ಬೆಂಗಳೂರಿನ ಸವಾರನಿಂದ 311 ಬಾರಿ ನಿಯಮ ಉಲ್ಲಂಘನೆ, ₹1.61 ಲಕ್ಷ ದಂಡ; ಮುಂದೇನಾಯಿತು?

ವಾಹನ ಸವಾರರು ಜವಬ್ದಾರಿಯಿಂದ ವರ್ತಿಸಬೇಕು, ರಸ್ತೆ ನಿಯಮ ಉಲ್ಲಂಘಿಸಬಾರದು, ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿಬೇಕು. ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ಖಚಿತವಾಗಿರುತ್ತದೆ, ಇದಲ್ಲದೇ ಸಂಚಾರ ನಿಯಮ ಪಾಲನೆ, ರಸ್ತೆ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅಪಘಾತ ಪ್ರಕರಣಗಳ ಸಂಖ್ಯೆ ತಗ್ಗಿಸುವ ನಿಟ್ಟಿನಲ್ಲಿ ಸಂಚಾರ ಪೊಲೀಸರು ಹಲವಾರು ಜಾಗೃತಿ ಜಾಥಾಗಳನ್ನು ನಡೆಸುತ್ತಾರೆ. ಆದರೆ ಬೆಂಗಳೂರಿನ ಈ ಒಬ್ಬ ದ್ವಿಚಕ್ರ ಸವಾರನಿಗೆ ಇದ್ಯಾವುದು ಲೆಕ್ಕಕ್ಕೇ ಇದ್ದಂತೆ ಕಾಣುತ್ತಿಲ್ಲ.!

ಹೌದು ಬೆಂಗಳೂರು ನಗರದಲ್ಲಿ ಸಂಚಾರ ನಿಯಮವನ್ನು ಉಲ್ಲಂಘಿಸಿದ ಸಂಬಂಧ ಪೊಲೀಸರು ದ್ವಿಚಕ್ರ ಸವಾರನಿಗೆ ಬರೋಬ್ಬರಿ 1.61 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಇನ್ನು ವಿಚಿತ್ರ ಎಂದರೆ ಆತ ಬರಿಸಬೇಕಾದ ದಂಡದ ಮೊತ್ತ ವಾಹನದ ಮೌಲ್ಯಕ್ಕಿಂತ ದುಪ್ಪಟ್ಟು.! ಈತ ಬೆಂಗಳೂರು ಮಹಾನಗರದಲ್ಲಿ ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದಿದ್ದಾನೆ.

ಬೆಂಗಳೂರಿನ ದ್ವಿಚಕ್ರ ಸವಾರನಿಗೆ  ₹1.61 ಲಕ್ಷ ದಂಡ

KA 05 JX 1344 ನೋಂದಣಿ ಸಂಖ್ಯೆಯ ಸ್ಕೂಟರ್ ಸವಾರನು ಪೊಲೀಸರ ದಂಡಾಸ್ತ್ರಕ್ಕೆ ಜಗ್ಗದೇ ರಸ್ತೆ ನಿಯಮ ಉಲ್ಲಂಘಿಸುವುದನ್ನೇ ಚಾಳಿ ಮಾಡಿಕೊಂಡಿದ್ದ. 300 ಕ್ಕೂ ಹೆಚ್ಚು ಸಂಚಾರ ಉಲ್ಲಂಘನೆಗಳನ್ನು ಮಾಡಿ ದಂಡ ಪಾವತಿಸದೆ ತಪ್ಪಿಸಿಕೊಂಡಿದ್ದ. ಹೆಲ್ಮೆಟ್ ಧರಿಸದಿರುವುದು, ಸಿಗ್ನಲ್ ಜಂಪ್, ಏಕಮುಖ ಸಂಚಾರದ ರಸ್ತೆಯಲ್ಲಿ ವಿರುದ್ದ ದಿಕ್ಕಿನಲ್ಲಿ ಚಾಲನೆ, ನಿರ್ಬಂಧಿತ ಸ್ಥಳದಲ್ಲಿ ವಾಹನ ಪಾರ್ಕಿಕ್ ಸೇರಿದಂತೆ ಹತ್ತು ಹಲವು ಸಂಚಾರ ನಿಯಮ ಉಲ್ಲಂಘಿಸಿದ್ದ.

ಸಿಟಿ ಮಾರುಕಟ್ಟೆ ಸಂಚಾರ ಪೊಲೀಸರು ದಂಡ ಪಾವತಿಸದೆ ತಪ್ಪಿಸಿಕೊಂಡಿದ್ದ ವಾಹನದ ಚಾಲಕ ಸುದೀಪ್ ಎಂಬಾತನನ್ನು ಬಂಧಿಸಿ ವಾಹನ ವಶಕ್ಕೆ ಪಡೆದಿದ್ದು, ವಾಹನದ ಮಾಲೀಕ ಪೆರಿಯ ಸ್ವಾಮಿ, ಅವರಿಗೆ ನೋಟಿಸ್ ನೀಡಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಬಂದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ದಂಡ ಮೊತ್ತವು ದ್ವಿಚಕ್ರ ವಾಹನ ಮೌಲ್ಯಕ್ಕಿಂತ ಹೆಚ್ಚಿದ್ದು, ಸಂಚಾರ ಪೊಲೀಸರು ಈ ಸವಾರನ ವಿರುದ್ದ ಯಾಕೆ ಕ್ರಮ ಕೈಗೊಂಡಿಲ್ಲ, ಆರ್ ಟಿಓ ಅಧಿಕಾರಿಗಳು ಯಾಕೆ ಕ್ರಮ ವಾಹನ ಜಪ್ತಿ ಮಾಡಿಲ್ಲ ಎಂದು ನೆಟ್ಟಿಗರು ಪ್ರಶ್ನಿಸಿದ ಬೆನ್ನಲ್ಲೇ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.

ಈ ವಾಹನದ ಮೌಲ್ಯ ಸುಮಾರು 50,000 ರೂ. ಆಗಿದ್ದು, ದ್ವಿಚಕ್ರ ವಾಹನಕ್ಕೆ 1.61 ಲಕ್ಷ ರೂ. ದಂಡ ವಿಧಿಸಲಾಗಿದೆ. ಫೆಬ್ರವರಿ 2023 ರಿಂದ 311 ಸಂಚಾರ ದಂಡಗಳು ಇದರ ವಿರುದ್ದ ಬಾಕಿ ಇದೆ. ಈ ಸವಾರಿಗೆ ಕಳೆದ ವರ್ಷ 1,05,500 ರೂ. ದಂಡ ವಿಧಿಸಿದ್ದರೆ, ಈ ವರ್ಷ 56 ಸಾವಿರ ರೂ. ದಂಡ ವಿಧಿಸಲಾಗಿದೆ.

ಪಾನಮತ್ತ ಚಾಲನೆ: 80 ಲಕ್ಷ ರೂ. ದಂಡ ಸಂಗ್ರಹ

ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. . ಜನವರಿ 27 ರಿಂದ ಫೆಬ್ರವರಿ 2 ರವರೆಗೆ 80 ಲಕ್ಷ ರೂಪಾಯಿ ದಂಡವನ್ನು ಸಂಗ್ರಹಿಸಲಾಗಿದೆ. ನಗರದ 50 ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ 62,300 ಚಾಲಕರನ್ನು ತಪಾಸಣೆ ಮಾಡಲಾಗಿದೆ ಮತ್ತು 800 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಕುಡಿದು ವಾಹನ ಚಲಾಯಿಸುತ್ತಿದ್ದ 800 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಅತಿವೇಗವಾಗಿ ವಾಹನ ಚಲಾಯಿಸಿದ 228 ಜನರ ವಿರುದ್ಧ ಪ್ರಕರಣ ದಾಖಲಿಸಿ 2.30 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+