ಅದೆಷ್ಟೋ ಮಂದಿ ಉದ್ಯೋಗ ಅರಸಿಕೊಂಡು, ವಿದ್ಯಾಭ್ಯಾಸಕ್ಕಾಗಿ, ಜೀವನ ಕಟ್ಟಿಕೊಳ್ಳೋದಕ್ಕಾಗಿ ಸಿಲಿಕಾನ್ ಸಿಟಿ ಬೆಂಗಳೂರಿಗೆ (Bengaluru) ಬರುತ್ತಾರೆ. ಬಹುತೇಕ ಬೆಂಗಳೂರು ಜನನಿಬಿಡ ಮಾರುಕಟ್ಟೆಗಳಿಂದ, ರಸ್ತೆ ತುಂಬೆಲ್ಲಾ ವಾಹನಗಳೇ ತುಂಬಿ ತುಳುಕುತ್ತಿರುತ್ತದೆ. ಐಟಿಬಿಟಿ ಹಬ್‌ಗಳಿಗೆ ಹೆಸರುವಾಸಿಯಾಗಿರುವ ಬೆಂಗಳೂರು, ಭಾರತದ ಟೆಕ್ ರಾಜಧಾನಿ (Tech Capital Of India) ಎಂದು ಗುರುತಿಸಿಕೊಂಡಿದೆ. ಇದೀಗ ತನ್ನ ಭಾರೀ ಸಂಚಾರ ದಟ್ಟಣೆಯಿಂದ ವಿಶ್ವದಲ್ಲೇ ಎರಡನೇ ಅತೀ ಹೆಚ್ಚು ದಟ್ಟಣೆಯ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ.

ಭಾರತದ ಟೆಕ್ ರಾಜಧಾನಿ ಬೆಂಗಳೂರು, ತನ್ನ ಭಾರಿ ಸಂಚಾರ ದಟ್ಟಣೆಯಿಂದ ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ದಟ್ಟಣೆಯ ನಗರವಾಗಿ ಹೊರಹೊಮ್ಮಿದೆ. ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್‌ನ ಇತ್ತೀಚಿನ ವರದಿ ಪ್ರಕಾರ, ಬೆಂಗಳೂರಿನ ಸರಾಸರಿ ದಟ್ಟಣೆ 74.4% ರಷ್ಟಿದ್ದು, ಇದು 2024ಕ್ಕೆ ಹೋಲಿಸಿದರೆ 1.7% ಹೆಚ್ಚಳ ಕಂಡಿದೆ.
ಭಾರತದ ಟೆಕ್ ರಾಜಧಾನಿ ಬೆಂಗಳೂರು, 2025ರ ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸ್ ವರದಿ ಪ್ರಕಾರ ವಿಶ್ವದ ಎರಡನೇ ಅತಿ ಹೆಚ್ಚು ಸಂಚಾರ ದಟ್ಟಣೆಯ ನಗರವಾಗಿ ಗುರುತಿಸಿಕೊಂಡಿದೆ. ನಗರದಲ್ಲಿ ಸಂಚಾರ ಸುಧಾರಿಸುವ ಬದಲು, ದಿನೇ ದಿನೇ ಟ್ರಾಫಿಕ್ ಹದಗೆಡುತ್ತಿದೆ ಎಂಬುದನ್ನು ಈ ವರದಿ ಖಚಿತಪಡಿಸಿದೆ.
ವಿಶ್ವದಾದ್ಯಂತ 3.65 ಟ್ರಿಲಿಯನ್ ಕಿ.ಮೀ.ಗೂ ಹೆಚ್ಚು ಪ್ರಯಾಣದ ದತ್ತಾಂಶವನ್ನಾಧರಿಸಿ ಸಿದ್ಧಪಡಿಸಲಾದ ಈ ವರದಿಯಲ್ಲಿ, ಬೆಂಗಳೂರು ಮೆಕ್ಸಿಕೋ ನಗರದ ನಂತರ ಎರಡನೇ ಸ್ಥಾನದಲ್ಲಿದ್ದರೆ, ಡಬ್ಲಿನ್‌ಗಿಂತ ಮುಂದಿದೆ. 2025ರಲ್ಲಿ ಬೆಂಗಳೂರಿನಲ್ಲಿ 10 ಕಿ.ಮೀ. ದೂರ ಕ್ರಮಿಸಲು ಸರಾಸರಿ 36 ನಿಮಿಷ 9 ಸೆಕೆಂಡುಗಳು ತಗುಲಿದ್ದು, ಇದು 2024ಕ್ಕಿಂತ 2 ನಿಮಿಷ 4 ಸೆಕೆಂಡು ಹೆಚ್ಚು ಎಂದು ವರದಿಯಾಗಿದೆ. ಈ ಮೂಲಕ ವಿಶ್ವದ ಎರಡನೇ ಅತೀ ಹೆಚ್ಚು ಸಂಚಾರ ದಟ್ಟಣೆಯ ನಗರ ಎಂದು ಗುರುತಿಸಿಕೊಂಡಿದೆ.
10 ಕಿ.ಮೀ ಸಂಚರಿಸಲು 45 ನಿಮಿಷ!
ಬೆಳಗ್ಗಿನ ಗರಿಷ್ಠ ದಟ್ಟಣೆ ಅವಧಿಯಲ್ಲಿ 10 ಕಿ.ಮೀ. ಪ್ರಯಾಣಕ್ಕೆ 41 ನಿಮಿಷ 6 ಸೆಕೆಂಡುಗಳು ಬೇಕಾಗುತ್ತವೆ. ಈ ವೇಳೆ ಸರಾಸರಿ ದಟ್ಟಣೆ 94.2% ಮತ್ತು ಸರಾಸರಿ ವೇಗ 14.6 ಕಿ.ಮೀ./ಗಂಟೆಗೆ ಇತ್ತು. ಸಂಜೆಯ ಗರಿಷ್ಠ ದಟ್ಟಣೆಯಲ್ಲಿ ಇದೇ 10 ಕಿ.ಮೀ.ಗೆ 45 ನಿಮಿಷ 27 ಸೆಕೆಂಡುಗಳು ತಗುಲಿದ್ದು, 115.2% ದಟ್ಟಣೆ ಮತ್ತು 13.2 ಕಿ.ಮೀ./ಗಂಟೆಗೆ ವೇಗ ದಾಖಲಾಗಿದೆ.
ಟ್ರಾಫಿಕ್‌ಗಾಗಿಯೇ, ಬೆಂಗಳೂರಿನ ಚಾಲಕರು 2025ರಲ್ಲಿ ಒಟ್ಟು 168 ಗಂಟೆಗಳನ್ನು (7 ದಿನ 40 ನಿಮಿಷಗಳಿಗೆ ಸಮ) ವ್ಯರ್ಥ ಮಾಡಿದ್ದಾರೆ. ಇದು 2024ಕ್ಕಿಂತ 12 ಗಂಟೆ 46 ನಿಮಿಷಗಳಷ್ಟು ಹೆಚ್ಚು ನಷ್ಟವಾದಂತಾಗಿದೆ. ಸಣ್ಣ ಪ್ರಯಾಣಗಳಲ್ಲೂ ದಟ್ಟಣೆ ಹೆಚ್ಚಾಗಿದ್ದು, ಇದು ಬೆಂಗಳೂರಿನಲ್ಲಾಗುತ್ತಿರುವ ಸಂಚಾರ ದಟ್ಟಣೆ ಸಮಸ್ಯೆ ಬಗ್ಗೆ ಕಳವಳ ವ್ಯಕ್ತವಾಗಿದೆ.
ಬೆಂಗಳೂರಿನ ಅತೀ ಹೆಚ್ಚಿನ ದಟ್ಟಣೆಯ ದಿನ!
ಮೇ 17, 2025ರ ಶನಿವಾರ ಬೆಂಗಳೂರಿಗೆ ಅತ್ಯಂತ ದಟ್ಟಣೆಯ ದಿನವಾಗಿದೆ. ಅಂದು ಸರಾಸರಿ ದಟ್ಟಣೆ ಮಟ್ಟವೇ 101% ತಲುಪಿತ್ತು.
ವಿಶ್ವದ ಅತ್ಯಂತ ದಟ್ಟಣೆಯ ಅಗ್ರ ಐದು ನಗರಗಳಿವು!
1. ಮೆಕ್ಸಿಕೋ ಸಿಟಿ (ಮೆಕ್ಸಿಕೋ)
2. ಬೆಂಗಳೂರು (ಭಾರತ)
3. ಡಬ್ಲಿನ್ (ಐರ್ಲೆಂಡ್)
4. ಲೊಡ್ಜ್ (ಪೋಲೆಂಡ್)
5. ಪುಣೆ (ಭಾರತ).
ಅಗ್ರ 35ರ ಪಟ್ಟಿಯಲ್ಲಿ ಭಾರತೀಯ ಹಲವು ನಗರಗಳು
ಒಟ್ಟು ಏಳು ಭಾರತೀಯ ನಗರಗಳು ವಿಶ್ವದ ಅಗ್ರ 35ರಲ್ಲಿ ಸ್ಥಾನ ಪಡೆದಿವೆ, ಇದು ಭಾರತದಲ್ಲಿ ಸಾರಿಗೆ ಒತ್ತಡ ಹೇಗಿದೆ ಅನ್ನೋದನ್ನು ಎತ್ತಿ ತೋರಿಸಿದೆ.
- 2ನೇ ಸ್ಥಾನ ಬೆಂಗಳೂರು - 74.4%
- 5ನೇ ಸ್ಥಾನ ಪುಣೆ - 71.1%
- 18ನೇ ಸ್ಥಾನ ಮುಂಬೈ - 63.2%
- 23ನೇ ಸ್ಥಾನ ನವದೆಹಲಿ - 60.2%
- 29ನೇ ಸ್ಥಾನ ಕೋಲ್ಕತ್ತಾ - 58.9%
- 30ನೇ ಸ್ಥಾನ ಜೈಪುರ - 58.7%
- 32ನೇ ಸ್ಥಾನ ಚೆನ್ನೈ - 58.6%.


Click it and Unblock the Notifications