್ತೆಗೆ ಮುನ್ನಡೆಯ ಅಂಶವೇನು?

ಇನ್ನು ಬೆಂಗಳೂರು ಎಲ್ಲ ಕೋನಗಳಲ್ಲಿ ವೇಗವಾಗಿ ವಿಸ್ತರಿಸಿಕೊಳ್ಳುತ್ತಿದ್ದು, ಇದರಲ್ಲಿ ಮೈಸೂರು ರಸ್ತೆ ಕೂಡ ಒಂದಾಗಿದೆ. ಆದರೆ ಮೈಸೂರು ರಸ್ತೆ ವೇಗದಲ್ಲಿ ಅಭಿವೃದ್ದಿ ಹೊಂದಿತ್ತಿರುವುದಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಈ ರಸ್ತೆಯು ಕಾರ್ಯತಂತ್ರದ ಲೊಕೇಶನ್‌ನಲ್ಲಿದೆ.

ಅಲ್ಲದೆ ಈ ರಸ್ತೆಯು ಬೆಂಗಳೂರಿನ ಪಶ್ಚಿಮ ಹೊರವಲಯವನ್ನು ಸಾಂಸ್ಕೃತಿಕ ನಗರ ಮೈಸೂರನ್ನು ಸಂಪರ್ಕಿಸುತ್ತದೆ. ಹಾಗಾಗಿ ಪ್ರಯಾಣ ಮತ್ತು ವಾಣಿಜ್ಯಕ್ಕೆ ಇದು ನಿರ್ಣಾಯಕ ಮಾರ್ಗವಾಗಿದೆ. ಇಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಬಯಸುವ ಬೆಂಗಳೂರಿಗರಿಗೆ ಇದೊಂದು ಅತ್ಯುತ್ತಮ ತಾಣವಾಗಿದೆ ಎನ್ನಬಹುದು.

ಇದು ಈ ಪ್ರದೇಶವು NICE ರಸ್ತೆಯ ಮೂಲಕ ಮಧ್ಯ ಬೆಂಗಳೂರಿಗೆ ಸಂಪರ್ಕವನ್ನು ಹೊಂದಿದೆ. ಅಲ್ಲದೆ ಮತ್ತು ಇದು ರಾಜಾಜೀನಗರ, ವಿಜಯನಗರ, ಬನಶಂಕರಿ ಮುಂತಾದ ನಗರದ ಪ್ರಮುಖ ಭಾಗಗಳಿಗೆ ಸಂಪರ್ಕ ಹೊಂದಿದೆ.

ನಮ್ಮ ಮೆಟ್ರೋದ ಕೊಡುಗೆ

ಇನ್ನು ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಾಪರ್ಟಿ ಡೆವಲಪರ್‌ ಆನಂದ್‌ ಗೌಡ ಅವರು, ಇಲ್ಲಿನ ಪ್ರದೇಶದಲ್ಲಿ ನಡೆಯುತ್ತಿರುವ ನಮ್ಮ ಮೆಟ್ರೋ ವಿಸ್ತರಣೆಯು ಇಲ್ಲಿನ ರಿಯಲ್‌ ಎಸ್ಟೇಟ್‌ ಬೆಳವಣಿಗೆಗೆ ಗಣನೀಯವಾಗಿ ಉತ್ತೇಜನ ನೀಡಿದೆ.

ನಮ್ಮ ಮೆಟ್ರೋದ ಪರ್ಪಲ್ ಲೈನ್ ಈಗ ಕೆಂಗೇರಿಯವರೆಗೆ ವಿಸ್ತರಿಸಿರುವುದು ಕೂಡ ಮುನ್ನಡೆ ಒದಗಿಸಿದಂತಾಗಿದೆ. ಬೆಂಗಳೂರು ಮೈಸೂರು ಎಕ್ಸ್‌ ಪ್ರೆಸ್‌ ರಸ್ತೆಯಿಂದ ಎರಡೂ ನಗರಗಳ ಪ್ರಯಾಣದ ಅಂತರ ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಿದೆ.

ಬೆಂಗಳೂರಿನ ಇತರ ಸ್ಥಾಪಿತ ಪ್ರದೇಶಗಳಿಗೆ ಹೋಲಿಸಿದರೆ ಬೆಂಗಳೂರು ಮೈಸೂರಿನ ರಿಯಲ್‌ ಎಸ್ಟೇಟ್‌ ಬೆಲೆಯು ತೀರಾ ಕಡಿಮೆ ಇದೆ. ಕೇಂದ್ರ ಭಾಗದಲ್ಲಿ ಸೂಕ್ತ ರೀತಿಯಲ್ಲಿ ಸ್ಥಳಾವಕಾಶದ ಕೊರತೆಯ ಇದೆ. ಹಾಗಾಗಿ ಇದು ಇಲ್ಲಿನ ಅಭಿವೃದ್ದಿಯ ಆರಂಭಿಕ ಹಂತವಾಗಿರುವ ಹಿನ್ನೆಲೆಯಲ್ಲಿ ಈಗಲೇ ಇಲ್ಲಿ ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡುವುದು ಒಳಿತೆಂದು ಅವರು ತಿಳಿಸಿದ್ದಾರೆ.

ಶರವೇಗದಲ್ಲಿ ಅಭಿವೃದ್ದಿ ಹೊಂದುತ್ತಿರುವ ಪ್ರದೇಶ

ಸದ್ಯ ಬೆಂಗಳೂರು ಕೇಂದ್ರದಲ್ಲಿ ಈಗಾಗಲೇ ಸ್ಥಳಾವಕಾಶದ ಕೊರತೆ ಹೊಂದಿದ್ದು, ಬೆಲೆಗಳು ಕೂಡ ಆಗಸದೆತ್ತರಕ್ಕೆ ಬೆಳೆದು ನಿಂತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಹೊರವಲಯಗಳಲ್ಲಿ ನಗರ ವಿಸ್ತರಣೆಯಾಗುತ್ತಿದೆ. ಆದರೆ ಮೈಸೂರು ರಸ್ತೆಯಲ್ಲಿನ ರಿಯಲ್‌ ಎಸ್ಟೇಟ್‌ ಅಭಿವೃದ್ದಿಯು ತೀರಾ ಅರಂಭಿಕ ಹಂತದಲ್ಲಿದ್ದು, ಇಲ್ಲಿನ ಜಾಗ ಕೂಡ ಉಳಿದ ಅಭಿವೃದ್ದಿ ಹೊಂದಿದ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ತೀರಾ ಕಡಿಮೆ ಇದೆ.

ಹಾಗಾಗಿ ಮೈಸೂರು ರಸ್ತೆಯಲ್ಲಿ ಹೆಚ್ಚಿನ ಸ್ಥಳಾವಕಾಶವಿದ್ದು, ಬೆಲೆಗಳು ಕೂಡ ಬಹುತೇಕ ಕೈಗೆಟುಕುವ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಇಲ್ಲಿ ತಮ್ಮ ತಮ್ಮ ಯೋಜನೆಯನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ.

ಸರಕಾರದ ಕೊಡುಗೆ

ಸದ್ಯ ಬೆಂಗಳೂರು ಈಗಾಗಲೇ ಅಭಿವೃದ್ದಿ ಹೊಂದಿ ಇಲ್ಲಿ ರಿಯಲ್‌ ಎಸ್ಟೇಟ್‌ ಬೆಳೆದಿರುವ ಹಿನ್ನೆಲೆಯಲ್ಲಿ ನಗರದ ಹೊರಭಾಗದಲ್ಲಿ ಹೂಡಿಕೆ ಮಾಡುವವರ ಪ್ರಮಾಣ ಕೂಡ ಹೆಚ್ಚುತ್ತಿದೆ. ಸರಕಾರ ಕೂಡ ಬೆಂಗಳೂರು ಹೊರವಲಯದಲ್ಲಿ ಹೂಡಿಕೆ ಮಾಡುವವರಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಕೂಡ ಹೊರಭಾಗದಲ್ಲಿ ಅಭಿವೃದ್ದಿಯ ಅವಕಾಶಗಳು ಕೂಡ ಹೆಚ್ಚುತ್ತಿದೆ.

ಅಲ್ಲದೆ ಇಲ್ಲಿ ರಸ್ತೆ ಸಂಪರ್ಕದ ಜೊತೆಗೆ ಮೆಟ್ರೋ ಕೂಡ ವಿಸ್ತರಣೆಯಾಗಿರುವುದು ಮತ್ತಷ್ಟು ಮುನ್ನಡೆ ನೀಡಿದಂತಾಗಿದೆ. ಕೇವಲ ರಿಯಲ್‌ ಎಸ್ಟೇಟ್‌ ಅಲ್ಲದೆ ಕಮರ್ಶಿಯಲ್‌ ಕಟ್ಟಡ ಸೇರಿದಂತೆ ಕೈಗಾರಿಕೆಗಳು ಕೂಡ ಮೈಸೂರು ರಸ್ತೆಯಲ್ಲಿ ಅಭಿವೃದ್ದಿ ಹೊಂದಿತ್ತಿದ್ದು, ಭವಿಷ್ಯದಲ್ಲಿ ಈ ಭಾಗ ಹೆಚ್ಚಿನ ಪ್ರಮಾಣದ ಬೆಳವಣಿಗೆ ಕಾಣಲಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+