ಬೆಂಗಳೂರಿನಲ್ಲಿ ಭಾರತದಲ್ಲೇ ಎತ್ತರದ ಆಕಾಶಗೋಪುರ (ಸ್ಕೈಡೆಕ್) ನಿರ್ಮಾಣ ಮಾಡುವುದಕ್ಕೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಮುಂದಾಗಿತ್ತು ಇದಕ್ಕೆ ಈಗಲೇ ಸಚಿವ ಸಂಪುಟ ಸಭೆಯಲ್ಲಿಅನುಮೋದನೆ ಕೂಡ ಸಿಕ್ಕಿತು. ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ದಕ್ಷಿಣ ಏಷ್ಯಾದ ಅತಿ ಎತ್ತರದ ಸ್ಕೈಡೆಕ್ ಬೆಂಗಳೂರಿನಲ್ಲಿ ನಿರ್ಮಾಣವಾಲಿತ್ತು.ಆದರೆ 250 ಮೀಟರ್ ಎತ್ತರದ ಸ್ಕೈಡೆಕ್ ಮತ್ತು ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣವು ಪರಸ್ಪರ ಹತ್ತಿರದಲ್ಲಿರಲು ಸಾಧ್ಯವಾಗದ ಕಾರಣದಿಂದ ನಗರದ ನಾಗರಿಕ ಸಂಸ್ಥೆಯು ಎರಡನೇ ವಿಮಾನ ನಿಲ್ದಾಣದ ಸ್ಥಳವನ್ನು ಅಂತಿಮಗೊಳಿಸುವವರೆಗೆ ಸ್ಕೈಡೆಕ್ ಯೋಜನೆಯ ಪ್ರಸ್ತಾವನೆ ಮುಂದೂಡಿಕೆ ಮಾಡಿದೆ.
ಹೌದು, ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ಭೂಮಿ ಸ್ಥಳವನ್ನು ಅಂತಿಮಗೊಳಿಸುವತ್ತ ರಾಜ್ಯ ಸರ್ಕಾರ ಗಮನಹರಿಸುತ್ತಿರುವುದರಿಂದ ಈ ನಿರ್ಧಾರ ಹೊರಗೆ ಬಂದಿದೆ. ಸ್ಕೈಡೆಕ್ ಅನ್ನು ಈಗಾಗಲೇ ಯೋಜನೆಯನ್ನಾಗಿ ಪರಿಗಣಿಸಲಾಗಿರುವ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಸ್ಕೈಡೆಕ್ ಗಿಂತ ವಿಮಾನ ನಿಲ್ದಾಣ ಯೋಜನೆಗೆ ಆದ್ಯತೆ ನೀಡಿ ನಿರ್ದೇಶನಗಳನ್ನು ನೀಡಿದ್ದಾರೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೂಲಗಳು ದೃಢಪಡಿಸಿವೆ.

ಎರಡನೇ ವಿಮಾನ ನಿಲ್ದಾಣದ ಸ್ಥಳವನ್ನು ಅಂತಿಮಗೊಳಿಸಿದ ನಂತರವೇ ಸ್ಕೈಡೆಕ್ ನಿರ್ಮಿಸಲು ಸೂಕ್ತವಾದ ಭೂಮಿಯನ್ನು ಗುರುತಿಸುವ ಪ್ರಯತ್ನಗಳನ್ನು ಬಿಬಿಎಂಪಿ ಪುನರಾರಂಭಿಸುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿಯನ್ನು ತಿಳಿಸಿದ್ದಾರೆ.
ಬಿಬಿಎಂಪಿಯು ಹೊಸ ಸರ್ಕಾರಿ ವಿದ್ಯುತ್ ಕಾರ್ಖಾನೆ (NGEF) ಆವರಣದಲ್ಲಿ ಅಥವಾ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಆವರಣದಲ್ಲಿ ಸ್ಕೈಡೆಕ್ ನಿರ್ಮಿಸಲು ಯೋಜನೆಯನ್ನು ರೂಪಿಸಿದೆ. ಭದ್ರತಾ ಕಾಳಜಿಯಿಂದಾಗಿ ಎರಡೂ ಸ್ಥಳಗಳನ್ನು ಹೊರಗಿಡಲಾಯಿತು, ಏಕೆಂದರೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಮತ್ತು ಭಾರತೀಯ ವಾಯುಪಡೆ (IAF) ಈ ಪ್ರದೇಶಗಳಲ್ಲಿ ಎತ್ತರದ ಕಟ್ಟಡವನ್ನು ಅನುಮೋದಿಸುವ ಸಾಧ್ಯತೆಗಳು ಇರುವುದಿಲ್ಲ.
ವಿಮಾನ ನಿಲ್ದಾಣ ಮತ್ತು ರಕ್ಷಣಾ ಅಧಿಕಾರಿಗಳ ಆಕ್ಷೇಪಣೆಗಳಿಂದಾಗಿ ನಗರದಲ್ಲಿನ ಎಲ್ಲಾ ಪ್ರಸ್ತಾವನೆ ಸ್ಥಳಗಳನ್ನು ಕೈ ಬಿಡಲಾಗಿತು. ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜುಲೈ 2024 ರಲ್ಲಿ ಹೆಮ್ಮಿಗೆಪುರದಲ್ಲಿ ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (NICE) ಒಡೆತನದ 25 ಎಕರೆ ಜಮೀನಿನಲ್ಲಿ ನಿರ್ಮಾಣ ಮಾಡಲು ತಯಾರಿ ನಡೆಸಲು ಪ್ಲಾನ್ ಮಾಡುತ್ತಿತ್ತು. ಇನ್ನೂ ನವೆಂಬರ್ 2024 ರಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನವನ್ನು ಸಹ ಮಾಡಿತು. ಹಾಗೂ NICE ಜೊತೆ ವಿನಿಮಯದಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಯೋಜನೆ ಮಾಡಿತು.
ಕಂಪನಿಯು ಅಂತಹ ವಿನಿಮಯದಲ್ಲಿ ಆಸಕ್ತಿ ಹೊಂದಿರಲಿಲ್ಲ ನಗರಕ್ಕೆ ಎರಡನೇ ವಿಮಾನ ನಿಲ್ದಾಣಕ್ಕಾಗಿ ಸೂಕ್ತವಾದ ಸ್ಥಳ ಮತ್ತು ಭೂಮಿಯನ್ನು ಗುರುತಿಸುವ ಕೆಲಸ ಆರಂಭ ಮಾಡಿದೆ. ತುಮಕೂರು ರಸ್ತೆಯಲ್ಲಿ ಎರಡನೇ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲು ಗೃಹ ಸಚಿವ ಜಿ. ಪರಮೇಶ್ವರ್ ಪಟ್ಟು ಹಿಡಿದ್ದಾರೆ. ಮತ್ತೊಂದು ಕಡೆ ಡಿ.ಕೆ ಶಿವಕುಮಾರ್ ಬಿಡದಿ ಅಥವಾ ಕನಕಪುರದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಬೇಕು ಸರ್ಕಾರಕ್ಕೆ ಬೇಡಿಕೆಯನ್ನು ಇಟ್ಟಿದ್ದಾರೆ
ಸರ್ಕಾರ ಎರಡನೇ ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ಇನ್ನೂ ಅಂತಿಮಗೊಳಿಸದಿದ್ದರೂ, 250 ಮೀಟರ್ ಎತ್ತರದ ಸ್ಕೈಡೆಕ್ ಸ್ಥಾಪನೆಯು ಈ ಯೋಜನೆಗಳಿಗೆ ಧಕ್ಕೆ ತರಬಹುದು, ಇದರಿಂದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮಹತ್ವಾಕಾಂಕ್ಷೆಯ ಸ್ಕೈಡೆಕ್ ಯೋಜನೆಯ ಮುಂದೂಡಿಕೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಸ್ಕೈಡೆಕ್ ಯೋಜನೆಯ ಉದ್ದೇಶವೇನು ?
ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಹಾಗೂ ವಿವಿಧ ಉದ್ದೇಶದಿಂದ ಈ ಗೋಪುರವನ್ನು ನಿರ್ಮಿಸಲಾಗುತ್ತಿದೆ. ಸ್ಕೈಡೆಕ್ ನಿರ್ಮಿಸುವುದಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇನ್ನು ಈ ಗೋಪುರವು ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಿರ್ಮಾಣ ಆಗಲಿದೆ ಎನ್ನುವುದು ವಿಶೇಷ. ಈ ಪ್ಲಾನ್‌ನಿಂದ ಬೆಂಗಳೂರಿನಲ್ಲಿ ಟೂರಿಸಂ, ಬೆಂಗಳೂರು ನಗರವನ್ನು ನೋಡುವುದು, ಉದ್ಯೋಗಾವಕಾಶ ಸೃಷ್ಟಿ. ಈ ಯೋಜನೆಯ ಮೂಲಕ ಆದಾಯ ಹೆಚ್ಚಿಸುವುದು. ಬೆಂಗಳೂರಿಗೆ ಹೊಸ ಮಾರ್ಡನ್ ಟಚ್ ಕೊಡುವುದು ಈ ಯೋಜನೆಯ ಪ್ಲಾನ್ ಆಗಿದೆ.


Click it and Unblock the Notifications