ಎರಡನೇ ವಿಮಾನ ನಿಲ್ದಾಣ ನಿರ್ಮಾಣ (Bengaluru Second Airport) ಸ್ಥಳದ ನಿಗದಿ ಕೊನೆಗೂ ಮೋದಿ ಅಂಗಳ ತಲುಪಿದೆ. ವಿಮಾನ ನಿಲ್ದಾಣ ಮಾಡುವ ಸಲುವಾಗಿ ರಾಜ್ಯ ಸರ್ಕಾರ ಎರಡು ಸ್ಥಳಗಳನ್ನು ಗುರುತು ಮಾಡಿ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಕೆ ಮಾಡಿದ್ದಾರೆ.ಇದೀಗ ಈ ಕುರಿತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮಹತ್ವವಾದ ಹೇಳಿಕೆಯೊಂದನ್ನು ತಿಳಿಸಿದ್ದಾರೆ.
ಎರಡನೇ ವಿಮಾನ ನಿಲ್ದಾಣದ ನಿರ್ಮಾಣದ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಣಿಗಲ್ ರಸ್ತೆ, ಕನಕಪುರ ರಸ್ತೆಯಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಾಗ ಗುರುತಿಸಿದ್ದೇವೆ ಕೇಂದ್ರ ವಿಮಾನ ಪ್ರಾಧಿಕಾರದವರು ಸ್ಥಳ ತನಿಖೆ ಮಾಡಿ ಜಾಗ ಸೂಕ್ತವಾಗಿದೆ ಎಂದು ಪ್ರಮಾಣೀಕರಿಸುತ್ತಾರೆ.ತದನಂತರ ಸಾಧ್ಯತೆಗಳ ಬಗ್ಗೆ ರಾಜ್ಯ ಸರ್ಕಾರ ಮುಂದುವರಿಯುತ್ತದೆ ಎಂದರು.

ಅರ್ಹತೆಯ ಆಧಾರದ ಮೇಲೆ ಹೊಸ ಏರ್‌ಪೋರ್ಟ್ ನಿರ್ಮಾಣ
ಎರಡನೇ ವಿಮಾನ ನಿಲ್ದಾಣಕ್ಕೆ ಸ್ಥಳದ ಆಯ್ಕೆಯು ಸಂಪೂರ್ಣವಾಗಿ ಅರ್ಹತೆಯ ಆಧಾರದ ಮೇಲೆ ಹಾಗೂ ನಗರ, ಅದರ ನಿವಾಸಿಗಳು, ಕೈಗಾರಿಕೆಗಳು ಮತ್ತು ಆರ್ಥಿಕತೆಯ ಹಿತಾಸಕ್ತಿಗಳನ್ನು ಪರಿಗಣಿಸಿ ನಡೆಯಲಿದೆ ಎಂದರು.
ವಿಧಾನಸಭಾ ಅಧಿವೇಶನದ ಮುಗಿದ ನಂತರ ಕೇಂದ್ರ ನಾಗರಿಕ ವಿಮಾನಯಾನ ಸಚಿವರನ್ನು ಭೇಟಿ ಮಾಡಿ ಸ್ಥಳ ಅನುಮೋದನೆಗಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ತಂಡವನ್ನು ಕಳುಹಿಸುವ ಬಗ್ಗೆ ಚರ್ಚಿಸುವುದಾಗಿ ಸಚಿವರು ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ತಿಳಿಸಿದರು.ಇದು ಆದ ಬಳಿಕ ಸರ್ಕಾರವು ಸ್ಥಳವನ್ನು ಅಂತಿಮ ಮಾಡಲಾಗುತ್ತದೆ.
ಎರಡನೇ ವಿಮಾನ ನಿಲ್ದಾಣಕ್ಕೆ ನಾವು ಈಗಗಲೇ ಮೂರು ಸ್ಥಳಗಳ ಹೆಸರುಗಳನ್ನು (ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ) ಕಳುಹಿಸಿದ್ದೇವೆ.ವಿಧಾನ ಸಭೆ ಅಧಿವೇಶನದ ನಂತರ ನಾವು ದೆಹಲಿಗೆ ಭೇಟಿ ನೀಡುತ್ತೇವೆ. ಸ್ಥಳ ಅನುಮೋದನೆಗಾಗಿ AAI ಭೇಟಿ ನೀಡಬೇಕಾಗುತ್ತದೆ.ನಂತರ ರಾಜ್ಯ ಸರ್ಕಾರವು ಕಾರ್ಯಸಾಧ್ಯತೆ, ಕಾರ್ಯಸಾಧ್ಯತೆಯ ಆಧಾರದ ಮೇಲೆ ನಿರ್ಧರಿಸಬೇಕಾಗುತ್ತದೆ ಎಂದು ಸಚಿವ ಎಂ.ಬಿ ಪಾಟೀಲ್ ಮಾಹಿತಿಯನ್ನು ತಿಳಿಸಿದ್ದಾರೆ.
ಕೇಂದ್ರಕ್ಕೆ ಕಳುಹಿಸಲಾದ ಎರಡು ಸಂಭಾವ್ಯ ಸ್ಥಳಗಳಲ್ಲಿ ಮೊದನನೇಯ ಸ್ಥಳ ಹಾರೋಹಳ್ಳಿ ಬಳಿಯ ಕನಕಪುರ ರಸ್ತೆಯಲ್ಲಿ ಮತ್ತು ಇನ್ನೊಂದು ನೆಲಮಂಗಲದ ಕುಣಿಗಲ್ ರಸ್ತೆಯಲ್ಲಿ, ಕುಣಿಗಲ್ ರಸ್ತೆ ಸ್ಥಳವು ನಗರ ಕೇಂದ್ರದಿಂದ ಸರಿಸುಮಾರು 38 ಕಿ.ಮೀ ದೂರದಲ್ಲಿದೆ. ಆದರೆ ಕನಕಪುರ ರಸ್ತೆ ಸ್ಥಳವು ಮೆಟ್ರೋ, ನೈಸ್ ರಸ್ತೆ ಮತ್ತು ಮೈಸೂರು ಎಕ್ಸ್‌ಪ್ರೆಸ್‌ವೇಯೊಂದಿಗೆ ಉತ್ತಮ ಸಂಪರ್ಕವನ್ನು ನೀಡುತ್ತದೆ ಎಲ್ಲವೂ ಹತ್ತಿರದಲ್ಲಿದೆ ಎಂದು ಒಲವು ತೋರಿದ್ದಾರೆ. ಸ್ಥಳ ಅಂತಿಮ ಮಾಡಲು ಸಂಪರ್ಕವನ್ನು ಗಮನದಲ್ಲಿಟ್ಟುಕೊಂಡು ಮತ್ತು ಅದು 50 ಕಿ.ಮೀ ಒಳಗೆ ಇರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಸೈಟ್‌ಗಳನ್ನು ಆಯ್ಕೆ ಮಾಡಲಾಗಿದೆ.
ಹೊಸ ವಿಮಾನ ನಿಲ್ದಾಣಕ್ಕೆ ಸ್ಥಳವು ತುಂಬಾ ದೂರದಲ್ಲಿದ್ದರೆ, ಯಾರೂ ಬರುವುದಿಲ್ಲ. ನಾವು ಭೂಮಿ ನೀಡುತ್ತೇವೆ, ಆದರೆ ಹೂಡಿಕೆದಾರರು ಹೂಡಿಕೆ ಮಾಡಲು ಬರಬೇಕು ಮತ್ತು ಅವರು ಹೂಡಿಕೆ ಮಾಡುವ ಮೊದಲು ಕಾರ್ಯಸಾಧ್ಯತೆಯನ್ನು ಪರಿಗಣಿಸುತ್ತಾರೆ. ನಾವು ಎಲ್ಲೋ ಭೂಮಿ ನೀಡಿ ವಿಮಾನ ನಿಲ್ದಾಣವನ್ನು ನಿರ್ಮಿಸಲು ಹೇಳಿದರೆ ಯಾರೂ ಹೂಡಿಕೆ ಮಾಡಲು ಬರುವುದಿಲ್ಲ. ಭೂಮಿ ನೀಡುವುದು ನಮ್ಮ ಜವಾಬ್ದಾರಿ, ಉಳಿದವು ಪಿಪಿಪಿ ಮಾದರಿಯಲ್ಲಿರುತ್ತದೆ ಎಂದು ಅವರು ಹೇಳಿದರು.
ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ
ನಾವು ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ನಿರ್ಧರಿಸುವಾಗ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಸ್ಥಳ ನಿರ್ಧಾರವು ಕೇವಲ ಅರ್ಹತೆಯ ಆಧಾರದ ಮೇಲೆ ನಡೆಯಲಿದೆ ಎಂದು ಹೇಳಿದರು.
ಬೆಂಗಳೂರಿನ ಜನರು, ಕೈಗಾರಿಕೆಗಳು ಮತ್ತು ಆರ್ಥಿಕತೆಯ ಹಿತಾಸಕ್ತಿಯನ್ನು ಪರಿಗಣಿಸಿ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂಬುದು ನಮಗೆ ಸ್ಪಷ್ಟವಾಗಿದೆ. ಇಲ್ಲಿಯವರೆಗೆ ನಾನು ಯಾವುದೇ ಒತ್ತಡಕ್ಕೆ ಮಣಿದಿಲ್ಲ ಮತ್ತು ಭವಿಷ್ಯದಲ್ಲಿಯೂ ಸಹ ಬಗ್ಗುವುದಿಲ್ಲ ಎಂದು ಅವರು ಹೇಳಿದರು.
ವಿಧಾನ ಸಭೆಯ ಅಧಿವೇಶನದ ನಂತರ ಇಲಾಖೆಯ ಕಾರ್ಯದರ್ಶಿ ಕೇಂದ್ರ ನಾಗರಿಕ ವಿಮಾನಯಾನ ಸಚಿವರನ್ನು ಭೇಟಿ ಮಾಡಲಿದ್ದಾರೆ. ನಾವು ಕಾರ್ಯಸಾಧ್ಯತಾ ವರದಿ, ವಿವರವಾದ ಯೋಜನಾ ವರದಿಯನ್ನು ಪಡೆದು, ಅಧ್ಯಯನ ವಿಶ್ಲೇಷಣೆ ನಡೆಸಿ, ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಎಂ.ಬಿ ಪಾಟೇಲ್ ಹೇಳಿದ್ಧಾರೆ.
ವಿಮಾನ ನಿಲ್ದಾಣದ ಪರಿಶೀಲನೆಗಳು ಶೀಘ್ರದಲ್ಲೇ ನಡೆಯುವಂತೆ ನೋಡಿಕೊಳ್ಳಲು ರಾಜ್ಯದ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ ಸೋಮಣ್ಣ, ಎಚ್‌ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡುವುದಾಗಿ ಅವರು ಹೇಳಿದರು. ಸ್ಥಳ ಅನುಮೋದನೆ ದೊರೆತ ನಂತರ, ಯಾವ ಸ್ಥಳದಲ್ಲಿ ನಿರ್ಮಾಣ ಕಾರ್ಯ ನಡೆಯಲಿದೆ ಎಂಬುದನ್ನು ನಾವು ನಿರ್ಧರಿಸಬಹುದು ಎಂದು ಅವರು ಸಹ ಹೇಳಿದ್ದಾರೆ.
ಈ ಹಿಂದೆ ವಿಮಾನ ನಿಲ್ದಾಣದ ನಿರ್ಮಾಣದ ಕುರಿತು ಸಚಿವ ಎಂ.ಎಂ.ಬಿ ಪಾಟೇಲ್ ದೇವನಹಳ್ಳಿಯಲ್ಲಿ ಇರುವ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಿಶೇಷ ಷರತ್ತು 2033 ರ ವೇಳೆಗೆ ಕೊನೆಗೊಳ್ಳುತ್ತದೆ ಮತ್ತು 2030 ರ ವೇಳೆಗೆ ವಿಮಾನ ನಿಲ್ದಾಣದ ನೂರು ಮಿಲಿಯನ್ ಪ್ರಯಾಣಿಕರ ಸಾಮರ್ಥ್ಯವನ್ನು ಸಾಧಿಸಲಾಗುವುದು ಆದ್ದರಿಂದ ಸರ್ಕಾರವು ಆರಂಭಿಕ ಸಿದ್ಧತೆಗಳನ್ನು ಪ್ರಾರಂಭಿಸಿದೆ. "ನಾವು ಈಗ ಪ್ರಾರಂಭಿಸಿದರೆ, ಅದು ಏಳರಿಂದ ಎಂಟು ವರ್ಷಗಳನ್ನು ತೆಗೆದುಕೊಳ್ಳುತ್ತದೆ.ಎಂದು ಹೇಳಿದ್ದಾರೆ.
2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಮ್ಮ ಊರಿಗೆ ವಿಮಾನ ನಿಲ್ದಾಣ ಬರಬೇಕೆಂದು ಇಬ್ಬರು ಸಚಿವರ ನಡುವೆ ಹಗ್ಗಾ-ಜಗ್ಗಾಟ ನಡೆಯುತ್ತಿದೆ.ಬೆಂಗಳೂರಿಗೆ ಸಮೀಪವಿರುವ ತುಮಕೂರಿಗೆ ವಿಮಾನ ನಿಲ್ದಾಣ (Airport) ಬರಬೇಕು ಎಂದು ಗೃಹ ಸಚಿವ ಪರಮೇಶ್ವರ್ ಪಟ್ಟು ಹಿಡಿದ್ದಾರೆ ಮತ್ತೊಂದು ಕಡೆ ಕನಕಪುರದಲ್ಲಿ ವಿಮಾನ ನಿಲ್ದಾಣವಾಗಬೇಕು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ ಆದರೆ ಎಲ್ಲಿ ವಿಮಾನ ನಿಲ್ದಾಣವಾಗುತ್ತದೆ ಎಂಬುದು ಮಾತ್ರ ಇದೀಗ ಮೋದಿಯ ಕೈಯಲ್ಲಿ ಇದ್ದು,ಎಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತದೆ ಎಂಬುವುದನ್ನು ಕಾದುನೋಡಬೇಕಿದೆ.


Click it and Unblock the Notifications