ಬೆಂಗಳೂರು ಎರಡನೇ ವಿಮಾನ ನಿಲ್ದಾಣದ(Bengaluru Second Airport) ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ.ನಮ್ಮ ಊರಿಗೆ ವಿಮಾನ ನಿಲ್ದಾಣ ಬರಬೇಕೆಂದು ಇಬ್ಬರು ಸಚಿವರ ನಡುವೆ ಹಗ್ಗಾ-ಜಗ್ಗಾಟ ನಡೆಯುತ್ತಿದೆ.ಬೆಂಗಳೂರಿಗೆ ಸಮೀಪವಿರುವ ತುಮಕೂರಿಗೆ ವಿಮಾನ ನಿಲ್ದಾಣ (Airport)ಬರಬೇಕು ಎಂದು ಗೃಹ ಸಚಿವ ಪರಮೇಶ್ವರ್ ಪಟ್ಟು ಹಿಡಿದ್ದಾರೆ.ಮತ್ತೊಂದು ಕಡೆ ಬೆಂಗಳೂರು ಡಿಸಿಎಂ ಡಿ.ಕೆ ಶಿವಕುಮಾರ್ ಕನಕಪುರಕ್ಕೆ ಬರಬೇಕೆಂಬ ಆಸೆ ಬಿಚ್ಚಿಟ್ಟಿದ್ದಾರೆ. ಇದು ಗೊತ್ತಿರುವ ವಿಷಯ. ಈ ನಡುವೆಯೇ ವಿಮಾನ ನಿಲ್ದಾಣದ ಬಗ್ಗೆ ಡಿ.ಕೆ ಶಿವಕುಮಾರ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ಅದು ಏನು ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

ಹೌದು,ಎರಡನೇ ವಿಮಾನ ನಿಲ್ದಾಣದ ಸ್ಥಳವನ್ನು ತಾಂತ್ರಿಕ ಅವಶ್ಯಕತೆಗಳ ಆಧಾರದ ಮೇಲೆ ಫೈನಲ್ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ವಿಮಾನ ನಿಲ್ದಾಣ ಎಲ್ಲಿ ನಿರ್ಮಾಣವಾಗಬೇಕು ಎಂಬ ಪ್ರಶ್ನೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ, ನೆಲಮಂಗಲ, ತುಮಕೂರು ಅಥವಾ ಇನ್ನಾವುದೇ ಸ್ಥಳದಲ್ಲಿ ನಿರ್ಮಾಣವಾಗಬೇಕೇ ಎಂಬುದನ್ನು ನಾವು ನಿರ್ಧಾರ ಮಮಾಡುವುದಕ್ಕೆ ಸಾಧ್ಯವಿಲ್ಲ ಯಾಕೆಂದರೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ( AAI)ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಕೆಲವು ವರ್ಷಗಳವರೆಗೆ ಯಾವುದೇ ವಿಮಾನ ನಿಲ್ದಾಣ ಬರಬಾರದು ಎಂಬ ಒಪ್ಪಂದ ಇದೆ. ಇದರ ಬಗ್ಗೆ ಚರ್ಚೆ ಮಾಡಿ ತೀರ್ಮಾನವನ್ನು ತಗೆದುಕೊಳ್ಳಲಾಗುತ್ತದೆ ಎಂದು ಮಾಹಿತಿಯನ್ನು ತಿಳಿಸಿದ್ದರು.
ಕೇಂದ್ರ ಅನುಮೋದನೆ ಬೇಕು
ಈಗಾಗಲೇ ಮೂಲಸೌಕರ್ಯ ಸಚಿವ ಎಂಬಿ ಪಾಟೀಲ್ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದ ಸಂಬಂಧಿಸಿದ ಇಲಾಖೆಗಳು ಇದರ ಕಾರ್ಯಸಾಧ್ಯತೆ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಎಂಬಿ ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನೊಂದಿಗೆ ಮಾತನಾಡಿದ್ದಾರೆ. ಚರ್ಚೆ ನಂತರ ನಾವು ಅದನ್ನು ಸಂಪುಟಕ್ಕೆ ನೀಡುತ್ತವೆನಂತರ ಕೇಂದ್ರದಿಂದ ಅನುಮೋದನೆ ಪಡೆದು ಎರಡನೇ ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ನಿರ್ಧರಿಸುತ್ತೇವೆ ಎಂದು ಮಾಹಿತಿಯನ್ನು ತಿಳಿಸಿದ್ದರು.
ಹೊಸ ಏರ್ಪೋರ್ಟ್ ನನ್ನೂರಿಗೇ ಬರಬೇಕು
ಎರಡನೇ ವಿಮಾನ ನಿಲ್ದಾಣವು ನನ್ನ ಹುಟ್ಟೂರಿನ ಬಳಿ ಬರಬೇಕು ಎಂಬ ಆಸೆ ನನಗೆ ಇರಬಹುದು. ಆದರೆ, ಅದನ್ನು ನಾವು ಹಾಗೆ ಮಾಡುವುದಕ್ಕೆ ಬರುವುದಿಲ್ಲ. ಯಾಕೆಂದರೆ ಯಾವುದೇ ವಿಮಾನ ನಿಲ್ದಾಣ ನಿರ್ಮಾಣವಾಗಲು ಹತ್ತಿರದಲ್ಲಿ ಯಾವುದೇ ಬೆಟ್ಟಗಳು ಇರಬಾರದು ಹಾರುವ ವಲಯವಿರಬೇಕು ಸೂಕ್ತವಾದ ವಾತವರಣ ಮುಖ್ಯವಾಗುತ್ತದೆ ಸ್ಥಳ ಆಯ್ಕೆಯಲ್ಲಿ ಕೆಲವು ತಾಂತ್ರಿಕ ಅವಶ್ಯಕತೆಗಳನ್ನು ಒಳಗೊಂಡಿರಬೇಕಾಗುತ್ತದೆ ಅದರ ಆಧಾರದ ಮೇಲೆ ವಿಮಾನ ನಿಲ್ದಾಣವನ್ನು ಮಾಡಬೇಕೋ ಇಲ್ಲವೋ ಎಂಬುವುದ ನಿರ್ಧಾರವಾಗುತ್ತದೆ ಎಂದು ಹೇಳಿದರು.
ಎಲ್ಲಿ ವಿಮಾನ ನಿಲ್ದಾಣ ನಿರ್ಮಾಣ ?
ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕನಕಪುರ ಸಮೀಪದ ಬಿಡದಿ ಮತ್ತು ಹಾರೋಹಳ್ಳಿ ನಡುವಿನ ವಿಸ್ತಾರವಾದ ಪ್ರದೇಶವನ್ನು ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಕೈಗಾರಿಕಾ ಕೇಂದ್ರಗಳಿಗೆ ಹತ್ತಿರವಿರುವ ಸ್ಥಳ ಎಂಬ ಮಾಹಿತಿ ಇದ್ದು, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತವರು ಕ್ಷೇತ್ರವಾದ ಕನಕಪುರದಲ್ಲಿ ವಿಮಾನ ನಿಲ್ದಾಣವಾಗಬೇಕು ಎಂಬ ಬೇಡಿಕೆ ಇದೆ.
ಇನ್ನೊಂದು ಕಡೆ ಕೈಗಾರಿಕಾ ಪ್ರದೇಶ ವಸಂತನರಸಾಪುರದ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಇರುವ ಮೂರು ಸಾವಿರ ಎಕರೆಯ ಭೂಮಿಯನ್ನು ಗುರುತು ಮಾಡಲಾಗಿದೆ. ಇನ್ನೂ ತುಮಕೂರಿನ ಬಳಿ ಇರುವ ಸೀಬಿ ಹತ್ತಿರ ಐದು ಸಾವಿರ ಎಕರೆ ಭೂಮಿಯನ್ನು ನಕ್ಷೆ ಮೂಲಕ ಗುರುತಿಸಲಾಗಿದೆ. ಎರಡು ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿಯೇ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಗೃಹ ಸಚಿವರು ಮನವಿ ಇದೆ.
ಇನ್ನೂ ಎರಡನೇ ವಿಮಾನ ನಿಲ್ದಾಣದ ನಿರ್ಮಾಣದ ಜಾಗಕ್ಕೆ ಸಿಎಂ ಸಿದ್ದರಾಮಯ್ಯನವರು ಅಧಿಕೃತ ಮುದ್ರೆಯನ್ನು ಒತ್ತಬೇಕಿದ್ದು ಇದಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ಕೂಡ ಸಿಗಬೇಕಿದೆ ಎಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂಬುವುದು ಇನ್ನೂ ಅಂತಿಮವಾಗಿಲ್ಲ.


Click it and Unblock the Notifications