ಮತ್ತದೇ ಬೇಸರದ ಸುದ್ದಿ! ಬೆಂಗಳೂರು ಎರಡನೇ ವಿಮಾನ ನಿಲ್ದಾಣದ(Bengaluru 2nd Airport) ವರದಿ ವಿಳಂಬ. ಇನ್ನೂ 15 ದಿನ ಬೇಕೆಂದ ವಿಮಾನ ನಿಲ್ದಾಣ ಪ್ರಾಧಿಕಾರ. ಹೌದು, ಬೆಂಗಳೂರಿನಲ್ಲಿ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಕುರಿತು ವರದಿ ಸಲ್ಲಿಸಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಇನ್ನೂ 15 ದಿನಗಳ ಕಾಲ ಬೇಕಾಗುತ್ತದೆ ಎಂದು ಹೇಳಿದೆ ಅಭಿಪ್ರಾಯವನ್ನು ತಿಳಿಸಿದ ನಂತರ ಸ್ಥಳವನ್ನು ಅಂತಿಮಗೊಳಿಸಲಾಗುತ್ತದೆ ಎಂದು ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಮಾಹಿತಿಯನ್ನು ತಿಳಿಸಿದ್ದಾರೆ.
ಈ ಕುರಿರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎರಡನೇ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲು ಕೇಂದ್ರದಿಂದ ಅಧಿಕಾರಿಗಳು ಕಾರ್ಯಸಾರ್ಧಯತಾ ವರದಿಯಲ್ಲಿ ಆಯ್ಕೆಯಾದ ಮೂರು ಸ್ಥಳಗಳಿಗೆ ಬೇಟಿ ನೀಡಿ ಪರಿಶೀಲನೆಯನ್ನು ಕಳೆದು ತಿಂಗಳು ಮಾಡಿ ಕೇಂದ್ರ ವಿಮಾನ ಪ್ರಾಧಿಕಾರಕ್ಕೆ ಸಲ್ಲಿಕೆ ಮಾಡಿದ್ದರೆ. ಆದರೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ತನ್ನ ಅಭಿಪ್ರಾಯವನ್ನು ತಿಳಿಸಲು ಇನ್ನೂ 15 ದಿನಗಳ ಕಾಲವನ್ನು ಕೇಳಿದ್ದಾರೆ ಎಂದು ಹೇಳಿದ್ದಾರೆ.

ಸಾರ್ವಜನಿಕರಿಗೆ, ಉದ್ಯಮಿಗಳಿಗೆ, ಪ್ರವಾಸಿಗರಿಗೆ, ಅನುಕೂಲವಾಗುವಂತಹ ಸ್ಥಳದಲ್ಲೇ ವಿಮಾನ ನಿಲ್ದಾಣ ನಿರ್ಮಿಸಬೇಕು. ಜೊತೆಗೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹೂಡಿಕೆ ಮಾಡುವ ಕಂಪನಿಗೂ ಸಹಾಯವಾಗಬೇಕು ಎಂಬುವುದು ಸರ್ಕಾರದ ಉದ್ದೇಶ. ಬೆಂಗಳೂರಿಗೆ ಸಮೀಪವಿರುವ ಜಾಗವನ್ನು ಗುರುತು ಮಾಡಿದ್ದರೆ ಒಳಿತು ಎಂದು ಸರ್ಕಾರ ಕೂಡ ಹೇಳಿದೆ.
ಬೆಂಗಳೂರಿನಲ್ಲಿ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಮೊದಲಿಗೆ ಐದು ಜಾಗಗಳನ್ನು ಗುರುತಿಸಿ ರಾಜ್ಯ ಸರ್ಕಾಕ್ಕೆ ಕಾರ್ಯಸಾಧ್ಯತೆಗಾಗಿ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಲಾಗಿತ್ತು. ಅವುಗಳಲ್ಲಿ ತುಮಕೂರು, ನೆಲಮಂಗಲ, ಬಿಡದಿ, ಹೇರೋಹಳ್ಳಿ, ಜಿಗಣಿ ಹಾಗೂ ಕುಣಿಗಲ್‌ನ ಯಾವುದಾದರೂ ಒಂದು ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಚರ್ಚೆ ನಡೆದಿತ್ತು. ಅದರಲ್ಲಿ ರಾಜ್ಯ ಸರ್ಕಾರ 3 ಸ್ಥಳಗಳು ಮಾತ್ರ ಫೈನಲ್ ಮಾಡಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾಪವನ್ನು ಕಳುಹಿಸಲಾಗಿತ್ತು.
ನಂತರ ಕನಕಪುರ ರಸ್ತೆ ಹಾರೋಹಳ್ಳಿ ಬಳಿ ಎರಡು ಸ್ಥಳಗಳು ಮತ್ತು ನೆಲಮಂಗಲದ ಕುಣಿಗಲ್ ರಸ್ತೆಯ ಒಂದು ಸ್ಥಳ. ಈ ಸ್ಥಳಗಳನ್ನು ಸೂಕ್ತ ಪರಿಶೀಲನೆ ಮತ್ತು ಅನುಮೋದನೆಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸ್ಥಳ ಯಾವುದು ಅಂದರೆ ಕನಕಪುರ ರಸ್ತೆಯಲ್ಲಿರುವ ಚೂಡಹಳ್ಳಿ ಮತ್ತು ಸೋಮನಹಳ್ಳಿ, ನೆಲಮಂಗಲ-ಕುಣಿಗಲ್ ರಸ್ತೆಯೊಂದಿಗೆ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಮೂರು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ.ಇದೆಲ್ಲಾ ಆದರ ಒಂದು ತಿಂಗಳಿಗೆ ಕೇಂದ್ರದಿಂದ ಮೂಲಸೌಕರ್ಯ ಕಾರ್ಯಸಾಧ್ಯತಾ ವರದಿಗಾಗಿ ಅಧಿಕಾರಿಗಳು ಸಹ ಭೇಟಿ ನೀಡಿ ಪರಿಶೀಲನೆಯನ್ನು ಮಾಡಿದ್ದರು ಆದರೆ ಅಂತಿಮವಾಗಿ ಎಲ್ಲಿ ವಿಮಾನ ನಿಲ್ದಾಣ ನಿರ್ಮಾಣ ವಾಗುತ್ತೆ ಎಂಬುವುದನ್ನು ಬಹಿರಂಗಪಡಿಸಿಲ್ಲ.
ಬೆಂಗಳೂರಿನ ಸುತ್ತಮುತ್ತಲಿನ ಮೂರು ಸ್ಥಳಗಳನ್ನು ಗುರುತಿಸಿ ರಾಜ್ಯ ಸರ್ಕಾರವು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದ ಸುಮಾರು ನಾಲ್ಕು ತಿಂಗಳ ನಂತರ ಇದು ಬಂದಿದೆ. ಈ ಸ್ಥಳಗಳು ಹಾರೋಹಳ್ಳಿ, ಕನಕಪುರ ರಸ್ತೆ ಮತ್ತು ನೆಲಮಂಗಲದ ಕುಣಿಗಲ್ ರಸ್ತೆ ಬಳಿ ಇವೆ.
ಬಲ್ನೋಟಾ ಉಕ್ಕು ಸ್ಥಾವರ
ಕೊಪ್ಪಳ ಜಿಲ್ಲೆಯ ಬಛೋಟಾ ಉಕ್ಕು ಸ್ಥಾವರದ ಪರಿಸರ ಪರಿಣಾಮವನ್ನುಮೌಲ್ಯಮಾಪನ (EIA) ನಿರ್ಣಹಿಸಲು ರಾಜ್ಯ ಸರ್ಕಾರ ಅಧ್ಯಯನವನ್ನು ನಿಯೋಜಿಸಲಿದೆ.ಅಧ್ಯಯನವು ಪರಿಸರ ಕಾಳಜಿಯನ್ನು ಕಂಡುಕೊಂಡರೆ, ಯೋಜನೆಯನ್ನು ಸ್ಥಳಾಂತರಿಸಲಾಗುವುದು. ಇಲ್ಲದಿದ್ದರೆ, ಯೋಜನೆಯ ವಿರುದ್ಧ ಪ್ರತಿಭಟಿಸುವವರನ್ನು ಸರ್ಕಾರ ಮನವೊಲಿಸುತ್ತದೆ ಎಂದು ಎಂ ಬಿ. ಪಾಟೀಲ್ ಹೇಳಿದರು.
ಪರಿಸರ ಗುಂಪುಗಳ ಪ್ರತಿಭಟನೆಗಳು ಮತ್ತು ಕೊಪ್ಪಳ ಜಿಲ್ಲಾಡಳಿತದ ಅಧಿಕೃತ ನಿರ್ದೇಶನ (ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನ) ನಂತರ, ಬಛೋಟಾ ಸ್ಟೀಲ್ & ಪವರ್ ಲಿಮಿಟೆಡ್ (ಬಿಎಸ್ಬಿಎಲ್) ಮಾರ್ಚ್ ಆರಂಭದಲ್ಲಿ ತನ್ನ ಪ್ರಸ್ತಾವಿತ ಉಕ್ಕಿನ ಸ್ಥಾವರದ ಕೆಲಸವನ್ನು ನಿಲ್ಲಿಸಬೇಕಾಯಿತು.
ಕರ್ನಾಟಕ ಮೂಲದ ಬಲ್ನೋಟಾ ಗ್ರೂಪ್ ಫೆಬ್ರವರಿಯಲ್ಲಿ ವಾರ್ಷಿಕ 10.50 ಮಿಲಿಯನ್ ಟನ್ ಉತ್ಪಾದನಾ ಸಾಮರ್ಥ್ಯದ ಈ ಉಕ್ಕಿನ ಸ್ಥಾವರಕ್ಕಾಗಿ 54,000 ಕೋಟಿ ರೂ.ಗಳ ಹೂಡಿಕೆಯನ್ನು ಘೋಷಿಸಿತು. ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ ಕಂಪನಿಯು ರಾಜ್ಯ ಸರ್ಕಾರದೊಂದಿಗೆ ತಿಳುವಳಿಕೆ ಪತ್ರಕ್ಕೆ ಸಹಿಯನ್ನು ಹಾಕಿ ಒಪ್ಪಂದವನ್ನ ಕೂಡ ಮಾಡಿಕೊಂಡಿತ್ತು.
ಮುಂದಿನ ಐದು ವರ್ಷಗಳಲ್ಲಿ 2025-30ರ ಕೈಗಾರಿಕಾ ನೀತಿಯು 7.5 ಲಕ್ಷ ಕೋಟಿ ರೂ. ಹೂಡಿಕೆಗಳನ್ನು ಮಾಡಲು ಮತ್ತು 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು ಸಿದ್ದವಾಗಿದೆ. ರಾಜ್ಯದ ಐದು ವರ್ಷಗಳ ಕ್ಲೀನ್ ಮೊಬಿಲಿಟಿ ನೀತಿಯು ಹಸಿರು ಮೊಬಿಲಿಟಿ ಹೂಡಿಕೆಗಳಲ್ಲಿ 50,000 ಕೋಟಿ ರೂ.ಗಳನ್ನು ತರುವ ನಿರೀಕ್ಷೆಯಿದೆ. ಎಂದು ಎಂ ಬಿ ಪಾಟೇಲ್ ಹೇಳಿದ್ದಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications