ಬೆಂಗಳೂರು, ಸೆಪ್ಟೆಂಬರ್: 25ಭಾರತೀಯ ಹವಾಮಾನ ಇಲಾಖೆಯೂ ರಾಜ್ಯ ರಾಜಧಾನಿಯಲ್ಲಿ ಇಂದು ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆ ಮಾಹಿತಿ ನೀಡಿರುವ ಪ್ರಕಾರ ಕನಿಷ್ಟ ತಾಪಮಾನ 20 ° C ಗೆ ಇಳಿಯುವ ನಿರೀಕ್ಷೆಯಿದ್ದು ಗರಿಷ್ಠ 27 ° C ತಲುಪಬಹುದು ಎಂದು ಹೇಳಿದೆ. ಸರಾಸರಿ ಆರ್ದ್ರತೆ ಮಟ್ಟವು 73% ಇರಬಹುದು ಎಂದು ಅಂದಾಜಿಸಲಾಗಿದೆ.
ಗರಿಷ್ಟ ಗಾಳಿಯ ವೇಗದ ಮಿತಿಯೂ ಗಂಟೆಗೆ 23 ಕಿಮೀ ಇದ್ದು, ಗಾಳಿಯೂ ಸ್ಥಿರವಾಗಿ ಬೀಸುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ 06:09 ಕ್ಕೆ ಸೂರ್ಯೋದಯವಾಗಿದ್ದು, ಒಟ್ಟಾರೆ ಸಿಲಿಕಾನ್ ಸಿಟಿಯ ತಾಪಮಾನ ಸುಮಾರು 20 ° C ಗೆ ಇಳಿದಿದ್ದು ಈ ಕಾರಣ ಬೆಂಗಳೂರಿಗರು ಕೂಲ್ ಕೂಲ್ ವಾತಾರಣ ಇರಲಿದೆ.

ಗಾಳಿಯ ಗುಣಮಟ್ಟ ಮತ್ತು ಹವಾಮಾನ ಅಲರ್ಟ್:
ಉದ್ಯಾನ ನಗರಿಯ ಏರ್ ಕ್ವಾಲಿಟಿ ಇಂಡೆಕ್ಸ್ (AQI) 25.0 ಎಂದು ಅಂದಾಜಿಸಲಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಗಾಳಿಯ ಗುಣಮಟ್ಟ ಉತ್ತಮವಾಗಿದೆ ಎಂಬುವುದನ್ನು ಇದು ಸೂಚಿಸುತ್ತದೆ. ಇನ್ನೊಂದೆಡೆ ಮಳೆಯ ಮುನ್ಸೂಚನೆಯನ್ನು ನೀಡಲಾಗಿದ್ದು ಹೀಗಾಗಿ ಮಳೆಗೆ ಅನುಗುಣವಾಗಿ ನಿಮ್ಮ ಪ್ಲ್ಯಾನ್ ಮಾಡಿಕೊಳ್ಳಿ. ಸಂಜೆ 6:14 ಕ್ಕೆ ಸೂರ್ಯ ಮುಳುಗುವ ನಿರೀಕ್ಷೆ ಇದೆ
ಭಾರೀ ಮಳೆಯ ಕಾರಣ ಕರಾವಳಿ ಪ್ರದೇಶಗಳು ಮತ್ತು ದಕ್ಷಿಣ ಒಳನಾಡಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಉತ್ತರ ಒಳನಾಡಿನಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ನಂತರ ಮಳೆಯ ತೀವ್ರತೆ ಕಡಿಮೆಯಾಗುವ ಸಾಧ್ಯತೆ ಇದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರವೂ (ಕೆಎಸ್‌ಎನ್‌ಡಿಎಂಸಿ) ಮುಂದಿನ ಐದು ದಿನಗಳ ಹವಾಮಾನ ವರದಿಯನ್ನು ಬಿಡುಗಡೆ ಮಾಡಿದ್ದು, "ಕರಾವಳಿ ಮತ್ತು ಗುಡ್ಡಗಾಡು ಜಿಲ್ಲೆಗಳಿಗೆ ಹೊಂದಿಕೊಂಡಿರುವ ಕರಾವಳಿ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ. ಐಎಂಡಿಯಿಂದ ಆರೆಂಜ್ ಅಲರ್ಟ್ ನಂತರ, ಮಳೆ ತೀವ್ರತೆ ಕಡಿಮೆಯಾಗುವ ನಿರೀಕ್ಷೆಯಿದೆ" ಎಂದು ವರದಿಯಲ್ಲಿ ತಿಳಿಸಿದೆ.
ಸೆಪ್ಟೆಂಬರ್ 26 ರ ಬೆಂಗಳೂರಿನ ಹವಾಮಾನ ಹೀಗಿರಲಿದೆ.!
ನಾಳೆ ಅಂದರೆ ಸೆಪ್ಟೆಂಬರ್ 26 ರ ಗುರುವಾರ ತಾಪಮಾನವು ಕನಿಷ್ಟ 20 ° C ನಿಂದ ಗರಿಷ್ಠ 29 °C ವರೆಗೆ ಇರುವ ಸಾಧ್ಯತೆ ಇದೆ. ಹವಾಮಾನ ಇಲಾಖೆ 84% ನಷ್ಟು ಸರಾಸರಿ ಆರ್ದ್ರತೆ ಮಟ್ಟವು ಊಹಿಸಿದ್ದು ಮೋಡ ಮುಸುಕಿದ ವಾತಾವರಣ ಇರಲಿದೆ.


Click it and Unblock the Notifications