ಲೋಹದ ಹಕ್ಕಿಗಳ ಹಾರಾಟ ಇಂದಿನಿಂದ ಶುರು..ಹೌದು,ಏಷ್ಯಾದ ಅತಿದೊಡ್ಡ ಏರೋ ಶೋ( Aero Show) 15 ನೇ ಆವೃತ್ತಿ ಇಂದಿನಿಂದ ಆರಂಭವಾಗುತ್ತಿದೆ. ಫೆಬ್ರವರಿ 10 ರಿಂದ 14 ರವರೆಗೆ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ಕಾರ್ಯಕ್ರಮ ಇರಲಿದೆ. ಬಹುನಿರೀಕ್ಷಿತ ಏರೋ ಶೋ ನಡೆಯುವ ದಿನಗಳಲ್ಲಿ ಮಳೆ ಅಡಿಯಾಗಲಿದ್ದೀಯಾ? ಇದಕ್ಕೆ ಹವಾಮಾನ ಇಲಾಖೆ ಹೇಳಿದ್ದೇನು? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.
ಹೌದು ಏರೊ ಶೋ ದಿನ ಯುದ್ಧ ವಿಮಾನಗಳು ಆಕಾಶದಲ್ಲಿ ಪ್ರಾಬಲ್ಯ ಸಾಧಿಸುತ್ತಿರುವುದರಿಂದ, ವಾಯುನಲೆಯಲ್ಲಿ ಉತ್ಸಾಹ ಮನೆಮಾಡಿದೆ.ವೈಮಾನಿಕ ಪ್ರದರ್ಶನಗಳನ್ನು ವೀಕ್ಷಿಸಲು ಸಾವಿರಾರುವ ಜನರು ಏರೋ ಶೋನಲ್ಲಿ ಭಾಗವಹಿಸಲಿದ್ದಾರೆ.

ಏರೋ ಶೋಗೆ ಹವಾಮಾನ ಸಹಕರಿಸುತ್ತದೆಯೇ? ಹವಾಮಾನ ಇಲಾಖೆ ಹೇಳಿದ್ದೇನು?
ಭಾರತ ಹವಾಮಾನ ಇಲಾಖೆ (IMD) ಪ್ರಕಾರ ಏರೋ ಇಂಡಿಯಾ ಶೋ 2025 ರ ಪ್ರಮುಖ ದಿನಗಳು ಸೇರಿದಂತೆ, ಬೆಂಗಳೂರಿನಲ್ಲಿ ವಾರವಿಡೀ ಸ್ಪಷ್ಟವಾದ ಆಕಾಶವಿರುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.
ಸಚಿವ ರಾಜನಾಥ್ ಸಿಂಗ್ ಉದ್ಘಾಟನೆ
ಏರೋ ಶೋ ಕಾರ್ಯಕ್ರಮವನ್ನು ಭಾರತೀಯ ರಕ್ಷಣಾ ಇಲಾಖೆಯ ಸಚಿವ ರಾಜನಾಥ್ ಸಿಂಗ್ ಉದ್ಘಾಟನೆ ಮಾಡಲಿದ್ದಾರೆ. ಏರೋ ಶೋ ಮೊದಲ ಮೂರು ದಿನ ಅಂದರೆ ಫೆಬ್ರವರಿ 10,11,12ರವರೆಗೆ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯವಹಾರ ದಿನವಾಗಿರುತ್ತದೆ.
ಏರೋ ಶೋ ಭಾಗವಹಿಸಲು ಇರುವ ಪಾಸ್ ದರ
ಬಿಸಿನೆಸ್ ಪಾಸ್
ಭಾರತೀಯ ಪ್ರಜೆಗಳಿಗೆ 5,000 ರೂ
ವಿದೇಶಿ ಪ್ರಜೆಗಳಿಗೆ 50 ಯುಎಸ್ ಡಾಲರ್
ADVA ಪಾಸ್
ಭಾರತೀಯ ಪ್ರಜೆಗಳಿಗೆ 1,000 ರೂ
ವಿದೇಶಿ ಪ್ರಜೆಗಳಿಗೆ USD 50
ಸಾಮಾನ್ಯ ಸಂದರ್ಶಕ ಪಾಸ್
ಭಾರತೀಯ ಪ್ರಜೆಗಳಿಗೆ 2,500 ರೂ
ವಿದೇಶಿ ಪ್ರಜೆಗಳಿಗೆ ಯುಎಸ್ ಡಾಲರ್ 50
ಪ್ರದರ್ಶನ ಸಮಯಗಳ ವಿವರ
ಏರೋ ಇಂಡಿಯಾ 2025 ಪ್ರತಿದಿನ ಬೆಳಿಗ್ಗೆ 9.00 ರಿಂದ ಸಂಜೆ 6.00 ರವರೆಗೆ ನಡೆಯಲಿದ್ದು, ಪ್ರದರ್ಶನಗಳನ್ನು ಅನ್ವೇಷಿಸಲು, ಕಾರ್ಯಾಗಾರಗಳಿಗೆ ಹಾಜರಾಗಲು ಮತ್ತು ಅದ್ಭುತವಾದ ವೈಮಾನಿಕ ಪ್ರದರ್ಶನದ ಆನಂದವನ್ನು ಅನುಭವಿಸಲು ಸಂದರ್ಶಕರಿಗೆ ಸಾಕಷ್ಟು ಸಮಯವನ್ನು ನೀಡಲಾಗಿದೆ.
ಫೆಬ್ರವರಿ 13 ಮತ್ತು 14 ರಂದು, ಸಾರ್ವಜನಿಕರಿಗೆ ಮಿಲಿಟರಿ ವಿಮಾನಗಳು, ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳು ಹಾರಾಟಗಳ ಪ್ರದರ್ಶನಗಳು ನಡೆಯಲಿವೆ.
ಜಿಕೆವಿಕೆ ಕ್ಯಾಂಪಸ್‌ನಲ್ಲಿ ಉಚಿತ ಪಾರ್ಕಿಂಗ್
ಏರೋ ಶೋ ಸಂದರ್ಶಕರು ತಮ್ಮ ಪ್ರವೇಶ ವಲಯಗಳ ಆಧಾರದ ಮೇಲೆ ಗೊತ್ತುಪಡಿಸಿದ ಪ್ರದೇಶಗಳಲ್ಲಿ ನಿಲುಗಡೆ ಮಾಡಬಹುದು.ಉಚಿತ ಪಾರ್ಕಿಂಗ್ ಜಿಕೆವಿಕೆ ಕ್ಯಾಂಪಸ್‌ನಲ್ಲಿ ಉಚಿತ ಪಾರ್ಕಿಂಗ್ ಲಭ್ಯವಿದೆ.ಬಿಎಂಟಿಸಿ ಜಿಕೆವಿಕೆ ಮತ್ತು ಕಾರ್ಯಕ್ರಮ ನಡೆಯುವ ಸ್ಥಳದ ನಡುವೆ ಉಚಿತ ಎಸಿ ಶಟಲ್ ಬಸ್‌ಗಳನ್ನು ಒದಗಿಸುತ್ತದೆ.
ಏರೋ ಶೋಗೆ ದೇಶ ವಿದೇಶದಿಂದ ಗಣ್ಯರು ಭಾಗಿ
ಏಷ್ಯಾದ ಅತಿದೊಡ್ಡ ಏರೋ ಶೋ ಕಾರ್ಯಕ್ರಮ 1996ರಲ್ಲಿ ಶುರುವಾಗಿತು. ಅವತ್ತಿನಿಂದ ಇಲ್ಲಿಯವರೆಗೂ ಏರೋ ಇಂಡಿಯಾ ಪ್ರದರ್ಶನದ ಸರಣಿಯು ಪ್ರತಿ ಎರಡು ವರ್ಷಕ್ಕೊಮ್ಮೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತದೆ.ಈ ಕಾರ್ಯಕ್ರಮದ ಸಮಾವೇಶದಲ್ಲಿ ರಕ್ಷಣಾ ಸಚಿವರು ಹಾಗೂ ರಾಜ್ಯ ಖಾತೆ ರಕ್ಷಣಾ ಸಚಿವರು ಸೇರಿದಂತೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಹಾಗೂ ಮೂರು ಪಡೆಗಳ ಮುಖ್ಯಸ್ಥರು ಮತ್ತು ರಕ್ಷಣಾ ಕಾರ್ಯದರ್ಶಿಗಳು ಭಾಗವಿಹಿಸಲಿದ್ದಾರೆ. ಇವರ ಜೊತೆಗೆ ದೇಶ ವಿದೇಶದಿಂದ ಏರೋ ಶೋ ನೋಡಲು ದೇಶದ ಪ್ರಮುಖ ನಾಯಕರು ಮತ್ತು ಜನರು ಹೆಚ್ಚಾಗಿ ಆಗಮಿಸುತ್ತಾರೆ.
ಈ ಬಾರಿಯ ಏರ್ ಶೋ ಆವೃತ್ತಿಯಲ್ಲಿ ಹೊಸ ಪಾಲುದಾರಿಕೆ ರೂಪಿಸಲು ಮತ್ತು ದೇಶೀಯ ಪ್ರಕ್ರಿಯೆಯನ್ನು ವೇಗವಾಗಿ ಹುಡುಕಲು ಕೆಲವು ಯೋಜನೆ ರೂಪಿಸಲಾಗಿದೆ. ಈ ಭಾಗವಾಗಿ ರಕ್ಷಣಾ ಸಚಿವರ ಕಾನ್ಕ್ಲೇವ್, ಉದ್ಯಮ ಸಂಸ್ಥೆಗಳಲ್ಲಿನ ಸಿಇಒಗಳ ಚಿಂತನ ಮಂಥನ ಸಭೆ ಹಾಗೂ ದೇಶೀಯ ಉತ್ಪನ್ನ ಸಾಮರ್ಥ್ಯಗಳ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ.
More From GoodReturns

Hotel Bandh: ಬೆಂಗಳೂರಿಗೂ ತಟ್ಟಿದ ಯುದ್ಧದ ಬಿಸಿ; ಇಂದಿನಿಂದ ಹಲವು ಹೋಟೆಲ್ ಬಂದ್

Bengaluru: ಮಳೆಗಾಲಕ್ಕೂ ಮುನ್ನ ಫೀಲ್ಡ್ಗೆ ಇಳಿದ ಶಾಸಕ ಗೋಪಾಲಯ್ಯ...ಮಹಾಲಕ್ಷ್ಮಿ ಲೇಔಟ್ನಲ್ಲಿ ಕಾಮಗಾರಿಗಳ ಪರಿಶೀಲನೆ!

Bengaluru - Stock Market: ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟ; ಮನನೊಂದು ಬೆಂಗಳೂರಿನ ವ್ಯಕ್ತಿ ಆತ್ಮಹತ್ಯೆ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Bengaluru: ಬೆಂಗಳೂರಿಗೆ 5,000 ರೂ. ಕೋಟಿ ಪ್ರವಾಹ ಯೋಜನೆ, 41 ಕಿ.ಮೀ ಮೆಟ್ರೋ, 450 ಕಿ.ಮೀ ರಸ್ತೆ ಅಭಿವೃದ್ಧಿ!

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

BMTC Bus: ಬೆಂಗಳೂರು-ರಾಮನಗರ ಮತ್ತು ಕನಕಪುರಕ್ಕೆ ಬಿಎಂಟಿಸಿ ಬಸ್… ಬಸ್ ನಿಲ್ದಾಣಗಳ ಬಗ್ಗೆ ತಿಳಿಯಿರಿ

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!



Click it and Unblock the Notifications