ಬೆಂಗಳೂರು, ಆಗಸ್ಟ್ 1: ಯಲಹಂಕ ಕರ್ನಾಟಕದ ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನಲ್ಲಿ, ಬೆಂಗಳೂರು-ಗುಂತಕಲ್ಲು ರೈಲು ಮಾರ್ಗದಲ್ಲಿರುವ ಐತಿಹಾಸಿಕ ಸ್ಥಳ. ಇದು ಬೆಂಗಳೂರಿನಿಂದ ಉತ್ತರಕ್ಕೆ 16 ಕಿ.ಮೀ. ದೂರದಲ್ಲಿದೆ. ಚೋಳರ ಕಾಲದಲ್ಲಿ ಇದನ್ನು ಇಲೈಪಾಕ್ಕಂ ಮತ್ತು ಹೊಯ್ಸಳರ ಕಾಲದಲ್ಲಿ ಎಲಹಕ್ಕ ಎಂದೂ ಸುತ್ತಮುತ್ತಲಿನ ನಾಡನ್ನು ಯಲಹಂಕ ನಾಡು ಎಂದೂ ಕರೆಯಲಾಗುತ್ತಿತ್ತು.ಒಂದು ಕಾಲದಲ್ಲಿ ತನ್ನದೇ ಆತ ಐಡೆಂಟಿಟಿ ಹೊಂದಿದ್ದ ಯಲಹಂಕ ಇಂದು ಬೆಂಗಳೂರು ನಗರದಲ್ಲಿ ಒಂದಾಗಿದೆ.
ಒಂದು ಕಾಲದಲ್ಲಿ ಯಲಹಂಕ ಬೆಂಗಳೂರು ನಗರದ ಅಂಚಿನಲ್ಲಿದ್ದ ಒಂದು ಪಟ್ಟಣವಾಗಿತ್ತು. ಯಲಹಂಕ 12 ನೇ ಶತಮಾನದಿಂದಲೂ ಅಸ್ತಿತ್ವದಲ್ಲಿದೆಯಾದರೂ, 1970 ಮತ್ತು 80 ರ ದಶಕದಲ್ಲಿ ಯಲಹಂಕವು ಬೆಂಗಳೂರಿನ ಭಾಗವಾಗಲು ಪ್ರಾರಂಭವಾಯಿತು. ಅಂದಿನ ಆಡಳಿತ ವ್ಯವಸ್ಥೆಯೂ ಬೆಂಗಳೂರಿನ ಜನದಟ್ಟಣೆಯನ್ನು ಕಡಿಮೆ ಮಾಡಲು ಬಯಸಿದಾಗ ಉತ್ತರದಲ್ಲಿ ಯಲಹಂಕ ಮತ್ತು ಪಶ್ಚಿಮದಲ್ಲಿ ಕೆಂಗೇರಿಯನ್ನು ಸಾಟಲೈಟ್ ಟೌನ್ ಆಗಿ ರೂಪಿಸಿತು. ಅಂದು ಬೆಂಗಳೂರು ಮತ್ತು ದೊಡ್ಡಬಳ್ಳಾಪುರದ ನಡುವೆ ನೆಲೆಗೊಂಡಿರುವ ಯಲಹಂಕವು ನಗರ-ಗ್ರಾಮಾಂತರಗಳ ತತ್ವವನ್ನು ಹೊಂದಿಲ್ಲದೇ ತನ್ನದೇ ಆದ ಪ್ರತ್ಯೇಕತೆಯನ್ನು ಹೊಂದಿತ್ತು. ಆದರೆ ಕಳೆದ ದಶಕದಲ್ಲಿ, ನೆರೆಹೊರೆಯು ಬಹುತೇಕ ಗುರುತಿಸಲಾಗದಷ್ಟು ಬದಲಾಗಿದೆ.

ಯಲಹಂಕದ ಹಳೆಯ ನೆನೆಪನ್ನು ರೀಕಾಲ್ ಮಾಡಲು ಮತ್ತು ಕಳೆದ ಮೂರು ದಶಕಗಳಲ್ಲಿ ಯಲಹಂಕ ನ್ಯೂ ಟೌನ್ ಹೇಗೆ ಬದಲಾಗಿದೆ ಎಂಬುವುದನ್ನು ಚಿತ್ರಿಸಲು 'ಮ್ಯಾಪಿಂಗ್ ಮೆಮೊರೀಸ್: ದಿ ಲಾಸ್ಟ್ ಸ್ಪೇಸಸ್ ಆಫ್ ಯಲಹಂಕ' ಎಂಬ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ. ವಿಷ್ಯೂವಲ್ ಆರ್ಟಿಸ್ಟ್ ಲಕ್ಷ್ಮೀ ನಾಗರಾಜ್ ಅವರು ಯಲಹಂಕ ನ್ಯೂ ಟೌನ್‌ನಲ್ಲಿ ಮೆಮೊರಿ-ಮ್ಯಾಪಿಂಗ್ ಸಂಯೋಜಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ತಮ್ಮ ನೆರೆಹೊರೆಯ ವೈಯಕ್ತಿಕ ನೆನಪುಗಳು ಮತ್ತು ಕಳೆದುಹೋದ ಸಂಸ್ಥೆಗಳ ನೆನಪುಗಳ ಮೂಲಕ ಯಲಹಂಕದ ಸಣ್ಣ ನಕ್ಷೆಗಳನ್ನು ಮುದ್ರಿಸುತ್ತಾರೆ ಮತ್ತು ಭಾಗವಹಿಸುವವರು ತಮ್ಮ ನೆರೆಹೊರೆಯ ನಿರ್ದಿಷ್ಟ ಭೌಗೋಳಿಕತೆಗಳ ತಮ್ಮದೇ ಆದ ನೆನಪುಗಳನ್ನು ಗುರುತಿಸುವುದು ಇವರ ಪ್ರಮುಖ ಗುರಿಯಾಗಿದೆ.
ಈ ಹಿಂದೆ ಯಲಹಂಕದ ನಿವಾಸಿಗಳ ಮ್ಯಾಪಿಂಗ್ ಮೆಮೊರೀಸ್ ಮಾಡಿದಾಗ , ಗಂಡಸರು ತಾವು ಹೆಚ್ಚಾಗಿ ಹೋಗುತ್ತಿದ್ದ ಟೀ ಸ್ಟಾಲ್ ಗಳ ಬಗ್ಗೆ ಮಾತನಾಡುತ್ತಿದ್ದರೆ ಮಹಿಳೆಯರು ದೇವಸ್ಥಾನಗಳನ್ನು ನೆನಪಿಸಿಕೊಂಡಿದ್ದಾರೆ. ಕೊವೀಡ್ ಸಾಂಕ್ರಾಮಿಕ ಸಮಯದಲ್ಲಿ ತನ್ನ ದಿನಸಿಯನ್ನು ಉಚಿತವಾಗಿ ತಲುಪಿಸಲು ಮುಂದಾದ ಶ್ರೀ ರಾಮಾ ಸ್ಟೋರ್ಸ್‌ನ ಮಾಲೀಕರನ್ನು ವಯಸ್ಸಾದ ನಿವಾಸಿಯೊಬ್ಬರು ನೆನಪಿಸಿಕೊಂಡರು. ಯಲಹಂಕದ ಕೆಲವು ಭಾಗಗಳು ಕಾಡಿನಿಂದ ಕೂಡಿದ್ದು ಸಂಜೆ 5 ಗಂಟೆಯ ನಂತರ ಹೊರಗೆ ಹೆಜ್ಜೆ ಹಾಕುವುದು ಭಯಾನಕವಾಗಿತ್ತು ಎಂದು ಮತ್ತೊಬ್ಬ ಹಿರಿಯ ನಾಗರಿಕರು ಮತ್ತೆ ಹೇಳಿದ್ದಾರೆ. ಹಿಂದಿದ್ದ ಅಲ್ಲಾಳಸಂದ್ರ ಕೆರೆಯ ಸೌಂದರ್ಯವನ್ನು ನೆನಪಿಸಿಕೊಂಡ ಮಧ್ಯವಯಸ್ಕ ಮಹಿಳೆ
ಇತ್ತೀಚೆಗೆ ಆ ಕೆರೆ ಪಾಚಿಗಟ್ಟಿ ಪಾಳುಬಿದ್ದಿದೆ ಎಂದರು.
ಇಂತಹ ನೆನಪುಗಳಲ್ಲಿ ದ್ವೈವಾರ್ಷಿಕ ಅಲ್ಲಾಳಸಂದ್ರ ಜಾತ್ರೆ ಮತ್ತು ಸರ್ಕಸ್ ನೆನಪಿಸಿಕೊಂಡ ಜನ ಅಲ್ಲದ್ದ ಶರಾವತಿ ಹೋಟೆಲ್ ನ್ನು ನೆನಪಿಸಿಕೊಂಡಿದ್ದಾರೆ.
ಹೋಟೆಲ್ ಬಹಳ ಹಿಂದೆಯೇ ಮುಚ್ಚಲ್ಪಟ್ಟಿದ್ದರೂ, ಅದು ಹೆಗ್ಗುರುತಾಗಿರುವ 'ಶರಾವತಿ ಹೋಟೆಲ್ ಬಸ್ ಸ್ಟಾಪ್' ಇಂದಿಗೂ ಇದೆ. ತಾವು ಡ್ರೈವಿಂಗ್ ಕಲಿತು ಫುಟ್ ಬಾಲ್, ಕ್ರಿಕೆಟ್ ಆಡುತ್ತಿದ್ದ ಜ್ಞಾನ ಜ್ಯೋತಿ ಕಾಲೇಜು ಮೈದಾನದ ಜಾಗದಲ್ಲಿ ಈಗ ಸೂಪರ್ ಮಾರ್ಕೆಟ್ ಬರುತ್ತಿದೆ ಎಂದು ಮತ್ತೊಬ್ಬರು ವಿಷಾದ ವ್ಯಕ್ತಪಡಿಸಿದ್ದಾರೆ.
"ನಾನು 'ಶ್ರೀ ಸಾಯಿ ಸರ್ಕ್ಯುಲೇಟಿಂಗ್ ಲೈಬ್ರರಿ'ಯಿಂದ 'ದಿ ಫೇಮಸ್ ಫೈವ್' ನಂತಹ ಪುಸ್ತಕಗಳನ್ನು ಎರವಲು ಪಡೆದುಕೊಳ್ಳುತ್ತಿದ್ದೆ ಅದು ಮುಚ್ಚಿದಾಗ ನನಗೆ 13 ಅಥವಾ 14 ವರ್ಷ ಎಂದು ಮತ್ತೋರ್ವರು ತಮ್ಮ ನೆನಪಿನ ಬುತ್ತಿ ತೆರೆದಿಟ್ಟಿದ್ದಾರೆ.
ಈ ಯೋಜನೆ ಪ್ರಾಜೆಕ್ಟ್ 560 ಮತ್ತು ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಬೆಂಬಲಿತವಾಗಿದೆ. ಮ್ಯಾಪಿಂಗ್ ಚಟುವಟಿಕೆಗಳು ಮತ್ತು ಡ್ರಾಯಿಂಗ್ ಸೆಷನ್‌ಗಳ ಮೂಲಕ, ನಿವಾಸಿಗಳು ತಮ್ಮ ಹಿಂದಿನ hangouts ಮತ್ತು ಪ್ರೀತಿಯ ಸ್ಥಳಗಳ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಈ ನೆನಪುಗಳನ್ನು ಸಾರ್ವಜನಿಕ ಕಾರ್ಯಕ್ರಮವಾಗಿ ಪರಿವರ್ತಿಸಲಾಗಿದೆ - ಮ್ಯಾಪಿಂಗ್ ಮೆಮೊರೀಸ್ ಈ ನೆನಪುಗಳಿಗೆ ಜೀವ ತುಂಬುವ ವರ್ಣಚಿತ್ರಗಳನ್ನು ಪ್ರದರ್ಶಿಸುತ್ತದೆ. ಆಗಸ್ಟ್ 3 ಮತ್ತು 4 ರಂದು, 11 am-8pm, ರಾಜ್ಯ ಸಾರ್ವಜನಿಕ ಗ್ರಂಥಾಲಯದ ಎದುರು, ಯಲಹಂಕ ನ್ಯೂ ಟೌನ್ ಈ ಕಾರ್ಯಕ್ರಮ ನಡೆಯಲಿದೆ.


Click it and Unblock the Notifications