ಬೆಂಗಳೂರು: ಸಂಚಾರ ನಿಯಮ ಬ್ರೇಕ್ ಮಾಡುವಂತಹ ಪ್ರಕರಣಗಳು ದಿನೇ ದಿನೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚಾಗುತ್ತಲೇ ಇದ್ದು, ಇದನ್ನು ಕಂಟ್ರೋಲ್ ಮಾಡಲು ಪೊಲೀಸರಿಗೆ ತಲೆನೋವಾಗಿದೆ. ಅದರಲ್ಲೂ ಇ-ಕಾಮರ್ಸ್ ಉತ್ಪನ್ನ ತಲುಪಿಸುವ ಡೆಲಿವರಿ ಬಾಯ್ಗಳು ಮಾಡುತ್ತಿರುವ ನಿಯಮ ಉಲ್ಲಂಘನೆಗಳೇ ಹೆಚ್ಚು...
ಹೌದು ಇದಕ್ಕಾಗಿ ದ್ವಿಚಕ್ರ ವಾಹನ ಚಾಲಕರ ವಿರುದ್ಧ ನವೆಂಬರ್ 10ರಂದು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆವೊಂದನ್ನು ನಡೆಸಿದರು. ಅದರಲ್ಲಿ ಸುಮಾರು 6,000 ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಕಾರ್ಯಾಚರಣೆಯು ಡೆಲಿವರಿ ಬಾಯ್ಗಳು ಮಾಡುತ್ತಿರುವ ನಿಯಮ ಉಲ್ಲಂಘನೆಗಳೇ ಅತಿ ಹೆಚ್ಚಾಗಿ ಕಂಡು ಬಂದಿವೆ. ಅದರಲ್ಲೂ ಚಾಲನೆಯ ಸಮಯದಲ್ಲಿ, ಒಟ್ಟು 5,979 ಉಲ್ಲಂಘನೆಗಳನ್ನು ದಾಖಲಿಸಲಾಗಿದ್ದು, ₹ 30.57 ಲಕ್ಷ ದಂಡವನ್ನು ವಿಧಿಸಲಾಗಿದೆ. ಅದರಲ್ಲೂ ಅತಿ ಹೆಚ್ಚಾಗಿ ಒನ್ವೇ ಟ್ರಾಫಿಕ್ನಲ್ಲಿ, ನೋ ಪಾರ್ಕಿಂಗ್, ಟ್ರಾಫಿಕ್ ಸಿಗ್ನಲ್ ಜಂಪ್, ಚಾಲನೆ ವೇಳೆ ಮೊಬೈಲ್ ಬಳಕೆ ಸೇರಿದಂತೆ ಹಲವು ಪ್ರಕರಣಗಳು ಪತ್ತೆಯಾಗಿವೆ.

ಹೆಲ್ಮೆಟ್ ಧರಿಸದೇ ಇರುವ ಸವಾರರಿಂದ ಅತಿ ಹೆಚ್ಚು ಉಲ್ಲಂಘನೆಯಾಗಿದ್ದು, 2,304 ಪ್ರಕರಣಗಳು ದಾಖಲಾಗಿವೆ. 1,260 ವಾಹನ ನಿಲುಗಡೆ, 671 ನೋ-ಎಂಟ್ರಿ ಜೋನ್ ಉಲ್ಲಂಘನೆ ಪ್ರಕರಣಗಳು ಮತ್ತು 523 ಹೆಲ್ಮೆಟ್ ಇಲ್ಲದ ಸವಾರರು ಇದ್ದಾರೆ.
ಶಾರ್ಟ್ ಡೆಲಿವರಿಗಾಗಿ ಹೆಚ್ಚಾಗಿ ಬಳಸುವ ಇ-ಬೈಕ್ ಗಳೂ ಮೋಟಾರು ವಾಹನ ಕಾಯ್ದೆ 1988 ರ ಅಡಿಯಲ್ಲಿ ಹೆಲ್ಮೆಟ್ ಮತ್ತು ದಾಖಲೆ-ಸಂಬಂಧಿತ ಉಲ್ಲಂಘನೆಗಳಿಂದ ವಿನಾಯಿತಿ ಪಡೆದಿದ್ದರೂ, ಫುಟ್‌ಪಾತ್‌ನಲ್ಲಿ ಸವಾರಿ ಮಾಡುವುದು, ಫುಟ್‌ಪಾತ್‌ನಲ್ಲಿ ಪಾರ್ಕಿಂಗ್, ಏಕಮುಖ ಟ್ರಾಫಿಕ್ ವಿರುದ್ಧ ಸವಾರಿ ಮಾಡುವುದು ಮತ್ತು ಸಿಗ್ನಲ್ ಜಂಪಿಂಗ್‌ನಂತಹ ಅಪರಾಧಗಳಿಗೆ ಪೊಲೀಸರು ದಂಡವನ್ನು ನೀಡಿದರು.
ಸಾರ್ವಜನಿಕ ಸಾರಿಗೆ ಅಳವಡಿಸಿಕೊಳ್ಳಿ
ಇತ್ತೀಚೆಗೆ, ಬೆಂಗಳೂರು ಟ್ರಾಫಿಕ್ ಪೊಲೀಸರು ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು, ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಮುಂದಿನ ಭವಿಷ್ಯದ ಪೀಳಿಗೆಗೆ ಹಸಿರು ನಗರವನ್ನು ಬೆಳೆಸಲು ಸಾರ್ವಜನಿಕ ಸಾರಿಗೆಯನ್ನು ಅಳವಡಿಸಿಕೊಳ್ಳುವಂತೆ ನಾಗರಿಕರನ್ನು ಒತ್ತಾಯಿಸಿದರು.
ವಿಶ್ವ ಸಾರಿಗೆ ದಿನದಂದು, ಐಟಿ ಉದ್ಯೋಗಿಗಳಿಗೆ ವಾರಕ್ಕೊಮ್ಮೆಯಾದರೂ ಸಾರ್ವಜನಿಕ ಸಾರಿಗೆಯನ್ನು ಬಳಸಲು ಪೊಲೀಸರು ನಿರ್ದಿಷ್ಟವಾಗಿ ಕರೆ ನೀಡಿದರು.
ವಿಶ್ವ ಸಾರ್ವಜನಿಕ ಸಾರಿಗೆ ದಿನದಂದು ಸಾರ್ವಜನಿಕ ಸಾರಿಗೆಯನ್ನು ಬೆಂಬಲಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಲು ಸಂಚಾರ ಪೊಲೀಸರು ಸಾರ್ವಜನಿಕರನ್ನು ಆಹ್ವಾನಿಸಿದರು. ಪ್ರತಿಜ್ಞೆಯು ನಾಗರಿಕರನ್ನು ದೈನಂದಿನ ಪ್ರಯಾಣಕ್ಕಾಗಿ ಸಾರ್ವಜನಿಕ ಸಾರಿಗೆಯನ್ನು ಬಳಸಲು ಪ್ರೋತ್ಸಾಹಿಸಿದ್ದರು. ಕಡಿಮೆ ಪ್ರಯಾಣಕ್ಕಾಗಿ ಸೈಕಲ್ ಅಥವಾ ವಾಕಿಂಗ್‌ನಂತಹ ಪರ್ಯಾಯ ಸಾರಿಗೆ ವಿಧಾನಗಳನ್ನು ಅನುಸರಿಸಿ..ಪರಿಸರ ಸ್ನೇಹಿ ಸಾರಿಗೆ ಆಯ್ಕೆಗಳನ್ನು ಅತಿ ಹೆಚ್ಚಾಗಿ ಬಳಕೆ ಮಾಡಿ ಎಂಬ ಎಚ್ಚರಿಕೆಯ ಸಂದೇಶ ನೀಡಿದ್ದರೂ ಕೂಡ ಟ್ರಾಫಿಕ್ ರೂಲ್ಸ್ ಮಾತ್ರ ಬ್ರೇಕ್ ಆಗುತ್ತಲೇ ಇದೆ..


Click it and Unblock the Notifications