ಬೆಂಗಳೂರು: ಬೆಂಗಳೂರಿನ ಟ್ರಾಫಿಕ್ ಸಮಸ್ಯೆ (Bengaluru Traffic) ಬಗ್ಗೆ ಕೇಳೋದೆ ಬೇಡ. ಈಗಂತೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗೋದೆ ಸಾಹಸವಾಗಿಬಿಟ್ಟಿದೆ. ಇದೀಗ ಬೆಂಗಳೂರಿಗರಿಗೆ ಬೆಚ್ಚಿಬೀಳಿಸುವ ವರದಿಯೊಂದು ಹೊರಬಿದ್ದಿದೆ. ಈ ಮೂಲಕ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಇನ್ನಷ್ಟು ತೀವ್ರಗೊಂಡಿದೆ. ಬೆಂಗಳೂರಿನ ಸಂಚಾರ ಬಿಕ್ಕಟ್ಟು ಹದಗೆಟ್ಟಿದೆ. ನೆದರ್‌ಲ್ಯಾಂಡ್ಸ್ ಮೂಲಕ ಸ್ಥಳ ತಂತ್ರಜ್ಞಾನ ಸಂಸ್ಥೆ ಟಾಮ್‌ಟಾಮ್ ಬಿಡುಗಡೆ ಮಾಡಿದ 2025 ರ ಟ್ರಾಫಿಕ್ ದತ್ತಾಂಶದ ಪ್ರಕಾರ, ಬೆಂಗಳೂರು ವಿಶ್ವದ ಅತೀ ಸಂಚಾರ ದಟ್ಟಣೆಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ.

ಟಾಮ್‌ಟಾಮ್‌ನ ಗ್ಲೋಬಲ್ ಟ್ರಾಫಿಕ್ ಇಂಡೆಕ್ಸ್ 2025ರಲ್ಲಿ ಟ್ರಾಫಿಕ್ ದಟ್ಟಣೆಯಲಿ 2024ರ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ತಲುಪಿದೆ. ಇದರಿಂದಾಗಿ ವಿಶ್ವದ ಅತಿ ನಿಧಾನಗತಿಯ ಪ್ರಯಾಣ ಸಮಯ ಹೊಂದಿರುವ ನಗರಗಳಲ್ಲಿ ಬೆಂಗಳೂರು ಒಂದೆ ಎಂದು ಪರಿಗಣಿಸಲಾಗಿದೆ. 2023 ರಲ್ಲಿ ಬೆಂಗಳೂರು ನಗ ಈ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿತ್ತು.
ಸಂಚಾರ ದಟ್ಟಣೆ ಪಟ್ಟಿಯಲ್ಲಿ ಬೆಂಗಳೂರು 2ನೇ ಸ್ಥಾನ
ನೆದರ್ಲ್ಯಾಂಡ್ಸ್ ಮೂಲದ ಲೊಕೇಶನ್ ಟೆಕ್ನಾಲಜಿ ಕಂಪನಿ ಟಾಮ್‌ಟಾಮ್ ಬಿಡುಗಡೆ ಮಾಡಿರುವ 2025ರ ಡೇಟಾ ಪ್ರಕಾರ, ಬೆಂಗಳೂರಿನಲ್ಲಿ ಸರಾಸರಿ ವೇಗ ಪ್ರತೀ ಗಂಟೆಗೆ ಕೇವಲ 16.6 ಕಿ.ಮೀ ಆಗಿದೆ. ಅಂದರೆ ಒಬ್ಬ ವಾಹನ ಚಾಲಕನು ಕೇವಲ 4.2 ಕಿಮೀ ಪ್ರಯಾಣಕ್ಕೆ 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇನ್ನು ವಿಶ್ವದಲ್ಲಿ ಅತೀ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ದೇಶಗಳಲ್ಲಿ ಮೆಕ್ಸಿಕ ಸಿಟಿ ಮೊದಲ ಸ್ಥಾನದಲ್ಲಿದ್ದರೆ, ಎರಡನ ಸ್ಥಾನದಲ್ಲಿ ಬೆಂಗಳೂರು ಇದೆ.
ಕಾರಣವೇನು?
ತಜ್ಞರ ಪ್ರಕಾರ, ಬೆಂಗಳೂರಿನ ಸಂಚಾರ ದಟ್ಟಣೆ ಕೇವಲ ಜನಸಂಖ್ಯೆ ಬೆಳವಣಿಗೆ ಅಥವಾ ಆರ್ಥಿಕ ಸಮಸ್ಯೆಯ ಪರಿಣಾಮವಲ್ಲ, ಬದಲಿಗೆ ಕಳಪೆ ನಗರ ಯೋಜನೆಗಳು, ಹೆಚ್ಚಿನ ಸಾರಿಗೆ ಸೌಲಭ್ಯಗಳು ಮತ್ತು ಟ್ರಾಫಿಕ್ ನಿರ್ವಹಣೆಯಲ್ಲಾಗುವ ಸಮಸ್ಯೆಯ ಪರಿಣಾಮವಾಗಿದೆ.
ಇನ್ನು ಈ ಡೇಟಾ ಕರ್ನಾಟಕ ಸಾರಿಗೆ ಇಲಾಖೆಯ ಡೇಟಾ ಸಂಗ್ರಹಣೆಯ ಸಮಸ್ಯೆಯನ್ನು ಎತ್ತಿ ತೋರಿಸಿದೆ. ಬೆಂಗಳೂರಿನಲ್ಲಿ ರಿಜಿಸ್ಟರ್ ಆಗಿರುವ ವಾಹನಗಳ ಸಂಖ್ಯೆ 2020-21 ರಲ್ಲಿ ಸುಮಾರು 1 ಕೋಟಿಯಿತ್ತು. ಆದ್ರೆ ಏಪ್ರಿಲ್ 2025ರ ವೇಳೆಗೆ ಸುಮಾರು 1.23 ಕೋಟಿಗೆ ಏರಿಕೆಯಾಗಿದೆ. ಇದರಿಂದಲೂ ಸಂಚಾರ ದಟ್ಟಣೆಯಾಗುತ್ತಿದೆ.
ನಗರದಲ್ಲಿ ಸಂಚಾರ ದಟ್ಟಣೆಯು ಕೆಲವು ಪ್ರಮುಖ ಕಾರಿಡಾರ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ವಿಶೇಷವಾಗಿ ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್, 17 ಕಿಮೀ ಔಟರ್ ರಿಂಗ್ ರೋಡ್ (ORR). ಇಲ್ಲಿ ಹೆಚ್ಚಿನ ಐಟಿ ಕಂಪನಿಗಳು ಇರುವುದರಿಂದ, ಲಕ್ಷಾಂತರ ಜನ ಇಲ್ಲಿ ದಿನನಿತ್ಯ ಸಂಚರಿಸುತ್ತಾರೆ.
ಈ ಸಂಚಾರ ದಟ್ಟಣೆಗೆ ನಗರದ ಕಾಮಗಾರಿ, ದುರಸ್ತಿ ಕಾರ್ಯಗಳು, ಮೆಟ್ರೋ ಮಾರ್ಗಗಳು, ಬಸ್ ಸೇವೆಗಳು ಸಹ ಸೇರಿದೆ. ದಿನ ಹೋದಂತೆ ಬೆಂಗಳೂರಿನಲ್ಲಿ ಸಂಚರಿಸುವ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಇದು ಸಂಚಾರ ದಟ್ಟಣೆಯಾಗಲು ಮುಖ್ಯ ಕಾರಣವಾಗಿದೆ. ಸದ್ಯ ಬೆಂಗಳೂರಿನ ಸಂಚಾರ ದಟ್ಟಣೆ ಬಗ್ಗೆ ರಾಜ್ಯದಲ್ಲಿ ಮಾತ್ರವಲ್ಲದೇ, ವಿಶ್ವದೆಲ್ಲೆಡೆ ಭಾರೀ ಚರ್ಚೆಗೆ ಕಾರಣವಾಗಿದೆ.


Click it and Unblock the Notifications