ನೀವು ಬೆಂಗಳೂರಿಗರಾಗಿದ್ದೂ ಈ ವಿಷಯ ನಿಮಗೆ ತಿಳಿದಿಲ್ವಾ? ಹಾಗಿದ್ರೆ ಮಿಸ್ ಮಾಡದೇ ಈ ಸ್ಟೋರಿ ಓದಿ. ಬೆಂಗಳೂರು ಸ್ಟಾರ್ಟ್ಅಪ್‌ಗಳಿಂದ ಹಿಡಿದು ದೊಡ್ಡ ದೊಡ್ಡ ಉದ್ಯಮದವರೆಗೂ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಭಾರತದ ಸಿಲಿಕಾನ್ ವ್ಯಾಲಿ ಎಂದೂ ಪ್ರಸಿದ್ಧವಾಗಿದೆ. ಅನೇಕ ಅಂತರಾಷ್ಟ್ರೀಯ ಮಟ್ಟದ ಕಂಪನಿಗಳಿಗೆ ನೆಲೆಯಾಗಿದೆ. ಇಲ್ಲಿಂದ ಹೊರಹೊಮ್ಮಿದ ಹಲವು ಕಂಪನಿಗಳು ತಮ್ಮ ಕ್ಷೇತ್ರದಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿವೆ. ಜೊತೆಗೆ ಅನೇಕ ವೈವಿಧ್ಯಮಯ ಅರ್ಹತೆಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಇಂಥ ಬೆಂಗಳೂರಿನಲ್ಲಿ ಹಲವು ಶ್ರೀಮಂತ ವ್ಯಕ್ತಿಗಳಿದ್ದಾರೆ. ಅವರ ಬಗ್ಗೆ ನೀವು ತಿಳಿಯಲೇಬೇಕು!

ಹೌದು,ಕನ್ನಡಿಗರ ಹೆಮ್ಮೆಯ ಬೆಂದಕಾಳೂರಿನಲ್ಲಿ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ 2024 ರಲ್ಲಿ ಸ್ಥಾನ ಪಡೆದ ಹಲವಾರು ಬಿಲಿಯನೇರ್‌ಗಳು ಇದ್ದಾರೆ. ಸಾಫ್ಟ್‌ವೇರ್‌ನಿಂದ ರಿಯಲ್ ಎಸ್ಟೇಟ್ ಹಿಡಿದು ಹಣಕಾಸು ಸೇವೆಗಳವರೆಗೆ, ಅನೇಕ ಕಂಪನಿಗಳು ನಗರದ ಸಾಮರ್ಥ್ಯವನ್ನು ಎತ್ತಿ ತೋರಿಸುವ ವಿವಿಧ ವ್ಯವಹಾರಗಳನ್ನು ಮಾಡುತ್ತವೆ. ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ 2024 ರಲ್ಲಿ 334 ಬಿಲಿಯನೇರ್‌ಗಳಿದ್ದಾರೆ. ಇವುಗಳ ಪೈಕಿ ಅಗ್ರ 100ರಲ್ಲಿ ಅಜೀಂ ಪ್ರೇಮ್ ಜಿ ಮತ್ತು ನಾರಾಯಣ ಮೂರ್ತಿ ಸೇರಿದಂತೆ ಎಂಟು ಹೆಸರುಗಳಿವೆ.ಇವರ ವಿವರಗಳ ಮಾಹಿತಿಯನ್ನು ತಿಳಿಯೋಣ ಬನ್ನಿ..
ಅಜೀಂ ಪ್ರೇಮ್‌ಜಿ: ಸಾಫ್ಟ್‌ವೇರ್ ಕ್ಷೇತ್ರ
ವಿಪ್ರೋ ಮಾಜಿ ಅಧ್ಯಕ್ಷರಾಗಿರುವ ಅಜೀಂ ಪ್ರೇಮ್‌ಜಿ ಅವರು ತಮ್ಮ ಸಂಪತ್ತನ್ನು ಶೇಕಡಾ 24 ರಷ್ಟು ಹೆಚ್ಚಿಸಿಕೊಂಡು ಪಟ್ಟಿಯಲ್ಲಿ 9 ನೇ ಸ್ಥಾನವನ್ನು ಉಳಿಸಿಕೊಂಡು $ 12.2 ಶತಕೋಟಿಯೊಂದಿಗೆ ಹುರುನ್ ಪಟ್ಟಿಯಲ್ಲಿ ಅಗ್ರ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಇವರು ತಮ್ಮ ವ್ಯಾಪಾರ ಸಾಮ್ರಾಜ್ಯದ ಜೊತೆಗೆ ಇವರೊಬ್ಬ ಮಹಾನ್ ಕೊಡುಗೈ ದಾನಿಯಾಗಿದ್ದು, ಇವರು ಸ್ಥಾಪಿಸಿದ ಅಜೀಂ ಪ್ರೇಮ್‌ಜಿ ಫೌಂಡೇಶನ್ ಭಾರತದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಕೆಲಸ ಮಾಡುತ್ತಿದೆ. ಇರ್ಫಾನ್ ರಜಾಕ್ - ರಿಯಲ್ ಎಸ್ಟೇಟ್ ಕ್ಷೇತ್ರ ಪ್ರೆಸ್ಟೀಜ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಇರ್ಫಾನ್ ರಝಾಕ್ ಅವರು ಅತಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 51ನೇ ಸ್ಥಾನವನ್ನು ಗಳಿಸಿದ್ದಾರೆ. ಅವರ ಸಂಪತ್ತು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 178ರಷ್ಟು ಏರಿಕೆಯಾಗಿದ್ದು, ಅವರ ಒಟ್ಟು ಸಂಪತ್ತು $6 ಬಿಲಿಯನ್‌ಗಳಿಗೆ ತಲುಪಿದೆ. ಪ್ರೆಸ್ಟೀಜ್ ಗ್ರೂಪ್ ದೇಶದ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಂದಾಗಿದೆ.
ಇರ್ಫಾನ್ ರಜಾಕ್ : ರಿಯಲ್ ಎಸ್ಟೇಟ್ ಕ್ಷೇತ್ರ
ಪ್ರೆಸ್ಟೀಜ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಇರ್ಫಾನ್ ರಝಾಕ್ ಅವರು ಅತಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 51ನೇ ಸ್ಥಾನವನ್ನು ಗಳಿಸಿದ್ದಾರೆ. ಅವರ ಸಂಪತ್ತು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 178ರಷ್ಟು ಏರಿಕೆಯಾಗಿದ್ದು, ಅವರ ಒಟ್ಟು ಸಂಪತ್ತು $6 ಬಿಲಿಯನ್‌ಗಳಿಗೆ ತಲುಪಿದೆ. ಪ್ರೆಸ್ಟೀಜ್ ಗ್ರೂಪ್ ದೇಶದ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಂದಾಗಿದೆ.
ನಿತಿನ್ ಕಾಮತ್: ಹಣಕಾಸು ಸೇವೆ
ಜೆರೋಧಾ ಸಿಇಒ ನಿತಿನ್ ಕಾಮತ್ ಅವರು ಭಾರತದ ಅತಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 57ನೇ ಸ್ಥಾನವನ್ನು ಗಳಿಸಿದ್ದಾರೆ. ಅವರ ಸಂಪತ್ತು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 16ರಷ್ಟು ಏರಿಕೆಯಾಗಿದ್ದು, ಅವರ ಒಟ್ಟು ಸಂಪತ್ತು $4.6 ಬಿಲಿಯನ್‌ಗಳಿಗೆ ತಲುಪಿದೆ.
ಎಸ್. ಗೋಪಾಲಕೃಷ್ಣನ್: ಸಾಫ್ಟ್‌ವೇರ್
ಸೇವಾ ಕ್ಷೇತ್ರ ಇನ್ಫೋಸಿಸ್‌ನ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಎಸ್. ಗೋಪಾಲಕೃಷ್ಣನ್ ಅವರು ಭಾರತದ ಅತಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 62ನೇ ಸ್ಥಾನದಲ್ಲಿದ್ದಾರೆ. 2007 ರಿಂದ 2011 ರವರೆಗೆ ಐದು ವರ್ಷಗಳ ಕಾಲ ಅವರು ಕಂಪನಿಯ ಸಿಇಒ ಮತ್ತು ಎಂಡಿ ಆಗಿ ಸೇವೆ ಸಲ್ಲಿಸಿದ್ದರು. 2011 ರಿಂದ 2014 ರವರೆಗೆ ಅವರು ಇನ್ಫೋಸಿಸ್‌ನ ಉಪಾಧ್ಯಕ್ಷರಾಗಿದ್ದರು. ಅವರ ಒಟ್ಟು ಸಂಪತ್ತು ಶೇಕಡಾ 24 ರಷ್ಟು ಹೆಚ್ಚಾಗಿದ್ದು, $4.2 ಬಿಲಿಯನ್‌ಗಳಷ್ಟಿದೆ.
ಎನ್.ಆರ್. ನಾರಾಯಣ ಮೂರ್ತಿ: ಸಾಫ್ಟ್‌ವೇರ್ ಸೇವಾ ಕ್ಷೇತ್ರ
ಇನ್ಫೋಸಿಸ್‌ನ ಮತ್ತೊಬ್ಬ ಸಹ ಸಂಸ್ಥಾಪಕರಾದ ಎನ್.ಆರ್. ನಾರಾಯಣ ಮೂರ್ತಿ ಅವರು ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 69ನೇ ಸ್ಥಾನದಲ್ಲಿದ್ದಾರೆ. ಅವರ ಒಟ್ಟು ಸಂಪತ್ತು $5.2 ಬಿಲಿಯನ್‌ಗಳಷ್ಟಿದೆ. 1981 ರಿಂದ 2002 ರವರೆಗೆ 21 ವರ್ಷಗಳ ಕಾಲ ಅವರು ಇನ್ಫೋಸಿಸ್‌ನ ಸಿಇಒ ಆಗಿದ್ದರು. ಜಿ.ಎಂ. ರಾವ್: ಇನ್ಫ್ರಾಸ್ಟ್ರಕ್ಚರ್ ಜಿಎಂಆರ್ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷರಾದ ಜಿ.ಎಂ. ರಾವ್ ಅವರ ಸಂಪತ್ತು ಶೇಕಡಾ 112 ರಷ್ಟು ಹೆಚ್ಚಾಗಿದೆ. ಅವರ ಒಟ್ಟು ಸಂಪತ್ತು $3.2 ಬಿಲಿಯನ್‌ಗಳಿಗೆ ತಲುಪಿದ್ದು, ಅವರು ಭಾರತದ ಅತಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 71ನೇ ಸ್ಥಾನವನ್ನು ಗಳಿಸಿದ್ದಾರೆ. ಇವರು ಜಿಎಂಆರ್ ವರಲಕ್ಷ್ಮಿ ಫೌಂಡೇಶನ್ ಮೂಲಕ ಅನೇಕ ಲೋಕೋಪಕಾರಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
ಜಿ.ಎಂ. ರಾವ್: ಇನ್ಫ್ರಾಸ್ಟ್ರಕ್ಚರ್
ಜಿಎಂಆರ್ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷರಾದ ಜಿ.ಎಂ. ರಾವ್ ಅವರ ಸಂಪತ್ತು ಶೇಕಡಾ 112 ರಷ್ಟು ಹೆಚ್ಚಾಗಿದೆ. ಅವರ ಒಟ್ಟು ಸಂಪತ್ತು $3.2 ಬಿಲಿಯನ್‌ಗಳಿಗೆ ತಲುಪಿದ್ದು, ಅವರು ಭಾರತದ ಅತಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ 71ನೇ ಸ್ಥಾನವನ್ನು ಗಳಿಸಿದ್ದಾರೆ. ಇವರು ಜಿಎಂಆರ್ ವರಲಕ್ಷ್ಮಿ ಫೌಂಡೇಶನ್ ಮೂಲಕ ಅನೇಕ ಲೋಕೋಪಕಾರಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
ರಂಜನ್ ಪೈ: ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಮೂಹ
ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ (MEMG) ಅಧ್ಯಕ್ಷರಾಗಿರುವ ಡಾ. ರಂಜನ್ ಪೈ ಅವರು ಹುರೂನ್ ಪಟ್ಟಿಯಲ್ಲಿ 74ನೇ ಸ್ಥಾನದಲ್ಲಿದ್ದಾರೆ. ಅವರ ಒಟ್ಟು ಸಂಪತ್ತು $2.7 ಬಿಲಿಯನ್‌ಗಳಷ್ಟಿದೆ. ಅವರು ವೈದ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ ಮತ್ತು ಯಶಸ್ವಿ ಉದ್ಯಮಿಯಾಗಿದ್ದಾರೆ.
ಕಿರಣ್ ಮಜುಂದಾರ್ ಶಾ:ಜೈವಿಕ ತಂತ್ರಜ್ಞಾನ
ಕಿರಣ್ ಮಜುಂದರ್ ಶಾ ಅವರು ಹುರೂನ್ ಪಟ್ಟಿಯಲ್ಲಿ 98ನೇ ಸ್ಥಾನದಲ್ಲಿದ್ದು, ಅವರ ಒಟ್ಟು ಸಂಪತ್ತು $3.5 ಬಿಲಿಯನ್‌ಗಳಷ್ಟಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಜೀವ ತಂತ್ರಜ್ಞಾನ ಕಂಪನಿಯಾದ ಬಯೋಕಾನ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಸಂಸ್ಥಾಪಕರಾದ ಕಿರಣ್ ಮಜುಂದರ್ ಶಾ ಅವರು ಕೋವಿಡ್-19 ಲಸಿಕೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.


Click it and Unblock the Notifications