Bengaluru Memu Train: ಒಂದೂವರೆ ವರ್ಷದಿಂದ ಬೆಂಗಳೂರಿಗೆ ಬರುತ್ತಿಲ್ಲ ಈ ರೈಲು! ಕಾರಣವೇನು?

ಬೆಂಗಳೂರು ನಗರದ ಕೇಂದ್ರ ಭಾಗಕ್ಕೆ ಅಂದರೆ ಕೆಂಪೇಗೌಡ ರೈಲ್ವೇ ಸ್ಟೇಷನ್‌ಗೆ (Kempegowda Railway Station) ಬರುತ್ತಿದ್ದ ಬೆಂಗಳೂರು-ಬಂಗಾರಪೇಟೆ ಮೆಮು ರೈಲು (Bengaluru-Bangarapet Memu Train) ಇದೀಗ ನಗರ ಹೊರಗಿನ ನಿಲ್ದಾಣಗಳಲ್ಲಿ, ವೈಟ್‌ಫೀಲ್ಡ್‌ನಿಂದಲೇ ಹಿಂತಿರುಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಈ ಬೆಳವಣಿಗೆಯಿಂದ ಪ್ರಯಾಣಿಕರಲ್ಲಿ ಆತಂಕ ಮತ್ತು ಆಕ್ರೋಶ ವ್ಯಕ್ತವಾಗುತ್ತಿದೆ.

ಒಂದೂವರೆ ವರ್ಷದಿಂದ ಬೆಂಗಳೂರಿಗೆ ಬರುತ್ತಿಲ್ಲ ಈ ರೈಲು! ಕಾರಣವೇನು?

ಹಾಗಿದ್ರೆ ಬೆಂಗಳೂರು-ಬಂಗಾರಪೇಟೆ ಮೆಮು ರೈಲು ನಗರದ ಒಳಗೆ ಏಕೆ ಬರುತ್ತಿಲ್ಲ? ಇದರ ಹಿಂದಿನ ಕಾರಣಗಳೇನು? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ರೈಲಿನ ಹಿನ್ನೆಲೆ:
2017ರ ಜನವರಿಯಲ್ಲಿ ಆರಂಭವಾದ ಈ ಬೆಂಗಳೂರು-ವೈಟ್‌ಫೀಲ್ಡ್‌ ನಡುವೆ ಮೆಮು ರೈಲು ಸೇವೆ ಆರಂಭಿಸಲಾಗಿತ್ತು. ಆದರೆ 2019ರ ನವೆಂಬರ್‌ನಲ್ಲಿ ಇದನ್ನು ಬಂಗಾರಪೇಟೆಗೆ ವಿಸ್ತರಿಸಲಾಯಿತು. ಆ ಸಮಯದಲ್ಲಿ ಕೆಎಸ್‌ಆರ್‌ (ಮೆಜೆಸ್ಟಿಕ್)‌ ನಿಂದ ಬಂಗಾರಪೇಟೆಗೆ ನೇರ ಸಂಚಾರ ಸೇವೆ ಆರಂಭಿಸಲಾಗಿತ್ತು.

ಕೋವಿಡ್‌ 19 ಸಾಂಕ್ರಾಮಿಕದಿಂದಾಗಿ 2020ರಲ್ಲಿ ಮತ್ತೆ ಈ ಸೇವೆ ಸ್ಥಗಿತಗೊಂಡಿತು. 2021ರಲ್ಲಿ ಮತ್ತೆ ಆರಂಭಿಸಿದರೂ, ಇದುವರೆಗೆ ಪೂರ್ಣ ಸೇವೆ ಆರಂಭಸಲಾಗಿಲ್ಲ. ಪ್ರಸ್ತುತ, ಈ ಬಂಗಾರಪೇಟೆ-ಬೆಂಗಳೂರು ಮೆಮು ರೈಲುಗಳು SMVT (ಸರ್‌.ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌) ಅಥವಾ ವೈಟ್‌ಫೀಲ್ಡ್‌, ಕೃಷ್ಣರಾಜಪುರಂನಿಂದಲೇ ಆರಂಭ ಮತ್ತು ಅಂತ್ಯಗೊಳುತ್ತಿದೆ. ಆದ್ದರಿಂದ ಈ ರೈಲು ನಗರದ ಕೇಂದ್ರ ಭಾಗಕ್ಕೆ ಬರುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಕಾರಣಗಳೇನು?
ರೈಲ್ವೇ ಟ್ರ್ಯಾಕ್‌ಗಳಲ್ಲಿ ನಿರಂತರ ಕಾಮಗಾರಿ: ಬೆಂಗಳೂರು-ವೈಟ್‌ಫೀಲ್ಡ್‌-ಬಂಗಾರಪೇಟೆ ಮಾರ್ಗದಲ್ಲಿ ಟ್ರ್ಯಾಕ್‌ಗಳನ್ನು ನಾಲ್ಕು ಪಟ್ಟು ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ಪ್ಲಾಟ್‌ಫಾರ್ಮ್‌ಗಳ ದುರಸ್ತಿ, ಸಿಗ್ನಲಿಂಗ್‌ ಕೆಲಸಗಳು ಸೇರಿದಂತೆ ಹಲವು ಕಾರಣಗಳಿಂದ ರೈಲು ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇನ್ನು ರೈಲ್ವೇ ಇಲಾಖೆ ಕೂಡಾ ಕಾಮಗಾರಿ ಹಿನ್ನೆಲೆ ವೈಟ್‌ಫೀಲ್ಸ್‌-ಬಂಗಾರಪೇಟೆ ನಡುವೆ ಮಾತ್ರ ಸಂಚರಿಸಲು ಅಧಿಸೂಚನೆ ಹೊರಡಿಸಿತ್ತು. ಆದ್ರೆ ಕಳೆದ ಒಂದೂವರೆ ವರ್ಷದಿಂದಲೂ ಬೆಂಗಳೂರಿಗೆ ಪ್ರವೇಶಿಸುತ್ತಿಲ್ಲ ಎಂಬುದು ಜನರ ಆರೋಪ.

ಪ್ರಯಾಣಿಕರ ಪರದಾಟ:
ಮೆಮು ರೈಲು ಆಗಮಿಸದ ಪರಿಣಾಮ, ಬಂಗಾರಪೇಟೆ, ಕೋಲಾರ, ಮಾರಿಕುಪ್ಪಂ, ತ್ಯಾಕಲ್‌, ವೈಟ್‌ಫೀಲ್ಡ್‌ ಪ್ರದೇಶದ ಸಾವಿರಾರು ಪ್ರಯಾಣಿಕರು ನಗರದ ಕೇಂದ್ರಕ್ಕೆ ತಲುಪಲು ಬಸ್‌ ಅಥವಾ ಇತರ ಸಾರಿಗೆಯನ್ನು ಅವಲಂಬಿಸಬೇಕಾಗಿದೆ. ಇದರಿಂದ ಸಮಯ ಕೂಡಾ ವ್ಯರ್ಥವಾಗುತ್ತಿದೆ.

ರೈಲ್ವೇಯ ಭರವಸೆಯೇನು?
ನೈಋತ್ಯ ರೈಲ್ವೆ (SWR) ಅಧಿಕಾರಿಗಳ ಪ್ರಕಾರ, ಕಾಮಗಾರಿಗಳು ಪೂರ್ಣಗೊಂಡ ಬೆನ್ನಲ್ಲೇ ಈ ಮಾರ್ಗದಲ್ಲಿ ಮೆಮು ರೈಲ್ವೇ ಸೇವೆಯನ್ನು ಮತ್ತೆ ಆರಂಭಿಸಲಾಗುತ್ತದೆ ಎಂದು ಭರವಸೆ ನೀಡಲಾಗಿದೆ.

ಪ್ರಯಾಣಿಕರ ಆಕ್ರೋಶ!
ಮೆಮು ರೈಲು ಬೆಂಗಳೂರು ನಗರಕ್ಕೆ ಬಾರದ ಹಿನ್ನೆಲೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಮಗಾರಿ ಕಾರಣಕ್ಕಾಗಿ ರೈಲು ನಗರಕ್ಕೆ ಬರುತ್ತಿಲ್ಲವೆಂದರೆ, ಉಳಿದ ರೈಲುಗಳು ಹೇಗೆ ಸಂಚರಿಸುತ್ತಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನು ಇದೇ ಮಾರ್ಗದಲ್ಲಿ ಬೆಂಗಳೂರಿನಿಂದ ಚೆನ್ನೈಗೆ, ಬೃಂದಾವನ ಎಕ್ಸ್‌ಪ್ರೆ್‌ ರೈಲು ಸಂಚಾ ಮಾಡುತ್ತಿದೆ. ಮಧ್ಯಾಹ್ನ 3:15 ಕ್ಕೆ ಕೆಎಸ್‌ಆರ್‌ನಿಂದ ಹೊರಡುವ ಈ ರೈಲು ಕೆ.ಆರ್‌.ಪುರದಲ್ಲಿ ನಿಂತು, ನಂತರ ಬಂಗಾರಪೇಟೆಯಲ್ಲೂ ನಿಲ್ದಾಣವನ್ನು ಹೊದಿದೆ. ಆದ್ರೆ ಈ ಮಧ್ಯೆ ಎಲ್ಲಿಯೂ ನಿಲುಗಡೆ ಹೊಂದಿರದಾ ಕಾರಣ ಬೈಯಪ್ಪನಹಳ್ಳಿ, ವೈಟ್‌ಫೀಲ್ಡ್‌, ದೇವನಗೊಂದಿ, ಮಾಲೂರು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಆದ್ದರಿಂದ ಈ ಮೆಮು ರೈಲನ್ನು ಬೇಗನೆ ಬೆಂಗಳೂರು ನಗರಕ್ಕೂ ಬರುವಂತೆ ಮಾಡಬೇಕೆಂದು ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+