ಸಾಫ್ಟ್‌ವೇರ್ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಎಷ್ಟು ಒತ್ತಡ ಇರುತ್ತದೇಯೋ ಅಷ್ಟೇ ಉತ್ತಮ ಸಂಬಳ ಕೂಡ ಸಿಗುತ್ತದೆ. ಐಐಟಿ ಸೇರಿದಂತೆ ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದವರು, ಕೋಟ್ಯಂತರ ರೂಪಾಯಿ ಸಂಬಳದ ಆಫರ್ ಪಡೆಯುವ ಸುದ್ದಿಗಳನ್ನು ನೋಡಿದ್ದೇನೆ. ಇಲ್ಲೊಬ್ಬ ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು 24ನೇ ವರ್ಷದಲ್ಲೇ ಉಬರ್ ಸಂಸ್ಥೆಯಲ್ಲಿ ವಾರ್ಷಿಕ 60 ಲಕ್ಷ ರೂಪಾಯಿ ವೇತನ ಬರುವ ಕೆಲಸ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಮುಖ ಸಾಫ್ಟ್‌ವೇರ್ ಕಂಪನಿ ಒರಾಕಲ್‌ನಲ್ಲಿ ಎರಡು ವರ್ಷ ಕೆಲಸ ಮಾಡಿದ, ಸಾಫ್ಟ್‌ವೇರ್ ಡೆವಲಪರ್ ಚಿತ್ರಾಂಶ್ ಆನಂದ್ ಉಬರ್ ಸಂಸ್ಥೆಯಲ್ಲಿ ದೊಡ್ಡ ಕೆಲಸ ಪಡೆಯುವಲ್ಲಿ ಸಫಲವಾಗಿದ್ದಾರೆ. ಅಲಹಾಬಾದ್‌ನ ಎಂಎನ್‌ಎನ್‌ಐಟಿ ಸಂಸ್ಥೆಯ ಹಳೆಯ ವಿದ್ಯಾರ್ಥಿಯಾಗಿರುವ ಚಿತ್ರಾಂಶ್ ಆನಂದ್ ಇದೀಗ ಉಬರ್ ಸಂಸ್ಥೆಯಲ್ಲಿ 60 ಲಕ್ಷ ರೂಪಾಯಿ ಕೆಲಸ ಪಡೆದು ಸುದ್ದಿಯಾಗಿದ್ದಾರೆ.

ಒರಾಕಲ್‌ನಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ ಅವರು ಉದ್ಯೋಗ ಬದಲಾವಣೆ ಮಾಡಲು ನೋಡುತ್ತಿದ್ದಾಗ ಉಬರ್ ಸಂಸ್ಥೆಯಲ್ಲಿ ಕೆಲಸ ಇರುವುದು ಗೊತ್ತಾಗಿದೆ. ಲೀಟ್‌ಕೋಡ್ ಮತ್ತು ಲೆವೆಲ್ಸ್‌ನಲ್ಲಿ ಉಬರ್ ಸಂಸ್ಥೆಯಲ್ಲಿ ಖಾಲಿ ಇರುವ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದರು.
ಆರು ತಿಂಗಳು ತಯಾರಿ
ಮನಿ ಕಂಟ್ರೋಲ್ ವರದಿ ಮಾಡಿರುವ ಪ್ರಕಾರ, ಈ ಸಂದರ್ಶನಕ್ಕೆ ತಯಾರಾಗಲು ಚಿತ್ರಾಂಶ್ ಆನಂದ್ 7 ತಿಂಗಳು ಸಮಯ ತೆಗೆದುಕೊಂಡಿದ್ದಾರೆ. ನಿದ್ದೆಯಿಲ್ಲದೆ ಸಾಕಷ್ಟು ಸಂಶೋಧನೆಗಳನ್ನು ಮಾಡಿದ್ದಾರೆ. ಕೆಲಸಕ್ಕೆ ಸಂದರ್ಶನವು ನಾಲ್ಕು ಸುತ್ತುಗಳಲ್ಲಿ ನಡೆಯಿತು. ಎರಡು ಸಂದರ್ಶನಗಳು ತುಂಬಾ ಕಠಿಣವಾಗಿದ್ದವು, ಅವರು ಕೇಳಿದ ಪ್ರಶ್ನೆಗಳು ನಾನು ಅಧ್ಯಯನ ಮಾಡಿದ್ದಕ್ಕಿಂತ ಹೊರತಾಗಿದ್ದವು, ಆದರೆ ಕೊನೆಯಲ್ಲಿ ನಾನು ಅದನ್ನು ಸಾಧಿಸಿದೆ ಎಂದು ಹೇಳಿದರು. ಮುಂದಿನ ತಿಂಗಳು ಕೆಲಸಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರೆ.
ಪೋಷಕರ ಸಂಭ್ರಮ
ಚಿತ್ರಾಂಶ್ ಆನಂದ್ ದೊಡ್ಡ ಸಂಬಳದ ಕೆಲಸ ಪಡೆಯುತ್ತಿದ್ದಂತೆ ಕುಟುಂಬದವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಆನಂದ್ ತನ್ನ ತಾಯಿ ಖುಷಿಪಟ್ಟ ಬಗ್ಗೆ ಹೇಳಿದ್ದಾರೆ. ನನ್ನ ತಾಯಿ ನನ್ನ ಜೊತೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಕೆಲಸ ಪಡೆಯಲು ನಾನು ನಿದ್ದೆಯಿಲ್ಲದೆ ಅಧ್ಯಯನ ಮಾಡಿದ್ದನ್ನು ನೋಡಿದ್ದಾರೆ. ನನಗೆ ಕೆಲಸ ಸಿಗುತ್ತಿದ್ದಂತೆ ಅವರು ತುಂಬಾ ಖುಷಿ ಪಟ್ಟಿದ್ದಾರೆ. ನನ್ನ ಆರೋಗ್ಯದ ಬಗ್ಗೆ ಗಮನ ಹರಿಸಲು ಸಲಹೆ ಕೊಟ್ಟಿದ್ದಾರೆ ಎಂದರು.
ಆನಂದ್ ಮೂಲತಃ ಉತ್ತರ ಪ್ರದೇಶದ ವಾರಣಾಸಿ ಸಮೀಪದ ಮುಘಲ್‌ಸರಾಯ್‌ನವರಾಗಿದ್ದು, 2022 ರಲ್ಲಿ ಒರಾಕಲ್‌ನಲ್ಲಿ ವಾರ್ಷಿಕ 40 ಲಕ್ಷ ರೂಪಾಯಿ ಸಂಬಳ ಪಡೆಯುವ ಕೆಲಸ ಪಡೆದ ನಂತರ ಬೆಂಗಳೂರಿಗೆ ಸ್ಥಳಾಂತರವಾಗಿದ್ದಾರೆ.
ಒರಾಕಲ್‌ನಲ್ಲಿ ಆನಂದ್ ಖುಷಿಯಿಂದಲೇ ಕೆಲಸ ಮಾಡಿದ್ದಾರೆ. ಐದು ದಿನದಲ್ಲಿ ಮೂರು ದಿನ ಕಚೇರಿಯಿಂದ ಕೆಲಸ ಮಾಡಬೇಕಾಗಿದೆ. ಈಗ ಉಬರ್ ನಲ್ಲಿ ವಾರದಲ್ಲಿ ಎರಡು ದಿನ ಮಾತ್ರ ಕಚೇರಿಯಲ್ಲಿ ಕೆಲಸ ಮಾಡಬೇಕಿದೆ. ಹೆಚ್ಚಿನ ಒತ್ತಡ ಇರುವುದಿಲ್ಲ ಎನ್ನುವ ವಿಶ್ವಾಸ ಹೊಂದಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications