ಸಾಕಷ್ಟು ಮಹತ್ತರ ಚರ್ಚೆಗಳ ಬಳಿಕ, ಬೆಂಗಳೂರಿಗೆ ಹೊಸ ಪ್ರವಾಸೋದ್ಯಮ ಆಕರ್ಷಣೆ ರೂಪುಗೊಳ್ಳುತ್ತಿದೆ. ಇದು ಬೆಂಗಳೂರು ಜನರ ಪಾಲಿಗೆ ದೊಡ್ಡ ಮಟ್ಟದ ಖುಷಿ ಎನ್ನಬಹುದು. ಅದ್ಯಾವುದು ಈ ಪ್ರವಾಸೋದ್ಯಮ ಆಕರ್ಷಣೆ ಎಂದರೆ, ಬಹು ನಿರೀಕ್ಷಿತ ಸ್ಕೈಡೆಕ್..

ಹೌದು, ಈ ಬಹುನಿರೀಕ್ಷಿತ ಸ್ಕೈಡೆಕ್ ಯೋಜನೆ, ಕೆಂಗೇರಿಯ ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿ ನೆಲೆಸಲಿದೆ. ಮೂಲತಃ ಹೆಮ್ಮಿಗೆಪುರದಲ್ಲಿ ಶಿಫಾರಸುಗೊಂಡ ಈ ಯೋಜನೆಯು, ವಿಮಾನ ನಿಲ್ದಾಣದ ಬಳಿ ಇರುವುದರಿಂದ ಏರ್ ಸೀಮಾ ನಿಯಮಗಳಡಿ ತಾಂತ್ರಿಕ ಅಡೆತಡೆಗಳನ್ನು ಎದುರಿಸಿತ್ತು. ಇಷ್ಟರಲ್ಲಿ, ಭೂಸ್ವಾಧೀನ ಸಮಸ್ಯೆಗಳು ಮತ್ತು ನೈಸ್ ರಸ್ತೆ ಪ್ರಭಾವದಿಂದಾಗಿ ಸ್ಥಳವನ್ನು ಬದಲಾಯಿಸಲು ಪ್ರೇರಣೆ ನೀಡಿತು.
ಬಿಡಿಎ ವ್ಯಾಪ್ತಿಯಲ್ಲೇ ಭವ್ಯ ಗೋಪುರ:
ಅಂದಹಾಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ..ಅಂದರೆ ಬಿಡಿಎ ತನ್ನ ಸ್ವಂತ ಭೂಮಿಯಲ್ಲೇ ಸುಮಾರು 25 ಎಕರೆ ಜಮೀನಿನಲ್ಲಿ ಈ ಗಗನಚುಂಬಿ ಗೋಪುರ ನಿರ್ಮಿಸಲು ಮುಂದಾಗಿದೆ. ಇದು ಸುಮಾರು 250 ಮೀಟರ್ ಎತ್ತರದಲ್ಲಿದ್ದು, ನಿರ್ಮಾಣ ನಂತರ ನಗರದ 360 ಡಿಗ್ರಿಯ ಅದ್ಭುತ ನೋಟವನ್ನು ನೀಡುವ ಪ್ರವಾಸೋದ್ಯಮ ದಿಗ್ಗಜನಾಗಿ ಪರಿಣಮಿಸುವ ನಿರೀಕ್ಷೆಯಿದೆ. ಈ ಯೋಜನೆಯು ಬೆಂಗಳೂರು ನಗರವನ್ನು ಜಾಗತಿಕ ಪ್ರವಾಸೀ ನಕ್ಷೆಯಲ್ಲಿ ಮರುಸ್ಥಾಪಿಸಲು ನೆರವಾಗಲಿದೆ.
ಹೆಮ್ಮಿಗೆಪುರ ಯೋಜನೆಯು ಮೊದಲೇ ಹೂಡಿಕೆಯ ಆಸಕ್ತಿಯನ್ನು ಹುಟ್ಟುಹಾಕಿದ್ದರೂ, ವಿಮಾನ ನಿಲ್ದಾಣದಿಂದ 20 ಕಿ.ಮೀ. ಒಳಗಿನ ವಾಯುಯಾನ ನಿಯಮಗಳ ಕಾರಣದಿಂದಾಗಿ ಪೂರಕ ಅನುಮತಿಗಳು ಸಾಧ್ಯವಾಗಲಿಲ್ಲ. ಜೊತೆಗೆ, ನೈಸ್ ರಸ್ತೆ ವ್ಯಾಪ್ತಿಯಲ್ಲಿನ ಕೆಲವು ವಿವಾದಿತ ಭೂಮಿಗಳನ್ನು ವ್ಯಾಪ್ತಿಗೆ ತರಲಾಗದ ಕಾರಣ ಯೋಜನೆ ಹಿಂದಕ್ಕೆ ಸರಿಯಿತು. ಈ ಹಿನ್ನೆಲೆಯಲ್ಲಿ, ಕೆಂಗೇರಿಯ ನಾಡಪ್ರಭು ಲೇಔಟ್ ಪ್ರಾಧಿಕಾರದ ಸ್ವಂತ ಭೂಮಿಯಲ್ಲಿ ಯೋಜನೆ ಮುಂದುವರಿಯಲಿದೆ ಎಂಬುದಾಗಿ ಅಧಿಕೃತರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ಸುರಂಗ ಮಾರ್ಗ ಯೋಜನೆಗೂ ನವ ಚೈತನ್ಯ:
ಅಂದಹಾಗೆ ಈ ಯೋಜನೆಯ ಜೊತೆಗೆ, ಬೆಂಗಳೂರಿನ ಬಹು ನಿರೀಕ್ಷಿತ ಸುರಂಗ ರಸ್ತೆ ಯೋಜನೆಗೂ ಹೊಸ ಬಣ್ಣವಿತ್ತಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಮೊದಲ ಹಂತದ ಸುರಂಗ ಮಾರ್ಗದ ಟೆಂಡರ್ ಶೀಘ್ರದಲ್ಲೇ ಆಹ್ವಾನಿಸಲಾಗುವುದು ಎಂದು ಘೋಷಿಸಿದರು. ಈ ಯೋಜನೆ, ಮೂಲಸೌಕರ್ಯ ಕ್ಷೇತ್ರದಲ್ಲಿ ಬೆಂಗಳೂರಿಗೆ ಹೊಸ ದಿಕ್ಕು ತೋರಿಸಲಿದೆ.
114 ಕಿ.ಮೀ ಉದ್ದದ ಎತ್ತರದ ಕಾರಿಡಾರ್ ಯೋಜನೆ, ಸಚಿವ ಕೆ.ಜೆ. ಜಾರ್ಜ್ ಅವರ ಕ್ಷೇತ್ರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವ ಗುರಿಯನ್ನು ಹೊಂದಿದೆ. ಇದರಿಂದ ದಟ್ಟಣೆ ಕಡಿಮೆಯಾಗುವುದರ ಜೊತೆಗೆ, ವಿಮಾನ ನಿಲ್ದಾಣದ ಪ್ರವೇಶ ವ್ಯವಸ್ಥೆ ಸುಗಮವಾಗಲಿದೆ. ಡಿಕೆ ಶಿವಕುಮಾರ್ ಅವರು ಸ್ಪಷ್ಟಪಡಿಸಿದಂತೆ, ಈ ಸುರಂಗ ಮಾರ್ಗ ಯೋಜನೆ ವಿಧಾನಸೌಧದ ಬಳಿಯಂತೆ ಪ್ರದೇಶಗಳಲ್ಲಿ ಹಾದು ಹೋಗದಂತೆ ವಿನ್ಯಾಸಗೊಳ್ಳಲಿದೆ. ಪ್ರವೇಶ-ನಿರ್ಗಮನ ಮಾರ್ಗಗಳು ಚೆನ್ನಾಗಿ ಯೋಜಿತವಾಗಿದ್ದು, ಸಾರ್ವಜನಿಕರ ಸುರಕ್ಷತೆ ಮತ್ತು ನಗರ ಪರಂಪರೆಯ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ.
ಉನ್ನತ ಪ್ರವಾಸೋದ್ಯಮ, ನವೀಕರಿತ ಸಾರಿಗೆ:
ಬಿಡಿಎಯ ಈ ಎರಡು ಮಹತ್ವದ ಯೋಜನೆಗಳಾಸ, ಸ್ಕೈ ಡೆಕ್ ಗೋಪುರ ಮತ್ತು ಸುರಂಗ ರಸ್ತೆ ಮಾರ್ಗ ಬೆಂಗಳೂರಿನ ಭವಿಷ್ಯದ ಮುಖವಾಡ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಲಿವೆ. ಒಂದು ಕಡೆ ನಗರಕ್ಕೆ ಜಾಗತಿಕ ಪ್ರವಾಸೋದ್ಯಮ ಮೆರಗು ನೀಡುವ ಸ್ಕೈ ಡೆಕ್, ಇನ್ನೊಂದು ಕಡೆ ಬೆಂಗಳೂರಿನ ದೈನಂದಿನ ಸಾರಿಗೆ ಸಮಸ್ಯೆಗೆ ಪರಿಹಾರವಾಗಿ ಸುರಂಗ ರಸ್ತೆ ಪರಿಹಾರ ಕೊಡಲಿದೆ. ಇದು ಬೆಂಗಳೂರು ತಮ್ಮ ಗತಿ ಹಾಗೂ ಗರಿಮೆಯ ಹೊಸ ಅಧ್ಯಾಯ ಆರಂಭಿಸುತ್ತಿರುವ ಸ್ಪಷ್ಟ ಸೂಚನೆಯಾಗಿದೆ.


Click it and Unblock the Notifications