ಬೆಂಗಳೂರಿನಲ್ಲಿ ಬೆಳಂ ಬೆಳಗ್ಗೆ ಮಳೆಯಾಗುತ್ತಿದೆ.ಭಾರೀ ಮಳೆಯಿಂದಾಗಿ ಬೆಂಗಳೂರಿನಲ್ಲಿ ರಸ್ತೆಗಳು ಕರೆಯಂತೆ ಆಗಿವೆ. ಕೆಲವು ಪ್ರದೇಶಗಳಂತೂ ಹೆಚ್ಚಿನ ನೀರು ತುಂಬಿ ಜಲಾವೃತಗೊಂಡಿವೆ. ಜೊತೆಗೆ ಸಂಚಾರ ದಟ್ಟಣೆಯಾಗಿ ರಸ್ತೆಗಳು ಕೂಡ ಸ್ಥಗಿತವಾಗಿವು. ಹಾಗಿದ್ರೆ ಇನ್ನೂ ಎಷ್ಟು ದಿನಗಳ ಕಾಲ ವರುಣರ್ಭಟ ಮುಂದುವರೆಯುತ್ತಿದೆ. ಈ ಕುರಿತು ಹವಾಮಾನ ಇಲಾಖೆ ಏನು ಹೇಳಿದೆ ಬೆಂಗಳೂರಿನಲ್ಲಿ ಇನ್ನೂ ಎಷ್ಟು ದಿನ ಮಳೆ ಇರಲಿದೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೀಡಿ.
ಹೌದು, ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರಿನ ಹಲವು ಪ್ರದೇಶಗಳು ಜಲಾವೃತಗೊಂಡಿದು ಕೆಲವೊಂದು ಕಡೆಯಲ್ಲಿ ಸಂಚಾರ ಸ್ಥಗಿತಗೊಂಡಿವೆ. ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಇಂಧು ಕೂಡ ಧಾರಾಕಾರ ಮಳೆಯಾಗುತ್ತದೆ ಎಂದು ಹೇಳಿದೆ.

ಬೆಂಗಳೂರಿನಲ್ಲಿ ಇಷ್ಟೊಂದು ಭಾರೀ ಮಳೆ ಏಕೆ?
ಬಂಗಾಳಕೊಲ್ಲಿಯಲ್ಲಿ ಉಂಟಾದ ಚಂಡಮಾರುತ ಮತ್ತು ಮಹಾರಾಷ್ಟ್ರದಿಂದ ಕೇರಳದವರೆಗೆ ವಿಸ್ತರಿಸಿರುವ ಉತ್ತರ-ದಕ್ಷಿಣ ತಗ್ಗು, ಕರ್ನಾಟಕದ ಮೂಲಕ ಹರಿದು ಹೋಗುವುದರಿಂದ. ಈ ವ್ಯವಸ್ಥೆಗಳು ಹೆಚ್ಚಾಗಿ ಹೆಚ್ಚಿದ ವಾತಾವರಣದ ಅಸ್ಥಿರತೆವಾಗಿದೆ ಭಾರೀ ಮಳೆಯಾಗುತ್ತಿದೆ.
ಪ್ರದೇಶದಾದ್ಯಂತ ತೀವ್ರವಾದ ಪೂರ್ವ-ಮಾನ್ಸೂನ್ ಮಳೆಯನ್ನು ಉಂಟು ಆಗುತ್ತದೆ. ಸಾಮಾನ್ಯವಾಗಿ ಇದನ್ನು "ಮಾವಿನ ಮಳೆ"ದಕ್ಷಿಣ ಭಾರತದಲ್ಲಿ ಬೇಸಿಗೆಯ ತಿಂಗಳುಗಳಲ್ಲಿ ಈ ಋತುಮಾನದ ಮಳೆ ಸಾಮಾನ್ಯ ಆದರೆ ಈ ಭಾರೀ ಮಳೆಯಿಂದಾಗಿ ನಗರದ ಹಲವಾರು ಭಾಗಗಳಲ್ಲಿ ತೀವ್ರ ಜಲಾವೃತ ಉಂಟಾಗಿದೆ. ಮಳೆಯಿಂದಾಗಿ ದೈನಂದಿನ ಜೀವನ ಅಸ್ತವ್ಯಸ್ತಗೊಂಡಿದ್ದು, ಸಾಯಿ ಲೇಔಟ್‌ನಂತಹ ತಗ್ಗು ಪ್ರದೇಶಗಳು ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ ಎಂದು ವರದಿಗಳು ಆಗಿವೆ.
ಹವಮಾನ ಇಲಾಖೆ ಬೆಂಗಳೂರು ಮತ್ತು ಕರ್ನಾಟಕದ ಇತರ 22 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ, ಮೇ 22 ರವರೆಗೆ ಭಾರೀ ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ಚಂಡಮಾರುತ
ಬೆಂಗಳೂರಿನ ಹವಾಮಾನದ ಮೇಲೆ ಬಂಗಾಳಕೊಲ್ಲಿ ಚಂಡಮಾರುತ ನೇರ ಹವಾಮಾನ ಪರಿಸ್ಥಿತಿ ಪ್ರಭಾವಿತವಾಗಿದೆ. ಬಂಗಾಳಕೊಲ್ಲಿಯಲ್ಲಿನ ಈ ಚಂಡಮಾರುತವು ಕರ್ನಾಟಕದಲ್ಲಿ ವ್ಯಾಪಕ ಮಳೆಗೆ ಕಾರಣವಾಗಿದ್ದು, ಇಂದಿನ ಬೆಂಗಳೂರಿನ ಹವಾಮಾನದ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.ಬೆಂಗಳೂರಿನ ನಿವಾಸಿಗಳು ಜಾಗರೂಕರಾಗಿರಲು ಐಎಂಡಿ ಎಚ್ಚರಿಕೆ ನೀಡಿದೆ.
ಬೆಂಗಳೂರಿನ 7 ದಿನಗಳ ಹವಾಮಾನ ಮುನ್ಸೂಚನೆಯ ಪ್ರಕಾರ ಕನಿಷ್ಠ ತಾಪಮಾನ 20°C ನಿಂದ 22°C ವರೆಗೆ ಇರುತ್ತದೆ. ಗರಿಷ್ಠ ತಾಪಮಾನ 30°C ನಿಂದ 33°C ವರೆಗೆ ಇರುತ್ತದೆ. ಮೇ 24 ರವರೆಗೆ ಬೆಂಗಳೂರಿನಲ್ಲಿ ಪ್ರತಿದಿನ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಬೆಂಗಳೂರಿನ ಲೈವ್ ಹವಾಮಾನ ಟ್ರ್ಯಾಕಿಂಗ್ ಪ್ರಕಾರ, ಮೇ 22 ರಿಂದ ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ, ಗುಡುಗು ಸಹಿತ ಮಳೆ ಹೆಚ್ಚುಗುವ ಸಾಧ್ಯತೆ ಇದೆ.
ಕಳೆದ ಒಂದು ಗಂಟೆಯಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನಗರದ ಜನಜೀವನ ಅಸ್ತವ್ಯಸ್ತವಾಗಿದೆ. ಮೆಜೆಸ್ಟಿಕ್‌ನಂತಹ ಪ್ರಮುಖ ಬಸ್ ನಿಲ್ದಾಣಗಳು ಜಲಾವೃತವಾಗಿದ್ದು, ಪ್ರಯಾಣಿಕರು ಪರದಾಡುವಂಹತ ಪರಿಸ್ಥಿತಿ ಎದುರಾಗಿದೆ. ಮುಸುಕಾದ ವಾತಾವರಣ ಮತ್ತು ಮಳೆ ಬಿಟ್ಟು ನಿಲ್ಲದ ಹಿನ್ನೆಲೆಯಲ್ಲಿ ಜನರ ನಿದ್ದೆಗೆಡಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಸ್ಥಗಿತಗೊಂಡಂತಾಗಿದೆ. ಬೆಳಂ ಬೆಳ್ಳಂಗೆ ಕೆಲಸಕ್ಕೆ ಹೋಗುವರಿಗೆ ಮರುಣ ಸಂಕಷ್ಟವನ್ನು ತಂದಿದ್ದಾನೆ.
ಹವಾಮಾನ ಇಲಾಖೆ ಮುಂದಿನ ಕೆಲ ಗಂಟೆಗಳಲ್ಲೂ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿರುವುದರಿಂದ ನಾಗರಿಕರಿಗೆ ಎಚ್ಚರಿಕೆಯಿಂದ ಇರಲು ಸೂಚನೆಯನ್ನು ಸಹ ನೀಡಲಾಗಿದೆ.
ಯಾವ ಜಿಲ್ಲೆಗೆ ರೆಡ್ ಅಲರ್ಟ್
ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮೇ 21 ರಂದು ಅತೀ ಹೆಚ್ಚು ಮಳೆ ಅಂದರೆ ಗರಿಷ್ಠ 200 ಮಿಲಿ ಮೀಟರ್ ಗೂ ಹೆಚ್ಚು ಮಳೆ ಬರಲಿರುವ ಹಿನ್ನೆಲೆಯಲ್ಲಿ ಮೂರು ಜಿಲ್ಲೆಗಳಲ್ಲಿ 'ರೆಡ್ ಅಲರ್ಟ್' ಘೋಷಣೆಯನ್ನು ಮಾಡಲಾಗಿದೆ.
ಯವ್ಯಾವ ಜಿಲ್ಲೆಗೆ ಯೆಲ್ಲೋ ಅಲರ್ಟ್
ಬೆಳಗಾವಿ, ಬಾಗಲಕೋಟ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಆಗಲಿದೆ.ಕರಾವಳಿ ಸೇರಿದಂತೆ ಯೆಲ್ಲೋ ಅಲರ್ಟ್' ಘೋಷಣೆಯನ್ನು ಮಾಡಲಾಗಿದೆ.


Click it and Unblock the Notifications