ಬೆಂಗಳೂರು, ಆಗಸ್ಟ್ 9: ಬೆಂಗಳೂರು ಜಾಗತಿಕ ನಗರವಾದ ಹಿನ್ನಲೆ ಹಾಗೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರ ಒತ್ತಡ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರಿಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಬಗ್ಗೆ ಒತ್ತಾಯಗಳು ಕೇಳಿಬರುತ್ತಿದ್ದು, ಹೀಗಾಗಿ ಇದರ ಪ್ರಕ್ರಿಯೆಗಳು ಆರಂಭವಾಗಿದೆ. ಆದರೆ ಬೆಂಗಳೂರಿಗೆ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ರಾಜ್ಯ ಸರ್ಕಾರದ ಯೋಜನೆಯು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರ ಕನಸಿನ ಯೋಜನೆ ಸ್ಕೈ ಡೆಕ್ ಗೆ ಮಗ್ಗುಲ ಮುಳ್ಳಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಬಾನೆತ್ತರದಲ್ಲಿ ನಿಂತು ರಾಜಧಾನಿಯ ಸೌಂದರ್ಯ ಸವಿಯಲು ಸಾಧ್ಯವಾಗುವಂತಹ ದೇಶದ ಅತೀ ಎತ್ತರದ ವೀಕ್ಷಣಾ ಗೋಪುರವನ್ನು (ಸ್ಕೈ ಡೆಕ್) ನಿರ್ಮಿಸಬೇಕು ಎನ್ನುವುದು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಹೊಂದಿರುವ ಡಿಕೆಶಿ ಅವರ ಕನಸಾಗಿದ್ದು, ಇದಕ್ಕಾಗಿ ಹಲವು ಸ್ಥಳಗಳನ್ನು ಪರಿಶೀಲಿಸಿದ ಬಳಿಕ ಕನಕಪುರ ರಸ್ತೆಯ ಹೆಮ್ಮಿಗೆಪುರವನ್ನು ಆಯ್ಕೆ ಮಾಡಿದ್ದರು.

ಈ ಹಿಂದೆ, ಸಿವಿ ರಾಮನ್ ನಗರದಲ್ಲಿರುವ ಎನ್‌ಜಿಇಎಫ್‌ನಲ್ಲಿ ಈ ಪ್ರಾಜೆಕ್ಟ್ ನಿರ್ಮಾಣ ಮಾಡಲು ಯೋಜಿಸಲಾಗಿತ್ತು, ಆದರೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಪೈಲಟ್‌ಗಳಿಗೆ ತೊಂದರೆಯಾಗಬಹುದು ಎಂದು ಆಕ್ಷೇಪಣೆ ಎತ್ತಿದ ಹಿನ್ನೆಲೆ ಹಲವು ಸ್ಥಳಗಳ ಪರಿಶೀಲನೆ ಬಳಿಕ ಹೆಮ್ಮಿಗೆಪುರವನ್ನು ಫೈನಲ್ ಮಾಡಲಾಗಿತ್ತು.
ಇದಕ್ಕಾಗಿ ಹೆಮ್ಮಿಗೆಪುರದಲ್ಲಿ 25 ಎಕರೆಯನ್ನು ಸ್ಕೈ ಡೆಕ್‌ಗಾಗಿ ಆಯ್ಕೆ ಮಾಡಿದ್ದು , ಪ್ರಸ್ತುತ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸ್ (ನೈಸ್) ವಶದಲ್ಲಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಕಾರಿಗಳು ಯೋಜಿಸಿ ಅನುಮೋದನೆಗಾಗಿ ಸಂಪುಟಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
ಇನ್ನೊಂದೆಡೆ ಎರಡನೇ ವಿಮಾನ ನಿಲ್ದಾಣಕ್ಕಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ (ಎಎಐ) ಬೇಡಿಕೆ ಸಲ್ಲಿಸುವ ಮುನ್ನ ಸಿಎಂ ಸಿದ್ದರಾಮಯ್ಯ ಅವರು ಎರಡನೇ ವಿಮಾನ ನಿಲ್ದಾಣದ ಪ್ರಸ್ತಾವನೆ ಕುರಿತ ಸಭೆ ನಡೆಸಲಿದ್ದಾರೆ. ಇದಕ್ಕಾಗಿ ಏಳು ಸಂಭಾವ್ಯ ಸ್ಥಳಗಳನ್ನು ಗುರುತಿಸಲಾಗಿದೆ. ಇದೇ ಸಭೆಯಲ್ಲಿ ಸ್ಕೈ ಡೆಕ್ ಭವಿಷ್ಯವೂ ನಿರ್ಧಾರವಾಗಲಿದೆ.
ಡಿಕೆಶಿ ಅವರು ತವರು ಜಿಲ್ಲೆ ರಾಮನಗರದಲ್ಲಿ ಎರಡನೇ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಉತ್ಸುಕರಾಗಿರುವ ಕಾರಣ ಅವರ ಈ ಎರಡು ಅವಳಿ ಪ್ರಸ್ತಾಪಗಳು ಸಂದಿಗ್ಧತೆಯನ್ನು ಸೃಷ್ಟಿಸುವ ಸಾಧ್ಯತೆ ಇದೆ. ವಿಮಾನ ನಿಲ್ದಾಣಕ್ಕಾಗಿ ಗುರುತಿಸಲಾದ ಸ್ಥಳಗಳಲ್ಲಿ, ಬಿಡದಿ, ರಾಮನಗರದಿಂದ 20 ಕಿಮೀ ಮತ್ತು ಕನಕಪುರ ವಿಧಾನಸಭಾ ಕ್ಷೇತ್ರದ ಪಕ್ಕದಲ್ಲಿರುವ ಹಾರೋಹಳ್ಳಿ ಗಮನಾರ್ಹವಾಗಿವೆ. ವಿಮಾನ ನಿಲ್ದಾಣಕ್ಕಾಗಿ ಸ್ಥಳವನ್ನು ಆಯ್ಕೆ ಮಾಡಿದರೆ, ಹೆಮ್ಮಿಗೆಪುರದಲ್ಲಿ ಸ್ಕೈ ಡೆಕ್ ಅನ್ನು ನಿರ್ಮಿಸಲಾಗುವುದಿಲ್ಲ ಏಕೆಂದರೆ ಅದು ಹೊಸ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ವಲಯಕ್ಕೆ ಸೇರುತ್ತದೆ, ಅಲ್ಲಿ ವಾಯು ಸುರಕ್ಷತೆ ಮತ್ತು ಭದ್ರತಾ ಮಾನದಂಡಗಳ ಕಾರಣದಿಂದಾಗಿ ರಚನೆಗಳು 180 ಮೀಟರ್ ಎತ್ತರವನ್ನು ಮೀರಬಾರದು.
ಎರಡನೇ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ಉತ್ತಮ ಸ್ಥಳವೆಂದರೆ ರಾಮನಗರದ ಸಮೀಪದಲ್ಲಿದೆ, ಇದರಿಂದ ಅದು ಮೈಸೂರು ಮತ್ತು ಬೆಂಗಳೂರು ಎರಡಕ್ಕೂ ಸೇವೆ ಸಲ್ಲಿಸುತ್ತದೆ. ಇದು ಕೊಚ್ಚಿ ಮತ್ತು ತ್ರಿಶೂರ್‌ಗೆ ಸೇವೆ ಸಲ್ಲಿಸುವ ಕೊಚ್ಚಿ ವಿಮಾನ ನಿಲ್ದಾಣದಂತೆಯೇ ಇರುತ್ತದೆ. ಆದರೆ ಇದು ಉದ್ದೇಶಿತ ಸ್ಕೈ-ಡೆಕ್ ಸ್ಥಳದ ಮೇಲೆ ಪರಿಣಾಮ ಬೀರಬಹುದು" ಬೆಂಗಳೂರಿನ ನಿವಾಸಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಹಲವು ಸ್ಥಳಗಳ ಪರಿಶೀಲನೆ ಬಳಿಕ ಸ್ಕೈಡೆಕ್ ನಿರ್ಮಾಣಕ್ಕೆ ಅಂತಿಮವಾಗಿ ಕೆಂಗೇರಿ ಬಳಿಯ ಹೆಮ್ಮಿಗೆಪುರ ಅಥವಾ ಕೊಮ್ಮಘಟ್ಟದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ. ಆದರೆ ಹೊಸ ವಿಮಾನ ನಿಲ್ದಾಣಕ್ಕೆ ಬಿಡದಿ ಅಥವಾ ಹಾರೋಹಳ್ಳಿಯನ್ನು ಆಯ್ಕೆ ಮಾಡಿದರೆ ಎರಡೂ ಸ್ಥಳಗಳು ವಾಯು ಸಂಚಾರ ವಲಯಕ್ಕೆ ಸೇರುತ್ತವೆ. ಒಟ್ಟಾರೆ ಪ್ರಸ್ತಾವಿತ ೨ನೇ ವಿಮಾನ ನಿಲ್ದಾಣವು ಡಿಕೆಶಿ ಅವರ ಕನಸಿನ ಸ್ಕೈ ಡೆಕ್ ಯೋಜನೆಯನ್ನು ಹಳಿತಪ್ಪಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications