Rain Alert in Bengaluru: ರಾಜ್ಯದಲ್ಲಿ 5 ದಿನ ಜೋರು ಮಳೆ! ಈ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್'? ಬೆಂಗಳೂರಿನ ವಾತವರಣ ಹೇಗಿದೆ?

ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದೆ.ತಂಪಾದ ವಾತವರಣವನ್ನು ಹೊಂದಿದೆ. ಆದರೆ, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುಂಬರುವ ದಿನಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯ ಸೂಚನೆಯನ್ನು ಕರ್ನಾಟಕದ ನಿವಾಸಿಗಳಿ ಕೊಟ್ಟಿದೆ.

ಮಳೆಯ ಅಬ್ಬರ ಇನ್ನೂ ಮುಂದಿನ ಐದು ದಿನಗಳವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.ಬೀರುಸಾದ ಹೆಚ್ಚಿನ ಗಾಳಿ ಬೀಸುವುದರಿಂದ ಹಳದಿ ಅಲರ್ಟ್ ಘೋಷಿಸಲಾಗಿದೆ. ಜುಲೈ 26 ರವರೆಗೆ ಇದು ಜಾರಿಯಲ್ಲಿ ಇರುತ್ತದೆ.ಈ ತೀವ್ರ ಮಳೆಯಿಂದಾಗಿ ನಗರದಲ್ಲಿ ನೀರು ನಿಲ್ಲುವ ಸಾಧ್ಯತೆ ಹಾಗೂಸಂಚಾರದಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ಐಎಂಡಿ ತಿಳಿಸಿದೆ.

ರಾಜ್ಯದಲ್ಲಿ 5 ದಿನ ಜೋರು ಮಳೆ!

ಯಾವೆಲ್ಲಾ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್?
ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ ಮುಂತಾದ ಕಡೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ತೀವ್ರ ಮಳೆಯಾಗುವ ಸಾಧ್ಯತೆ ಅತಿ ಹೆಚ್ಚಾಗಿ ಇದೆ. ಕರ್ನಾಟಕದ ಇತರ ಭಾಗಗಳಲ್ಲೂ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಬೆಂಗಳೂರಿನ ಹವಾಮಾನ ಹೇಗಿರಲಿದೆ?
ಬೆಂಗಳೂರಿನಲ್ಲಿ ಇನ್ನೂ ಐದು ದಿನಗಳ ಕಾಲ ಮಳೆ ಮುಂದುವರಿಯಲಿದೆ. ಜೊತಗೆ ತಂಪಾದ ವಾತವಾರಣ ಇರುತ್ತದೆ. ಆ‍ಷಾಡದ ತಂಪಾದ ಗಾಳಿ ಹೆಚ್ಚಾಗಿ ಬೀಸಲಿದೆ. ಬೆಂಗಳೂರಿನ ನಿವಾಸಿ ಹೊರಗಡೆ ಹೋಗುವ ಮುನ್ನ ಮುಚ್ಚರಿಕೆಯ ಕ್ರಮಗಳನ್ನು ಅನುಸರಿಸಿ ಎಂದು ಹವಾಮಾನ ಇಲಾಖೆ ಹೇಳಿದೆ.

ಹವಾಮಾನ ಮುನ್ಸೂಚನೆಯ ಪ್ರಕಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿನ್ನೆ ಸಾಧಾರಣ ಮಳೆಯಾಗಿದೆ. ದೇವನಹಳ್ಳಿ ತಾಲ್ಲೂಕಿನ ಬಿಜ್ಜಾವರದಲ್ಲಿ 42 ಮಿ.ಮೀ, ವೆಂಕಟಗಿರಿಕೋಟೆಯಲ್ಲಿ 36 ಮಿ.ಮೀ, ಹಾರೋಹಳ್ಳಿಯಲ್ಲಿ 33 ಮಿ.ಮೀ ಮಳೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಕುಪಹಳ್ಳಿಯಲ್ಲಿ 41 ಮಿ.ಮೀ, ಹೊಸಪೇಟೆಯಲ್ಲಿ 38 ಮಿ.ಮೀ, ವೆಂಕಟಾಪುರದಲ್ಲಿ 28 ಮಿ.ಮೀ ಮತ್ತು ನಾಗಮಂಗಲದಲ್ಲಿ 22 ಮಿ.ಮೀ ಮಳೆಯಾಗಿದೆ ಇಂದು ಕೂಡ ಮಳೆಯಾಗಬಹುದು.

ಜುಲೈ 21 ರಂದು ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ದಿನವಿಡೀ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ಜುಲೈ 22 ರಂದು ಮೋಡ ಕವಿದ ವಾತಾವರಣದೊಂದಿಗೆ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಸದ್ಯಕ್ಕೆ ಯಾವುದೇ ಎಚ್ಚರಿಕೆ ಜಾರಿಯನ್ನು ಇನ್ನೂ ಕೊಟ್ಟಿಲ್ಲ.

ಜುಲೈ 23 ರಂದು ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ.ಹವಾಮಾನ ಇಲಾಖೆ ಯಾವುದೇ ಎಚ್ಚರಿಕೆ ನೀಡಿಲ್ಲ.

ಜುಲೈ 24 ರಂದು ಮೋಡ ಕವಿದ ವಾತರವಣದ ಜೊತಗೆ ಮಧ್ಯಮ ಮಳೆಯಾಗುವಂತಹ ಸಾಧ್ಯತರ ಹೆಚ್ಚಾಗಿ ಇದೆ.ಇಂದುವರೆಗೂ ಯಾವುದೇ ಅಧಿಕೃತ ಎಚ್ಚರಿಕೆಯನ್ನು ನೀಡಿಲ್ಲ.

ಜುಲೈ 25 ರಂದು ನಿರಂತರವಾಗಿ ಮೋಡ ಕವಿದ ವಾತಾವರಣದ ಜೊತೆಗೆ ಮಳೆ ಮುಂದುವರಿಯುತ್ತದೆ. ಯಾವುದೇ ಎಚ್ಚರಿಕೆ ನೀಡಿಲ್ಲ.

ಜುಲೈ 26 ರಂದು ಮಳೆ ಬರುವಂತಹ ಸಾಧ್ಯತೆಯಂತೂ ಇದೆ ಹೇಳಿದೆ ಆದರೆ ಅಧಿಕಾರಿಗಳು ಯಾವುದೇ ಎಚ್ಚರಿಕೆ ನೀಡಿಲ್ಲ.

ಮಳೆಯ ಸಮಯದಲ್ಲಿ ಸುರಕ್ಷತಾ ಸಲಹೆಗಳು

  • ಬಾಗಿಲು-ಕಿಟಕಿಗಳನ್ನು ಮುಚ್ಚಿ, ವಿದ್ಯುತ್ ಉಪಕರಣಗಳನ್ನು ಬಳಸದಿರುವುದು ಉತ್ತಮ (ಗುಡುಗು-ಮಿಂಚು ಇದ್ದರೆ) ನೀರು ಒಳಬರುವ ಸಾಧ್ಯತೆ ಇರುವ ವಾಸಸ್ಥಳವಿದ್ದರೆ, ಮುಖ್ಯ ದಾಖಲೆಗಳು, ಎಲೆಕ್ಟ್ರಾನಿಕ್ ಸಾಧನಗಳನ್ನು ಸುರಂಕ್ಷಿತವಾಗಿ ಇಡಿ.
  • ನಿಮ್ಮ ಮನೆ ತಗ್ಗು ಪ್ರದೇಶವಿದ್ದರೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಿ.
  • ನೀವು ಹೊರಗಡೆ ಹೋದಾಗ ವಿದ್ಯುತ್ ಕಂಬಗಳು, ಮರಗಳ ಕೆಳಗೆ ನಿಲ್ಲಬೇಡಿ (ಗುಡುಗು-ಮಿಂಚು ಹಾಗೂ ಮರ ಬಿಳುವಂತಹ ಅಪಾಯಗಳು ಇರುತ್ತವೆ) ನೀರು ನಿಂತ ರಸ್ತೆಗಳ ಮೂಲಕ ನಡೆಯುವುದು ಅಥವಾ ವಾಹನ ಚಲಾಯಿಸುವುದು ಅಪಾಯಕಾರಿ ಮಿಂಚು ಹೊಡೆಯುವ ಸಂಭವವಿರುವ ಪ್ರದೇಶಗಳಿಂದ ದೂರವಿರಿ
  • ಜಲಾವೃತ ರಸ್ತೆಗಳಲ್ಲಿ ವಾಹನ ಚಲಾಯಿಸಬೇಡಿ. ವರ್ ಬ್ಯಾಂಕ್, ಟಾರ್ಚ್, ಬಾಟಲಿನ ನೀರು, ವೈದ್ಯಕೀಯ ಕಿಟ್ ಹತ್ತಿರ ಇಟ್ಟುಕೊಳ್ಳಿ.
  • ಸರ್ಕಾರದ ಅಥವಾ ಹವಾಮಾನ ಇಲಾಖೆ (IMD) ನಿಂದ ನೀಡುವ ಎಚ್ಚರಿಕೆಗಳನ್ನು ಗಮನಿಸಿ. ಈ ಮೇಲಿನ ಕ್ರಮಗಳನ್ನು ಅನುಸರಿಸುವ ಮೂಲಕ ನೀವು ಮಳೆಯಿಂದ ಸುರಕ್ಷಿತವಾಗಿ ಇರಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+