Bangalore Weather: ಬೆಂಗಳೂರಿನಲ್ಲಿ ಇನ್ನು ಒಂದು ವಾರ ಚಳಿ ಹೀಗೆ ಮುಂದುವರೆಯಲಿದೆ!

ದಿನೇದಿನೆ ಚಳಿ ಹೆಚ್ಚಾಗ್ತಿದೆ, ಸಿಲಿಕಾನ್‌ ಸಿಟಿ ಮಂದಿ ಚಳಿಗೆ ತತ್ತರಿಸ್ತಾ ಇದ್ದಾರೆ. ಹವಾಮಾನ ವರದಿ ಪ್ರಕಾರ ಇನ್ನು ಒಂದು ವಾರ ಬೆಂಗಳೂರಿನಲ್ಲಿ ಚಳಿ ಇರಲಿದೆ. ಕೆಲ ಎರಡು ದಿನಗಳಿಂದ ತಾಪಮಾನ ತೀವ್ರವಾಗಿ ಕುಸಿದಿದ್ದು, ಮತ್ತಷ್ಟು ಚಳಿ ಹೆಚ್ಚಾಗಿದೆ. ಅಲ್ಲದೆ ಕರ್ನಾಟಕ ಹಲವು ಭಾಗಗಳಲ್ಲು ಕೂ ದಾಖಲೆ ಪ್ರಮಾಣದ ಚಲಿ ದಾಖಲಾಗ್ತಿದೆ. ಇನ್ನು ಇದೇ ರೀತಿ ಚಳಿ ಇನ್ನು ಒಂದು ವಾರ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಾಪಮಾನ ದಿನದಿಂದ ದಿನಕ್ಕೆ ಬದಲಾಗುತ್ತದೆ. ಹಾಗೆ ಇಂದಿನ ಹವಾಮಾನವನ್ನ ನಾವು ಗಮನಿಸುವುದಾದ್ರೆ ಇಂದು ಹಗಲಿನಲ್ಲಿ 23.21 °Cಬೆಚ್ಚಗಿನ ತಾಪಮಾನ ಇರಲಿದೆ. ಕೆಲ ಎರಡು ದಿನಗಳಿಗೆ ಹೋಲಿಸಿದರೆ ಇಂದು ತಾಪಮಾನ ಏರಿಕೆಯಾಗಿದೆ. ಇನ್ನು ಮುಂಜಾನೆ ಮತ್ತು ಸಂಜೆ ತಾಪಮಾನ 15.0 °C ಇರಲಿದೆ. ಇದರ ಜೊತೆಗೆ ಮುಂಬರುವ ವಾರಗಳಲ್ಲಿ ಮತ್ತಷ್ಟು ಚಳಿ ಹೆಚ್ಚಾಗುವ ನಿರೀಕ್ಷೆ ಇದೆ. ಇನ್ನು ಇಂದು ತಾಪಮಾನ ಕ್ರಮವಾಗಿ 16.43 °C ಮತ್ತು 27.25 °C ಆಗುವ ನಿರೀಕ್ಷೆ ಇದೆ. ಗಾಳಿಯ ವೇಗ ಕೂಡ ಗಂಟೆಗೆ 47 ಕಿ.ಮೀ. ಇರಲಿದೆ.

ಸಿಲಿಕಾನ್‌ ಸಿಟಿಯಲ್ಲಿ ಇನ್ನು ಒಂದು ವಾರ ಚಳಿ ಹೆಚ್ಚಿರಲಿದೆ!

ಬೆಂಗಳೂರು AQI ವರದಿ

ಇನ್ನು ಬೆಂಗಳೂರು ಗಾಳಿ ಗುಣಮಟ್ಟವನ್ನ ಗಮನಿಸಿದರೆ ಇಂದು AQI ಗುಣಮಟ್ಟ 124.0 ಆಗಿದೆ, ಇದು ಹೆಚ್ಚು ಏರಿಕೆ ಕೂಡ ಆಗಿಲ್ಲ ಹಾಗೆ ಇಳಿಕೆ ಕೂಡ ಆಗಿಲ್ಲ ಮಧ್ಯದಲ್ಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ

ನಾಳೆ ಜನವರಿ 9 ಗುರುವಾರದಂದು ಬೆಂಗಳೂರಿನಲ್ಲಿ ಚಳಿ ಪ್ರಮಾಣ ಹೆಚ್ಚಿರಲಿದೆ. ಬೆಂಗಳೂರಿನಲ್ಲಿ ತಾಪಮಾನ ಇಳಿಕೆಯಾಗಲಿದ್ದು, 14.61 °C ಇರಲಿದೆ. ಹಾಗೆ ಗರಿಷ್ಠ ತಾಪಮಾನ 25.29 °C ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ. ತೇವದ ಮಟ್ಟವು 36%ನಷ್ಟು ಇರಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ ಚಳಿ ಪ್ರಮಾಣ ಇಷ್ಟಿರಲಿದೆ ಎನ್ನಲಾಗ್ತಿದೆ.

ಇಂದಿನ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಇಂದು ತಿಳಿ ಆಕಾಶ ಇರಲಿದೆ. ಬೇರೆ ದಿನಗಳಿಗೆ ಹೋಲಿಸಿದರೆ ಇಂದು ಸ್ವಲ್ಪ ಬೆಚ್ಚಗಿನ ವಾತವರಣ ಇರಲಿದೆ. ಇಂದು ಬೆಂಗಳೂರು AQI ಗುಣಮಟ್ಟ 124.0 ಇದೆ. ಇದು ಗಾಳಿಯ ಗುಣಮಟ್ಟವನ್ನ ಸೂಚಿಸುತ್ತದೆ. ಸಿಲಿಕಾನ್‌ ಸಿಟಿಯಲ್ಲಿ ಗಾಳಿ ಗುಣಮಟ್ಟಮಧ್ಯಮ ಗುಣಮಟ್ಟದಲ್ಲಿರಲಿದೆ. ಇನ್ನು ಉರಿರಾಟ ತೊಂದರೆಗಳನ್ನ ಹೊಂದಿರುವವರು ಆರೋಗ್ಯ ಸಮಸ್ಯೆ ಇರುವವರು ಹೊರಾಂಗಣ ಚಟುವಟಿಕೆಗಳನ್ನ ಕಡಿಮೆ ಮಾಡಬೇಕು. AQI ಕುರಿತು ಮಾಹಿತಿಯನ್ನ ಅರಿತವರು ತಮ್ಮ ದಿನವನ್ನ ಸರಿಯಾಗಿ ಯೋಜಿಸಲು ಸಹಾಯವಾಗುತ್ತದೆ.

ಮುಂದಿನ 7 ದಿನಗಳ ಕಾಲ ಬೆಂಗಳೂರಿನ ಹವಾಮಾನದಲ್ಲಿ ಸಾಕಷ್ಟು ಏರಿಳಿತಗಳಾಗಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ವರದಿ ಪ್ರಕಾರ ಮುಂಬರುವ ದಿನಗಳಲ್ಲಿ ಕನಿಷ್ಠ ಹಾಗು ಗರಿಷ್ಠ ತಾಪಮಾನಗಳು, ತೇವದ ಗುಣಮಟ್ಟ, ತಿಳಿ ಆಕಾಶ ಬಿಸಿಲನ್ನು ನಾವು ಕಾಣಬಹುದು.

ದೇಶದಲ್ಲಿ ಚಳಿ ಪ್ರಮಾಣ ಹೇಗಿರಲಿದೆ ಗಮನಿಸಿ

ದೇಶದಲ್ಲಿ ಕೂಡ ಚಳಿ ಪ್ರಮಾಣ ಹೆಚ್ಚಿರಲಿದೆ. ಅದರಲ್ಲೂ ಉತ್ತರ ಭಾರತದಲ್ಲಿ ಚಳಿ ಪ್ರಮಾಣ ಹೆಚ್ಚಿರಲಿದೆ. ಇನ್ನು ಗುಡ್ಡಗಾಡು ಪ್ರದೇಶಗಳಲ್ಲಿ ತಾಪಮಾನ ಕುಸಿದಿದೆ. ಅಲ್ಲದೆ ಬಯಲು ಸೀಮೆ ಭಾಗಗಳಲ್ಲೂ ಕೂಡ ಸಾಪಮಾನ ಕುಸಿತವನ್ನ ಕಂಡಿದೆ. ಹಾಗೆ ದೇಶದ ರಾಜಧಾನಿ ದೆಹಲಿಯಲ್ಲಿ 16 ಡಿಗ್ರಿ ಗರಿಷ್ಠ ತಾಪಮಾನ ಇರಲಿದ್ದು 8 ಡಿಗ್ರಿ ಕನಿಷ್ಠ ತಾಪಮಾನ ಇರಲಿದೆ.

ದೆಹಲಿಯಲ್ಲಿ ಮೂರು ದಿನಗಳ ಕಾಲ ಶೀತಗಾಳಿ ಹಾಗೆ ಮಂಜು ಇರಲಿದೆ. ಹೀಗಾಗಿ ದೆಹಲಿಯಲ್ಲಿ ಮೂರು ದಿನಗಳ ಕಾಲ ಯೆಲ್ಲೋ ಅಲರ್ಟ್‌ ಗೋಷಣೆ ಮಾಡಲಾಗಿದೆ. ಹಾಗೆ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಚಳಿ ಪ್ರಮಾಣ ಹೆಚ್ಚಾಗಿದೆ. ಜನರು ಬಿಸಿಲಿಹಾಗಿ ಎದುರು ನೋಡುತ್ತಿದ್ದಾರೆ. ಇತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇನ್ನು ಮೂರು ದಿನ ಮಂಜು ಕವಿದ ವಾತವಾರನ ಇರಲಿದೆ. ಹಾಗೆ ನೋಯ್ಡಾ, ಗಾಜಿಯಾಬಾದ್‌ ಜೊತೆಗೆ ಪಶ್ಚಿಮ ಉತ್ತರಪ್ರದೇಶದಲ್ಲಿ ಮಳೆಯಾಗಿವ ಮುನ್ಸೂಚನೆ ಇದೆ.

ವಿಪರೀತ ಚಳಿಯ ನಡುವೆ ದೇಶದ ಕೆಲವು ಭಾಗಗಳಲ್ಲಿ ಲಘು ಮಳೆಯಾಗಲಿದೆ. ಹಾಗೆ ರಾಜಸ್ಥಾನದಲ್ಲೂ ಕೂಡ ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ ದೇಶದಲ್ಲಿ ಮತ್ತೆ ತಾಪಮಾನ ಕುಸಿಯುವ ಸಾಧ್ಯತೆ ಇದೆ ಎಂದು ಬಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಹಿಮಾಚಲ ಹಾಗು ಕಾಶ್ಮೀರದಲ್ಲಿ ಹಿಮಪಾತ ಹಾಗು ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ಚಳಿಗೆ ತತ್ತರಿಸುತ್ತಾ ಇರುವವರಿಗೆ ಮಳೆ ಕೂಡ ಸಮಸ್ಯೆಯಾಗಲಿದೆ. ಶ್ರೀನಗರದಲ್ಲಿ ಕನಿಷ್ಠ 0.9ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಇನ್ನು ಹಲವು ದಿನಗಳ ವರೆಗೆ ದೇಶದಲ್ಲಿ ಚಳಿ ಆವರಿಸಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+