ಇಡ್ಲಿ ತಿನ್ನೋರೇ ಇಲ್ಲ! ಬೆಂಗಳೂರಿನ ದರ್ಶಿನಿಗಳಲ್ಲಿ ಇಡ್ಲಿ ಮಾರಾಟ ಕುಸಿತ.. ಯಾಕೆ ಗೊತ್ತಾ?

ಬೆಂಗಳೂರಿನಲ್ಲಿ ಇಡ್ಲಿ(Idli) ತಿನ್ನೋರೇ ಇಲ್ಲ... ಹೌದು,ಇತ್ತೀಚಿಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (ಎಫ್‌ಡಿಎ) ಕರ್ನಾಟಕದಾದ್ಯಂತ ಇಡ್ಲಿ ಮಾದರಿಗಳನ್ನು ಪರೀಕ್ಷಿಸಿತ್ತು ಇದರಲ್ಲಿ ಕ್ಯಾನ್ಸರ್ ಕಾರಕ ಅಂಶ ಇರುವುದು ಪತ್ತೆಯಾಗಿದೆ.ಇದು ಆದ ಕೆಲವು ದಿನಗಳ ನಂತರ, ಬೆಂಗಳೂರಿನ ದರ್ಶಿನಿಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ,ಜನಪ್ರಿಯ ಉಪಹಾರ ಮಂದಿರದಲ್ಲಿ ಇಡ್ಲಿಯ ಮಾರಾಟ ಕುಸಿತ ಕಂಡಿದೆ.

ಹೌದು, ಕರ್ನಾಟಕದಲ್ಲಿ ಇಡ್ಲಿಗೊಂದು ವಿಶೇಷವಾದ ಬೇಡಿಕೆಯಿದೆ.ಕರ್ನಾಟಕದಲ್ಲಿ ಇಡ್ಲಿ ಅದೆಷ್ಟೋ ಜನರಿಗೆ ಫೇವರೇಟ್ ಫುಡ್ ಆಗಿದ್ದ ಇಲ್ಲದೇ ಕೆಲವರಿಗೆ ಬೆಳಗಿನ ಉಪಹಾರವೇ ಆಗುವುದಿಲ್ಲ.ಆದರೆ ಇಡ್ಡಿ ಕೊಳ್ಲಲು ಇದೀಗ ಜನರುಹಿಂದೆ ಮುಂದೆ ನೋಡುತ್ತಿದ್ದಾರೆ.

ಬೆಂಗಳೂರಿನ ಇಡ್ಲಿ ಮಾರಾಟ ಕುಸಿತ.. ಯಾಕೆ ಗೊತ್ತಾ?

ಬೆಂಗಳೂರಿನ ಮಲ್ಲೇಶ್ವರಂ, ಆರ್‌ಟಿ ನಗರ ಮತ್ತು ಜಯನಗರದಂತಹ ಪ್ರದೇಶಗಳಲ್ಲಿ ಉಪಾಹಾರ ಮಂದಿರಗಳಿಗೆ ಟಿಎನ್‌ಐಇ ಭೇಟಿ ನೀಡಿದಾಗ,ಸಾಮಾನ್ಯ ಗ್ರಾಹಕರು ಇಡ್ಲಿಗಳನ್ನು ಆರ್ಡರ್ ಮಾಡಲು ಹಿಂಜರಿಯುತ್ತಿದ್ದಾರೆ.ಇನ್ನೂ ಕೆಲವರು ಕೆಲವರು ಇಡ್ಲಿಗೆ ಬಟ್ಟೆಯನ್ನು ಬಳಸಲಾಗುತ್ತಿದೆಯೇ ಎಂದು ಕೇಳಿದರು ಎಂದು ಮಾರಾಟಗಾರರು ಹೇಳುತ್ತಿದ್ದಾರೆ.

ರೆಸ್ಟೋರೆಂಟ್‌ಗಳಲ್ಲಿ ಇತ್ತೀಚಿನ ತಪಾಸಣೆಗಳ ಬಗ್ಗೆ ತಿಳಿದು ಸ್ವಚ್ಛತೆಗೆ ಹೆಚ್ಚಿನ ಒತ್ತುನ್ನು ನೀಡುತ್ತಿದ್ದಾರೆ. ಅಡುಗೆಗೆ ಸ್ಟೇನ್‌ಲೆಸ್ ಸ್ಟೀಲ್ ಮತ್ತು ಮಸ್ಲಿನ್ ಬಟ್ಟೆಯನ್ನು ಮಾತ್ರ ಬಳಕೆ ಮಾಡಿಕೊಳ್ಳತ್ತಿದ್ದಾರೆ. ಅಡುಗೆ ಮನೆಯನ್ನು ಕ್ಲೀನ್‌ ಆಗಿ ಇಟ್ಟುಕೊಳ್ಳಲು ಕಟ್ಟುನಿಟ್ಟಾದ ನೈರ್ಮಲ್ಯ ಮಾನದಂಡಗಳನ್ನು ಕಾಯ್ದುಕೊಳ್ಳುತ್ತವೆ ಎಂದು ಹೇಳಿಕೊಂಡಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ದರ್ಶಿನಿ ರೆಸ್ಟೋರೆಂಟ್‌ನ ಮಾಲೀಕರೊಬ್ಬರು ಇಡ್ಲಿಗಳನ್ನು ನಾವು ದಿನವಿಡೀ ಹೊಸದಾಗಿ ತಯಾರಿ ಮಾಡುತ್ತೇವೆ.ಆದರೆ ಇಡ್ಲಿ ತಪಾಸಣೆಯ ಸುದ್ದಿ ಬಂದ ನಂತರ ಗ್ರಾಹಕರು ಬದಲಾಗಿದ್ದಾರೆ. ಇಡ್ಲಿಯನ್ನು ಕೇಳುವವರ ಸಂಖ್ಯೆಯೇ ಕಡಿಮೆಯಾಗಿದೆ. ಇದು ಇಡ್ಲಿ ಮಾರಾಟದಲ್ಲಿ ಕುಸಿತಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಮೊದಲು, ಜನರು ದೋಸೆ ಮತ್ತು ಇಡ್ಲಿಗಳನ್ನು ಬಹುತೇಕ ಸಮಾನ ಸಂಖ್ಯೆಯಲ್ಲಿ ಆರ್ಡರ್ ಮಾಡುತ್ತಿದ್ದರು, ಆದರೆ ಈಗ ಅವರು ದೋಸೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ಕುಟುಂಬದ ಸದಸ್ಯರು ಅನಾರೋಗ್ಯಕ್ಕೆ ಒಳಗಾದಾಗ ನಾವು ಇಡ್ಲಿಗಳನ್ನು ಖರೀದಿಸುತ್ತೇವೆ ಎಂದು ಗ್ರಾಹಕರು ತಿಳಿಸಿದ್ದಾರೆ. ಏಕೆಂದರೆ ಇದು ಹಗುರ ಮತ್ತು ಜೀರ್ಣಿಸಿಕೊಳ್ಳಲು ಸುಲಭ.ಆದರೆ ಇಡ್ಲಿಯಲ್ಲಿ ಕ್ಯಾನ್ಸರ್ ಕಾರಕ ಪತ್ತೆಯಾಗಿರುವುದರಿಂದ ತಮ್ಮ ಉಪಾಹಾರದ ಆಯ್ಕೆಗಳ ಬಗ್ಗೆ ಹೆಚ್ಚು ಜಾಗರೂಕರಾಗಿದ್ದಾರೆ.

ಗ್ರಾಹಕಿ ಮೇಘಾ, ಹೊರಗೆ ಊಟ ಮಾಡುವಾಗ, ಸಾರ್ವಜನಿಕರಿಗೆ ಮಾಹಿತಿ ಇದೆ ಮತ್ತು ನೈರ್ಮಲ್ಯ ಮಾನದಂಡಗಳನ್ನು ಕಾಯ್ದುಕೊಳ್ಳದಿದ್ದರೆ ದೂರುಗಳನ್ನು ನೀಡಬಹುದು ಎಂದು ಮಾರಾಟಗಾರರಿಗೆ ಅರಿವು ಮೂಡಿಸಲು ಆಹಾರ ತಯಾರಿಕೆಯ ಪ್ರಕ್ರಿಯೆಯ ಬಗ್ಗೆ ಕೇಳುತ್ತೇನೆ ಇಡ್ಲಿಯಲ್ಲಿ ಈಗ ಕ್ಯಾನ್ಸರ್ ಕಾರಕ ಅಂಶ ಕಂಡುಬಂದಿದೆ ಎನ್ನುವುದು ದುರಾದೃಷ್ಟಕರ ಸಂಗತಿ ಎಂದು ಹೇಳಿದ್ದಾರೆ.

ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಬಳಸುವಂತಿಲ್ಲ

ಇಡ್ಲಿಗಳನ್ನು ಬೇಯಿಸಲು ಪಾಲಿಥಿನ್ ಹಾಳೆಗಳ ಬಳಕೆ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಅಲ್ಲದೇ ತಾಪಮಾನದಲ್ಲಿ ಬೇಯುವ ಪ್ಲಾಸ್ಟಿಕ್‌ನ ಹಾನಿಕಾರಕ ಅಂಶಗಳು ಇಡ್ಲಿಯೊಂದಿಗೆ ವಿಲೀನಗೊಳ್ಳುತ್ತೆ. ವಿಷಕಾರಿ ರಾಅಸಾಯನಿಕಗಳನ್ನು ಇಡ್ಲಿಯೊಂದಿಗೆ ಸೇರಿಸುತ್ತದೆ. ಇದರಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಸದ್ಯ ರಾಜ್ಯ ಸರ್ಕಾರ ಮತ್ತು ಆಹಾರ ಸುರಕ್ಷತಾ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದೆ. ಇಂತಹ ಕೆಲಸಗಳನ್ನು ತಡೆಗಟ್ಟಿ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಲು ಮುಂದಾಗಿದೆ.

ಇಡ್ಲಿ ತಯಾರಿಸಲು ಪ್ಲಾಸ್ಟಿಕ್ ಬಳಕೆಯ ಬದಲು, ಪರ್ಯಾಯವಾಗಿ ಮರದ ಎಲೆಗಳು ಅಥವಾ ಹಣ್ಣುಗಳ ಎಲೆಗಳನ್ನು ಬಳಸಬಹುದು. ಈ ಪ್ರಯತ್ನದಿಂದ ಹಣ್ಣುಗಳ ಎಲೆಗಳಲ್ಲಿರುವ ಆರೋಗ್ಯಕರ ಅಂಶ ಇಡ್ಲಿಯೊಂದಿಗೆ ಬೆರೆತರೆ ಉತ್ತಮ. ಹಾಗೂ ಇದು ಪರಿಸರ ಸ್ನೇಹಿಯಾಗಿರುವುದರಿಂದ ಬಿಸಾಡಿದಾಗ ಮಣ್ಣಲ್ಲೇ ಗೊಬ್ಬರವಾಗುತ್ತದೆ. ಪ್ರಾಣಿಗಳ ಬಾಯಿಗೆ ಪ್ಲಾಸ್ಟಿಕ್‌ ಸಿಗುವುದು ಕಡಿಮೆಯಾಗುತ್ತದೆ.

ಜನರು ಅತಿಹೆಚ್ಚು ಇಷ್ಟ ಪಡುತ್ತಿದ್ದ ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇರುವುದು ಗೊತ್ತೇ ಇರಲಿಲ್ಲ. ಆದರೆ ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಮಿಶ್ರಣವಾಗುವ ಬಣ್ಣ ಕ್ಯಾನ್ಸರ್‍‌ಗೆ ತುತ್ತಾಗಿಸುತ್ತದೆ ಎಂಬುದು ತಿಳಿಯಿತು. ಅದರಂತೆ ಗೋಬಿ ಮಂಚೂರಿಗೂ ಅದೇ ಕಡಿವಾಣ ಹಾಕಿ, ರಾಸಾಯನಿಕ ಬಣ್ಣವಾಗಲಿ ಅಂಶವಾಗಲಿ ಬಳಸುವಂತಿಲ್ಲ ಎಂದು ನಿರ್ದೇಶನ ಮಾಡಲಾಯಿತು. ಈಗ ಇಡ್ಲಿ ತಯಾರಿಸುವ ಪ್ಲಾಸ್ಟಿಕ್‌ನಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ.ಆದರಿಂದ ಜನರು ಇಡ್ಲಿ ಇನ್ನಲು ಹಿಂದೇಟು ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+