ಬೆಂಗಳೂರು ಎರಡನೇ ವಿಮಾನ ನಿಲ್ದಾಣದ (Bengaluru Second Airport) ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ.ನಮ್ಮ ಊರಿಗೆ ವಿಮಾನ ನಿಲ್ದಾಣ ಬರಬೇಕೆಂದು ಇಬ್ಬರು ಸಚಿವರ ನಡುವೆ ಹಗ್ಗಾ-ಜಗ್ಗಾಟ ನಡೆಯುತ್ತಿದೆ.ಬೆಂಗಳೂರಿಗೆ ಸಮೀಪವಿರುವ ತುಮಕೂರಿಗೆ ವಿಮಾನ ನಿಲ್ದಾಣ (Airport) ಬರಬೇಕು ಎಂದು ಗೃಹ ಸಚಿವ ಪರಮೇಶ್ವರ್ ಪಟ್ಟು ಹಿಡಿದ್ದಾರೆ ಮತ್ತೊಂದು ಕಡೆ ಕನಕಪುರದಲ್ಲಿ ವಿಮಾನ ನಿಲ್ದಾಣವಾಗಬೇಕು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳುತ್ತಿದ್ದರೆ... ಇದರ ನಡುವೆ ನಮ್ಮ ಶಿರಾ ಭಾಗಕ್ಕೆ ಏರ್ ಪೋರ್ಟ್ ಬರಬೇಕು ಎಂದು ಕೂಗು ಕೇಳಿಬರುತ್ತಿದೆ.
ಹೌದು,ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಬಗ್ಗೆ ಈಗಾಗಲೇ ಇಬ್ಬರೂ ಸಚಿವರ ನಡುವೆ ಹಗ್ಗಾ-ಜಗ್ಗಾಟ ನಡೆಯುತ್ತಿದೆ.ಇದರ ಮಧ್ಯೆ ಶಿರಾ ಭಾಗದಲ್ಲಿ ವಿಮಾನ ನಿಲ್ದಾಣವಾಗಬೇಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಟಿ.ಬಿ ಜಯಚಂದ್ರ ಸಹ ಪಟ್ಟು ಹಿಡಿದಿದ್ದಾರೆ.

ಈ ಕುರಿತು ಮಾತನಾಡಿದ ಅವರು ಒಂದು ವಿಮಾನ ನಿಲ್ದಾಣದಿಂದ ಇನ್ನೋದು ವಿಮಾನ ನಿಲ್ದಾಣಕ್ಕೆ 150 ಕಿಲೋ ಮೀಟರ್ ಹತ್ತರವಿರಬೇಕು ಎಂಬ ಕಾನೂನು ಇದೆ. ಆದರೆ ಇದನೆಲ್ಲಾ ಅದಿಕಾರಿಗಳು ನಾಯಕರು ಎಲ್ಲರು ಮರೆಮಾಚಿದ್ದಾರೆ. 150 ಕಿಲೋ ಮೀಟರ್ ಅಂತ ಬಂದಾಗ ಅದು ಅವರ ಹೇಳಿದ ರೀತಿಯಲ್ಲಿ ಬರುವುದಿಲ್ಲ ನೀವು ಯಾವುದೇ ಕಡೆಹೋದರೂ ಅಥವಾ ಮಧ್ಯ ಕರ್ನಾಟಕ ಲೆಕ್ಕಾಚಾರದಂತೆ ಹೋದರೆ ಶಿರಾ ಬಾರ್ಡರ್ ಹತ್ತಿರನೇ ಆಗಬೇಕು. ಆದ್ದರಿಂದ ಎರಡನೇ ವಿಮಾನ ನಿಲ್ದಾಣ ಶಿರಾಕ್ಕೆ ಬರಬೇಕು ಎಂದು ಹೇಳಿದ್ದಾರೆ.
ಶಿರಾದಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾದರೆ ಬಹಳಷ್ಟು ಜನಕ್ಕೆ ಅನುಕೂಲವಾಗುತ್ತದೆ. ಬೀದರ್ ಬೆಳಗಾಂ, ದಾರವಾಡ, ಶಿವಮೊಗ್ಗ ಜಿಲ್ಲೆಯಿಂದ ಬರುವ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಈ ಕಾರಣದಿಂದಾಗಿ ವಿಮಾನ ನಿಲ್ದಾಣ ಅಂತಿವಾಗಿ ಶಿರಾದ ಬಳಿಯೇ ಆಗಬೇಕು.
ಸ್ಥಳ ನಿಗದಿ ಎಲ್ಲಿ...?
ಏರ್ಪೋರ್ಟ್ಸ್ ಅಥಾರಿಟಿ ಅವರು ಬರುವುದಕ್ಕೆ ತಯಾರಿಯಾದರೆ 6ಸಾವಿರ ಎಕರೆಯ ಜಮೀನುನನ್ನು ನಾವು ಶಿರಾದಲ್ಲಿ ಕೊಡುವುದಕ್ಕೆ ಸಿದ್ದರಾಗಿದ್ದೇವೆ.ನಾವು ಜಮೀನನನ್ನು ಸಹ ಗುರುತು ಮಾಡಿಕೊಂಡಿದ್ದೇವೆ ಈಗಲೇ ಸರ್ಕಾರ ಮನವಿಯನ್ನು ಸಹ ಮಾಡಿದ್ದೇವೆ ಜಮೀನ ಎಲ್ಲಿ ನೀಡಲಾಗುತ್ತದೆ ಎಂದು ಕಾಗದ ಸಹ ಬರೆದಿದ್ದೇನೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಟಿ.ಬಿ ಜಯಚಂದ್ರ ಹೇಳಿದ್ದಾರೆ.
ಡಿ.ಕೆ ಶಿವಕುಮಾರ್ ತಮ್ಮ ಹುಟ್ಟೂರು ಕನಕಪುರದ ಬಳಿಯ ಬಿಡದಿ ಮತ್ತು ಹಾರೋಹಳ್ಳಿ ನಡುವೆ ಒಂದು ಸ್ಥಳವನ್ನು ಪ್ರಸ್ತಾಪಿಸಿದ್ದಾರೆ.ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ)ಅದಕ್ಕೆ ಅನುಮೋದನೆ ನೀಡುವ ಬಗ್ಗೆ ಪರಮೇಶ್ವರ ಅನುಮಾನನ್ನು ಕೂಡ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಮತ್ತು ಪುಣೆ NH-40 ರ ಹೊರಗಿರುವ ತುಮಕೂರಿನಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಬೇಕೆಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ವಿಮಾನ ನಿಲ್ದಾಣದ ನಿರ್ಮಾಣದ ಬಗ್ಗೆ ಸರ್ಕಾರವು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ.ಇದು ತಾಂತ್ರಿಕ ವಿಷಯವಾಗಿದೆ. ನಿರ್ಧಾರ ತೆಗೆದುಕೊಳ್ಳುವ ಮೊದಲು ಸಾಧಕ-ಬಾಧಕಗಳನ್ನು ಚರ್ಚಿಸಲಾಗುವುದು ಆದರೆ ಅಷ್ಟೊಂದು ಚರ್ಚೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ರಿಯಲ್ ಎಸ್ಟೇಟ್‌ಗೆ ಚಿನ್ನದ ಬೆಲೆ
ಉತ್ತರ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಅಭಿವೃದ್ಧಿಗೆ ನಾಂದಿ ಹಾಡಿದ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಂತೆಯೇ, ಎರಡನೇ ವಿಮಾನ ನಿಲ್ದಾಣದ ಸ್ಥಳವು ರಿಯಲ್ ಎಸ್ಟೇಟ್ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ವಸತಿ, ವಾಣಿಜ್ಯ ಸಂಸ್ಥೆಗಳು ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಎರಡನೇ ವಿಮಾನ ನಿಲ್ದಾಣಕ್ಕೆ ಅನುಮತಿ ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣಕ್ಕೆ ಸ್ಥಳ ಅಂತಿಮಗೊಂಡ ನಂತರ ಅನುಮತಿ ನೀಡಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಫೆಬ್ರವರಿ 3 ರಂದು ರಾಜ್ಯಸಭೆಗೆ ಭರವಸೆ ನೀಡಿದ್ದಾರೆ. ಆದರೆ ಎಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣವಾಗುತ್ತೆ ಎಂಬುವುದನ್ನು ಕಾದುನೋಡಬೇಕಿದೆ.


Click it and Unblock the Notifications