ಏರ್ಪೋರ್ಟ್ ನಿರ್ಮಾಣವಾಗುತ್ತಿದೆ ಅಂದ್ರೆ ಅಲ್ಲಿ ಇರುವ ಸುತ್ತ-ಮುತ್ತಲಿನ ಪ್ರದೇಶದ ಭೂಮಿಗೆ ಬಂಗಾರ ಬೆಲೆ ಸಿಗುತ್ತದೆ ಹೌದು, ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳ ಆಯ್ಕೆಯ ಕಾರ್ಯಗಳು ಜೋರಾಗಿದೆ. ಈಗಾಗಲೇ ಬೆಂಗಳೂರಿನ ಸುತ್ತಮುತ್ತ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸೂಕ್ತ ಸ್ಥಳವನ್ನು 15 ದಿನಗಳಲ್ಲಿ ಅಂತಿಮಗೊಳಿಸಲು ವಿಮಾನ ನಿಲ್ದಾಣ ಪ್ರಾಧಿಕಾರವು ಪರಿಶೀಲನೆ ನಡೆಸುತ್ತಿದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿದ್ದಾರೆ. ಕನಕಪುರ ರಸ್ತೆಯಲ್ಲಿ ಎರಡು ಸ್ಥಳ ಮತ್ತು ನೆಲಮಂಗಲದ ಕುಣಿಗಲ್ ರಸ್ತೆಯಲ್ಲಿ ಒಂದು ಸ್ಥಳಗಳನ್ನು ಆಯ್ಕೆ ಮಾಡಿದ ನಂತರ ಈ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಬೆಲೆಗಳು ಚಿನ್ನದ ಬೆಲೆಗಳು ಏರಿಕೆಯಾಗುತ್ತೇವೆ.
ಹೌದು, ಎರಡನೇ ವಿಮಾನ ನಿಲ್ದಾಣದ ಸ್ಥಳದ ಸುದ್ದಿ ಹೊರಬಂದಂತೆ ಕನಕಪುರ ರಸ್ತೆಯ ನಿವಾಸಿಗಳು ಮತ್ತು ವ್ಯಾಪಾರ ಮಾಲೀಕರು ಬಿಲ್ಡರ್‌ಗಳು ಮತ್ತು ಡೆವಲಪರ್ಗಳಿಂದ ಆಗಾಗ್ಗೆ ಈ ಸ್ಥಳಗಳಿಗೆ ಭೇಟಿಯನ್ನು ನೀಡುತ್ತಲೇ ಇದ್ದಾರೆ. ಅದರಲ್ಲೂ ಕೊರೊನಾ ಎಂಬ ಮಹಾಮಾರಿ ಸಾಂಕ್ರಾಮಿಕ ರೋಗದ ನಂತರ ನೆರೆಹೊರೆಯು ಹೆಚ್ಚಿನ ಪ್ರದೇಶಗಳು ಅಭಿವೃದ್ಧಿಯನ್ನು ಕಂಡಿದ್ದರೂ, ವಿಮಾನ ನಿಲ್ದಾಣದ ಸುದ್ದಿ ಬಂದಂತೆ ಭೂಮಿಗೆ ಬಂಗಾರದ ಬೆಲೆಯಂತೆ ಏರಿಯನ್ನು ಕಾಣುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆಯ್ಕೆಯಾದ ಸ್ಥಳ ಸುತ್ತಾ ಮುತ್ತಲಿನ ಪ್ರದೇಶದಲ್ಲಿಭೂಮಿಯ ಬೆಲೆಗಳು ಎಕರೆಗೆ 2 ಕೋಟಿ ರೂ.ಗಳಿಂದ 4 ಕೋಟಿ ರೂ.ಗಳ ವರೆಗೂ ಏರಿಕೆಯಾಗಿದೆ.
ರೆಸ್ಟೋರೆಂಟ್ ಮಾಲೀಕರೊಬ್ಬರ ಬಳಿ ಒಬ್ಬ ದೊಡ್ಡ ಡೆವಲಪರ್ ನನ್ನ ಭೂಮಿಯನ್ನು ಮಾರಾಟ ಮಾಡುವಂತೆ ಒತ್ತಾಯಿಸುತ್ತಿದ್ದಾರೆ, ಆದರೆ ವಿಮಾನ ನಿಲ್ದಾಣ ದೃಢಪಟ್ಟರೆ ಬೆಲೆಗಳು ಮತ್ತಷ್ಟು ಹೆಚ್ಚಾಗುವುದರಿಂದ ನಾನು ನನ್ನ ಭೂಮಿಯ ಮಾರಾಟವನ್ನು ಮುಂದೂಡಿಕೆಯನ್ನು ಮಾಡಿದ್ದೇನೆ ರೆಸ್ಟೋರೆಂಟ್ ಮಾಲೀಕರೊಬ್ಬರು ಹೇಳಿರುವ ಮಾಹಿತಿ ವರದಿಯಾಗಿದೆ.

ಕನಕಪುರ ರಸ್ತೆ ಮತ್ತು ನೆಲಮಂಗಲದಲ್ಲಿ ಆಸ್ತಿ ಹೊಂದಿರುವ ರಿಯಲ್ ಎಸ್ಟೇಟ್ ಡೆವಲಪರ್ ಒಬ್ಬರು ಹೇಳಿರುವಂತಹ ಮಾಹಿತಿ ಪ್ರಕಾರ, ಕನಕಪುರ ರಸ್ತೆಯಲ್ಲಿರುವ ಆಸ್ತಿಗಳಲ್ಲಿ ಖರೀದಿ ಮಾಡಲು ಹೂಡಿದಾದರು ಹೆಚ್ಚಿನ ಒಲವುವನ್ನು ತೋರಿಸುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಪೂರ್ವದಿಂದ ದಕ್ಷಿಣ ಬೆಂಗಳೂರಿಗೆ ಜನರು ಸ್ಥಳಾಂತರಗೊಳ್ಳುವ ಪ್ರವೃತ್ತಿಯನ್ನು ನಾವು ಗಮನಿಸಿದ್ದೇವೆ ಮತ್ತು ಎರಡನೇ ವಿಮಾನ ನಿಲ್ದಾಣದ ಸಂಭಾವ್ಯ ಸುದ್ದಿಗಳು ಹೆಚ್ಚಿನ ಆಸಕ್ತಿಯನ್ನು ಭೂಮಿ ಖರೀದಿದಾದರಿಗೆ ಬಂದಿದೆ. ಕನಕಪುರ ರಸ್ತೆಯಲ್ಲಿರುವ ಆಸ್ತಿಗಳ ಬಗ್ಗೆ ವಿಚಾರಿಸುವ ಬಹುತೇಕ ಪ್ರತಿಯೊಬ್ಬ ಕ್ರೈಂಟ್ ವಿಮಾನ ನಿಲ್ದಾಣದ ಬಗ್ಗೆ ಕೇಳುತ್ತಿದ್ದಾರೆ ಎಂದು ವಕ್ತಾರರು ಮಾಹಿತಿಯನ್ನು ತಿಳಿಸಿದ್ದಾರೆ.
ಡೆಕ್ಕನ್ ಹೆರಾಲ್ಡ್ ವರದಿ ಮಾಡಿರುವ ಪ್ರಕಾರ ಎರಡನೇ ವಿಮಾನ ನಿಲ್ದಾಣ ನಿರ್ಮಾಣವಾಗುವ ಪ್ರದೇಶದಲ್ಲಿ ಹೆಚ್ಚಿನ ಹೊಸ ಆಸ್ತಿಗಳು ಮಾರಾಟವಾಗುತ್ತಿವೆ ಎಂದು ಬೆಂಗಳೂರು ಮೂಲದ ಬೋಕರ್ ನಂದೀಶ್ ಎಸ್ ಹೇಳಿದ್ದಾರೆ ಎಂದು ವರದಿ ಮಾಡಿದೆ. ಅದರಲ್ಲೂ ವಿಶೇಷವಾಗಿ ಕನಕಪುರ ಮುಖ್ಯ ರಸ್ತೆಯಲ್ಲಿ, ಹೆಚ್ಚಿನ ಜನರು ಆಸಕ್ತಿ ತೋರಿಸುತ್ತಿದ್ದಾರೆ. ಆದ್ದರಿಂದ, 5 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಐಷಾರಾಮಿ ಆಸ್ತಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಎರಡನೇ ವಿಮಾನ ನಿಲ್ದಾಣದ ಸುತ್ತ ಮುತ್ತಲಿನ ಭೂಮಿಯ ಬೆಲೆ ಏರಿಕೆಯ ಕುರಿತು ಆಸ್ತಿ ಸಲಹೆಗಾರರ ಪ್ರಕಾರ ಕನಕಪುರ ಮುಖ್ಯ ರಸ್ತೆಯಲ್ಲಿನ ಕೆಲವು ಪ್ಲಾಟ್‌ಗಳು ಎಕರೆಗೆ 12 ರಿಂದ 18 ಕೋಟಿ ರೂ.ಗಳ ವರೆಗೂ ಏರಿಕೆಯಾಗುತ್ತಿವೆ ಎಮದು ಹೇಳಿದ್ದಾರೆ.
ನೆಲಮಂಗಲ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಪ್ರಸ್ತುತ ನಿಧಾನಗತಿಯ ಅಭಿವೃದ್ಧಿಯನ್ನು ಕಾಣುತ್ತಿವೆ. ಪ್ರಸ್ತುತ, ಈ ಪ್ರದೇಶದಲ್ಲಿ ಹೆಚ್ಚಾಗಿ ಪ್ಲಾಟ್ ಮತ್ತು ಕೈಗಾರಿಕಾ ಅಭಿವೃದ್ಧಿಗಳು ಕಂಡುಬರುತ್ತಿವೆ. ಕಳೆದ ವರ್ಷದವರೆಗೆ 1.5 ಕೋಟಿ ರೂ.ಗಳಿಂದ 2 ಕೋಟಿ ರೂ.ಗಳವರೆಗೆ ಬೆಲೆ ಬಾಳುತ್ತಿದ್ದ ಈ ಪ್ರದೇಶದಲ್ಲಿ ಭೂಮಿಯ ಮೌಲ್ಯವು ಕನಿಷ್ಠ ಶೇ. 10 ರಿಂದ 20 ರಷ್ಟು ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ. ಇನ್ನೂ ಕೃಷಿ ಭೂಮಿಯ ಬೆಲೆ ಪ್ರಸ್ತುತ 4.5 ಕೋಟಿ ರೂ.ಗಳಿಂದ 5 ಕೋಟಿ ರೂ.ಗಳವರೆಗೆ ಇದೆ. ವಿಮಾನ ನಿರ್ಮಾಣಕ್ಕ ಆಯ್ಕೆಯಾದ ಸ್ಥಳಗಳ ಸುತ್ತಲೂ ಕೂಡ ಭೂಮಿಯ ಬೆಲೆ ಜೊತೆಗೆ ಬಾಡಿಗೆ ಬೆಲೆಗಳು ಕಳೆದ ವರ್ಷಕ್ಕಿಂತ ಶೇ. 30 ರಷ್ಟು ಹೆಚ್ಚಳವಾಗಿದೆ.
ಸ್ಥಳ ಅಂತಿಮಗೊಂಡ ನಂತರವೇ ಬೆಲೆಗಳು ಏರಿಕೆಯಾಗುತ್ತವೆ ಎಂದು ಪ್ರಮುಖ ಸ್ವತಂತ್ರ ಆಸ್ತಿ ಸಲಹೆಗಾರರೊಬ್ಬರು ಹೇಳಿಕೆಯನ್ನು ನೀಡಿದ್ದಾರೆ.
ರಿಯಲ್ ಎಸ್ಟೇಟ್‌ಗೆ ಡಬಲ್ ಧಮಾಕಾ
ತುಮಕೂರಿಗೆ ಮೆಟ್ರೋ ಜೊತೆ ವಿಮಣ ನಿಲ್ದಾಣ ನಿರ್ಮಾಣವಾದ್ದರೆ ವಿವಿಧ ಪ್ರದೇಶದಲ್ಲಿ ರಿಯಲ್ ಎಸ್ಟೇಟ್‌ಗೆ ಡಬಲ್ ಧಮಾಕಾ ಆದಾಯ ಸಿಗುತ್ತದೆ. ವಿಮಾನ ನಿಲ್ದಾಣದ ಅಕ್ಕಪಕ್ಕದಲ್ಲಿ ಮತ್ತು ವಿಮಾನ ನಿಲ್ದಾಣದ ಕೆಲವೇ ಕಿ.ಮೀ ದೂರದಲ್ಲಿ ಇರುವ ಜಾಗಗಳಲ್ಲಿ ಜಮೀನು, ಭೂಮಿ ಹಾಗೂ ಆಸ್ತಿಗೆ ಬಂಪರ್ ಬೆಲೆಗೆ ಮಾರಾಟವಾಗುತ್ತಾವೆ. ಈಗಲೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಚರ್ಚೆ ನಡೆಯುತ್ತಿರುವಾಗಲೇ ಆ ಜಾಗದ ಆಸ್ತಿದಾರರು ಎಚ್ಚರದಿಂದ ಇದ್ದಾರೆ ಆಗಿದ್ದಾರೆ. ಅಲ್ಲಿ ಜಾಗ ಮಾರಾಟ ಮಾಡುವವರು ಮುಂದೂಡುತ್ತಿದ್ದಾರೆ.
ಈ ಭಾಗಗಳಲ್ಲಿ ಭೂಮಿ ಬೆಲೆ ಏರಿಕೆ ಆಗುತ್ತಲ್ಲೇ ಇದೆ.
ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಟಕ್ಕೆ ಕೇಳಿ ಬರುತ್ತಿರುವ ಸ್ಥಳಗಳೆಂದರೆ ದಾಬಸ್‌ಪೇಟೆ, ನೆಲಮಂಗಲ, ತುಮಕೂರು, ಬಿಡದಿ ಮತ್ತು ಹಾರೋಹಳ್ಳಿ ಸ್ಥಳದಲ್ಲಿ ಎಲ್ಲಿಯಾದರೂ ಒಂದು ಜಾಗದಲ್ಲಿ ಎರಡನೇ ವಿಮಾನ ನಿಲ್ದಣ ನಿರ್ಮಾಣ ಮಾಡುವ ಬಗ್ಗೆ ಚರ್ಚೆಗಳು ಈಗಲೇ ನಡೆಯುತ್ತಿದೆ. ಆದ್ದರಿಂದ ಈ ಪ್ರದೇಶದಲ್ಲಿ ಭೂಮಿ ಬೆಲೆ ಏರಿಕೆಯಾಗುತ್ತಿದೆ.


Click it and Unblock the Notifications