ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇಂದು ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲಲ್ಲಿ ತುಂತುರು ಮಳೆಯಾಗುವಂತಹ ಮನ್ಸೂಚನೆ ಇದೆ.ಬೆಂಗಳೂರಿನಲ್ಲಿ ತಾಪಮಾನವು 19.8°C ಇಂದ 23.7°C ವರೆಗೆ ಇದೆ. ಹಚ್ಚು ಗಾಳಿ ಬೀಳುಸುವಂತಹ ಸಾದ್ಯತೆ ಕೂಡ ಇದೆ. ಸುಮಾರು ಶೇ. 89ರಷ್ಟು ಮಳೆ ಬರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಹವಾಮಾನ ಇಲಾಖೆ ಸೂಚನೆಯನ್ನು ಕೊಟ್ಟಿದೆ.

ಹೌದು,ಹವಾಮಾನ ಇಲಖೆ ನೀಡಿರುವ ಮಾಹಿತಿ ಪ್ರಕಾರ ಇಂದು ಮೋಡ ಕವಿದ ವಾತಾವರಣದ ಜೊತೆಗೆ ಅಲ್ಲಲ್ಲಿ ಮಳೆಯಾಗಬಹುದು. ಸರಾಸರಿ ತಾಪಮಾನ ಸುಮಾರು 21.3°C ಇರಲಿದೆ. ವೇಗವಾಗಿ ಗಾಳಿ ಬೀಸುವ ಸಾಧ್ಯತೆ ಕೂಡ ಹೆಚ್ಚಾಗಿ ಇದೆ. ಜನರು ಸಾಕಷ್ಟು ನೀರು ಕುಡಿಯಬೇಕು ಹಿತಕರ ವಾತಾವರಣ ಇದ್ದರೂ ಮಳೆಯಿಂದಾಗಿ ನೀವು ಹೊರಗಡೆ ಹೋಗುವ ಮುನ್ನ ಮುನ್ನೆಚ್ಚರಿಕೆಯ ಕ್ರಮಗಳನ್ನು ತಗೆದುಕೊಳ್ಳಬೇಕು.
ಮುಂದಿನ ವಾರ ವಾತಾವರಣ ಹೇಗಿರಲಿದೆ?
ಮುಂದಿನ ವಾರದವು ಕೂಡ ವಾತಾವರಣ ಹೀಗೆ ಮುಂದುವರಿಯಬಹುದು. ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನ 25°C ಇರಬಹುದು. ಸೋಮವಾರ ಮತ್ತು ಮಂಗಳವಾರ ತಾಪಮಾನ ಸ್ವಲ್ಪ ಹೆಚ್ಚಾಗಬಹುದು. ರಾಜ್ಯದ ಕೆಲಭಾಗಗಳಲ್ಲಿ ಸಾಧರಣ ಮಳೆಯಾಗುಬಹುದು. ಬುಧವಾರದಂದು ಮೋಡ ಕಡಿಮೆ ಇರಬಹುದು. ಆಗ ಗರಿಷ್ಠ 26.8°C ತಾಪಮಾನ ಇರಬಹುದು, ಮತ್ತು ಮಳೆ ಕಡಿಮೆ ಆಗಬಹುದು. ಗುರುವಾರ ಮತ್ತು ಶುಕ್ರವಾರ ಒಣ ಹವೆ ಇರಲಿದ್ದು, ತಾಪಮಾನ 26.7°C ಮತ್ತು 26.8°C ನಡುವೆ ಇರಬಹುದು ಎಂದು ಹವಾಮಾನ ಇಲಾಖೆ ಮಾಹಿತಿಯನ್ನು ತಿಳಿಸಿದೆ.
ಹವಾಮಾನ ಬದಲಾವಣೆಯಿಂದಾಗಿ, ಜನರು ಛತ್ರಿ ಅಥವಾ ಮಳೆ ಕೋಟುಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳುವುದು ಒಳ್ಳಿತು.
ಹವಾಮಾನ ಇಲಾಖೆ ಪ್ರಕಾರ, ರಾಜ್ಯದ ಹಲವು ಭಾಗಗಳಲ್ಲಿ ಇಂದಿನಿಂದ ಜುಲೈ 27 ರವರೆಗೆ ಭಾರೀ ಮಳೆಯಾಗುವ (Karnataka Weather) ಸಾಧ್ಯತೆಯಿದೆ. ಇದರ ಪರಿಣಾಮವಾಗಿ ಕರಾವಳಿ ತೀರದ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಿಗೂ ಆರೆಂಜ್ ಅಲರ್ಟ್ ನೀಡಲಾಗಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರ ಭಾಗದಲ್ಲಿ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಇನ್ನೂ ಒಂದು ವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಮತ್ತು ಒಳನಾಡು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ. ಜೊತೆಗೆ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಮಳೆಯ ಸಮಯದಲ್ಲಿ ಸುರಕ್ಷತಾ ಸಲಹೆಗಳು
- ಬಾಗಿಲು-ಕಿಟಕಿಗಳನ್ನು ಮುಚ್ಚಿ, ವಿದ್ಯುತ್ ಉಪಕರಣಗಳನ್ನು ಬಳಸದಿರುವುದು ಉತ್ತಮ (ಗುಡುಗು-ಮಿಂಚು ಇದ್ದರೆ) ನೀರು ಒಳಬರುವ ಸಾಧ್ಯತೆ ಇರುವ ವಾಸಸ್ಥಳವಿದ್ದರೆ, ಮುಖ್ಯ ದಾಖಲೆಗಳು, ಎಲೆಕ್ಟ್ರಾನಿಕ್ ಸಾಧನಗಳನ್ನು ಸುರಂಕ್ಷಿತವಾಗಿ ಇಡಿ.
- ನಿಮ್ಮ ಮನೆ ತಗ್ಗು ಪ್ರದೇಶವಿದ್ದರೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಿ.
- ನೀವು ಹೊರಗಡೆ ಹೋದಾಗ ವಿದ್ಯುತ್ ಕಂಬಗಳು, ಮರಗಳ ಕೆಳಗೆ ನಿಲ್ಲಬೇಡಿ (ಗುಡುಗು-ಮಿಂಚು ಹಾಗೂ ಮರ ಬಿಳುವಂತಹ ಅಪಾಯಗಳು ಇರುತ್ತವೆ) ನೀರು ನಿಂತ ರಸ್ತೆಗಳ ಮೂಲಕ ನಡೆಯುವುದು ಅಥವಾ ವಾಹನ ಚಲಾಯಿಸುವುದು ಅಪಾಯಕಾರಿ ಮಿಂಚು ಹೊಡೆಯುವ ಸಂಭವವಿರುವ ಪ್ರದೇಶಗಳಿಂದ ದೂರವಿರಿ
- ಜಲಾವೃತ ರಸ್ತೆಗಳಲ್ಲಿ ವಾಹನ ಚಲಾಯಿಸಬೇಡಿ. ವರ್ ಬ್ಯಾಂಕ್, ಟಾರ್ಚ್, ಬಾಟಲಿನ ನೀರು, ವೈದ್ಯಕೀಯ ಕಿಟ್ ಹತ್ತಿರ ಇಟ್ಟುಕೊಳ್ಳಿ.
- ಸರ್ಕಾರದ ಅಥವಾ ಹವಾಮಾನ ಇಲಾಖೆ (IMD) ನಿಂದ ನೀಡುವ ಎಚ್ಚರಿಕೆಗಳನ್ನು ಗಮನಿಸಿ. ಈ ಮೇಲಿನ ಕ್ರಮಗಳನ್ನು ಅನುಸರಿಸುವ ಮೂಲಕ ನೀವು ಮಳೆಯಿಂದ ಸುರಕ್ಷಿತವಾಗಿ ಇರಬಹುದು.


Click it and Unblock the Notifications