ಬೆಂಗಳೂರಿಗರೇ ಇಲ್ಲಿ ಕೇಳಿ... ನೀರನ್ನು ಬಳಕೆ ಮಾಡುವ ಮುನ್ನ ಇರಲಿ ಎಚ್ಚರ..ಈ ಎರಡು ದಿನಗಳ ಕಾಲ ಹೆಚ್ಚಾಗಿ ಬಳಕೆ ಮಾಡುವುದಕ್ಕೆ ಹೋಗಬೇಡಿ.. ಯಾಕೆಂದರೆ ಜೂನ್ 19 ಮತ್ತು 20 ರಂದು ಬೆಳಗ್ಗೆಯಿಂದ ಸಂಜೆ 6ಗಂಟೆವರೆಗೆ ಬಹುತೇಕ ಭಾಗಗಳಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ (Cauvery Water Supply) ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾಹಿತಿಯನ್ನು ತಿಳಿಸಿದೆ.
ಹೌದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಾವೇರಿ 5ನೇ ಹಂತದ ಕಾಮಗಾರಿ ನಡೆಯುತ್ತಿದೆ.ವಿದ್ಯುತ್ ನಿರ್ವಹಣೆ ಕಾರಣದಿಂದಾಗಿ ಕಾವೇರಿ ನೀರು ಸರಬರಾಜು ಸ್ಥಗಿತ ಅನಿವಾರ್ಯವಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ( BWSSB) ಮಾಹಿತಿಯನ್ನು ಹೇಳಿದ್ದು, ಮುಂಜಾಗ್ರತೆಯ ಕ್ರಮವಾಗಿ ಕಾವೇರಿ ನೀರು ಸಂಗ್ರಹಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಮನವಿಯನ್ನು ಮಾಡಿಕೊಂಡಿದೆ.

ಅಧಿಕೃತ ಹೇಳಿಕೆಯ ಪ್ರಕಾರ ಕಾವೇರಿ ನೀರು ಸರಬರಾಜು ಯೋಜನೆಯ ಹಂತ 1 ರಿಂದ 5 ರವರೆಗಿನ ಎಲ್ಲಾ ನೀರು ಸಂಸ್ಕರಣಾ ಘಟಕಗಳನ್ನು ಜೂನ್ 19 ರ ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಜೂನ್ 20ರ ಶುಕ್ರವಾರ ಬೆಳಿಗ್ಗೆ 6 ಗಂಟೆಯವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಮಾಹಿತಿಯನ್ನು ದೃಢಪಡಿಸಿದೆ.
ಟಿಕೆ ವಿಲೇಜ್‌ನಲ್ಲಿ ಅಸ್ತಿತ್ವದಲ್ಲಿರುವ ಹಂತ 5 ಮಾರ್ಗದೊಂದಿಗೆ ಹೊಸದಾಗಿ ನಿರ್ಮಿಸಲಾಗುತ್ತಿರುವ 3,000-ಮಿಮೀ ವ್ಯಾಸದ ಪೈಪ್‌ಲೈನ್ ಅನ್ನು ಸಂಯೋಜಿಸಲು ಮತ್ತು ಸಂಬಂಧಿತ ವಿದ್ಯುತ್ ವ್ಯವಸ್ಥೆಗಳ ನಿಯಮಿತ ನಿರ್ವಹಣೆಗೆ ಅನುಕೂಲಕ್ಕಾಗಿ ನಾವು ಈ ನೀರಿನ ಸ್ಥಗಿತ ಅನಿವಾರ್ಯವಿದೆ ಎಂದು ಹೇಳಿದ್ದಾರೆ.
ಇದಕ್ಕೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಒಪ್ಪಿಗೆಯಿಂದಾಗಿಈ ನವೀಕರಣಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿನ್ನು ತಿಳಿಸಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ( BWSSB) ಪ್ರಕಾರ,ದೀರ್ಘ ಕಾಲದವರೆಗೂ ನೀರಿನ ಪೂರೈಕೆಯನ್ನು ಸುಧಾರಿಸಲು ಮತ್ತು ಹೆಚ್ಚು ವಿಶ್ವಾಸಾರ್ಹ ಸೇವೆಯನ್ನು ಖಚಿತಪಡಿಸಿಕೊಳ್ಳಲು ಯೋಜಿತ ಕಾರ್ಯಗಳು ಅತ್ಯಗತ್ಯ. ಮುಂದಿನ ದಿನಮಾನಗಳಲ್ಲಿ ನೀರಿನ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸ್ಥಗಿತಗೊಳಿಸುವಿಕೆಯು ತಾತ್ಕಾಲಿಕವಾಗಿ ಅನಾನುಕೂಲವಾಗತ್ತದೆ ಎಂದು ವಕ್ತಾರರು ಮಾಹಿತಿಯನ್ನು ನೀಡಿದ್ದಾರೆ.
ಬೆಂಗಳೂರಿನಲ್ಲಿ ಹಂತ-1ರಿಂದ ಹಂತ-5 ರವರೆಗೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಜಲರೇಚಕ ಯಂತ್ರಾಗಾರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಇದರ ಪರಿಣಾಮವಾಗಿ ಬಿಬಿಎಂಪಿ ವ್ಯಾಪ್ತಿಯ ನಗರ ಪ್ರದೇಶಗಳಲ್ಲಿ ಕಾವೇರಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.
ಜಲಮಂಡಳಿ ಮೂಲಗಳ ಮಾಹಿತಿ ಪ್ರಕಾರ, ನಿರ್ದಿಷ್ಟ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಈ ತಾತ್ಕಾಲಿಕ ಸ್ಥಗಿತವಿದೆ. ಇದರ ಪರಿಣಾಮವಾಗಿ ಕೆಲ ಪ್ರದೇಶಗಳಲ್ಲಿ ನೀರಿನ ಒತ್ತಡ ಕಡಿಮೆಯಾಗುವ ಸಾಧ್ಯತೆ ಇದ್ದು, ಕೆಲವೆಡೆ ನೀರು ಸರಬರಾಜು ಸಂಪೂರ್ಣವಾಗಿ ನಿಲ್ಲಬಹುದು.
ಕಾವೇರಿ ಹಂತ 5
ಬೆಂಗಳೂರು ನಗರವು ನೀರಿನ ಪೂರೈಕೆಯಲ್ಲಿ ದೀರ್ಘಕಾಲದ ಕೊರತೆಯನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಸ್ಥಗಿತಗೊಂಡಿದೆ. ಇತ್ತೀಚಿಗೆ ಹೆಚ್ಚಾಗುತ್ತಿರುವ ನೀರಿನ ಬಿಕ್ಕಟ್ಟನ್ನು ಪರಿಹಾರಿಸಲು ಕಾವೇರಿ ಹಂತ 5 ಯೋಜನೆ ಅಡಿಯಲ್ಲಿ 50 ಲಕ್ಷ ಹೊಸ ಬಳಕೆದಾರರಿಗೆ, ವಿಶೇಷವಾಗಿ ನಗರದ ಹೊರವಲಯ ಮತ್ತು ಕಡಿಮೆ ಸೇವೆ ಸಲ್ಲಿಸುವ ಪ್ರದೇಶಗಳಲ್ಲಿ ಪೈಪ್ ನೀರಿನ ಪ್ರವೇಶವನ್ನು ವಿಸ್ತರಿಸಲು ಪ್ರಾರಂಭಿಸಲಾಯಿತು.
ಹೊಸ ನೀರು ಸರಬರಾಜು ವ್ಯವಸ್ಥೆ ಎಲ್ಲೆಲ್ಲಿ..?
ಹೊಸ ನೀರು ಸರಬರಾಜು ವ್ಯವಸ್ಥೆಯು ಮಹದೇವಪುರ, ಯಲಹಂಕ, ಯಶವಂತಪುರ, ಬೆಂಗಳೂರು ದಕ್ಷಿಣ, ಟಿ ದಾಸರಹಳ್ಳಿ, ಬ್ಯಾಟರಾಯನಪುರ, ರಾಜರಾಜೇಶ್ವರಿ ನಗರ, ಕೆಂಗೇರಿ ಮತ್ತು ಬೊಮ್ಮನಹಳ್ಳಿ ಸೇರಿದಂತೆ ಹಲವಾರು ಹೊರ ವಲಯಗಳಿಗೆ ಪ್ರಯೋಜನವನ್ನು ನೀಡುತ್ತದೆ. ಅನೇಕ ಹೊಸ ಸಂಪರ್ಕಗಳಿಗೆ ಹೆಚ್ಚಿನ ಠೇವಣಿ ವೆಚ್ಚಗಳು, ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ನಿಧಾನವಾಗುವುದರ ಬಗ್ಗೆ ಕಳವಳವನ್ನು ಅಲ್ಲಿನ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.


Click it and Unblock the Notifications