ಬೆಂಗಳೂರಿನ ನಮ್ಮ ಮೆಟ್ರೋ ಹಳದಿ ಲೈನ್‌ಗಾಗಿ ನಿರ್ಮಾಣ ಮಾಡ್ತಿರೋ, ಸಿಲ್ಕ್ ಬೋರ್ಡ್ ಡಬಲ್ ಡೆಕ್ಕರ್ ಫ್ಲೈಓವರ್...ಇದರ ಬಹುತೇಕ ವಿಭಾಗಗಳು ವಾಹನ ಸಂಚಾರಕ್ಕೆ ತೆರೆಯಲ್ಪಟ್ಟಿವೆ. ಆದ್ರೆ ಒಂದೇ ಒಂದು ಬೇಸರ ಏನಂದ್ರೆ ಈವರೆಗೂ ಪ್ರಮುಖ ರ್‍ಯಾಂಪ್‌ಗಳು ಸಂಪೂರ್ಣವಾಗಿಲ್ಲ. ಇದೇ ಕಾರಣದಿಂದ ಫ್ಲೈಓವರ್‍ನ ಸಂಪೂರ್ಣ ಲಾಭ ಯಾರಿಗೂ ಅನುಭವಿಸಲು ಸಿಗಲಿಲ್ಲ. ಇದೇ ನಿರಾಸೆಯ ಭಾರ ಹೊತ್ತಿದ್ದ ಬೆಂಗಳೂರಿನ ಜನತೆಗೆ ಇದೀಗ ಗುಡ್‌ನ್ಯೂಸ್ ಸಿಕ್ಕಿದೆ.

ಹೌದು, ಆ ಗುಡ್‌ನ್ಯೂಸ್ ಏನೆಂದರೆ ಫೆಬ್ರವರಿ ಅಂತ್ಯದೊಳಗೆ ಈ ಫ್ಲೈಓವರ್ ಸಂಪೂರ್ಣವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಇನ್ನು ಈ ಈ ಡಬಲ್ ಡೆಕ್ಕರ್ ಫ್ಲೈಓವರ್ 5.12 ಕಿ.ಮೀ ಉದ್ದ ಮತ್ತು ₹449 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಇದರ ಒಂದು ಅನುಕೂಲ ಏನಂದ್ರೆ ಇದರ ಮೂಲಕ ನಗರದಲ್ಲಿ ಹೆಚ್ಚು ಟ್ರಾಫಿಕ್ ಬಿಸಿ ಇರುವ, ಸಿಲ್ಕ್ ಬೋರ್ಡ್ ಜಂಕ್ಷನ್ ಸುತ್ತಲಿನ ಸಂಚಾರ ಸುಗಮಗೊಳಿಸೋದಾಗಿತ್ತು. ಹೀಗಾಗಿಯೇ ಜುಲೈ 2024 ರಲ್ಲಿ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ವರೆಗೆ ಪ್ರಮುಖ ಕಾರಿಡಾರ್ ಉದ್ಘಾಟಿಸಲಾಗಿತ್ತು.
ಆದ್ರೂ ಎಚ್ಎಸ್ಆರ್ ಲೇಔಟ್ ಮತ್ತು ಬಿಟಿಎಂ ಲೇಔಟ್ಗೆ ಸಂಪರ್ಕ ನೀಡುವ ಪ್ರಮುಖ ರ್ಯಾಂಪ್ಗಳು ಇನ್ನೂ ನಿರ್ಮಾಣ ಹಂತದಲ್ಲಿವೆ. ಸದ್ಯಕ್ಕೆ ರ್‍ಯಾಂಪ್‌ಗಳು A, B ಮತ್ತು C ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲವೂ ಒಂದೊಂದು ಮೆಟ್ರೋ ನಿಲ್ದಾಣದಿಂದ, ಮತ್ತೊಂದು ರಸ್ತೆಗೆ ಸಂಪರ್ಕ ಕಲ್ಪಿಸುತ್ತವೆ. ಅವು ಯಾವುವು, ಯಾವ ಮಾರ್ಗದ ಮೂಲಕ ಸಂಪರ್ಕ ಎಂದು ತಿಳಿಯಿರಿ.
ಮೊದಲನೆಯದಾಗಿ ರ್‍ಯಾಂಪ್ A ರಾಗಿಗುಡ್ಡ ಮೆಟ್ರೋ ನಿಲ್ದಾಣವನ್ನು ಹೊಸೂರು ರಸ್ತೆಗೂ ಸಂಪರ್ಕಿಸುತ್ತದೆ. ರ್‍ಯಾಂಪ್ B, ಎಚ್ಎಸ್ಆರ್ ಲೇಔಟ್ ಕಡೆಗೆ ಸಂಚಾರ ವಹಿಸುತ್ತದೆ. ಹಾಗೂ ರ್‍ಯಾಂಪ್ C, ಬಿಟಿಎಂ ಲೇಔಟ್ ಮತ್ತು ಎಚ್ಎಸ್ಆರ್ ಲೇಔಟ್ ಸಂಪರ್ಕ ಕಲ್ಪಿಸುತ್ತದೆ. ಆದ್ರೆ D ಮತ್ತು E ರ್‍ಯಾಂಪ್‌ಗಳು ಮಾತ್ರ ಪರಿಪೂರ್ಣತೆಯನ್ನ ನೋಡಲಾಗಲಿಲ್ಲ. ಇವು ಪೂರ್ಣಗೊಂಡರೆ ಮಾತ್ರ, ಎಚ್ಎಸ್ಆರ್ ಲೇಔಟ್ದಿಂದ ರಾಗಿಗುಡ್ಡ ಮತ್ತು ಬಿಟಿಎಂ ಲೇಔಟ್ ಕಡೆ ನೇರ ಸಂಪರ್ಕ ಸಾಧ್ಯವಾಗುತ್ತದೆ.
ಅಂದಹಾಗೆ ಈ ವಿಳಂಬಕ್ಕೆ ಕಾರಣ ಏನು ಎಂದು ಕೇಳಬಹುದು. ಉದಕ್ಕೆ ಕಾರಣ ಏನು ಅಂದ್ರೆ, ರಸ್ತೆಯ ಮೇಲೆ 42 ಮೀಟರ್ ಉದ್ದದ ಉಕ್ಕಿನ ಸೇತುವೆಯ ಅಳವಡಿಕೆ, ಇದು ಮೆಟ್ರೋ ವಯಡಕ್ಟ್ ಜೊತೆಗೆ ಸಂಕೀರ್ಣ ಎಂಜಿನಿಯರಿಂಗ್ ಅನ್ನು ಅಗತ್ಯವಾಯಿತು. ಬಿಎಂಆರ್ಸಿಎಲ್ ಅಧಿಕಾರಿಗಳು ಫೆಬ್ರವರಿ ಅಂತ್ಯದೊಳಗೆ ಉಳಿದ ರ್ಯಾಂಪ್ಗಳನ್ನು ಕಾರ್ಯನಿರ್ವಹಣೆಗೆ ತರುವ ಗುರಿ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಫ್ಲೈಓವರ್ ಪೂರ್ಣಗೊಂಡ ನಂತರ, ನಗರದಲ್ಲಿ ಸಂಚಾರ ಸುಗಮಗೊಳ್ಳಲಿದೆ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ಸುತ್ತಲಿನ ಭಾರೀ ದಟ್ಟಣೆ ಕಡಿಮೆಯಾಗಲಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications