ತುಮಕೂರಿನ ಜನರಿಗೆ ನಿರಾಸೆ! ಪರಂ-ಜಿಬಿಜೆ ಕನಸು ಭಗ್ನ.. 'ಕೈ'ತಪ್ಪಿದ ಹೊಸ ಏರ್ಪೋರ್ಟ್.. ಏ.7ರಿಂದ ಈ 3 ಸ್ಥಳದಲ್ಲಿ ಮೌಲ್ಯಮಾಪನ

ಸರ್ಕಾರ ಹೊಸ ವಿಮಾನ ನಿಲ್ದಾಣ ತುಮಕೂರಿನಲ್ಲಿ ನಿರ್ಮಾಣವಾಗುತ್ತೆ ಎಂದು ಕನಸು ಕಟ್ಟಿದ ತುಮಕೂರು ಜನತೆಯ ಆಸೆಗೆ ತಣ್ಣೀರು ಎರಚಿದೆ.ಎರಡನೇ ವಿಮಾನ ನಿಲ್ದಾಣ ತುಮಕೂರಿಗೆ ಬರಬೇಕು ಎಂದು ಸಚಿವರು ಶಾಸಕರು ಪಟ್ಟು ಹಿಡಿದಿದ್ದರು. ಆದರೆ ಎರಡನೇ ವಿಮಾನ ನಿಲ್ದಾಣ ತುಮಕೂರಿನಲ್ಲಿ ನಿರ್ಮಾಣವಾಗುವುದು ಕನಸ್ಸಿನ ಮಾತಗಿದೆ.

ಹೌದು,ಬೆಂಗಳೂರು ಎರಡನೇ ವಿಮಾನ ನಿಲ್ದಾಣ.. ಇದು ಹಲವು ರಾಜಕೀಯ ನಾಯಕರ ಪ್ರಿತಿಷ್ಠೆಯ ವಿಷಯವಾಗಿದೆ. ಇದು ಹಲವು ದಿನಗಳಿಂದ ರಾಜ್ಯದಲ್ಲಿ ಭಾರೀ ಸುದ್ದಿ ಮಾಡಿದೆ. ಅದರಲ್ಲೂ ತುಮಕೂರಿಗೆ ಹೊಸ ವಿಮಾನ ನಿಲ್ದಾಣ ಬರಬೇಕು ಎಂದು ಸಚಿವರು, ಶಾಸಕರು ಮತ್ತು ಸಂಸದರು ಪಟ್ಟು ಹಿಡಿದಿದ್ದರು. ಆದರೆ, ಎರಡನೇ ವಿಮಾನ ನಿಲ್ದಾಣ ತುಮಕೂರಿನಲ್ಲಿ ನಿರ್ಮಾಣವಾಗುವುದು ಕನಸಿನ ಮಾತಾಗಿದೆ. ಪರಂ-ಟಿಬಿಜೆ-ಸೋಮಣ್ಣ ಅವರ ಕನಸು ಭಗ್ನವಾಗುವ ಸುಳಿವು ಸಿಕ್ಕಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ತುಮಕೂರಿನ ಜನರಿಗೆ ನಿರಾಸೆ! 'ಕೈ'ತಪ್ಪಿದ ಹೊಸ ಏರ್ಪೋರ್ಟ್

ಈಗಾಗಲೇ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಮೂರು ಸ್ಥಳಗಳನ್ನು ಗುರುತು ಮಾಡಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಲಾಗಿದೆ. ಕನಕಪುರ ರಸ್ತೆಯಲ್ಲಿರುವ ಚೂಡಹಳ್ಳಿ ಮತ್ತು ಸೋಮನಹಳ್ಳಿ, ನೆಲಮಂಗಲ-ಕುಣಿಗಲ್ ರಸ್ತೆಯೊಂದಿಗೆ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಮೂರು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಮಾರ್ಚ್ 5 ರಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ಪೂರ್ವ-ಕಾರ್ಯಸಾಧ್ಯತಾ ಅಧ್ಯಯನಕ್ಕಾಗಿ ಈ ಸ್ಥಳಗಳನ್ನು ಪ್ರಸ್ತಾಪಿಸಿದೆ ಎಂದು ಮೂಲಗಳು ಮಾಹಿತಿಯನ್ನು ತಿಳಿಸಿವೆ. ಅದರಲ್ಲಿ ತುಮಕೂರು ಪ್ರದೇಶಕ್ಕೆ ಹೊಸ ಏರ್ಪೋರ್ಟ್ ನಿರ್ಮಾಣ ಅವಕಾಶ ಕೈ ತಪ್ಪಿ ಹೋಗಿದೆ.

ಮಾಹಿತಿ ಪ್ರಕಾರ ಮುಂಬರು ಏಪ್ರಿಲ್ 7 ರಿಂದ 9 ರವರೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಬೆಂಗಳೂರಿಗೆ ಭೇಟಿ ನೀಡಲಿದೆ ಮೂರು ಸ್ಥಳಗಳನ್ನು ಅಧ್ಯಾಯ ಮಾಡಿ ಒಂದು ಸ್ಥಳವನ್ನು ಅಂತಿಮ ಮಾಡಲಿದೆ.

ಎರಡನೇ ವಿಮಾನ ನಿಲ್ದಾಣ ನಮ್ಮ ತುಮಕೂರಿಗೆ ಬರಬೇಕು ಎಂದು ಸಚಿವ ಜಿ,ಪರಮೇಶ್ವರ್ ಮತ್ತು ಕೇಂದ್ರ ಸಚಿವ ವಿ. ಸೋಮಣ್ಣ ಪಟ್ಟು ಹಿಡಿದದ್ದಾರೆ ಈ ಕುರಿತು ಸರ್ಕಾರಕ್ಕೆ ಮನವಿಯನ್ನು ಸಹ ಮಾಡಿದ್ದರು.

ಇದಲ್ಲದೇ ಶಿರಾಭಾಗಕ್ಕೆ ಹೊಸ ವಿಮಾನ ನಿಲ್ದಾಣವನ್ನು ಮಾಡಬೇಕು 600 ಎಕರೆಯ ಭೂಮಿಯನ್ನು ನಾವು ಕೊಡಲು ಸಿದ್ದ ಎಂದು ಕಾಂಗ್ರೆಸ್ ಹಿರಿಯ ನಾಯಕ ಟಿ. ಬಿ ಜಯಚಂದ್ರ ಸಹ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇವರೆಲ್ಲಾರ ಬೇಡಿಕೆಯಿಟ್ಟರು ಎರಡನೇ ವಿಮಾನ ನಿಲ್ದಾಣದ ಕನಸು ಭಗ್ನವಾಗಿತ್ತೇ ಹೊರೆತು ನನಸಾಗಲಿಲ್ಲ.

ತುಮಕೂರಿನಲ್ಲಿ ವಿಮಾನ ನಿಲ್ದಾಣವಾಗಬೇಕು ಎಂಬುವುದರ ಕುರಿತು ಕೈಗಾರಿಕಾ ಸಚಿವ ಎಂ.ಬಿ ಪಾಟೇಲ್ ತುಮಕೂರು ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎನ್ನುವ ಬೇಡಿಕೆ ಹೆಚ್ಚಾಗಿತ್ತು. ಆದರೆ, ಈ ಭಾಗದಲ್ಲಿ ವಿಮಾನ ನಿಲ್ದಾಣ ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿಕೆಯನ್ನು ನೀಡಿದ್ದಾರೆ. ಆದರೆ ಯಾವ ಕಾರಣಕ್ಕೆ ವಿಮಾನ ನಿಲ್ದಾಣ ಪ್ರಸ್ತಾವನೆಯನ್ನು ಕೈಬಿಡಲಾಯಿತು ಎನ್ನುವ ವಿಷಯ ಮಾತ್ರ ಬಹಿರಂಗವಾಗಿಲ್ಲ.

ಪ್ರಸ್ತಾವಿತ ವಿಮಾನ ನಿಲ್ದಾಣವನ್ನು ಶಿರಾದಲ್ಲಿ ನಿರ್ಮಾಣ ಮಾಡಿದರೆ, ಅದು ಶಿವಮೊಗ್ಗ ಮತ್ತು ವಿಜಯಪುರದ ವಿಮಾನ ನಿಲ್ದಾಣಗಳಂತೆಯೇ ಇರುತ್ತದೆ. ಬೆಂಗಳೂರಿನ ಜನರಿಗೆ ಸೇವೆ ಸಲ್ಲಿಸಲು, ವಿಮಾನ ನಿಲ್ದಾಣವು ನಗರಕ್ಕೆ ಹತ್ತಿರದಲ್ಲಿರಬೇಕು. ಆಗ ಮಾತ್ರ ಹೂಡಿಕೆದಾರರು ವಿಮಾನ ನಿಲ್ದಾಣವನ್ನು ನಿರ್ಮಿಸಲು ಆಸಕ್ತಿ ವಹಿಸುತ್ತಾರೆ. ಇದು ಇಲ್ಲದೆ, ಯೋಜನೆ ಕಾರ್ಯಸಾಧ್ಯವಾಗುವುದಿಲ್ಲ ಎಂದು ಸಚಿವ ಎಂ. ಬಿ ಪಾಟೀಲ್ ಹೇಳಿದ್ದಾರೆ.

ನಾವು ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ನಿರ್ಧರಿಸುವಾಗ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಸ್ಥಳ ನಿರ್ಧಾರವು ಕೇವಲ ಅರ್ಹತೆಯ ಆಧಾರದ ಮೇಲೆ ನಡೆಯಲಿದೆ ಎಂದು ಹೇಳಿದರು. ಬೆಂಗಳೂರಿನ ಜನರು, ಕೈಗಾರಿಕೆಗಳು ಮತ್ತು ಆರ್ಥಿಕತೆಯ ಹಿತಾಸಕ್ತಿಯನ್ನು ಪರಿಗಣಿಸಿ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂಬುದು ನಮಗೆ ಸ್ಪಷ್ಟವಾಗಿದೆ. ಇಲ್ಲಿಯವರೆಗೆ ನಾನು ಯಾವುದೇ ಒತ್ತಡಕ್ಕೆ ಮಣಿದಿಲ್ಲ ಮತ್ತು ಭವಿಷ್ಯದಲ್ಲಿಯೂ ಸಹ ಬಗ್ಗುವುದಿಲ್ಲ ಎಂದು ಎಂ. ಬಿ ಪಾಟೇಲ್ ಹೇಳಿದ್ದಾರೆ.

ವಿಮಾನ ನಿಲ್ದಾಣದ ಪ್ರಸ್ತಾವನೆಯ ಪಟ್ಟಿಯಲ್ಲಿ ಇರುವ ಬೆಂಗಳೂರು ದಕ್ಷಿಣ ತಾಲೂಕಿನ ಚೂಡಹಳ್ಳಿ ಹತ್ತಿರ ಹಾಗೂ ಬೆಂಗಳೂರು ದಕ್ಷಿಣ ತಾಲೂಕು ಸೋಮನಹಳ್ಳಿ ಹತ್ತಿರ‌‌ ಮತ್ತು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ನೆಲಮಂಗಲ- ಕುಣಿಗಲ್‌ ಹತ್ತಿರ ಇರುವ ಸ್ಥಳಗಳಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಏಪ್ರಿಲ್ ತಿಂಗಳಲ್ಲಿ ಪೂರ್ವ ಕಾರ್ಯಸಾಧ್ಯತಾ ಅಧ್ಯಯನವನ್ನು ಮಾಡಿ ಒಂದು ಸ್ಥಳವನ್ನು ಆಯ್ಕೆ ಮಾಡುತ್ತದೆ. ಈ ಮೂರು ಸ್ಥಗಳಲ್ಲಿ ಎಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+