ಬೆಂಗಳೂರಿನ ಐಟಿ ಹಬ್ ಹಿರಿಮೆ ಕಸಿದುಕೊಳ್ಳುತ್ತಾ 14 ತಾಸು?

ಬೆಂಗಳೂರು, ಆಗಸ್ಟ್‌ 8: ನಾನು ಪ್ರತಿ ದಿನ ಮುಂಜಾನೆ 6 ಗಂಟೆಗೆ ಎದ್ದು ಕೆಲಸ ಆರಂಭಿಸುತ್ತೇನೆ. ನನಗಾಗಿ ತಿಂಡಿ ಸಿದ್ಧ, ಊಟಕ್ಕೂ ವ್ಯವಸ್ಥೆ ಮಾಡಿಕೊಂಡು ಮನೆಯ ಇತರೆ ಕೆಲಸಗಳನ್ನು ಪೂರೈಸಿ ಕಚೇರಿಗೆ ತೆರಳಲು ಸಿದ್ಧನಾಗುತ್ತೇನೆ. ಬೆಂಗಳೂರಿನ ಟ್ರಾಫಿಕ್ ಬಗ್ಗೆ ನಿಮಗೆ ಗೊತ್ತೇ ಇದ್ದು 8.30ಕ್ಕೆ ಕಚೇರಿಗೆ ಹೊರಡುತ್ತೇನೆ. 9-10 ಗಂಟೆ ಕಚೇರಿಯಲ್ಲಿ ಕೆಲಸ ಮಾಡಿ ಮನೆಗೆ ಬರುವ ವೇಳೆ ರಾತ್ರಿಯಾಗಿರುತ್ತದೆ. ಒಂದಿಷ್ಟು ವ್ಯಾಯಾಮ ಮಾಡಿ ನನಗೋಸ್ಕರ ಅಂತಾ ಒಂದಿಷ್ಟು ಸಮಯ ಇಟ್ಟುಕೊಂಡು ನಿದ್ರೆಗೆ ಜಾರಿದರೆ ಸಾಕಾಗುತ್ತದೆ. ಮತ್ತೆ ಮರುದಿನ ಇದೇ ದಿನಚರಿ.

ಇಂಥ ದಿನಚರಿ ಇಟ್ಟುಕೊಂಡ ನನಗೆ ವಾರದಲ್ಲಿ 70 ಗಂಟೆ ಕೆಲಸ ಮಾಡಲು ಹೇಳಿದರೆ ಹೇಗೆ? ನನ್ನ ದೇಹಕ್ಕೆ ಮತ್ತು ಮಿದುಳಿಗೆ ವಿಶ್ರಾಂತಿ ಯಾವಾಗ? ದೈನಂದಿನ ಕೆಲಸ ಪೂರೈಸಿಕೊಳ್ಳುವುದು ಯಾವಾಗ? ಇದು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರ ಪ್ರಶ್ನೆ. ಕರ್ನಾಟಕ ಸರ್ಕಾರಕ್ಕೆ ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳು ಪ್ರಸ್ತಾವನೆಯೊಂದನ್ನು ಸಲ್ಲಿಕೆ ಮಾಡಿದ್ದು ದೊಡ್ಡ ಚರ್ಚೆಗೆ ನಾಂದಿ ಹಾಡಿದೆ. ಕೆಲಸದ ಅವಧಿಯನ್ನು 14 ಗಂಟೆಗಳಿಗೆ ವಿಸ್ತರಣೆ ಮಾಡಲು ಅವಕಾಶ ನೀಡುವಂತೆ ಇದರಲ್ಲಿ ಮನವಿ ಮಾಡಲಾಗಿದೆ. ಸರ್ಕಾರ ಇನ್ನೂ ಈ ಪಸ್ತಾವನೆ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ.

ಬೆಂಗಳೂರಿನ ಐಟಿ ಹಬ್ ಹಿರಿಮೆ ಕಸಿದುಕೊಳ್ಳುತ್ತಾ 14 ತಾಸು?

ಐಟಿ ಕಂಪನಿಗಳು 14 ಗಂಟೆಯ ಕೆಲಸದ ಅವಧಿ ವಿಸ್ತರಣೆ ಮಾಡಲು ಅನುಕೂಲವಾಗುವಂತೆ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯಿದೆ, 1961ಕ್ಕೆ ತಿದ್ದುಪಡಿ ತರಬೇಕು ಎಂದು ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ ಪ್ರಸ್ತಾವನೆಯಲ್ಲಿ ಮನವಿ ಮಾಡಿದ್ದು ನಿಮಗೆಲ್ಲ ಗೊತ್ತೇ ಇದೆ.

ವ್ಯಾಪಕ ವಿರೋಧ:

ಈ 14 ಗಂಟೆಗಳ ಪ್ರಸ್ತಾಔದ ವಿಚಾರ ಬರುತ್ತಿದ್ದಂತೆಯೇ ಐಟಿ ಉದ್ಯೋಗದ ವಲಯದಿಂದ ವ್ಯಾಪಕ ವಿರೋಧ ಕೇಳಿಬಂದಿದೆ. ಈ ರೀತಿ ಪ್ರಾಕ್ಟಿಕಲ್ ಆಗಿ ಕೆಲಸ ಮಾಡಲು ಸಾಧ್ಯವೇ ಇಲ್ಲ ಎನ್ನುವುದು ಉದ್ಯೋಗಿಗಳ ಮಾತು.

ಹೆಚ್ಚು ಕೆಲಸ, ಕಡಿಮೆ ವೇತನ

ಕೆಲವೊಮ್ಮೆ ಅನಿವಾಋfಯವಾಗಿ ಹೆಚ್ಚಿನ ಅವಧಿ ಕೆಲಸ ಮಾಡಬೇಕಾಗಿ ಬರುತ್ತದೆ. ಪ್ರಾಜೆಕ್ಟ್ ಅಥವಾ ಟಾರ್ಗೆಟ್ ನ ಡೆಡ್ ಲೈನ್ ಇರುತ್ತದೆ. ಈ ಹೆಚ್ಚುವರಿ ಕೆಲಸಕ್ಕೆ ಹೆಚ್ಚಿನ ಸಂಬಳ ಬಹುತೇಕ ಸಮಯದಲ್ಲಿ ಸಿಗುವುದಿಲ್ಲ. ಆದರೆ ಈ ಕೆಲಸ ಮನಸಿನ ಮೇಲೆ ಪರಿಣಾಮ ಬೀರಲಿದ್ದು ಒತ್ತಡ ಹೆಚ್ಚು ಮಾಡುತ್ತದೆ.
ಕರೋನಾ ನಂತರ ಪ್ರಚುರ ಪಡೆದುಕೊಂಡಿದ್ದ ವರ್ಕ್ ಫ್ರಾಂ ಹೋಂಗೆ ಈಗ ಕೊಕ್ಕೆ ಬಿದ್ದಿದೆ. ಬಹುತೇಕ ಕಂಪನಿಗಳು ವಾಪಸ್ ಕಚೇರಿಗೆ ತಮ್ಮ ಸಿಬ್ಬಂದಿ ಕರೆಸಿಕೊಂಡಿದ್ದಾರೆ. ಇದಕ್ಕೆ ಬೇರೆ ಬೇರೆ ಕಾರಣಗಳು ಇರಬಹುದು. ಒಂದು ವೇಳೆ ವರ್ಕ್ ಫ್ರಾಂ ಹೋಂ ಆಯ್ಕೆಯನ್ನೇ ನೀಡುತ್ತೇವೆ ಆದರೆ 14 ಗಂಟೆ ಕೆಲಸ ಮಾಡಬೇಕು ಎನ್ನುವ ಕಂಡಿಶನ್ ಇರಿಸಿ, ಆ ಮೂಲಕ ಕೆಲಸ ಮಾಡಿಕೊಂಡು ಮುಂದೆ 14 ಗಂಟೆಯನ್ನೇ ಕಾಯಂ ಮಾಡಿರೆ ಹೇಗೆ ಎನ್ನುವುದು ಸಿಬ್ಬಂದಿಯ ಆತಂಕ. ಅಂದರತೆ ಇದು ಹೆಚ್ಚಿನ ಅವಧಿ ಕೆಲಸ ಕಡಿಮೆ ವೇತನ!

ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ!

ಮನುಷ್ಯ ಗರಿಷ್ಠ ಎಂದರೆ ಒಂದು ದಿನಕ್ಕೆ 10 ಗಂಟೆಗಳ ಕಾಲ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡಬಹುದು. ಪ್ರತಿದಿನ 14 ಗಂಟೆ ಕೆಲಸ ಮಾಡಲು ಆರಂಭಿಸಿದರೆ ಆತ ತನ್ನ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಳೆದುಕೊಳ್ಳಬೇಕಾಗುತ್ತದೆ. ಸ್ಟ್ರೇಸ್, ರಕ್ತದೊತ್ತಡದಂತಹ ಸಮಸ್ಯೆಗಳಿಗೆ ಸಿಲುಕಬಹುದು ಎಂದು ವೈದ್ಯರು ಹೇಳುತ್ತಾರೆ.

ಕೆಲಸದ ಅವಧಿ ಹೇಗಿದೆ?

ಭಾರತದಲ್ಲಿ ಸಾಮಾನ್ಯವಾಗಿ ವಾರಕ್ಕೆ 5 ದಿನ ಕೆಲಸ ಮಾಡಿಸಲಾಗುತ್ತಿದೆ. ದಿನಕ್ಕೆ 8.5 ಗಂಟೆಯಿಂದ 9.5 ಗಂಟೆ ಕೆಲಸ ಮಾಡಿಸಲಾಗುತ್ತಿದೆ. ಈ ಅವಧಿಯನ್ನು ಹೆಚ್ಚಳ ಮಾಡಿದರೆ ಕೌಟಂಬಿಕ ಜೀವನದ ಮೇಲೆಯೂ ಪರಿಣಾಮ ಬೀರಲಿದೆ. ಅಂದರೆ ವಾರಕ್ಕೆ 48 ಗಂಟೆ ಕಾಲದ ಕೆಲಸ ಚಾಲ್ತಿಯಲ್ಲಿದೆ.
UAE ಯಲ್ಲಿ 52.5 ಗಂಟೆ ಕೆಲಸವಿದ್ದರೆ ಗ್ಯಾಂಬಿಯಾ ಮತ್ತು ಭೂತಾನ್‌ಗಳು ಸಹ 50.8 ಮತ್ತು 50.7 ರಂತೆ 50 ಗಂಟೆಗೂ ಅಧಿಕ ಕೆಲಸದ ನಿಯಮ ಮಾಡಿಕೊಂಡಿವೆ.

ಬೆಂಗಳೂರು ಐಟಿ ಹಬ್ ಪಟ್ಟಕ್ಕೆ ಹೊಡೆತ?

ಈ ರೀತಿಯ ಬೆಳವಣಿಗೆಗಳು ಬೆಂಗಳೂರಿಗೆ ಇದ್ದ ಐಟಿ ಹಬ್ ಪಟ್ಟಕ್ಕೆ ಪೆಟ್ಟು ನೀಡಬಹುದು ಎಂದು ವಿಶ್ಲೇಷಣೆ ಮಾಡಲಾಗಿದೆ. ಐಟಿ ಉದ್ಯೋಗಿಗಳು ದೇಶದ ಇತರ ಭಾಗಗಳಾದ ಹೈದರಾಬಾದ್, ಪುಣೆ ಮತ್ತು ಗುರುಗ್ರಾಮ್‌ ಕಡೆಗೆ ಮುಖ ಮಾಡಲಿದ್ದಾರೆ. ಅಹಮದಾಬಾದ್ ಕೂಡ ಈಗ ಐಟಿ ಹಬ್ ಆಗಿ ವಿಕಸನಗೊಳ್ಳುತ್ತಿದೆ ಎನ್ನುವುದಕ್ಕೂ ಪೂರಕ ಮಾಹಿತಿಗಳಿವೆ. ಒಟ್ಟಿನಲ್ಲಿ ಸರ್ಕಾರದ 14 ಗಂಟೆ ಕೆಲಸದ ನಿಯಮ, ಕನ್ನಡಿಗರಿಗೆ ಮೀಸಲಾತಿಯಂತಹ ವಿಚಾರಗಳು ಐಟಿ ಕ್ಷೇತ್ರದಲ್ಲಿ ಒಂದು ಮಟ್ಟದ ಹಲ್ ಚಲ್ ಸೃಷ್ಟಿಸಿರುವುದೆಂತೂ ಸುಳ್ಳಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+