ಬೆಂಗಳೂರು ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Bengaluru Second Airport) ಸ್ಥಳ ನಿಗದಿಗೆ ಬಗ್ಗೆ ಈಗಲೇ ಹಲವಾರು ಚರ್ಚೆಗಳು ನಡೆಯುತ್ತಿವೆ. ಈ ಮಧ್ಯದಲ್ಲೇ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ದೊಡ್ಡ ಅಪ್ಡೇಟ್ ಒಂದು ಸಿಕ್ಕಿದೆ.
ಹೌದು, ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣದ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಿವೆ.ಬೆಂಗಳೂರಿನಲ್ಲಿ ಈಗಾಗಲೇ ಒಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದ್ದರೂ ಭವಿಷ್ಯದ ದೃಷ್ಟಿಯಿಂದ ಇನ್ನೊಂದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಒಂದು ವರ್ಷದಿಂದಲ್ಲೂ ಪ್ರಕ್ರಿಯೆಗಳು ಚುರುಕುಗೊಂಡಿದ್ದೇವೆ. ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ದೊಡ್ಡ ಅಪ್ಡೇಟ್‌ನ್ನು ಸರ್ಕಾರ ಶೀಘ್ರದಲ್ಲೇ ಘೋಷಣೆ ಮಾಡಲಿದೆ.

ವಿಮಾಮ ಸಂಚಾರದ ಪ್ರಯಾಣಿಕರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವುದರಿಂದ ಮತ್ತೋಂದು ವಿಮಾನ ನಿಲ್ದಾಣದ ಯೋಜನೆ ಸರ್ಕಾರ ಮುಂದಾಗಿದೆ. ಈಗಲೇ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ವರ್ಷದಲ್ಲಿ 30 ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸಿ ದಾಖಲೆಯನ್ನು ಮಾಡಿದೆ. ವಿಮಾನಯಾನದ ಪ್ರಯಾಣಿಕರನ್ನು ನಿಭಾಯಿಸುವುದಕ್ಕೆ ರಾಜ್ಯ ಸರ್ಕಾರವು ಹೊಸ ವಿಮಾನ ನಿಲ್ದಾಣಕ್ಕೆ ಸೂಕ್ತವಾದ ಸ್ಥಳವನ್ನು ಖಚಿತಪಡಿಸುದು ಮಾತ್ರ ಬಾಕಿ ಇದೆ.
ನಗರದ ಹೆಚ್ಚುತ್ತಿರುವ ವಿಮಾನ ಸಂಚಾರಕ್ಕೆ ಅನುಗುಣವಾಗಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಯೋಜನೆಯೊಂದಿಗೆ ಕರ್ನಾಟಕವು ಮುಂದುವರಿಯುತ್ತಿದೆ. ಬೆಂಗಳೂರಿನ ಪ್ರಸ್ತುತ ಮಾಡುತ್ತಿದೆ. ಈಗಲೇ ಕರ್ನಾಟಕ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರ ಪ್ರಕಾರ, ಕುಣಿಗಲ್, ರಾಮನಗರ, ಬಿಡದಿ, ಹಾರೋಹಳ್ಳಿ ಸೇರಿದಂತೆ ಹಲವಾರು ಸೈಟ್‌ಗಳನ್ನು ಸರ್ಕಾರ ಸಕ್ರಿಯವಾಗಿ ಮೌಲ್ಯಮಾಪನ ಮಾಡುತ್ತಿದೆ. ನಾವು ಎರಡನೇ ವಿಮಾನ ನಿಲ್ದಾಣಕ್ಕೆ ಉತ್ತಮ ಸ್ಥಳಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ದುಬೈನಲ್ಲಿ ನಡೆದ ಎನ್‌ಆರ್‌ಐ ಹೂಡಿಕೆ ಶೃಂಗಸಭೆ ಮತ್ತು ಖರೀದಿದಾರರ ಸಭೆಯಲ್ಲಿ ನಸೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಯಾವ ಭಾಗದಲ್ಲಿ ವಿಮಾನ ನಿಲ್ದಾಣ ರೂಪಿಸಿದರೆ ಅದು ಅಭಿವೃದ್ದಿಗೆ ಪೂರಕವಾಗಬಹುದು.ಪ್ರಾದೇಶಿಕವಾಗಿಯೂ ಮಹತ್ವ ಪಡೆದುಕೊಂಡು ಬೆಂಗಳೂರಿನ ಸಮಗ್ರ ಬೆಳವಣಿಗೆಗೂ ದಾರಿಯಾಗಬಹುದು ಎನ್ನುವ ಲೆಕ್ಕಾಚಾರ ಜಾಗದ ಆಯ್ಕೆ ಹಿಂದೆ ಇದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿನ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಲೇ ಇದೆ.ಅದರಲ್ಲೂ ಒಂದು ದಶಕದಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣ ಹೆಚ್ಚು ದಟ್ಟಣೆಯೊಂದಿಗೆ ಪ್ರಯಾಣಿಕರನ್ನು ಮಾತ್ರವಲ್ಲದೇ ಸರಕು ಸಾಗಣೆಯಲ್ಲೂ ಮುಂಚೂಣಿಯಲ್ಲಿದೆ. ಭಾರತದ ನಲವತ್ತಕ್ಕೂ ಹೆಚ್ಚು ನಗರಗಳಿಗೆ ಇಲ್ಲಿಂದ ವಿಮಾನ ಸಂಪರ್ಕವಿದೆ. ಜನ ದಟ್ಟಣೆ, ಬೆಂಗಳೂರಿನ ಬೆಳವಣಿಗೆ ಗಮನದಲ್ಲಿಟ್ಟುಕೊಂಡೇ ಎರಡನೇ ವಿಮಾನ ನಿಲ್ದಾಣ ನಿರ್ಮಿಸುವ ಪ್ರಸ್ತಾವನೆ ಇರಿಸಲಾಗಿದೆ.
ತಮಿಳುನಾಡು ಗಡಿ ಭಾಗದಲ್ಲಿ ವಿಮಾನನಿಲ್ದಾಣ ಬಂದರೆ ಆ ಭಾಗದವರೂ ಬಳಸಲು ನೆರವಾಗಲಿದೆ. ಗಡಿ ಭಾಗದ ಅಭಿವೃದ್ದಿಗೂ ಇದು ಕಾರಣವಾಗಲಿದೆ ಎಂದು ಹೊಸೂರು ಸಮೀಪದಲ್ಲಿಯೇ ಭೂಮಿ ಹುಡುಕಾಟ ನಡೆಸಿದೆ. ಈಗಾಗಲೇ ಮೈಸೂರಿನಲ್ಲಿ ವಿಮಾನ ನಿಲ್ದಾಣವಿದೆ. ರಾಮನಗರ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದರೆ ಹೇಗೆ ಎಂಬ ಬೇಡಿಕೆಯೂ ಇದೆ. ಇದರೊಟ್ಟಿಗೆ ಹುಬ್ಬಳ್ಳಿ ಬಿಟ್ಟರೆ ಮಧ್ಯ ಕರ್ನಾಟಕ ಭಾಗದಲ್ಲಿ ವಿಮಾನ ನಿಲ್ದಾಣವಿಲ್ಲ. ತುಮಕೂರು ಸುತ್ತಮುತ್ತಲಿನ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬಹುದೇ ಎನ್ನುವ ಚರ್ಚೆಗೂ ಗಂಭೀರವಾಗಿ ನಡೆದಿದೆ.
ನಿರೀಕ್ಷಿತ ತಾಣಗಳು
ಪ್ರಾಥಮಿಕ ವರದಿಗಳು ರಾಷ್ಟ್ರೀಯ ಹೆದ್ದಾರಿ 75 ರ ಉದ್ದಕ್ಕೂ ಇರುವ ಪಟ್ಟಣವಾದ ಕುಣಿಗಲ್ ಅನ್ನು ಸಂಭಾವ್ಯ ತಾಣವೆಂದು ಸರ್ಕಾರವು ಸಕ್ರಿಯವಾಗಿ ಮೌಲ್ಯಮಾಪನ ಮಾಡುತ್ತಿದೆ ಎಂದು ಹೇಳಿದೆ.ದಾಬಸ್‌ಪೇಟೆ ಮತ್ತು ಕುಣಿಗಲ್ ನಡುವಿನ ಪ್ರದೇಶಕ್ಕೆ ಸ್ಥಳವನ್ನು ಗುರುತು ಮಾಡಲಾಗಿದೆ. ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ ಅವರು ಕುಣಿಗಲ್ ಸೇರಿದಂತೆ ತುಮಕೂರು ಸಹ ಪರಿಶೀಲನೆಯಲ್ಲಿದೆ ಎಂದು ಖಚಿತಪಡಿಸಿದ್ದಾರೆ. ಈಗಾಗಲೇ ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಖ್ಯವಾಗಿ ಐದು ಸ್ಥಳಗಳನ್ನು ಗುರುತಿಸಲಾಗಿದೆ. ಈ ಪೈಕಿ ಯಾವ ಜಾಗವೂ ಅಂತಿಮವಾಗಿಲ್ಲ.
ಕೇಂದ್ರ ಸರ್ಕಾರಕ್ಕೆ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಳ ಆಯ್ಕೆಯ ಬಗ್ಗೆ ವರದಿಯನ್ನು ಸಲ್ಲಿಸಲಾಗಿದೆ. ಅದರೆ ಸ್ಥಳ ನಿಗದಿಯ ಅನುಮೋದನೆ ಸಿಗುವುದು ಮಾತ್ರ ಬಾಕಿ ಉಳಿದಿದ್ದು, ಶೀಘ್ರದಲ್ಲೇ ಸರ್ಕಾರ ವಿಮಾನ ನಿಲ್ದಾಣದ ಬಗ್ಗೆ ದೊಡ್ಡ ಅಪ್ಡೇಟ್ ಘೋಷಣೆ ಮಾಡಲಿದೆ.


Click it and Unblock the Notifications