Shaadi scam: ಮನೆ ಬಾಗಿಲು ಬಡಿದು ಹದಿಹರೆಯದ ಪುತ್ರಿಯ ತೋರಿಸಿ ಮಹಿಳೆ ಹೇಳುವುದೇನು?

ಬೆಂಗಳೂರು, ಸೆಪ್ಟೆಂಬರ್‌ 4: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನಕ್ಕೊಂದು ಸೈಬರ್ ವಂಚನೆ ಪ್ರಕರಣಗಳು ವರದಿಯಾಗುತ್ತಿವೆ. ಹಣ ಎಗರಿಸಲು ವಂಚಕರು ನಾನಾ ರೀತಿಯ ದಾರಿ ಹಿಡಿಯುತ್ತಿರುತ್ತಾರೆ. ಮನೆ ಬಾಗಿಲು ಬಡಿದು ಅನಾಥ ಅಶ್ರಮ ನಡೆಸುವ ಸೋಗು ಹಾಕಿಕೊಂಡು, ಅನಾರೋಗ್ಯದ ನೆಪದಲ್ಲಿ ಅಥವಾ ಇನ್ಯಾವುದೇ ಟ್ರಸ್ಟ್ ಹೆಸರಿನಲ್ಲಿ ಸಹಾಯ ಯಾಚಿಸುವ ಅನೇಕ ಜನರನ್ನು ನೋಡಿದ್ದೇವೆ. ಇದಕ್ಕೆ ಹೊಸ ಸೇರ್ಪಡೆ ಮದುವೆಗಾಗಿ ಹಣ ಕೇಳುತ್ತಾ ಬಾಗಿಲು ಬಡಿಯುವುದು.!

ಹೌದು ಬೆಂಗಳೂರಿನ ನಿವಾಸಿಯೊಬ್ಬರು ತಮ್ಮ ಅನುಭವವನ್ನು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹಂಚಿಕೊಂಡಾಗ ಈ ಘಟನೆ ಬೆಳಕಿಗೆ ಬಂದಿದೆ. ವಂಚಕರು ಬಾಗಿಲು ಬಡಿಯುವುದು ಮದುವೆಗೆ ತುರ್ತು ಹಣಕಾಸಿನ ನೆರವು ಕೇಳುವುದನ್ನು ಹೊಸ ವಂಚನೆ ಇರಬಹುದು ಎಂದು ಎಚ್ಚರಿಸಿದ್ದಾರೆ.

ಶಾದಿ ಸ್ಕ್ಯಾಮ್‌: ಬೆಂಗಳೂರಿನಲ್ಲಿ ಏನಿದು ಹೊಸ ವಂಚನೆ

ಬೆಂಗಳೂರಿನಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ವಿಚಿತ್ರವಾದ ಮತ್ತು ಗೊಂದಲದ ಅನುಭವವನ್ನು ಹಂಚಿಕೊಂಡಿದ್ದಾರೆ. Reddit ಬಳಕೆದಾರರು "Kvak95" ಎಂಬ ಎಂಬ ಖಾತೆಯಿಂದ ವಾರಾಂತ್ಯದಲ್ಲಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವಾಗ ಸಂಭವಿಸಿದ ಘಟನೆಯ ಬಗ್ಗೆ ಪೋಸ್ಟ್ ಮಾಡಿದ್ದಾರೆ.

ನಾನು ಆಗಷ್ಟೇ ಚಿಕನ್ ಬಿರಿಯಾನಿ ತಿಂದು ಮುಗಿಸಿದ್ದು, ಶನಿವಾರ ಆಗಿದ್ದ ಕಾರಣ ನಿದ್ರಿಸುವ ಯೋಜನೆ ಹಾಕಿದ್ದೆ. ಇನ್ನೇನು ಮಂಪರು ಕವಿದಿತ್ತು. ನಿರಂತರ ಡೋರ್‌ಬೆಲ್ ರಿಂಗಿಂಗ್‌ನಿಂದ ನನ್ನ ನಿದ್ರೆಗೆ ಅಡ್ಡಿಯಾಯಿತು. ಕೊನೆಗೆ ಯಾಕೋ ಗಾಬರಿಯಾಗಿ ಬಾಗಿಲನ್ನು ತೆರೆದಾಗ ಅಲ್ಲಿ 40ರ ಆಸುಪಾಸಿನ ಮಹಿಳೆಯನ್ನು ಕಂಡೆ. ಆಕೆ ಕನ್ನಡದಲ್ಲಿ ಮಾತು ಆರಂಭಿಸಿದಳು. ಕನ್ನಡವನ್ನು ತಕ್ಕಮಟ್ಟಿಗೆ ಅರ್ಥಮಾಡಿಕೊಳ್ಳಬಲ್ಲವನಾಗಿದ್ದರೂ, ನಾನಿನ್ನು ಅರೆನಿದ್ರಾವಸ್ಥೆಯಲ್ಲಿದ್ದ ಕಾರಣ ಆಕೆ ಹೇಳುವುದನ್ನು ಅರ್ಥಮಾಡಿಕೊಳ್ಳಲು ಹೆಣಗಾಡುತ್ತಿದ್ದೆ"

"ಮಹಿಳೆ ತನ್ನ ಮಗಳ ವಿವಾಹ ಮಾಡಿಸಬೇಕಿದೆ. ಸಮೀಪದ ದೇವಸ್ಥಾನದಲ್ಲಿ ಮದುವೆ ಮಾಡಿಸಲಿದ್ದು, ಮದುವೆ ವೆಚ್ಚ ಭರಿಸಲು ಹಣದ ಅಗತ್ಯವಿದೆ ಎಂಬ ವಿಚಾರವಾಗಿ ಮಾತನಾಡಿದ್ದಾಳೆ. ಆದರೆ ಆಕೆ ಮಾತನಾಡುತ್ತಿದ್ದಾಗ ಒಂದು ಪದ ಗಮನಸೆಳೆಯಿತು. ಅದೇ ಮದುವೆ.. ನಾನು ಗಾಬರಿಯಿಂದ "ಮದುವೆಯಾ??!!" ಎಂದು ಸಂಪೂರ್ಣವಾಗಿ ಎಚ್ಚರಗೊಳ್ಳಲು ಮತ್ತು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ" ಎಂದು ರೆಡ್ಡಿಟ್ ಬಳಕೆದಾರರು ವಿವರಿಸಿದ್ದಾರೆ.

ಬಳಕೆದಾರರು, ಮುಂದೆ ತನಗೆ ಕನ್ನಡ ಅರ್ಥವಾಗುವುದಿಲ್ಲ ಎಂದು ಮಹಿಳೆಗೆ ಹೇಳಿದ್ದಾರೆ. ಆಗ ಮಹಿಳೆ ಮರು ಪ್ರಶ್ನಿಸಿ ತೆಲುಗು ಅಥವಾ ಹಿಂದಿ ಬರುತ್ತದೆಯೇ ಎಂದು ಕೇಳಿದ್ದಾಳೆ. ತೆಲುಗು ಅರ್ಥವಾಗುತ್ತದೆ ಎಂದಾಗ ತೆಲುಗಿನಲ್ಲಿ ಮಾತನಾಡುತ್ತಾ ನಂತರ 15 ವರ್ಷದ ತನ್ನೊಂದಿಗಿದ್ದ ಬಾಲಕಿಯನ್ನು ತೋರಿಸುತ್ತಾ ತನ್ನ ಮಗಳಿಗೆ ಹತ್ತಿರದ ದೇವಸ್ಥಾನದಲ್ಲಿ ಮದುವೆ ಮಾಡಲು ನಿರ್ಧರಿಸಲಾಗಿದೆ. ಆದರೆ ಕುಟುಂಬ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ, ಇದಕ್ಕಾಗಿ 15,000 ರೂಪಾಯಿ ಬೇಕಾಗಿದ್ದು ತಾವು ಸಹಾಯ ಮಾಡಬೇಕೆಂದು ಮಹಿಳೆ ಕೇಳಿಕೊಂಡಿದ್ದಾರೆ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಮಹಿಳೆ ಹಣಕ್ಕಾಗಿ ಈ ನಾಟಕ ಮಾಡುತ್ತಿದ್ದಾರೆ ಎಂದು ನಾನು ಅರ್ಥಮಾಡಿಕೊಂಡು ಯಾವುದೇ ಸಹಾಯಕ್ಕೆ ನಿರಾಕರಿಸಿ ಸ್ವಲ್ಪ ಒರಟಾಗಿದೆ ಬಾಗಿಲು ಮುಚ್ಚಿದೆ. ಇದು ಹಣ ಪೀಕಲು ಹೊಸ ತಂತ್ರವೇ ಎಂದು ಅವರು ಪ್ರಶ್ನಿಸಿದ್ದಾರೆ.

ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾ ಒಂದು ವೇಳೆ ಇದೊಂದು ವಂಚನೆಯ ತಂತ್ರವಾಗಿರದಿದ್ದರೇ ಹುಡುಗಿ (ವಧು) ಅಪ್ರಾಪ್ತ ವಯಸ್ಕಳಾಗಿದ್ದರೆ ಹೇಗೆ ಪ್ರತಿಕ್ರಿಯಿಸಬೇಕು? ಪೊಲೀಸ್ ದೂರು ಸಹಾಯ ಮಾಡುತ್ತದೆಯೇ? " ಎಂಬ ಪ್ರಶ್ನೆಗಳನ್ನು ಹಾಕಿದ್ದಾರೆ.

ಇತರ ಹಲವಾರು ರೆಡ್ಡಿಟ್ ಬಳಕೆದಾರರು ಸ್ಥಳೀಯ ವಂಚಕರು ಜನರನ್ನು ಮೋಸಗೊಳಿಸಲು ಬಳಸುವ ತಂತ್ರವಾಗಿರಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬ ರೆಡ್ಡಿಟ್ ಬಳಕೆದಾರರು ಹೇಳಿದರು, "ಹೌದು, ಇದು ಒಂದು ರೀತಿಯ ಮೋಸ. ಮೊದಲ ಬಾರಿಗೆ ಈ ರೀತಿ ಘಟನೆ ನಾನು ಎದುರಿಸಿದಾದ ಸಣ್ಣ ಮೊತ್ತವು ನನ್ನ ಮೇಲೆ ಪರಿಣಾಮ ಬೀರದು ಎಂದುಕೊಂಡೆ,. ಆದರೆ ಹೀಗೆ ಜನರಿಂದ ಹಣ ಪಡೆಯುತ್ತಾ ಹೋದಂತೆ ಸುಲಿಗೆ ಮಾಡುವುದು ಅವರಿಗೆ ಸಲೀಸಾಗುತ್ತಾ ಹೋಗುತ್ತದೆ. ನಂತರ ವಿಭಿನ್ನ ಜನರು ಕನಿಷ್ಠ 3-4 ಬಾರಿ ಬಂದಿದ್ದಾರೆ. ಆದರೆ ನಾನು ಒಮ್ಮೆ ಕೊಟ್ಟರೆ ಇನ್ನೂ ಬಹಳಷ್ಟು ಜನ ಬರುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಬರೆದುಕೊಂಡಿದ್ದಾರೆ. ಅನೇಕ ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ವಿವಾಹ ವಂಚನೆ ಒಪ್ಪಿಕೊಂಡಿದ್ದು, ಇದೇ ರೀತಿಯ ಅನುಭವಗಳನ್ನು ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+