ಬೆಂಗಳೂರಿಗರೇ ಇಲ್ಲಿ ಕೇಳಿ... ಇಂದು ಹೊರಗಡೆ ಹೋಗುವ ಮುನ್ನ ಇರಲಿ ಎಚ್ಚರ.. ಯಾಕೆಂದರೆ ಇಂದು ಬೆಂಗಳೂರಿನಲ್ಲಿ ಸುಮಾರು 10.12 ಮಿ.ಮೀ ಮಳೆಯಾಗುವ ಸಾಧ್ಯತೆಯಿದೆ ಇದು ಎಂದು ವರದಿಗಳು ಆಗಿವೆ.
ಹೌದು, ಬೆಂಗಳೂರಿನಲ್ಲಿ ಸುಮಾರು 10.12 ಮಿ.ಮೀ ಸಾಧರಣವಾದ ಮಳೆಯಾಗುವ ಸಾಧ್ಯತೆಯಿದೆ. ತಾಪಮಾನವು 20.6°C ನಿಂದ 25.8°C ವರೆಗೆ ಇರುತ್ತದೆ. ಶೇಕಡಾ 92 ರಷ್ಟು ಮಳೆಯಾಗುವ ಆಗುವ ಸಾಧ್ಯತೆ ಹೆಚ್ಚಾಗಿ ಇದೆ.ಮಳೆಯ ರಭಸಕ್ಕೆ ಗಾಳಿಯ ವೇಗ ಗಂಟೆಗೆ 23.8 ಕಿ.ಮೀ ಇರುತ್ತದೆ.ಆದರೆ, ಗೋಚರತೆಯು 9.7 ಕಿ.ಮೀ ಗೆ ಕಡಿಮೆಯಾಗಬಹುದು.

ಇಂದು ಬೆಂಗಳೂರಿನಲ್ಲಿ ಮೋಡಲವಿದಂತಹ ವಾತವರಣವಿದ್ದದು, ಬೆಳಗ್ಗೆ ಸ್ವಲ್ಪ ಪ್ರಯಾಣದಲ್ಲಿ ತುಂತುರು ಮಳೆಯಿಂದ ದಿನ ಶುರುವಾಗಿದೆ. ಮಧ್ಯಾಹ್ನದ ಹೊತ್ತಗೆ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಗುಡುಗು ಸಹಿತ ಮಳೆಯಾಗುವ ಸಂಭವವಿದ್ದು, ನೇರಳಾತೀತ (UV) ಸೂಚ್ಯಂಕವು 1.8 ರಷ್ಟು ಕಡಿಮೆ ಇರಲಿದೆ.
ಆಷಾಡದ ತಂಪಾದ ಗಾಳಿ ಹೆಚ್ಚಾಗಿ ಬೀಸಲಿದೆ. ಬೆಳಿಗ್ಗೆ ಸುಮಾರು 21°C ನಷ್ಟು ತಾಪಮಾನ ಇದೆ. ಮಧ್ಯಾಹ್ನದ ವೇಳೆಗೆ ಗರಿಷ್ಠ 25.8°C ತಲುಪುವ ನಿರೀಕ್ಷೆಯಿದೆ. ಸಂಜೆಯಾಗುತ್ತಿದ್ದಂತೆ ತಾಪಮಾನವು 22°C ಗೆ ಇಳಿಯುತ್ತದೆ. ದಿನವಿಡೀ ಮೋಡ ಕವಿದ ವಾತಾವರಣ ಇರಲಿದೆ.
ಬೆಂಗಳೂರಿನಲ್ಲಿ ಮಳೇಯ ಕಾರಣದಿಂದಾಗಿ ವಿದ್ಯುತ್ ಸ್ಥಗಿತ,ಸಂಚಾರ ದಟ್ಟಣೆಯ ಮೇಲೆ ಹೆಚ್ಚಿನ ಪರಿಣಾವನ್ನು ಬೀರಬಹುದು. ಗಾಳಿಯ ವೇಗವು ಗಂಟೆಗೆ 23.8 ಕಿ.ಮೀ ಆಗಿರುವುದರಿಂದ, ತಾಪಮಾನವು ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಆದ್ದರಿಂದ, ದಿನವಿಡೀ ಮನೆಯಲ್ಲೇ ಉಳಿಯುವುದು ಉತ್ತಮವೆಂದು ಹೇಳಬಹುದು.
ಜುಲೈ 19 ಮತ್ತು 20 ರಂದು ಮಧ್ಯಮದಿಂದ ಹಗುರವಾದ ಮಳೆಯಾಗುವ ಸಾಧ್ಯತೆ ಸಹ ಇದೆ. ತಾಪಮಾನವು 19.8°C ಮತ್ತು 23°C ನಡುವೆ ಇರಲಿದೆ. ವಾತಾವರಣದಲ್ಲಿ ಹೆಚ್ಚಿನ ಮಟ್ಟವನ್ನು ಕಾಯ್ದುಕೊಳ್ಳಲಾಗುತ್ತದೆ. ಜುಲೈ 21 ಮತ್ತು 22 ರಂದು ಮಳೆಯ ಪ್ರಮಾಣವು ಸ್ವಲ್ಪ ಕಡಿಮೆಯಾಗುತ್ತದೆ. ಆದರೆ ಅಲ್ಲಲ್ಲಿ ತುಂತುರು ಮಳೆ ಮುಂದುವರಿಯುತ್ತದೆ. ಜುಲೈ 22 ರಂದು ಗಾಳಿಯ ವೇಗವು ಗಂಟೆಗೆ 29.2 ಕಿ.ಮೀ ತಲುಪಬಹುದು.
ಜುಲೈ 23 ಮತ್ತು 24 ರಂದು, ವಾರದ ಕೊನೆಯಲ್ಲಿ, ಮಧ್ಯಂತರ ಮಳೆಯಾಗುವ ಮುನ್ಸೂಚನೆಯಿದೆ ಮತ್ತು ತಾಪಮಾನವು ಸುಮಾರು 25°C ರಷ್ಟು ಸ್ಥಿರವಾಗಿರಲಿದೆ.
ಮಳೆಯ ಸಮಯದಲ್ಲಿ ಸುರಕ್ಷತಾ ಸಲಹೆಗಳು
- ಬಾಗಿಲು-ಕಿಟಕಿಗಳನ್ನು ಮುಚ್ಚಿ, ವಿದ್ಯುತ್ ಉಪಕರಣಗಳನ್ನು ಬಳಸದಿರುವುದು ಉತ್ತಮ (ಗುಡುಗು-ಮಿಂಚು ಇದ್ದರೆ) ನೀರು ಒಳಬರುವ ಸಾಧ್ಯತೆ ಇರುವ ವಾಸಸ್ಥಳವಿದ್ದರೆ, ಮುಖ್ಯ ದಾಖಲೆಗಳು, ಎಲೆಕ್ಟ್ರಾನಿಕ್ ಸಾಧನಗಳನ್ನು ಸುರಂಕ್ಷಿತವಾಗಿ ಇಡಿ.
- ನಿಮ್ಮ ಮನೆ ತಗ್ಗು ಪ್ರದೇಶವಿದ್ದರೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಿ.
- ನೀವು ಹೊರಗಡೆ ಹೋದಾಗ ವಿದ್ಯುತ್ ಕಂಬಗಳು, ಮರಗಳ ಕೆಳಗೆ ನಿಲ್ಲಬೇಡಿ (ಗುಡುಗು-ಮಿಂಚು ಹಾಗೂ ಮರ ಬಿಳುವಂತಹ ಅಪಾಯಗಳು ಇರುತ್ತವೆ) ನೀರು ನಿಂತ ರಸ್ತೆಗಳ ಮೂಲಕ ನಡೆಯುವುದು ಅಥವಾ ವಾಹನ ಚಲಾಯಿಸುವುದು ಅಪಾಯಕಾರಿ ಮಿಂಚು ಹೊಡೆಯುವ ಸಂಭವವಿರುವ ಪ್ರದೇಶಗಳಿಂದ ದೂರವಿರಿ
- ಜಲಾವೃತ ರಸ್ತೆಗಳಲ್ಲಿ ವಾಹನ ಚಲಾಯಿಸಬೇಡಿ. ವರ್ ಬ್ಯಾಂಕ್, ಟಾರ್ಚ್, ಬಾಟಲಿನ ನೀರು, ವೈದ್ಯಕೀಯ ಕಿಟ್ ಹತ್ತಿರ ಇಟ್ಟುಕೊಳ್ಳಿ.
- ಸರ್ಕಾರದ ಅಥವಾ ಹವಾಮಾನ ಇಲಾಖೆ (IMD) ನಿಂದ ನೀಡುವ ಎಚ್ಚರಿಕೆಗಳನ್ನು ಗಮನಿಸಿ. ಈ ಮೇಲಿನ ಕ್ರಮಗಳನ್ನು ಅನುಸರಿಸುವ ಮೂಲಕ ನೀವು ಮಳೆಯಿಂದ ಸುರಕ್ಷಿತವಾಗಿ ಇರಬಹುದು


Click it and Unblock the Notifications