ಬೆಂಗಳೂರು: ರೈಲ್ವೇ ಪ್ರಯಾಣಿಕರ ಅನುಕೂಲಕ್ಕಾಗಿ ಸರ್ಕಾರ ಆಗಲಿ, ಭಾರತೀಯ ರೈಲ್ವೇ (Indian Railways) ಆಗಲಿ ಏನಾದರೊಂದು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಲೇ ಇರುತ್ತದೆ. ಇನ್ನು ಹಬ್ಬ, ವಿಶೇಷ ದಿನಗಳಿದ್ದರಂತೂ ರೈಲು ಸೇವೆಯಲ್ಲಿ ಹೆಚ್ಚುವರಿ ಸೇವೆಗಳನ್ನು ಘೋಷಿಸುತ್ತದೆ. ಇದೀಗ ಬೆಂಗಳೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದಿದೆ. ಭಾರತೀಯ ರೈಲ್ವೇ, ರಾಜಸ್ಥಾನದ ಸಿಕಾರ್‌ನಿಂದ ಬೆಂಗಳೂರು (Rajathan-Bengaluru) ಪ್ರಯಾಣ ಮಾಡುವವರಿಗೆ ಬಂಪರ್ ಗಿಫ್ಟ್ ಕೊಟ್ಟಿದೆ.

ಹೌದು, ರಾಜಸ್ಥಾನದ ಸಿಕಾರ್‌ನಿಂದ ಬೆಂಗಳೂರಿಗೆ (ಯಶವಂತಪುರ) ನೇರ ಸ್ಪೆಷಲ್ ರೈಲು ಸೇವೆ ಆರಂಭವಾಗಲಿದ್ದು, ಮಾರ್ಚ್ 11 ರಿಂದ ಕಾರ್ಯಾಚರಣ ಆರಂಭಿಸಲಿದೆ. ಇನ್ನು ಈ ರೈಲು ಪುಣೆ, ಸೂರತ್ ಸೇರಿದಂಯೆ ಹಲವು ಪ್ರಮುಖ ನಗರಗಳಲ್ಲಿ ನಿಲುಗಡೆ ಹೊಂದಿದೆ. ಈ ರೈಲು ಸೇವೆಯಿಂದ ಪಶ್ಚಿಮ ಭಾರತದ ಪ್ರಯಾಣಿಕರಿಗೆ ಭಾರೀ ಅನುಕೂಲವಾಗಲಿದೆ.
ರೈಲಿನ ವಿವರ:
ರೈಲು ಸಂಖ್ಯೆ 06543, ಯಶವಂತಪುರ-ಬಿಕಾನೇರ್ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು, ಮಾರ್ಚ್ 11, 2026 ರಂದು ಆರಂಭವಾಗಲಿದೆ. ಸಿಕಾರ್‌ನಲ್ಲಿ ನಿಲುಗಡೆಯನ್ನು ಈ ರೈಲು ಹೊಂದಿದ್ದು, ಪುಣೆ ಮತ್ತು ಸೂರತ್ ಸಹ ಮಾರ್ಗಗಳಲ್ಲಿ ಸಂಚಾರ ಮಾಡಲಿದೆ. ಅಲ್ಲದೇ ಗುಜರಾತ್ ಮತ್ತು ಮಹಾರಾಷ್ಟ್ರದ ಪ್ರಯಾಣಿಕರಿಗೂ ಈ ರೈಲು ಸೇವೆ ಅನುಕೂಲವಾಗಲಿದೆ ಎನ್ನಲಾಗಿದೆ.
ಇನ್ನು ಈ ರೈಲು ಸ್ಪೆಷಲ್ ಆಗಿರುವುದರಿಂದ, ಸಿಕಾರ್‌ನಿಂದ ಬಿಕಾನೇರ್ ವಿಭಾಗದ ಮೂಲಕ ಯಶವಂತಪುರ, ಬೆಂಗಳೂರಿಗೆ ತಲುಪುತ್ತದೆ.
ರೈಲ್ವೇ ಅಧಿಕಾರಿಗಳ ಪ್ರಕಾರ, ರೈಲು ಸಂಖ್ಯೆ 06543 ಯಶವಂತಪುರ-ಬಿಕಾನೇರ್ ಎಕ್ಸ್‌ಪ್ರೆಸ್ ರೈಲು ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಯಶವಂತಪುರ ಜಂಕ್ಷನ್‌ನಿಂದ ಪ್ರಯಾಣ ಆರಂಭಿಸಲಿದೆ. ಸುಮಾರು 2 ದಿನಗಳ ನಿರಂತರ ಪ್ರಯಾಣದ ನಂತರ ಮೂರನೇ ದಿನ ಬೆಳಿಗ್ಗೆ 9 ಗಂಟೆ ಸುಮಾರಿಗೆ ಸಿಕಾರ್ ರೈಲ್ವೇ ಸ್ಟೇಷನ್ ತಲುಪಲಿದೆ. ಸಿಕಾರ್‌ನಲ್ಲಿ 5 ನಿಮಿಷಗಳ ಕಾಲ ನಿಲುಗಡೆಯನ್ನು ಹೊಂದಿದ್ದು, ಬೆಳಿಗ್ಗೆ 9:05 ಕ್ಕೆ ಹೊರಡಲಿದೆ. ಅಲ್ಲಿಂದ ಮಧ್ಯಾಹ್ನ 3 ಗಂಟೆ ವೇಳೆಗೆ ಬಿಕಾನೇರ್ ರೈಲು ನಿಲ್ದಾಣವನ್ನು ಇದು ತಲುಪುತ್ತದೆ.
ರಾಜಸ್ಥಾನ-ಕರ್ನಾಟಕ ಸಂಪರ್ಕ ಮತ್ತಷ್ಟು ಬಲ!
ಈ ಸೇವೆಯಿಂದಾಗಿ ಕರ್ನಾಟಕ ಮತ್ತು ರಾಜಸ್ಥಾನ ಸಂಪರ್ಕ ಮತ್ತಷ್ಟು ಬಲಪಡಿಸಲಿದೆ. ಅಲ್ಲದೇ ವಾಣಿಜ್ಯ, ಆರ್ಥಿಕ ಅಭಿವೃದ್ಧಿಗೂ ಇದು ಸಹಕಾರಿಯಾಗಲಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ಹಬ್ಬಗಳು ಮತ್ತು ರಜಾದಿನಗಳಲ್ಲಿ ಹೆಚ್ಚುವರಿ ಜನದಟ್ಟಣೆಯನ್ನು ಕಮ್ಮಿ ಮಾಡುವ ಉದ್ದೇಶದಿಂದ ಈ ಸೇವೆಯನ್ನು ಆರಂಭಿಸಲಾಗಿದ್ದು, ಪುಣೆ, ಸೂರತ್ ಪ್ರಯಾಣಿಕರಿಗೂ ಇದರಿಂದ ಭಾರೀ ಪ್ರಯೋಜನವಾಗಲಿದೆ.
ಹೊಸ ಸೇವೆ, ಪ್ರಯಾಣಿಕರಿಗೆ ಅನುಕೂಲ:
ಪುಣೆ ಮತ್ತು ಸೂರತ್‌ನಲ್ಲಿ ನಿಲುಗಡೆಯಿಂದಾಗಿ ಈ ಪ್ರದೇಶಗಳ ಪ್ರಯಾಣಿಕರಿಗೂ ಪ್ರಯೋಜನವಾಗಲಿದೆ. ಅಲ್ಲದೇ ಈ ರೈಲು ಸ್ಪೆಷಲ್ ಟ್ರೈನ್ ಆಗಿರುವುದರಿಂದ ಟಿಕೆಟ್ ಬುಕಿಂಗ್ ಅನ್ನು IRCTC ಅಥವಾ ರೈಲ್ವೇ ಆಪ್‌ಗಳ ಮೂಲಕ ಮಾಡಬಹುದು. ಇನ್ನು ಹೆಚ್ಚಿನ ವಿವರಗಳಿಗೆ ಭಾರತೀಯ ರೈಲ್ವೇಯ ಅಧಿಕೃತ ವೆಬ್‌ಸೈಟ್ ಮೂಲಕ ಪಡೆಯಬಹುದು.
ರೈಲ್ವೇ ಇಲಾಖೆಯ ಈ ನಿರ್ಧಾರ, ರೈಲ್ವೇ ಪ್ರಯಾಣಿಕರಿಗೆ ಹಲವು ಪ್ರಯೋಜನಗಳನ್ನು ನೀಡುವ ಮೂಲಕ ಭಾರೀ ಅನುಕೂಲವಾಗಲಿದೆ.


Click it and Unblock the Notifications