ಬೆಂಗಳೂರು ಟ್ರಾಫಿಕ್ ಹಬ್, ಟ್ರಾಫಿಕ್ ಸಿಟಿ ಅಂತಲೇ ಹೆಸರುವಾಸಿ. ಟ್ರಾಫಿಕ್ ನಿಯಂತ್ರಣಕ್ಕೆ ಬೆಂಗಳೂರು ಸಂಚಾರಿ ಪೊಲೀಸರು ಮಾಡದೇ ಇರುವ ಕಸರತ್ತಿಲ್ಲ. ದಿನೇ ದಿನೆ ವಾಹನ ಸಂಚಾರ ದಟ್ಟಣೆ ಹೆಚ್ಚಾಗುತ್ತಲೇ ಇದೆ. ಬೆಂಗಳೂರಿನ ಹಲವೆಡೆ ಟ್ರಾಫಿಕ್‌ದೇ ಜಾಸ್ತಿ ಗೋಳಾಗಿದೆ. ಇತ್ತ ನಗರದ HAL ಏರ್‍ಪೋರ್ಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೂಡ ಸಂಚಾರ ದಟ್ಟನೆ ನಿಯಂತ್ರಿಸುವುದಕ್ಕೆ ಕಷ್ಟಕರವಾಗಿದೆ. ಹೀಗಾಗಿ ಸಂಚಾರಿ ಪೊಲೀಸರು ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಅದೇನೆಂದರೆ ಒಂದು ವಾರಗಳ ಕಾಲ ಒಂದು ಮಾರ್ಗದ ರಸ್ತೆಯಲ್ಲಿ ಸಂಚಾರ ನಿರ್ಬಂಧ ಮಾಡಿ, ಅದಕ್ಕೆ ಪಾರ್ಯಯ ಮಾರ್ಗ ನೀಡಲಾಗಿದೆ. ಈ ಬಗ್ಗೆ ಪ್ರಕಟಣೆಯನ್ನು ಕೂಡ ಹೊರಡಿಸಲಾಗಿದೆ.
ಹೌದು, HAL ಏರ್‍ಪೋರ್ಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟ್ರಾಫಿಕ್ ನಿಯಂತ್ರಿಸಲು ಕ್ರಮ ತೆಗೆದುಕೊಂಡಿರುವ ಟ್ರಾಫಿಕ್ ಪೊಲೀಸರು, ಕಾಡುಬೀಸಗನಹಳ್ಳಿಯಿಂದ ಕರಿಯಮ್ಮನ ಅಗ್ರಹಾರದ ಕಡೆಗೆ ಹೋಗುವ ಎಲ್ಲಾ ವಾಹನಗಳ ಸಂಚಾರಕ್ಕೆ ಒಂದು ವಾರಗಳ ಕಾಲ ನಿರ್ಬಂಧ ಹೇರಿದ್ದಾರೆ. ಅಂದರೆ ಫೆಬ್ರವರಿ 28ರಿಂದ ಮಾರ್ಚ್ 7ರವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಈ ಪ್ರಯೋಗದ ಮೂಲಕ ವಾಹನ ಸಂಚಾರ ದಟ್ಟಣೆ ತಡೆಯಬಹುದಾ ಎಂದು ನೋಡಲಿದ್ದಾರೆ.

ಇನ್ನು ಕಾಡಬೀಸಗನಹಳ್ಳಿಯಿಂದ ಕರಿಯಮ್ಮನ ಅಗ್ರಹಾರದ ಕಡೆಗೆ ಹೋಗುವ ಎಲ್ಲಾ ವಾಹನಗಳಿಗೂ ಪರ್ಯಾಯ ಮಾರ್ಗವಿದೆ. ಎಲ್ಲಾ ವಾಹನಗಳು ದೇವರಬೀಸನಹಳ್ಳಿ ಜಂಕ್ಷನ್ ಕಡೆಗೆ ಸಂಚರಿಸಿ, ಅಲ್ಲಿ ಯುಟರ್ನ್ ಪಡೆದುಕೊಂಡು ಸಕ್ರಾ ಆಸ್ಪತ್ರೆಯ ಮುಖ್ಯರಸ್ತೆ ಮೂಲಕ ಕರಿಯಮ್ಮನ ಅಗ್ರಹಾರದ ಕಡೆ ಹೋಗಬೇಕಿದೆ. ಚಾಲಕರು ದಯವಿಟ್ಟು ಈ ಮಾರ್ಗವನ್ನು ಅನುಸರಿಸಿ ಮತ್ತು ಸಂಚಾರ ನಿಯಮಗಳನ್ನು ಪಾಲಿಸಬೇಕೆಂದು, ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಾಹಿಲ್ ಬಾಗ್ಲಾ, ಐಪಿಎಸ್ ಮನವಿ ಮಾಡಿದ್ದಾರೆ.
ಇನ್ನು ಹೆಚ್‌ಎಎಲ್ ಏರ್ಪೋರ್ಟ್ ರಸ್ತೆಯಲ್ಲಿ ಸದಾ ಟ್ರಾಫಿಕ್ ದಟ್ಟಣೆ ಹೆಚ್ಚಾಗಿರುತ್ತದೆ. ಹೀಗಾಗಿ ವಾಹನ ಸವಾರರಿಗಾಗಿ ಸಂಚಾರಿ ಪೊಲೀಸರು ಆಗಾಗ ಹಲವು ನಿರ್ಬಂಧಗಳನ್ನು ತರುತ್ತಾರೆ. ಇವುಗಳ ಉದ್ದೇಶ ಸಂಚಾರ ಅಡೆ-ತಡೆಗಳನ್ನು ಕಡಿಮೆ ಮಾಡುವುದಾಗಿದೆ. ಇದರ ಜೊತೆಗೆ ವಾಹನ ಸವಾರರ ಸುರಕ್ಷತೆಯೂ ಮುಖ್ಯ ಉದ್ದೇಶವಾಗಿದೆ. ಹೀಗಾಗಿ ವಾಹನ ಸವಾರರು ಒಂದಷ್ಟು ಪ್ರಮುಖ ನಿಯಮಗಳನ್ನು ಅನುಸರಿಸಬೇಕು.
ಅಂದರೆ ಹೆಚ್‌ಎಎಲ್ ಏರ್‍ಪೋರ್ಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಹೆಚ್ಚು ಟ್ರಾಫಿಕ್ ಇರುವುದರಿಂದ ವಾಹನ ಸವಾರರು ವೇಗದ ಮಿತಿ ಅನುಸರಿಸಬೇಕು. ಗರಿಷ್ಠ 80 ಕಿಲೋಮೀಟರ್‌ಗಿಂತ ಹೆಚ್ಚು ವೇಗ ಮೀರಿಸಬಾರದು. ಈ ಮಿತಿಯನ್ನು ಮೀರುವ ವಾಹನ ಚಾಲಕರ ವಿರುದ್ಧ ಓವರ್‌ಸ್ಪೀಡ್ ಪ್ರಕರಣಗಳು ದಾಖಲಿಸಲಾಗುತ್ತದೆ.
ವಾಹನ ಸವಾರರ ವೇಗ ನಿಯಂತ್ರಣಕ್ಕಾಗಿ ಸಂಚಾರಿ ಪೊಲೀಸರು ಸ್ಪೀಡ್ ಕ್ಯಾಮೆರಾಗಳ ಮೊರೆ ಹೋಗಿದ್ದಾರೆ. ಅಪಘಾತಗಳನ್ನು ತಡೆಯಲು, ಹೆಚ್‌ಎಎಲ್ ಏರ್ಪೋರ್ಟ್ ರಸ್ತೆಯಲ್ಲಿ 8 ಸ್ವಯಂ ಕಾರ್ಯನಿರ್ವಹಣೆಯ ಸ್ಪೀಡ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಮೂಲಕ ಅನಾಹುತಗಳನ್ನು ತಡೆಯುವುದಾಗಿದೆ
ಸಂಚಾರ ದಟ್ಟಣೆ ನಿಯಂತ್ರಿಸಲು ಸಲಹೆಗಳು:
-ವಾಹನ ಸವಾರರು ಸಂಚಾರಿ ಪೊಲೀಸರ ಅಪ್‌ಡೇಟ್‌ಗಳನ್ನು ತಪ್ಪದೇ ಅನುಸರಿಸಬೇಕು
-ವಾಹನ ಸವಾರರು ಸಾಧ್ಯವಾದರೆ ಹೆಚ್ಚು ಟ್ರಾಫಿಕ್‌ನಿಂದ ಕೂಡಿದ ಸಮಯದಲ್ಲಿ ಸಂಚಾರ ತಪ್ಪಿಸಿದರೆ ಒಳ್ಳೆಯದು.
-ಅತಿಹೆಚ್ಚು ಟ್ರಾಫಿಕ್ ಇರುವ ಸಮಯದಲ್ಲಿ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವುದು ಉತ್ತಮ
-ಯಾವುದೇ ಕಾರಣಕ್ಕೂ, ಎಂಥದ್ದೇ ಸಂದರ್ಭದಲ್ಲೂ ವೇಗ ನಿಯಮ ಉಲ್ಲಂಘಿಸಬೇಡಿ
ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಟ್ರಾಫಿಕ್ ಇಲ್ಲದೇ ಇರುವುದನ್ನು ನೋಡುವುದೇ ಅಪರೂಪ. ಹಬ್ಬ-ಹರಿದಿನ, ಸರ್ಕಾರಿ ರಜಾ ದಿನಗಳು ಹೀಗೆ ಒಂದಷ್ಟು ದಿನಗಳಲ್ಲಿ ಬೆಂಗಳೂರಿನ ಟ್ರಾಫಿಕ್ ಕೊಂಚ ಕಡಿಮೆ ಇರುತ್ತದೆ. ಆದರೆ ಹಬ್ಬದ ಹಿಂದಿನ ದಿನದವರೆಗೂ ಬೆಂಗಳೂರು ಟ್ರಾಫಿಕ್ ಮಯವಾಗಿರುತ್ತದೆ. ಇನ್ನು ಸರ್ಕಾರಿ ರಜೆಗಳಲ್ಲಿ ಅತಿಹೆಚ್ಚು ಜನ ಪ್ರಯಾಣ ಬೆಳೆಸಲು ರಸ್ತೆಗೆ ಇಳಿಯುವುದಿಲ್ಲ. ಇದೊಂದು ರೀತಿ ಟ್ರಾಫಿಕ್ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಆದರೆ ಪ್ರತಿದಿನ ಬೆಂಗಳೂರಿನಲ್ಲಿ ಟ್ರಾಫಿಕ್ ಅನ್ನೋದು ಒಂದಲ್ಲಾ ಒಂದು ರೀತಿಯಲ್ಲಿ ಬಿಸಿ ಮುಟ್ಟಿಸುತ್ತದೆ.


Click it and Unblock the Notifications