ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಸ್ಥಳದ ನಿಗದಿ ಕೊನೆಗೂ ಮೋದಿ ಅಂಗಳ ತಲುಪಿದೆ. ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Second International Airport) ನಿರ್ಮಾಣದ ಸ್ಥಳ ಗುರುತಿಸುವಿಕೆಗೆ ಕೆಲಸವನ್ನು ರಾಜ್ಯ ಸರ್ಕಾರ ಇದೀಗ ಫೈನಲ್ ಮಾಡಿದೆ.
ಹೌದು, ಕಳೆದ ಕೆಲ ತಿಂಗಳಿಂದ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ (Bengaluru Second Airport)ಬಗ್ಗೆ ರಾಜ್ಯದಲ್ಲಿ ಚರ್ಚೆಗಳು ಭಾರೀ ಜೋರಾಗಿನೇ ನಡೆಯುತ್ತಲೇ ಇದೆ.ಈಗಾಗಲೇ ಎರಡನೇ ವಿಮಾನ ನಿಲ್ದಾಣ(Second Airport) ನಿರ್ಮಾಣಕ್ಕೆ ಬೆಂಗಳೂರು ನಗರದ ಸುತ್ತಮುತ್ತಲೂ ಮೊದಲು 7 ಸ್ಥಳಗಳನ್ನು ಗುರುತಿಸಲಾಗಿತ್ತು.ಅದರಲ್ಲಿ ರಾಜ್ಯ ಸರ್ಕಾರ 3 ಸ್ಥಳಗಳು ಮಾತ್ರ ಫೈನಲ್ ಮಾಡಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾಪವನ್ನು ಕಳುಹಿಸಿದೆ.

ಪ್ರಸ್ತಾವನೆಯ ಪ್ರಕಾರ ವಿಮಾನ ನಿಲ್ದಾಣದ ಸ್ಥಳ ಕನಕಪುರ ರಸ್ತೆಯ ಎರಡು ಸ್ಥಳ ಮತ್ತು ನೆಲಮಂಗಲ-ಕುಣಿಗಲ್ ನಡುವಿನ ರಸ್ತೆಯಲ್ಲಿ ಒಂದು ಜಾಗವನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿದೆ. ಕನಕಪುರ ರಸ್ತೆಯ ಒಂದು ಜಾಗ 4,800 ಎಕರೆ ಇದ್ದರೆ ಇನ್ನೊಂದು ಜಾಗ 5,000 ಎಕರೆ ಇದೆ ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿರುವ ಜಾಗ 5,200 ಎಕರೆ ಇದೆ.ಅದರೆ ಎಲ್ಲಿ ವಿಮಾಣ ನಿಲ್ದಾಣ ಮಾಡಬೇಕು ಎಂಬ ಚೆಂಡು ಪ್ರಧಾನಿ ಮೋದಿ ಕೈಯಲ್ಲಿ ಇದೆ.
ಈ ಮೂರು ಸ್ಥಳಗಳು ನಗರ ಕೇಂದ್ರದಿಂದ 50 ಕಿ.ಮೀ ವ್ಯಾಪ್ತಿಯಲ್ಲಿ ಬರಲಿದೆ. ಮತ್ತು ರಾಷ್ಟ್ರೀಯ ಹೆದ್ದಾರಿಗಳು ಹೊಂದಿವೆ ಎಂದು ರಾಜ್ಯ ಸರ್ಕಾರ ಸಚಿವಾಲಯಕ್ಕೆ ತಿಳಿಸಿದೆ. ನಗರದ 50 ಕಿ.ಮೀ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಯಾವುದೇ ವಿಮಾನ ನಿಲ್ದಾಣವು ಆರ್ಥಿಕವಾಗಿ ಲಾಭದಾಯಕವಾಗಿರುತ್ತದೆ ಎಂದು ಸಚಿವಾಲಯವು ಅಭಿಪ್ರಾಯಪಟ್ಟಿದೆ. ಸ್ಥಳಗಳಲ್ಲಿ ಒಂದು ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬಂದರೆ, ಇನ್ನೊಂದು ರಾಮನಗರ ಜಿಲ್ಲೆಯಲ್ಲಿದೆ. ಇವುಗಳಲ್ಲಿ ಹಾರೋಹಳ್ಳಿ ಬಳಿಯ ಒಂದು ಸ್ಥಳವು ಮೆಟ್ರೋದ ಹಸಿರು ಮಾರ್ಗದ ಕೊನೆಯ ನಿಲ್ದಾಣದಿಂದ 10 ಕಿ.ಮೀ ದೂರದಲ್ಲಿ ಇದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಎಂಬಿ ಪಾಟೀಲ್ ಅವರು 2ನೇ ವಿಮಾನ ನಿಲ್ದಾಣದ ಕುರಿತು ಮಾಹಿತಿ ಹಂಚಿಕೊಂಡಿದ್ದು, ಅವರು ಪ್ರಸ್ತಾಪಿಸಿದಂತೆ, ಕೇಂದ್ರಕ್ಕೆ 3 ಸ್ಥಳಗಳನ್ನು ಸ್ಥಳ ಪರಿಶೀಲನೆಗಾಗಿ ಕಳಿಸಲಾಗಿದೆ. ಕನಕಪುರ ರಸ್ತೆ ಹಾರೋಹಳ್ಳಿ ಬಳಿ ಎರಡು ಸ್ಥಳಗಳು ಮತ್ತು ನೆಲಮಂಗಲದ ಕುಣಿಗಲ್ ರಸ್ತೆಯ ಒಂದು ಸ್ಥಳ. ಈ ಸ್ಥಳಗಳನ್ನು ಸೂಕ್ತ ಪರಿಶೀಲನೆ ಮತ್ತು ಅನುಮೋದನೆಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಕೇಂದ್ರದ ವಿಮಾನಯಾನ ಪ್ರಾಧಿಕಾರವು ಸ್ಥಳ ವರದಿಗಾಗಿ ತಂಡವನ್ನುಆಯ್ಕೆಯಾದ ಸ್ಥಳಗಳಿಗೆ ಕಳುಹಿಸುತ್ತಾರೆ ನಂತರ ಈ ತಂಡವು ಸ್ಥಳ ಪರಿಶೀಲನೆ ನಡೆಸಿ ವರದಿ ಮಾಡಿ ಕೇಂದ್ರಕ್ಕೆ ತಲುಪಿಸುತ್ತಾದೆ ನಂತರ ವರದಿಯ ಶಿಫಾರಸ್ಸುಗಳ ಆಧಾರದ ಮೇಲೆ ಅಲ್ಲಿನ ಸ್ಥಳವನ್ನು ಅಂತಿಮಗೊಳಿಸಲಾಗುತ್ತದೆ.
2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಮ್ಮ ಊರಿಗೆ ವಿಮಾನ ನಿಲ್ದಾಣ ಬರಬೇಕೆಂದು ಇಬ್ಬರು ಸಚಿವರ ನಡುವೆ ಹಗ್ಗಾ-ಜಗ್ಗಾಟ ನಡೆಯುತ್ತಿದೆ.ಬೆಂಗಳೂರಿಗೆ ಸಮೀಪವಿರುವ ತುಮಕೂರಿಗೆ ವಿಮಾನ ನಿಲ್ದಾಣ (Airport) ಬರಬೇಕು ಎಂದು ಗೃಹ ಸಚಿವ ಪರಮೇಶ್ವರ್ ಪಟ್ಟು ಹಿಡಿದ್ದಾರೆ ಮತ್ತೊಂದು ಕಡೆ ಕನಕಪುರದಲ್ಲಿ ವಿಮಾನ ನಿಲ್ದಾಣವಾಗಬೇಕು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ ಆದರೆ ಎಲ್ಲಿ ವಿಮಾನ ನಿಲ್ದಾಣವಾಗುತ್ತದೆ ಎಂಬುದು ಮಾತ್ರ ಇದೀಗ ಮೋದಿಯ ಕೈಯಲ್ಲಿ ಇದೆ.


Click it and Unblock the Notifications