ಬೆಂಗಳೂರು : ಆಹಾರ ಪ್ರಿಯರ ಬಾಯಲ್ಲಿ ಸದಾ ಹರಿದಾಡುವಂತಹ ಒಂದು ಆಪ್ ಅಂದ್ರೆ ಅದು ಝೋಮ್ಯಾಟೋ ಮಾತ್ರ. ಕೂತಲ್ಲೇ ತಮಗೆ ಬೇಕಾದ ಆಹಾರವನ್ನ ಕ್ಷಣಾರ್ಧದಲ್ಲಿ ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡುತ್ತದೆ. ಇದೇ ಝೋಮ್ಯಾಟೋ ಈಗ ಹೊಸ ವೈಶಿಷ್ಟ್ಯತೆಯನ್ನ ಜನರಿಗೆ ಪರಿಚಯಿಸಿದೆ.
ಆಹಾರ ಪ್ರಿಯರ ಮನೆಮಾತಾಗಿರುವ ಝೊಮ್ಯಾಟೋ ಫುಡ್ ರೆಸ್‌ಕ್ಯೂ ಎನ್ನುವ ಹೊಸ ಫೀಚರ್ ಒಂದನ್ನ ಅನಾವರಣಗೊಳಿಸಿದೆ. ಝೊಮ್ಯಾಟೋದಲ್ಲಿ ಅತೀ ಹೆಚ್ಚು ಆರ್ಡರ್‌ಗಳು ರದ್ದಾಗುವುದನ್ನ ತಡೆಯಲು ಈ ಹೊಸ ಫೀಚರ್ ಸಹಾಯವಾಗಲಿದೆ.
ಅಲ್ಲದೆ ಝೋಮ್ಯಾಟೋ ಒಂದರರಲ್ಲಿ 4,00,000 ಕ್ಕೂ ಹೆಚ್ಚು ಫುಡ್ ರದ್ದಾಗಿರುವುದು ತಿಳಿದುಬಂದಿದೆ. ಜೊತೆಗೆ ಫುಡ್ ರೆಸ್‌ಕ್ಯೂ ಫೀಚರ್‌ನಿಂದಾಗಿ ರದ್ದು ಮಾಡಿದ ಆಹಾರವನ್ನ ಗ್ರಾಹಕರು ತಮ್ಮ ಹತ್ತಿರದ ಅಂಗಡಿಗಳಲ್ಲಿ ರಿಯಾಯಿತಿ ದರದಲ್ಲಿ ಖರೀದಿಸಬಹುದು. ಹಾಗೆ ಗ್ರಾಹಕರು ಕ್ಷಣಾರ್ಧದಲ್ಲಿ ತಮ್ಮ ಇಷ್ಟದ ಆಹಾರಗಳನ್ನ ಪಡೆಯಬಹುದಾಗಿದೆ. ಇದೇ ವಿಚಾರವಾಗಿ ಸಮಾಜಿಕ ಜಾಲತಾಣದಲ್ಲಿ ಹಲವು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಅವರಲ್ಲಿ ಓರ್ವ ಬೆಂಗಳೂರಿಗನ ಸಲಹೆ ಮಾತ್ರ ಝೊಮ್ಯಾಟೋದ ಸಿಇಒ ದೀಪಿಂದರ್ ಗೋಯಲ್ ಅವರ ಗಮನ ಸೆಳೆದಿದೆ.

ಸಿಇಒ ಗಮನಸೆಳೆದ ಕೆಲವು ಸಲಹೆಗಳು
ಝೊಮ್ಯಾಟೋ ಬಳಕೆದರರರಾದ ಬೆಂಗಳೂರಿನ ಭಾನು ಎಂಬುವವರು ಫುಡ್ ರೆಸ್‌ಕ್ಯೂ ವೈಶಿಷ್ಟ್ಯತೆಯಲ್ಲಿ ಒಂದಿಷ್ಟು ಬದಲಾವಣೆಗಳ ಬಗ್ಗೆ ಕೆಲವು ಸಲಹೆಗಳನ್ನ ನೀಡಿದ್ದಾರೆ. ಕ್ಯಾಶ್ ಆನ್ ಡೆಲಿವರಿ ಬದಲು ಪ್ರೀ ಪೇಡ್ ಆರ್ಡರ್‌ಗಳಿಗೆ ಮಾತ್ರ ಈ ಹೊಸ ಫೀಚರ್ ಅಳವಡಿಸುವುದರಿಂದ ಒಂದಿಷ್ಟು ಆರ್ಡರ್‌ಗಳ ರದ್ದತಿಯನ್ನ ತಡೆಯಬಹುದು ಎಂದು ಉಲ್ಲೇಖಿಸಿದ್ದಾರೆ. ಹಾಗೆ ಫುಡ್ ಡೆಲಿವರಿ ಮಾಡುವವರು 500 ದೂರದಲ್ಲಿರುವಾಗ ಗ್ರಾಹಕರು ಆರ್ಡರ್ ಮಾಡಿರುವ ಆಹಾರವನ್ನ ರದ್ದು ಮಾಡಲು ಅವಕಾಶ ಕಲ್ಪಿಸಬಾರದು. ಜೊತೆಗೆ ಅಂತವರಿಗೆ ರದ್ದು ಮಾಡುವ ಆಯ್ಕೆಯನ್ನೇ ನೀಡಬಾರದು ಎಂದು ಸಲಹೆ ನೀಡಿದ್ದಾರೆ.
ಇದರ ಜೊತೆಗೆ, ಮತ್ತೊಂದು ವಿಚಾರವಾಗಿ ಭಾನು ಧ್ವನಿ ಎತ್ತಿದ್ದಾರೆ. ಗ್ರಾಹಕರು ರೀಯಾತಿಯ ಸದುಪಯೋಗ ಪೆರಯುವ ಸಲುವಾಗಿ ಆರ್ಡರ್‌ಗಳನ್ನ ರದ್ದು ಮಾಡಬಹುದು. ಹೀಗಾಗಿ ಈ ಬಗ್ಗೆ ಸಹ ಗಮನಹರಿಸುವಂತೆ ತಿಳಿಸಿದ್ದಾರೆ. ಅಲ್ಲದೆ ಅಂತಹ ಸಮಸ್ಯೆಗಳ ನಿವಾರಣೆಗಾಗಿ ಕಂಪನಿ ಗ್ರಾಹಕರಿಗೆ ತಿಂಗಳಿಗೆ ಒಂದಿಷ್ಟು ಸೀಮಿತ ಸಂಖ್ಯೆಯಲ್ಲಿ ರದ್ದು ಮಾಡುವ ಅವಕಾಶಗಳನ್ನ ಕಲ್ಪಿಸಬೇಕು ಎಂದು ಉಲ್ಲೇಖಿಸಿದ್ದಾರೆ. ಅಂದರೆ ತಿಂಗಳಿಗೆ ಎರಡು ಭಾರಿ ಮಾತ್ರ ರದ್ದತಿಗೆ ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಭಾನು ಸಲಹೆಗೆ ದಿಪೀಂದರ್ ಮೆಚ್ಚುಗೆ
ಬೆಂಗಳೂರಿನ ಭಾನು ಸಲಹೆಗೆ ದೀಪಿಂದರ್ ಗೋಯಲ್ ಭಾನು ಅವರ ಎಕ್ಸ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಹೊಸ ಫೀಚರ್ ಅಳವಡಿಕೆಗೂ ಮುನ್ನ ಒಂದಿಷ್ಟು ಕ್ರಮಗಳನ್ನ ನಾವು ಈಗಾಗಲೇ ತೆಗೆದುಕೊಂಡಿದ್ದೇವೆ ಎಂದರು. ಜೊತೆಗೆ ಭಾನು ಉಲ್ಲೇಖಿಸಿದ ಕೆಲವು ಮಾಹಿತಿಗಳ ಬಗ್ಗೆ ವೃತ್ತಿಪರವಾಗಿ ಮತ್ತಷ್ಟು ಚರ್ಚೆ ಮಾಡಬಹುದಾ ಎಂದು ಕೇಳಿದ್ದಾರೆ. ಹಾಗೆ ಗೋಯಲ್ ಅವರ ಈ ಕೆಲಸದ ಪ್ರಸ್ತಾಪ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.
ಗೋಯಲ್ ಅವರ ಟ್ವೀಟ್‌ಗೆ ಭಾನು ಪ್ರತಿಕ್ರಿಯಿಸಿದ್ದಾರೆ. ನಾನು ಒಂದು ಸ್ಟಾರ್ಟ್ ಅಪ್ ಕಂಪನಿಯಲ್ಲಿ ಓರ್ವ ಪ್ರೊಡಕ್ಟ್ ಮ್ಯಾನೇಜರ್ ಆಗಿದ್ದು, ಝೋಮ್ಯಾಟೋ ಅಂತಹ ಕಂಪನಿ ನನ್ನ ಸಲಹೆಗೆ ಪ್ರತಿಕ್ರಿಯಿಸಿದ್ದು ಸ್ವಾಗತಾರ್ಹ ಎಂದಿದ್ದಾರೆ. ಅಲ್ಲದೆ ಭಾನು ಅವರು ಸಲಹೆ ಜೊತೆಗೆ ಝೋಮ್ಯಾಟೋ ಹಾಗೂ ಇದರ ಮತ್ತೊಂದು ಕಂಪನಿಯಾದ ಬ್ಲಿಂಕ್‌ಇಟ್ ಅನ್ನು ಆಗಾಗ ಟ್ಯಾಗ್ ಮಾಡಿರುವುದು ಕಂಡುಬಂದಿದೆ. ಇದನ್ನ ಗಮನಿಸಿದಾಗ ಭಾನು ಅವರಿಗೆ ಝೋಮ್ಯಾಟೋ ಅಂತಹ ಕಂಪನಿಗಳ ಮೇಲೆ ಹೆಚ್ಚಿನ ಆಸಕ್ತಿ ಇರುವುದು ತಿಳಿದುಬರುತ್ತದೆ.
ಗೋಯಲ್ ತಮ್ಮ ಎಕ್ಸ್ ಖಾತೆಯಲ್ಲಿ ಫುಡ್ ರೆಸ್‌ಕ್ಯೂ ಕುರಿತು ಹೇಳಿರುವ ಪ್ರಕಾರ, ಝೋಮ್ಯಾಟೋ ತನ್ನ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೆತ್ತಿಕೊಂಡ ನಂತರ ಕೂಡ ಪ್ರತಿ ತಿಂಗಳು 4,00,000 ಕ್ಕೂ ಹೆಚ್ಚು ಜನರರು ತಮ್ಮ ಆರ್ಡರ್‌ಗಳನ್ನ ರದ್ದು ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಹೀಗಾಗಿ ಆಹಾರವನ್ನ ಹಾಳುಮಾಡುವ ಬದಲು, ಈ ಹೊಸ ಫೀಚರ್‌ನ ಸಹಾಯದಿಂದ ಹತ್ತಿರದ ಗ್ರಾಹಕರಿಗೆ ರಿಯಾಥಿ ದರದಲ್ಲಿ ನೀಡುವುದರಿಂದ ಆಹಾರದ ಮರುಕೆಯನ್ನ ಮಾಡಬಹುದು ಎಂದಿದ್ದಾರೆ. ರದ್ದು ಮಾಡಿದ ಆರ್ಡರ್‌ಗಳನ್ನ ಹತ್ತಿರದ ಗ್ರಾಹಕರು ಖರೀದಿಸಲು ಮುಂದಾದಾಗ ಆ ಆರ್ಡರನ್ನ ಬೇಗ ಸ್ವೀಕರಿಸಲಾಗುವುದು. ಹಾಗೆ ಹೆಚ್ಚಿನ ಸುರತೆಗೆ ಕಡೆಗೆ ಒತ್ತು ನೀಡಿ ಆ ಮೂಲಕ ಟ್ಯಾಂಪರ್ ಪ್ರೂಫ್ ಕಂಟೈನರ್‌ಗಳನ್ನ ಬಳಕೆ ಮಾಡಲಾಗುವುದು ಎಂದು ಟ್ವೀಟ್ ಮೂಲಕ ಗೋಯಲ್ ತಿಳಿಸಿದ್ದಾರೆ.
ಇನ್ನು ಇತ್ತ ಫುಡ್ ರೆಸ್‌ಕ್ಯೂ ವೈಶಿಷ್ಯತೆಯಿಂದ ರೆಸ್ಟೋರೆಂಟ್‌ನ ಪಾಲುದಾರರಿಗೂ ಸಹ ಪರಿಹಾರ ಒದಗಿಸುವ ಕೆಲಸವನ್ನ ಝೊಮ್ಯಾಟೋ ಮಾಡಲಿದೆ. ಪ್ರತಿ ರದ್ದತಿ ನಂತರ ಸಹ ರೆಸ್ಟೋರೆಂಟ್‌ಗಳಿಗೆ ಪೂರ್ಣ ಹಣವನ್ನ ನೀಡಲಾಗುವುದು.ಹಾಗೆ ಮತ್ತೊಬ್ಬ ಗ್ರಾಹಕ ಆತ ಆ ಹಣದ ಹೆಚ್ಚುವರಿ ಭಾಗವನ್ನ ಪಡೆಯುತ್ತಾನೆ. ಇದರ ಜೊತೆಗೆ ಸರ್ಕಾರದ ಅಡಿಯಲ್ಲಿ ಬರುವ ತೆರಿಗೆಗಳನ್ನ ಹೊರತುಪಡಿಸಿ, ಮತ್ತೆ ಮಾರಾಟವಾಗುವ ಆಹಾರದ ಆರ್ಡರ್‌ಗಳಿಂದ ಝೋಮ್ಯಾಟೋಗೆ ಯಾವುದೇ ರೀತಿಯ ಲಾಭಗಳು ದೊರೆಯುವುದಿಲ್ಲ.


Click it and Unblock the Notifications