ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಬಹುನಿರೀಕ್ಷಿತ ಹೆಬ್ಬಾಳ ಸಿಲ್ಕ್ ಬೋರ್ಡ್ ನಡುವಿನ ಅಂದಾಜು 22,000 ಕೋಟಿ ವೆಚ್ಚದ ಸುರಂಗ ರಸ್ತೆಯ ಯೋಜನೆಯು ಸದ್ಯಕ್ಕೆ ಪರಿಶೀಲನೆಯ ಹಂತದಲ್ಲಿದೆ. ಆದರೆ ಈ ಕಾಮಗಾರಿಕೆಯು ಸಂಚಾರ ದಟ್ಟಣೆ ಕಡಿಮೆ ಮಾಡುವ ಬದಲು ಮತ್ತಷ್ಟು ಹೆಚ್ಚಳ ಆಗುವುದಕ್ಕೆ ಕಾರಣವಾಗಿದೆ.

ಈ ಯೋಜನೆಯು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕನಸಿನ ಕೂಸು ಆಗಿದೆ.ಆದರೆ, ಯೋಜನೆಯ ಅಂತಿಮ ವರದಿಯ ಪ್ರಕಾರ, ಸುರಂಗದ ಪ್ರವೇಶ ಮತ್ತು ನಿರ್ಗಮನಕ್ಕೆ ಇರುವ ಇಳಿಜಾರುಗಳು 16 ಹೊಸ ಸಂಚಾರ ದಟ್ಟಣೆಯ ತಾಣಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ ಎಂದು 'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿಯನ್ನು ಕೂಡ ಮಾಡಿದೆ.
ಬೆಂಗಳೂರಿನ ಈ ಸುರಂಗದ ಪ್ರವೇಶ ಮತ್ತು ನಿರ್ಗಮನ ಇಳಿಜಾರುಗಳನ್ನು ಈಗಾಗಲೇ ಸಂಚಾರ ದಟ್ಟಣೆಯಿಂದ ಕೂಡಿರುವುದರಿಂದ ಇದೇ ಪ್ರದೇಶಗಳಲ್ಲಿ ನಿರ್ಮಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಅವುಗಳಲ್ಲಿ ಹೆಬ್ಬಾಳ ಫ್ಲೈಓವರ್, ಐಐಎಸ್‌ಸಿ ಕ್ಯಾಂಪಸ್, ಮಹಾರಾಣಿ ಕಾಲೇಜು ಜಂಕ್ಷನ್, ಫ್ರೀಡಂ ಪಾರ್ಕ್, ಅಶೋಕ ಸ್ತಂಭದ ಬಳಿಯ ವಿಲ್ಸನ್ ಗಾರ್ಡನ್ ಮತ್ತು ಹೊಸೂರು ರಸ್ತೆಗಳು ಸೇರಿಗೊಂಡಿವೆ.
ಬೆಂಗಳೂರಿನ ಸುರಂಗದ ಮಧ್ಯ ಭಾಗದ ಉದ್ದ 16.68 ಕಿ.ಮೀ. ಆದರೆ, ಇಳಿಜಾರುಗಳ ಕಾರಣದಿಂದಾಗಿ ವಾಸ್ತವವಾಗಿ ವಾಹನ ಸವಾರರು ಒಂದು ದಿಕ್ಕಿನಲ್ಲಿ ಸುಮಾರು 18.91 ಕಿ.ಮೀ. ಪ್ರಯಾಣಿಸಬೇಕಾಗುತ್ತದೆ. ಇದರ ಜೊತೆಗೆ ಮೇಲ್ಮೈ ರಸ್ತೆಗಳಲ್ಲಿನ ಹೆಚ್ಚುವರಿ ಪ್ರಯಾಣವು ಒಟ್ಟು ದೂರವನ್ನು 19 ಕಿ.ಮೀ.ಗಿಂತಲೂ ಹೆಚ್ಚಿಸಬಹುದು ಎಂದು ಅಂದಾಜು ಮಾಡಲಾಗಿದೆ.
ಈ ಯೋಜನೆ ವೇಗದ ಪ್ರಯಾಣವನ್ನು ಈಡೇರುವುದಿಲ್ಲ. ಬದಲಿಗೆ ಪ್ರಯಾಣದ ಸಮಯ, ಇಂಧನ ಬಳಕೆ ಮತ್ತು ಸಾರ್ವಜನಿಕರ ಹತಾಶೆಯನ್ನು ಹೆಚ್ಚಿಸುಸಲು ಕಾರಣವಾಗುತ್ತದೆ ಎಂದು ಹೇಳುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ 18 ಕಿಲೋಮೀಟರ್ ಉದ್ದದ ಅವಳಿ ಭೂಗತ ಸುರಂಗ ರಸ್ತೆ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಜಾಗತಿಕ ಟೆಂಡರ್‌ಗಳನ್ನು ಆಹ್ವಾನವನ್ನು ಮಾಡಲಾಗುತ್ತದೆ. ಇದು ಬೃಹತ್ ಟನಲ್ ಸುರಂಗ ರಸ್ತೆ ಯೋಜನೆಯಾಗಿದೆ.
ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಗುರಿ
ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗಿನ ಉತ್ತರ-ದಕ್ಷಿಣ ಕಾರಿಡಾರ್ ಮತ್ತು ಪೂರ್ವ-ಪಶ್ಚಿಮ ಕಾರಿಡಾರ್ ಅನ್ನು ಒಳಗೊಂಡಿರುವ ಬಿಬಿಎಂಪಿಯ ಸುರಂಗ ಯೋಜನೆಯು ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಈ ಯೋಜನೆಯನ್ನು ಹೊಂದಿದೆ.
ಹೊಸ ಯು-ಟರ್ನ್‌ಗಳು, ಕಿರಿದಾದ ರಸ್ತೆಗಳು, ತಿರುವುಗಳು ನಗರದ ಸಂಚಾರವನ್ನು ಇನ್ನಷ್ಟು ಹದಗೆಡಿಸುತ್ತವೆ ಎಂದು ಸಿಟಿಜನ್ಸ್ ಫಾರ್ ಸಿಟಿಜನ್ಸ್ (C4C) ಸಂಸ್ಥೆಯ ಸಂಸ್ಥಾಪಕ ರಾಜ್‌ಕುಮಾರ್ ದುಗರ್ ಎಚ್ಚರಿಸಿದ್ದಾರೆ. ಈ ಸುರಂಗ ಮಾರ್ಗವನ್ನು ಬಳಸದವರಿಗೂ ಇದು ತೊಂದರೆ ಉಂಟುಮಾಡಬಹುದು ಎಂದು ಅವರು ಅಭಿಪ್ರಾಯವನ್ನು ಮಾಡಿದ್ದಾರೆ.
ಸುರಂಗ ರಸ್ತೆ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಅಡಚಣೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಕೂಡ ಹೇಳಿದ್ದಾರೆ.
ಸುರಂಗ ಮಾರ್ಗವು ಹಮವಾರು ತೊಂದರೆಗಳನ್ನು ಅನುಭವಿಸುತ್ತಿದೆ. ಸದ್ಯದಲ್ಲಿ ಎಲ್ಲಾ ಸಮಸ್ಯೆಯೂ ಪರಿಹಾರವಾಗಿ ಸುರಂಗ ಮಾರ್ಗ ಉದ್ಘಾಟನೆಗೆ ಸಿದ್ದವಾಗುತ್ತದೆ.


Click it and Unblock the Notifications