ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಸ್ಥಳ ನಿಗದಿಗೆ ಭಾರೀ ಚರ್ಚೆಗಳು ನಡೆಯುತ್ತಿದೆ. ಈ ಮಧ್ಯದಲ್ಲೇ ಸ್ಥಳದ ಜೊತೆ ಜೊತೆಗೆ ಮತ್ತೊಂದು ಪ್ರಾಬ್ಲಂ ಎದುರಾಗಿದೆ. ಈಗಾಗಲೇ ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಖ್ಯವಾಗಿ ಐದು ಜಾಗಗಳನ್ನು ಗುರುತಿಸಲಾಗಿದೆ. ಈ ಪೈಕಿ ಯಾವ ಜಾಗವೂ ಅಂತಿಮವಾಗಿಲ್ಲ. ಇದೀಗ ಮತ್ತೊಂದು ಸಮಸ್ಯೆ ಎದುರಾಗಿದೆ. ಹಾಗಿದ್ರೆ ಬನ್ನಿ, ಸ್ಥಳದ ಜೊತೆಗೆ ಶುರುವಾದ ಮತ್ತೊಂದು ಪ್ರಾಬ್ಲಂ ಯಾವುದು? ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆ ಸಮಸ್ಯೆ ಅಡ್ಡಿಯಾಗುತ್ತಿರುವುದು ಯಾಕೆ? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
ಹೌದು, ಬೆಂಗಳೂರಿನ 2ನೇ ವಿಮಾನ ನಿಲ್ದಾಣ ನಿರ್ಮಾಣದ ವಿಷಯದಲ್ಲಿ ಸರ್ಕಾರ ಪ್ಲಾನ್ ಮಾಡಿಕೊಳ್ಳವಾಗಲೇ ಈ ಸಮಸ್ಸೆಯ ವಿಷಯ ಬೆಳಕಿಗೆ ಬಂದಿದೆ. ಆ ಸಮಸ್ಸೆ ಯಾವುದು ಎಂದರೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಏರ್‌ಸ್ಪೇಸ್ ಕಡಿಮೆ ಇರುವುದು.ಈಗಲೇ ಈ ಸಂಬಂಧ ಚರ್ಚೆಗಳು ಭಾರೀ ನಡೆಯುತ್ತಿವೆ.

ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಈಗಲೇ ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇನ್ನೂ ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ವಿಚಾರದ ಚರ್ಚೆ ಶುರುವಾಗಿರುವಾಗಲೇ ಬೆಂಗಳೂರು ಹಾಗೂ ದಕ್ಷಿಣ ಕರ್ನಾಟಕದ ಭಾಗದಲ್ಲಿ ರಿಯಲ್ ಎಸ್ಟೇಟ್‌ಗಳಿಗೆ ಭಾರೀ ಡಿಮ್ಯಾಂಡ್ ಬಂದಿದೆ.
ಎರಡನೇ ಏರ್ಪೋರ್ಟ್ ನಿರ್ಮಾಣಕ್ಕೆ ಸ್ಥಳ ನಿಗದಿಗೆ ಮೊದಲ ಹಂತದಲ್ಲಿ ತುಮಕೂರು, ನೆಲಮಂಗಲ, ಬಿಡದಿ, ಹೇರೋಹಳ್ಳಿ, ಜಿಗಣಿ ಹಾಗೂ ಕುಣಿಗಲ್‌ನ ಯಾವುದಾದರೂ ಒಂದು ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಚರ್ಚೆ ನಡೆದಿತ್ತು.ಇದೀಗ ಇನ್ನಷ್ಟು ಸ್ಥಳಗಳು ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಚರ್ಚೆಗೆ ಸೇರಿವೆ. ಆದರೆ, ಏರ್‌ಸ್ಪೇಸ್ ಟ್ರಾಫಿಕ್ ಜಾಮ್ ವಿಷಯ ಎರಡನೇ ವಿಮಾ ನಿಲ್ದಾಣ ನಿರ್ಮಾಣಕ್ಕೆ ಸಮಸ್ಸೆ ಎದುರಾಗಿದೆ.
ಏರ್‌ಸ್ಪೇಸ್ ಪ್ರಾಬ್ಲಂ ಯಾಕೆ?
ಆಕಾಶದಲ್ಲಿ ವಿಮಾನಗಳ ಹಾರಾಟಕ್ಕೆ ಏರ್‌ಸ್ಪೇಸ್ ನಿಗದಿಯನ್ನು ಮಾಡಲಾಗಿರುತ್ತದೆ.
ಉದಾಹರಣೆಗೆ: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳು ಹೋಗುವುದಕ್ಕೆ ಮಾಡಲಾಗಿದ್ದ ಪ್ರತ್ಯೇಕ ಬಿಎಂಟಿಸಿ (ಬಸ್ ಕಾರಿಡಾರ್) ಬಸ್ ಪಥದ ರೀತಿ. ಆಕಾಶದಲ್ಲಿ ಏರ್‌ಸ್ಪೇನ್‌ನಲ್ಲಿ ನಿರ್ದಿಷ್ಟ ವಿಮಾನಗಳು ಸಂಚರಿಸುತ್ತವೆ. ಇದೀಗ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಾಗದ ಜೊತೆಗೆ ಏರ್‌ಸ್ಪೇಸ್ ನಿಗದಿ ಮಾಡುವುದು ಸಹ ಮುಖ್ಯವಾಗುತ್ತದೆ.
ಯಾವೆಲ್ಲಾ ಅಧಿಕಾರಿಗಳ ಜೊತೆ ಚರ್ಚೆ?
ಈಗಾಗಲೇ ಈ ವಿಚಾರವಾಗಿ ಅಧಿಕಾರಿಗಳ ಜೊತೆ ಚರ್ಚೆ ನಡೆದಿದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮ್ಯಾನೇಜ್ಮೆಂಟ್, ಹಿಂದೂಸ್ತಾನ್ ಏರೋನಾಟಿಕಲ್ ಲಿ. ಹಾಗೂ ರಕ್ಷಣಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆದಿದೆ.
ಸುತ್ತಮುತ್ತಲಿನ ಪ್ರದೇಶದಲ್ಲೂ ಏರ್‌ಸ್ಪೇಸ್ ಕಡಿಮೆ!
ಬೆಂಗಳೂರಲ್ಲಿ ಈಗಾಗಲೇ ಇರುವ ವಿಮಾನ ನಿಲ್ದಾಣಗಳು 360 ಡಿಗ್ರಿಗಳಷ್ಟಿದೆ. ಅಲ್ಲದೆ ಸುತ್ತಮುತ್ತಲಿನ ಪ್ರದೇಶದಲ್ಲೂ ಏರ್‌ಸ್ಪೇಸ್ ಕಡಿಮೆ ಇದೆ. ವಿಮಾನಗಳ ಹಾರಾಟ ಜಾಸ್ತಿ ಇರುವುದರಿಂದ ಆಕಾಶದಲ್ಲೂ ಟ್ರಾಫಿಕ್ ಜಾಮ್ ಇದೆ. ಹೀಗಾಗಿ ಫ್ರೀ ಏರ್‌ಸ್ಪೇಸ್‌ನ ಅಗತ್ಯವಿದೆ. ಈ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ. ಜಾಗದ ಜೊತೆ ಜೊತೆಗೆ ಆಕಾಶದಲ್ಲೂ ವಿಮಾನಗಳ ಹಾರಟಕ್ಕೆ ಅವಕಾಶ ಸಿಕ್ಕ ಮೇಲೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಒಂದು ಹಂತಕ್ಕೆ ಬರಲಿದೆ. ಹೀಗಾಗಿ ಈ ವಿಷಯವೂ ಈಗ ಭಾರೀ ಚರ್ಚೆಯಾಗುತ್ತಿದೆ.
ಭೂಮಿಗೆ ಬಂಗಾರದ ಬೆಲೆ ಸಿಗುತ್ತಿದೆ
ವಿಮಾನ ನಿಲ್ದಾಣವಾಗುತ್ತಿರುವ ಪ್ರದೇಶದಲ್ಲಿ ಚಿನ್ನದ ಬೆಲೆ ಸಿಗುತ್ತಿದೆ. ರಿಯಲ್ ಎಸ್ಟೇಟ್‌ದಾರರು ವಿಮಾನ ಬಳಿ ಇರುವ ರೈತರ ಭೂಮಿಯನ್ನು ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟಮಾಡುತ್ತಿದ್ದಾರೆ. ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ನಾಲ್ಕರಿಂದ ಐದು ಜಾಗಗಳನ್ನು ಈಗಲೇ ಗುರುತು ಮಾಡಲಾಗಿದೆ. ಆದರೆ ಎರಡನೇ ವಿಮಾನ ನಿಲ್ದಾಣದ ಜಾಗ ಇನ್ನೂ ಫೈನಲ್ ಆಗಿಲ್ಲ.ಈಗಲೇ ಹೊಸೂರು ವಿಮಾನ ನಿಲ್ದಾಣಕ್ಕೆ 2 ಜಾಗಗಳನ್ನು ಫೈನಲ್ ಮಾಡಲಾಗಿದ್ದು, ರಿಯಲ್ ಎಸ್ಟೇಟ್ ಚಟುವಟಿಕೆಗಳು ನಡೆಯುತ್ತಿವೆ.
ರಿಯಲ್ ಎಸ್ಟೇಟ್‌ಗೆ ಡಬಲ್ ಧಮಾಕಾ
ಎರಡೂ ರಾಜ್ಯಗಳಲ್ಲಿ ಏಕಕಾಲದಲ್ಲಿ ಎರಡು ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುವುದಕ್ಕೆ ಚರ್ಚೆ ನಡೆಯುತ್ತೀವೆ. ಈ ಹಿನ್ನೆಲೆಯಲ್ಲಿ ವಿವಿಧ ಪ್ರದೇಶದಲ್ಲಿ ರಿಯಲ್ ಎಸ್ಟೇಟ್‌ಗೆ ಡಬಲ್ ಧಮಾಕಾ ಆದಾಯ ಸಿಗುತ್ತದೆ. ಎರಡೂ ರಾಜ್ಯಗಳ ವಿಮಾನ ನಿಲ್ದಾಣದ ಅಕ್ಕಪಕ್ಕದಲ್ಲಿ ಮತ್ತು ವಿಮಾನ ನಿಲ್ದಾಣದ ಕೆಲವೇ ಕಿ.ಮೀ ದೂರದಲ್ಲಿ ಇರುವ ಜಾಗಗಳಲ್ಲಿ ಜಮೀನು, ಭೂಮಿ ಹಾಗೂ ಆಸ್ತಿಗೆ ಬಂಪರ್ ಬೆಲೆಗೆ ಮಾರಾಟವಾಗುತ್ತಾವೆ. ಈಗಲೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಚರ್ಚೆ ನಡೆಯುತ್ತಿರುವಾಗಲೇ ಆ ಜಾಗದ ಆಸ್ತಿದಾರರು ಎಚ್ಚರದಿಂದ ಇದ್ದಾರೆ ಆಗಿದ್ದಾರೆ. ಅಲ್ಲಿ ಜಾಗ ಮಾರಾಟ ಮಾಡುವವರು ಮುಂದೂಡುತ್ತಿದ್ದಾರೆ.
ಈ ಭಾಗಗಳಲ್ಲಿ ಭೂಮಿ ಬೆಲೆ ಏರಿಕೆ ಆಗುತ್ತಲ್ಲೇ ಇದೆ.
ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಟಕ್ಕೆ ಕೇಳಿ ಬರುತ್ತಿರುವ ಸ್ಥಳಗಳೆಂದರೆ ದಾಬಸ್‌ಪೇಟೆ, ನೆಲಮಂಗಲ, ತುಮಕೂರು, ಬಿಡದಿ ಮತ್ತು ಹಾರೋಹಳ್ಳಿ ಸ್ಥಳದಲ್ಲಿ ಎಲ್ಲಿಯಾದರೂ ಒಂದು ಜಾಗದಲ್ಲಿ ಎರಡನೇ ವಿಮಾನ ನಿಲ್ದಣ ನಿರ್ಮಾಣ ಮಾಡುವ ಬಗ್ಗೆ ಚರ್ಚೆಗಳು ಈಗಲೇ ನಡೆಯುತ್ತಿದೆ. ಆದ್ದರಿಂದ ಈ ಪ್ರದೇಶದಲ್ಲಿ ಭೂಮಿ ಬೆಲೆ ಏರಿಕೆಯಾಗುತ್ತಿದೆ.


Click it and Unblock the Notifications